ನಂಜನಗೂಡು ನಂಜುಂಡೇಶ್ವರ ಕ್ಷೇತ್ರದ ನೀವು ತಿಳಿಯದ ವಿಸ್ಮಯಕಾರಿ ವಿಷಯಗಳು

0

ದಂತಕಥೆಯ ಪ್ರಕಾರ, ಒಂದೊಮ್ಮೆ ನೆಡೆದ ಪ್ರಮುಖ ಘಟನೆಯಲ್ಲಿ ಉತ್ಪತ್ತಿಯಾದ ಘನ ಘೋರ ವಿಷದ  ಪ್ರಭಾವದಿಂದ ಸೃಷ್ಟಿಯು ನಶಿಸಿ ಹೋಗುವ ಸಂದರ್ಭ ಎದುರಾದಾಗ ಶಿವಾನು ತನ್ನ ಒಂದು ಬಲಿದಾನದ ಮೂಲಕ ಸೃಷ್ಟಿಯನ್ನು ಕಾಪಾಡುವ ಘಟನೆಗೆ ಈ ಸ್ಥಳವು ಸಾಕ್ಷಿಯಾಗಿದೆ. ಹಾಗಾಗಿ ಸಾಂಬಾ ಶಿವನು ಪ್ರಾಶಾಂತವಾಗಿ ನೆಲೆಸಿ ಭಕ್ತರನ್ನು ಹರಿಸುತ್ತಿರುವ ಪುಣ್ಯ ಕ್ಷೇತ್ರವಾಗಿದೆ.

ಈಗ ಇದು ನಂಜನಗೂಡು ಎನ್ನುವ ಹೆಸರಿನಿಂದ ಪ್ರಖ್ಯಾತಗೊಂಡಿದೆ. ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿರುವ ನಂಜನಗೂಡು ಕಪಿಲಾ(ಕಬಿನಿ) ನದಿಯ ತಟದಲ್ಲಿ ನೆಲೆಸಿರುವ ರಾಜ್ಯದ ಪ್ರಮುಖ ಪುಣ್ಯ ಕ್ಷೇತ್ರವಾಗಿದೆ. ಮೈಸೂರು ನಗರ ಕೇಂದ್ರದಿಂದ 25km ದೂರದಲ್ಲಿರುವ ನಂಜನಗೂಡು ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುವ ಧಾರ್ಮಿಕ ಕ್ಷೇತ್ರವಾಗಿದೆ.

ಈ ದೇವಸ್ಥಾನವನ್ನು ನಂಜನಗೂಡು, ಶ್ರೀಕಂಠೇಶ್ವರ, ಹಾಗೂ ಶಿವನ ಇತರೆ ಹೆಸರುಗಳಿಂದ ಕರೆಯುತ್ತಾರೆ. ಈ ದೇವಸ್ಥಾನದ ಸುತ್ತಲೂ ಶಿವ, ಗಣೇಶ ಹಾಗೂ ಪಾರ್ವತಿಯ ಅವತಾರಗಳ ಸುಂದರ ವಿಗ್ರಹಗಳಿವೆ. ಈ ದೇವಾಲಯದ ಕೆತ್ತನೆಯು ದ್ರಾವಿಡ ಶೈಲಿಯಲ್ಲಿದೆ ಹಾಗೂ ಇದು ಸುಮಾರು 130 ಮೀ, ಉದ್ದ ಮತ್ತು 55 ಮೀ, ಅಗಲವಿದೆ.. ಈ ದೇವಸ್ಥಾನದಲ್ಲಿ 150 ಕಂಬಗಳಿವೆ ಹಾಗೂ ಈ ದೇವಸ್ಥಾನದ ವಿಸ್ತೀರ್ಣ 4831 ಸ್ಕ್ವೇರ್ ಮೀಟರ್ ಇದೆ.

ಇತಿಹಾಸ ಮೂಲಗಳ ಪ್ರಕಾರ ಈ ದೇವಾಲಯವು 9 ನೇ ಶತಮಾನದಲ್ಲಿ ಗಂಗರ ಅರಸರು ಕಟ್ಟಿಸಿದರೆಂದು ಇತಿಹಾಸ ಹೇಳುತ್ತದೆ. ನಂತರ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ಈ ದೇವಾಲಯದ ಗೋಪುರವನ್ನು ಕಟ್ಟಿಸಿದರು, ಈ ಗೋಪುರವು 1845 ರಲ್ಲಿ ಕಟ್ಟಿಸಲಾಗಿದೆ ಹಾಗೂ ಇದು ಸುಮಾರು 37 ಮೀಟರ್ ಎತ್ತರದಲ್ಲಿದೆ.
           
ಶಿವ ಪುರಾಣದಲ್ಲಿ ನಂಜನಗೂಡನ್ನು ಗರಲಪುರಿ ಎಂದು ಉಲ್ಲೇಖಿಸಲಾಗಿದೆ. ಈ ಪವಿತ್ರ ಸ್ಥಳವು ದಕ್ಷಿಣ ಭಾರತದಲ್ಲಿ ಶಿವನ ವಾಸಸ್ಥಾನವಾಗಿದೆ ಹಾಗೂ ಇದನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಭಗವಾನ್ ಶಿವಾನು ಗರಲಪುರಿ(ಈಗಿನ ನಂಜನಗೂಡು) ಶ್ರೀ ಕ್ಷೇತ್ರದಲ್ಲಿ  ಕಾಣಿಸಿಕೊಂಡನು ಮತ್ತು ಕೇಶಿ ಎಂಬ ರಾಕ್ಷಸನನ್ನು ಕೊಂದನು. ಭಗವಾನ್ ಶಿವಾನು ತನ್ನ ಅಂಶಕ್ಕೆ ಭರವಸೆ ನೀಡಿದನು, ತನ್ನ ದೈವಿಕ ಆತ್ಮದ ಒಂದು ಭಾಗವು ಯಾವಾಗಲೂ ಇಲ್ಲಿ ಉಳಿಯುತ್ತದೆ ಮತ್ತು ಮಾನವೀಯತೆಯನ್ನು ಆಶೀರ್ವದಿಸುತ್ತದೆ,ಹಾಗೂ ಈ ಸ್ಥಳವು “ಪಾಪ ವಿನಾಶಿನಿ” ಪಾಪವನ್ನು ಹೋಗಲಾಡಿಸುತ್ತದೆ ಎಂದು ಶಿವ ಭರವಸೆ ನೀಡಿದನು.

ಋಷಿ ಪರಶುರಾಮನು ತನ್ನ ತಂದೆ ಯಮದಗ್ನಿ  ಋಷಿಯ ಆದೇಶದಂತೆ ತನ್ನ ತಾಯಿಯ ಶಿರಚ್ಛೇದ ಮಾಡಿದ ನಂತರ “ಮಾತೃ ಹತ್ಯ” ತಾಯಿಯ ಹತ್ಯೆಯಿಂದ ತನ್ನ ಪಾಪವನ್ನು ತೊಡೆದು ಹಾಕಲು ಬಯಸಿದನು, ನಾರದ ಮುನಿಗಳ ಸಲಹೆಯಂತೆ ಗರಲಪುರಿ(ನಂಜನಗೂಡು) ತಲುಪಿ ಶ್ರೀ ನಂಜುಂಡೇಶ್ವರ ಸ್ವಾಮಿಯಯನ್ನು ಪ್ರಾರ್ಥಿಸಿದನು, ಭಗವಾನ್ ಶಿವನು ಪ್ರತ್ಯಕ್ಷಗೊಂಡನು ಮತ್ತು ಮಂಟಪವನ್ನು ನಿರ್ಮಿಸಲು ಮತ್ತು ಶಿವಲಿಂಗಕ್ಕೆ ಪೂಜೆಯನ್ನು ಸಲ್ಲಿಸುವಂತೆ ಸಲಹೆ ನೀಡಿದನು.

ಪರಶುರಾಮ ತನ್ನ ಕೊಡಲಿಯಿಂದ ಪೊದೆಗಳನ್ನು ತೆರವುಗೊಳಿಸುತ್ತಿರುವಾಗ ಅರಿವಿಲ್ಲದೆ ಕೊಡಲಿಯು ಶಿವಲಿಂಗಕ್ಕೆ ತಗುಲಿತ್ತು ಮತ್ತು ಶಿವಲಿಂಗದ ತುದಿಯಲ್ಲಿ ರಕ್ತವು ಜಿನುಗುತ್ತಿತ್ತು, ಆಗ ಪರಶುರಾಮನು ತುಂಬಾ ತಪ್ಪಿತಸ್ಥನೆಂದು ಭಾವಿಸಿ ತನ್ನನ್ನು ತಾನು ಕೊಂದುಕೊಳ್ಳುವ ಮೂಲಕ ಎಲ್ಲಾ ಪಾಪಗಳಿಂದ ಮುಕ್ತವಾಗ ಬೇಕೆಂದು ಹೇಳಿದನು, ಆಗ ಶಿವಾನು ಕಾಣಿಸಿಕೊಂಡು ಪರಶುರಾಮನನ್ನು  ಆಶೀರ್ವದಿಸಿದನು ಮತ್ತು ಶಿವಲಿಂಗದ ಮೇಲೆ ಒದ್ದೆಯಾದ ಮಣ್ಣನ್ನು ಲೇಪಿಸಲು ಹೇಳಿದನು. ನಂತರ ಪರಶುರಾಮನನ್ನು ಎಲ್ಲ ಪಾಪಗಳಿಂದ ಮುಕ್ತ ಗೊಳಿಸಿದನು ಮತ್ತು ಅವನಿಗೆ ಅಮರತ್ವವನ್ನು ದಯಪಾಲಿಸಿದನು.

ಶಿವನ ಪತ್ನಿಯಾದ ಪಾರ್ವತಿಯು ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡಲು ಬಯಸಿದ್ದಳು ಆಗ ಶಿವಾಜಿ ನಂಜನಗೂಡಿಗೆ ಕರೆತಂದನು, ದೇವಿಯು ಕಬಿನಿ ನದಿಗೆ ಹೋಗಿ ನೀರನ್ನು ಸ್ಪರ್ಶಿಸಲು ಬಾಗಿದ ರತ್ನದ ಕಲ್ಲಿನ ಮಣಿ ತನ್ನ ಕಿರೀಟದಿಂದ ನೀರಿನಲ್ಲಿ ಬಿದ್ದಳು. ಶಿವನು ಸಂತುಷ್ಟನಾಗಿ   ದೇವಿ ಈವರೆಗೂ ಈ ಸ್ಥಳವು ನನ್ನ ದೈವಿಕ ಆಶೀರ್ವಾದ ಮತ್ತು ಉಪಸ್ಥಿತಿಯನ್ನು ಹೊಂದಿತ್ತು, ಈ ಕ್ಷಣದಿಂದ ಅದು ನಿಮ್ಮ ಉಪಸ್ಥಿತಿ ಅನುಗ್ರಹ ಮತ್ತು ಆಶೀರ್ವಾದವನ್ನು ಸಹ ಹೊಂದಿರುತ್ತದೆ, ಇದನ್ನು ದಕ್ಷಿಣ ಮಣಿಕರ್ಣಿಕಾ ಘಾಟ್ ಎಂದು ಕರೆಯುತ್ತಾರೆ.

Leave A Reply

Your email address will not be published.

error: Content is protected !!