ದುಡ್ಡಿನಿಂದಲೇ ಯಾರೂ ಶ್ರೇಷ್ಠರಾಗೋದಿಲ್ಲ.ಮನುಷ್ಯ ಅವನಿಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕು. ಅದೃಷ್ಟ ಕೈ ಕೊಟ್ಟರು ಪ್ರಯತ್ನ ಕೈ ಬಿಡುವುದಿಲ್ಲ.ನಾವೆಲ್ಲರೂ ಕನಸು ಕಾಣುತ್ತೇವೆ.ಆದರೆ ಪ್ರಯತ್ನ ಮಾಡುವವರ ಸಂಖ್ಯೆ ಕಡಿಮೆ.ನಮ್ಮಲ್ಲಿ ಎಷ್ಟೋ ಜನರ ಕನಸು ಆಸೆ ನನಸಾಗುವುದಿಲ್ಲ. ಆದರೂ ಶ್ರಮದಿಂದ ಸಾಧಿಸಿದ ಕಥೆ ಇದು.ಸಾಧಿಸೋ ಛಲ ಇದ್ರೆ ದೈವಬಲ ತಾನಾಗಿಯೇ ನಮ್ಮ ಕೈಹಿಡಿಯುತ್ತದೆ.ಮಹಾರಾಷ್ಟ್ರದ ಸಣ್ಣ ಹಳ್ಳಿ ಬೊಯ್ಸರ್ನಲ್ಲಿ ಸೈಕಲ್ ರಿಪೇರಿ ಮಾಡ್ತಿದ್ದ ಹುಡುಗ ಐಎಎಸ್ ಅಧಿಕಾರಿಯಾದ ಸ್ಪೂರ್ತಿ ಕಥೆ ಇದು.
ವರುಣ್ ಭರನ್ವಲ್ ಅನ್ನೋ ಯುವಕನ ಕಥೆ ಇದು.ಅವ್ರದ್ದು ಚಿಕ್ಕ ಬಡ ಕುಟುಂಬ.ತಂದೆ, ತಾಯಿ,ಅಕ್ಕನ ಜೊತೆ ಬೊಯ್ಸರ್ ನಲ್ಲಿ ಇದ್ದವರು. ತಂದೆ ಒಂದು ಸೈಕಲ್ ಶಾಪ್ ಹೊಂದಿದ್ದರು. ಅದರಿಂದಲೇ ಜೀವನ ನಡೆಯುತ್ತಿತ್ತು.ನಂತರ ವರುಣ್ ಅಕ್ಕ ಓದು ಮುಗಿಸಿ ಟೀಚರ್ ಕೆಲಸ ಮಾಡುತ್ತಿದ್ದರು. ವರುಣ್ 10th ಎಕ್ಸಾಮ್ ಮುಗಿಸಿದ 4ದಿನಕ್ಕೆ ಅವರ ತಂದೆ ಹೃದಯಾಘಾತದಿಂದ ತೀರಿಹೋದರು.
ತಂದೆ ಆಸ್ಪತ್ರೆಗೆ ಸೇರಿದ್ದರಿಂದ ಕೂಡಿಟ್ಟ ಹಣ ಹೋಯಿತು. ಸಾಕಷ್ಟು ಸಾಲ ಆಯಿತು. ತನ್ನ ಓದಿಗೆ ತಾನೇ ಅಂತ್ಯಹಾಡಿದರು. ಮನೆ ಜವಾಬ್ದಾರಿವಹಿಸಿಕೊಂಡು ಸೈಕಲ್ ಶಾಪ್ನಲ್ಲಿ ಕೆಲಸವನ್ನು ಮಾಡುತ್ತಿದ್ದರು. ಅಕ್ಕನ ಸಂಬಳ ಸಾಲಕ್ಕೆ ಸರಿ ಆಗುತ್ತಿತ್ತು. ಆ ಸಮಯದಲ್ಲಿ ವರುಣ್ ಜಿಲ್ಲೆಗೆ 10thಏಕ್ಸಾಮ್ನಲ್ಲಿ ಜಿಲ್ಲೆಗೆ 2ನೇ ಸ್ಥಾನ ಬಂದಿದ್ದರು. ಒದಬಾರದು ಎಂದು ಅಂದುಕೊಂಡಿದ್ದ ಅವನಿಗೆ ತಾಯಿ “ನಾನು ಅಂಗಡಿಯನ್ನು ಮುಂದುವರೆಸುತ್ತೇನೆ. ನೀನು ಓದು” ಎಂದರು.
ವರುಣ್ ಕಾಲೇಜು ಸೇರಲು ಹೋದರೆ ಕಾಲೇಜು ಫೀಸ್ 10,000ರೂಪಾಯಿಗಳು. ಇದೆಲ್ಲ ಆಗೋ ಬದುಕಲ್ಲ ಅಂತ ಮನೆಗೆ ಬಂದು ಸೈಕಲ್ ಶಾಪ್ ನಲ್ಲಿ ಕೆಲಸ ಮಾಡಲು ಆರಂಭಿಸಿದರು. ಅಪ್ಪನನ್ನು ನೋಡಿಕೊಂಡ ವ್ಯೆದ್ಯರು ಒಂದು ದಿನ ವರುಣ್ ನನ್ನು ಸೈಕಲ್ ಶಾಪ್ನಲ್ಲಿ ನೋಡಿ ಶುಭಾಶಯ ಹೇಳಿ ಅವನ ಕಥೆ ಕೇಳಿ ಕಾಲೇಜಿಗೆ ಹೋಗು ಎಂದು 10,000ರೂ ಕೊಟ್ಟರು. ಕಾಲೇಜಿಗೆ ಹೋಗಿ ಸಂಜೆ ತಾಯಿಗೆ ಸೈಕಲ್ ಶಾಪಿನಲ್ಲಿ ಸಹಾಯ ಮಾಡುತ್ತಿದ್ದರು. ಆದರೂ ಮನೆಲ್ಲಿದ್ದ ಕಷ್ಟ,ಸಾಲ ಎಷ್ಟು ದುಡಿದರೂ ತೀರುತ್ತಿರಲಿಲ್ಲ.ವರುಣ್ ಕಷ್ಟ ನೋಡಿ ಕಾಲೇಜು ಟೀಚರ್ ಗಳೇ ಹಣವನ್ನು ಕಟ್ಟುತ್ತಿದ್ದರು. ಡಾಕ್ಟರ್ ಆಗಬೇಕೆಂದು ತುಂಬಾ ಹಂಬಲ ಇತ್ತು. ಆದರೆ ಹಣ ಇರಲಿಲ್ಲ. ನಂತರ ಪಿತ್ರಾರ್ಜಿತ ಅಸ್ತಿಯಿಂದ ಇಂಜಿನಿಯರಿಂಗ್ ಮಾಡಿದರು. ಈ ಕೋರ್ಸಿನ ಮೊದಲ ಸೆಮ್ ನಲ್ಲಿ ಟಾಪರ್ ಆದರು. ಅದರಿಂದ ವಿದ್ಯಾರ್ಥಿ ವೇತನ ಬರುತ್ತಿತ್ತು. ತನ್ನ ಸ್ನೇಹಿತರಿಗೆ ಟ್ಯೂಶನ್ ಹೇಳಿ ಅದರಿಂದ ಬರುವ ಹಣದಿಂದ ಕಾಲೇಜು ನಡೆಯುತ್ತಿತ್ತು. ಇಂಟರ್ನ್ಯಾಷನಲ್ ಕಂಪನಿಯಿಂದ ಒಳ್ಳೆ ಜಾಬ್ ಒಫರ್ ಬಂತು. ತನ್ನ ಸಂಸಾರವನ್ನು ಖುಷಿಯಿಂದ ನೋಡಿಕೊಂಡರು.
ಆಗ ಭ್ರಷ್ಟಾಚಾರ ತಾಂಡವ ಆಡುತ್ತಿತ್ತು. ಅನ್ನಾಹಜಾರೆ ಹೋರಾಟ ಮಾಡುತ್ತಿದ್ದರು. ಅವರು ಕಂಪನಿಗೆ ಸೇರಲು 6ತಿಂಗಳು ಸಮಯ ಇತ್ತು.ಅಷ್ಟರಲ್ಲಿ ಏನಾದರೂ ಮಾಡಬೇಕು ಅಂದು ಕೊಂಡರು. ನಂತರ ಐಎಎಸ್ ಟ್ಯೂಶನ್ಗೆ ಹೋದರು. ಪುಸ್ತಕದ ಖರ್ಚಿಗೆ ಹಣಕಾಸಿನ ತೊಂದರೆ ಆದಾಗ ಎಲ್ಲಿಂದಲೋ ದುಡ್ಡು ಬಂತು. ಏನ್ ಜಿಓ ಕಡೆಯಿಂದ ಹಣ ಬಂದಿತ್ತು. 2014ರಲ್ಲಿ ಭಾರತಕ್ಕೆ 32ನೇ ರಾಂಕಿನಲ್ಲಿ ಪಾಸಾದರು. ತನ್ನ ಓದಿನ ಕಷ್ಟಕ್ಕೆ ಒಳ್ಳೆ ಪ್ರತಿಫಲ ಸಿಕ್ಕಿತ್ತು. ಈಗ ಅವರು ಗುಜರಾತಿನಲ್ಲಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದಿನ ಯುವಕರಿಗೆ ಇವರ ಕಥೆ ಸ್ಪೂರ್ತಿಯಾಗಿದೆ. ಪ್ರಯತ್ನ ಪಟ್ಟರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ಇವರು ತೋರಿಸಿದ್ದಾರೆ.