ಸುಮಾರು ಸಾವಿರ ವರ್ಷಗಳಿಂದ ಆಕಾಶದಲ್ಲಿ ತೇಲುತ್ತಿದೆ ಈ ಗೋಪುರ ಇದರ ರೋಚಕ ಕಥೆ ಇಲ್ಲಿದೆ

0

  ಈ ದೇವಸ್ಥಾನವನ್ನು ಕ್ರಿ,ಶ 1010 ರಲ್ಲಿ ಕಟ್ಟಲಾಗಿದೆ. ಈ ದೇವಸ್ಥಾನವನ್ನು ಪೂರ್ತಿಯಾಗಿ ಗ್ರ್ಯಾನೆಟ್ ಕಲ್ಲುಗಳಿಂದ ಕಟ್ಟಿದ್ದಾರೆ ಹಾಗೆ ಇದಕ್ಕೆ ಬಳಸಲಾದ ಗ್ರ್ಯಾನೆಟ್ ಒಂದು ಲಕ್ಷ 30 ಸಾವಿರ ಟನ್. ಇದರಲ್ಲಿರುವ ಅಚ್ಚರಿಯೆನೆಂದರೆ ಈ ಪ್ರದೇಶದಿಂದ 100 ಮೈಲಿ ದೂರದಲ್ಲಿ ಯಾವ ಗ್ರ್ಯಾನೆಟ್ ಕೂಡ ಇರುವುದಿಲ್ಲ. ಈ ದೇವಸ್ಥಾನವನ್ನು ಚೋಳರ ಕಾಲದಲ್ಲಿ ಕಟ್ಟಲಾಗಿದೆ,

ಚೋಳರ ಮೊದಲ ರಾಜಾ ರಾಜ್ ಚೋಳರು ದೇವಾಲಯವನ್ನು ಕಟ್ಟಿಸಿದ್ದಾರೆ ಎನ್ನುವ ಉಲ್ಲೇಖವಾಗಿದೇ. ಈ ದೇವಸ್ಥಾನದ ಇನ್ನೊಂದು ಅಚ್ಚರಿಯೆನೆಂದರೆ ಈ ದೇವಸ್ಥಾನದ ಗೋಪುರ 200 ಅಡಿ ಎತ್ತರದಲ್ಲಿದೆ ಹಾಗೂ ಈ ಗೋಪುರದ ತುದಿಯಲ್ಲಿ ಒಂದು ಬಂಡೆ ಕಲ್ಲನ್ನು ನಿಲ್ಲಿಸಲಾಗಿದೆ, ಇದುವರೆಗೂ ಯಾರಿಂದಲೂ ಸಹ ಇದರ ಬಗ್ಗೆ ತಿಳಿದುಕೊಳ್ಳಲಾಗಿಲ್ಲ.

ಈ ದೇವಸ್ಥಾನವನ್ನು ಕಟ್ಟುವುದರ ಹಿಂದೆ ಒಂದು ಕಾರಣವಿದೆ ಅದೇನೆಂದರೆ ಒಮ್ಮೆ ಒಂದು ಅದ್ಭುತ ಶಕ್ತಿಯೊಂದು ಚೋಳರಾಜನ ಸ್ವಪ್ನದಲ್ಲಿ ಬಂದು ಇಂತಹ ಪ್ರದೇಶದಲ್ಲೆ ದೇವಾಲಯವನ್ನು ಕಟ್ಟಿಸು ಎಂದು ಹೇಳಿದ ಹಾಗೆ ತಿಳಿಸಲಾಗಿದೆ, ಆನಂತರ ರಾಜ ನಿದ್ದೆ ಮಾಡಲೇ ಇಲ್ಲವೆಂದು ಉಲ್ಲೇಖಿಸಿದ್ದಾರೆ.

ಈ ದೇವಾಲಯವನ್ನು ಕ್ರಿ,ಶ 1004 ರಲ್ಲಿ ಪ್ರಾರಂಬಿಸಿ 1009 ರಲ್ಲಿ ಪೂರ್ತಿ ಮಾಡಲಾಗಿದೆ. ಆದರೆ ಈ ದೇವಾಲಯವು ಲೋಕಾರ್ಪಣೆಯಾಗಿದ್ದು ಕ್ರಿ,ಶ 1010 ರಲ್ಲಿ. ಇನ್ನು ಈ ದೇವಾಲಯವನ್ನು ಕಟ್ಟಲು ಕೇವಲ 5 ವರ್ಷಗಳ ಕಾಲಾವಧಿಯನ್ನು ತೆಗೆದುಕೊಳ್ಳಲಾಗಿದೆ.ಈ ದೇವಾಲಯದಲ್ಲಿ ಕೆತ್ತಲಾಗಿರುವ ಶಿಲೆಗಳು ಇಂದಿಗೂ ಸಹ ಯಾವ ಟೆಕ್ನಾಲಜಿ ಉಪಯೋಗಿಸಿ ಪ್ರಯತ್ನ ಪಟ್ಟರು ಇಂತಹ ಶಿಲೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ.

ಈ ದೇವಾಲಯವು ತಮಿಳುನಾಡಿನ ತಂಜಾವೂರಿನಲ್ಲಿದೆ ಇದನ್ನು ಜನರು ಪಿರಿಯಾಕೋವಿಲ್ ಎಂದು ಕರೆಯುತ್ತಾರೆ. ಇದರ ಅರ್ಥ ದೊಡ್ಡ ದೇವಸ್ಥಾನ ಎನ್ನುವುದು. ಈ ದೇವಾಲಯದಲ್ಲಿರುವ ಶಿವಲಿಂಗವು ಬರೋಬ್ಬರಿ 9 ಅಡಿ ಎತ್ತರವಿದ್ದು ಇದನ್ನು ಚೋಳರಾಜನು ತನ್ನ ಎತ್ತರಕ್ಕೆ ಸಮನಾಗಿ ಪ್ರತಿಷ್ಠಾಪನೆ ಮಾಡಿಸಿದ ಎನ್ನಲಾಗಿದೆ. ಈ ದೇವಾಲಯದಲ್ಲಿರುವ ಶಿವಲಿಂಗವನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ ಮತ್ತು ಪ್ರಪಂಚದಲ್ಲಿರುವ ಅತ್ಯಂತ ಅಮೂಲ್ಯವಾದ ಲಿಂಗಗಳಲ್ಲಿ ಇದು ಒಂದು.

ಆದ್ದರಿಂದ ಈ ದೇವಸ್ಥಾನದ ಶಿವಲಿಂಗವನ್ನು ಬೃಹತ್ತೇಶ್ವರ ಎನ್ನುತ್ತಾರೆ. ಈ ದೇಗುಲದಲ್ಲಿರುವ  ನಂದಿಯು 13 ಅಡಿಯಿದೆ ಹಾಗೂ ಈ ನಂದಿಯನ್ನು ಒಂದೇ ಬಂಡೆಯಲ್ಲಿ ಕೆತ್ತಲಾಗಿದೆ ಎನ್ನುವ ಮಾತಿದೆ. ಈ ದೇವಾಲಯದ ಗೋಪುರವು 230 ಅಡಿಗಳ ಎತ್ತರವಿದ್ದು, ಈ ಗೋಪುರದ ತುದಿಯಲ್ಲಿರುವ ಬಂಡೆ ಕಲ್ಲು 80 ಟನ್ ತೂಕವಿದೆಯೆಂದು ಹೇಳಲಾಗಿದೆ.

ಈ ದೇವಾಲಯದಲ್ಲಿ ಹಲವಾರು ದೇವರುಗಳ ಕೆತ್ತನೆಯನ್ನು ಕಾಣಬಹುದು. ಆಕಾಶದೆತ್ತರ ಇರುವ ಈ ಗೋಪುರ ದೂರದಿಂದಲೇ ಅಲ್ಲೊಂದು ಪವಿತ್ರ ಕ್ಷೇತ್ರವಿದೆ ಎಂದು ತಿಳಿದುಕೊಳ್ಳಬಹುದು. ಈ ಗೋಪುರವು ಹೊರಗಿನಿಂದ ದಪ್ಪವಾಗಿ ಕಂಡರೂ ಒಳಗೆ ಟೊಳ್ಳಾಗಿ ಕಾಣುತ್ತದೆ, ಇಟಲಿಯಲ್ಲಿರುವ ಪೀಸಾ ಗೋಪುರವು ಇದೆ ಮಾದರಿಯಲ್ಲಿದ್ದು ಅದು 2012 ರಲ್ಲಿ ಕಟ್ಟಲಾಗಿದೆ ಮತ್ತು ಆ ಗೋಪುರವು ಈಗ ವಾಲುತ್ತಿದೆ  ಎನ್ನುವ ಸುದ್ದಿಯಿದೆ. ಇನ್ನು ತಮಿಳುನಾಡಿನಲ್ಲಿರುವ ಈ ದೇವಾಲಯವಕ್ಕೂ ಯಾವ ಸುನಾಮಿಗೂ, ಯಾವ ಪ್ರಕೃತಿ ವಿಕೋಪಕ್ಕೂ ಅಲುಗಾಡದಂತೆ ಕಟ್ಟಲಾಗಿದೆ, ಈ ದೇವಸ್ಥಾನದ ಗೋಪುರದ ಮೇಲಿರುವ ಬಂಡೆಯನ್ನು  ಕುಂಭಾ ಅಂತ ಕರೆಯುತ್ತಾರೆ.

ಈ ದೇವಸ್ಥಾನದಲ್ಲಿ ಹಲವಾರು ಸುರಂಗ ಮಾರ್ಗಗಳಿವೆ, ಈ ಸುರಂಗ ಮಾರ್ಗದಲ್ಲಿ ಹಲವಾರು ಜನರು ಹೋಗಿ ದಿಕ್ಕಿನ್ನು ತಪ್ಪಿ ಸಾವನ್ನಪ್ಪಿದ್ದಾರೆ ಎನ್ನುವ ಕಾರಣದಿಂದ ಈ ಮಾರ್ಗಗಳನ್ನು ಮುಚ್ಚಿಸಲಾಗಿದೆ. ಈ ಸುರಂಗ ಮಾರ್ಗಗಳು ಅರಮನೆಗೆ ಮತ್ತು ಇನ್ನಿತರ ಸ್ಥಳಗಳಿಗೆ ತಲುಪುವುದೆಂದು ಉಲ್ಲೇಖವಿದೆ. ಈ ದೇವಾಲಯವನ್ನು ಕಟ್ಟಿದ ಮುಖ್ಯ ಇಂಜಿನಿಯರ್ ಹೆಸರು ಉಂಜಾಮಲ್ಲನ್ ರಾಹಿ ರಾಜಾ ಪಿರಾಮಿಳ್.
     

Leave A Reply

Your email address will not be published.

error: Content is protected !!