WhatsApp Group Join Now
Telegram Group Join Now

ದಿನಗಳೆದಂತೆ ನಮಗೆ ವಯಸ್ಸು ಮೀರುತ್ತ ಹೋದಂತೆ ನಮ್ಮ ದೇಹ ಆರೋಗ್ಯ ಸಮಸ್ಯೆಗಳ ಗೂಡಾಗುತ್ತದೆ. ಈ ಸಮಯದಲ್ಲಿ ಆಹಾರ ಪದ್ಧತಿಯಿಂದ ಹಿಡಿದು ಜೀವನಶೈಲಿಯ ಪ್ರತಿಯೊಂದು ವಿಚಾರಗಳಲ್ಲಿ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಆರೋಗ್ಯ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತ ಹೋಗುತ್ತವೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಂದ ಹಿಡಿದು ಬಹುದೊಡ್ಡ ಮಾರಕ ಆರೋಗ್ಯ ಸಮಸ್ಯೆಗಳು ನಮ್ಮಿಂದಲೇ ನಮಗೆ ಬರುತ್ತವೆ ಎಂಬುದನ್ನು ಮರೆಯಬಾರದು.

ಆದರೆ ಯಾವುದೇ ಆರೋಗ್ಯ ಸಮಸ್ಯೆಗೆ ಪರಿಹಾರ ಇರುತ್ತದೆ. ಕೆಲವೊಂದು ತಾತ್ಕಾಲಿಕ ಪರಿಹಾರಗಳು ಹಾಗೆ ಶಾಶ್ವತ ಪರಿಹಾರಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ. ಮಧುಮೇಹಕ್ಕೆ ಸಂಬಂಧಪಟ್ಟಂತೆ ಆಲೋಚಿಸಿ ನೋಡುವುದಾದರೆ, ಇದು ಕ್ರಮೇಣವಾಗಿ ಆರೋಗ್ಯವನ್ನು ಹಾಳು ಮಾಡುತ್ತಾ ಹೋಗುವ ಗುಣವನ್ನು ಪಡೆದುಕೊಂಡಿದೆ. ಮಧುಮೇಹ ಸಮಸ್ಯೆ ಒಮ್ಮೆ ಬಂದರೆ ಹೋಗುವ ಕಾಯಿಲೆಯಲ್ಲ. ಹಾಗಾಗಿ ಬರುವ ಮುಂಚೆ ಎಚ್ಚರಿಕೆ ತೆಗೆದುಕೊಳ್ಳುವುದು ಒಳ್ಳೆಯದು. ಕಟ್ಟುನಿಟ್ಟಾದ ಆಹಾರ ಪದ್ಧತಿ ಮತ್ತು ವ್ಯಾಯಾಮ ಇದಕ್ಕೆ ಪರಿಹಾರ ಎಂದು ಹೇಳಬಹುದು.

ಮಧುಮೇಹ ಸಮಸ್ಯೆ ಹೊಂದಿರುವ ಜನರು ಅತಿಯಾದ ಬಾಯಾರಿಕೆ, ಕಡಿಮೆ ರೋಗನಿರೋಧಕ ಶಕ್ತಿ, ಅತಿಯಾದ ಆಯಾಸ, ದೇಹದ ತೂಕ ಕಡಿಮೆಯಾಗುವುದು ಅಥವಾ ಹೆಚ್ಚಾಗುವ ಸಾಧ್ಯತೆ ಇರುವುದು ಇಂತಹ ಹಲವಾರು ರೋಗಲಕ್ಷಣಗಳನ್ನು ಆರಂಭದಲ್ಲಿ ಅನುಭವಿಸುತ್ತಾರೆ. ಮಧುಮೇಹ ಸಮಸ್ಯೆ ಒಮ್ಮೆ ಬಂದರೆ ಅದರಿಂದ ಸಂಪೂರ್ಣವಾಗಿ ಮುಕ್ತಿ ಪಡೆಯಲು ಸಾಧ್ಯವಿಲ್ಲ. ಕೇವಲ ಅದನ್ನು ನಿಯಂತ್ರಣ ಮಾಡಿಕೊಳ್ಳುವ ಪ್ರಯತ್ನ ಮಾಡಬಹುದು ಅಷ್ಟೇ. ಇದಕ್ಕಾಗಿ ವೈದ್ಯರು ನೀಡಿದ ಮಾತ್ರೆಗಳನ್ನು ಅಥವಾ ಔಷಧಿಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕು.

ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸಬೇಕು ಜೊತೆಗೆ ನಿಯಮಿತವಾದ ವ್ಯಾಯಾಮವನ್ನು ಮತ್ತು ದೈಹಿಕ ಕಸರತ್ತನ್ನು ದೇಹಕ್ಕೆ ಒದಗಿಸುವ ಮನಸು ಮಾಡಬೇಕು. ಔಷಧಿಗಳ ವಿಚಾರಕ್ಕೆ ಬರುವುದಾದರೆ, ಈ ಮೊದಲು ಕೇವಲ ಒಂದೇ ಒಂದು ಮಾತ್ರೆಯನ್ನು ತಿನ್ನದೇ ಇರಬಹುದು ಇದ್ದಕ್ಕಿದ್ದಂತೆ ಅಪಾರ ಪ್ರಮಾಣದ ಮಧುಮೇಹಕ್ಕೆ ಸಂಬಂಧಪಟ್ಟಂತೆ ಇರುವ ಔಷಧಿಗಳನ್ನು ಸೇವನೆ ಮಾಡಬೇಕು

ಎಂದರೆ ನಿಜಕ್ಕೂ ಮನಸ್ಸಿಗೆ ಕಷ್ಟವಾಗುತ್ತದೆ ಮತ್ತು ಬೇಸರವಾಗುತ್ತದೆ. ಆದರೆ ಬೇರೆ ದಾರಿಯಿರುವುದಿಲ್ಲ. ಆದರೂ ಕೂಡ ನೈಸರ್ಗಿಕ ವಿಧಾನದಲ್ಲಿ ಮಧುಮೇಹಕ್ಕೆ ಸಂಬಂಧಪಟ್ಟಂತೆ ಇರುವ ರೋಗಲಕ್ಷಣಗಳನ್ನು ನಿಯಂತ್ರಣ ಮಾಡಿಕೊಳ್ಳಬಹುದು. ಇದಕ್ಕಾಗಿ ಕೆಲವೊಂದು ಅಡುಗೆಮನೆಯಲ್ಲಿ ದಿನಬಳಕೆ ಮಾಡುವ ಆಹಾರ ಪದಾರ್ಥಗಳನ್ನು ಉಪಯೋಗಿಸಿಕೊಂಡು ಆರೋಗ್ಯವನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಬಹುದು.ಇಲ್ಲವೆಂದರೆ, ಕೆಲವೊಂದು ಮನೆಮದ್ದಿನ ಪಾನೀಯವನ್ನು ಕುಡಿದು ಮಧುಮೇಹದ ನಿಯಂತ್ರಣವನ್ನು ಕಾಪಾಡಿಕೊಳ್ಳಬಹುದು.

ಮೆಂತ್ಯವು ಕಹಿ ರುಚಿಯನ್ನು ಹೊಂದಿರುತ್ತದೆ ಮತ್ತು ಬಿಸಿಯಾಗಿರುತ್ತದೆ ಮತ್ತು ಇದು ಅದರ ದೊಡ್ಡ ಶಕ್ತಿಯಾಗಿದೆ. ಮಧುಮೇಹ, ಬೊಜ್ಜು ಮತ್ತು ಕೊಲೆಸ್ಟ್ರಾಲ್‌ಗೆ ಇದು ಅತ್ಯುತ್ತಮ ಆಯುರ್ವೇದ ಗಿಡಮೂಲಿಕೆಗಳಲ್ಲಿ ಒಂದಾಗಿದೆ. ಇಂದು ವೇಗವಾಗಿ ಏರುತ್ತಿರುವ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ, ಗ್ಲೂಕೋಸ್ ಅಸಹಿಷ್ಣುತೆಯನ್ನು ಸುಧಾರಿಸುತ್ತದೆ ಮತ್ತು ಒಟ್ಟು ಕೊಲೆಸ್ಟ್ರಾಲ್, ಎಲ್‌ಡಿಎಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ.

ಮೆಂತ್ಯವನ್ನು ಹೇಗೆ ಬಳಸುವುದು ಖಾಲಿ ಹೊಟ್ಟೆಯಲ್ಲಿ ಅಥವಾ ಮಲಗುವ ವೇಳೆಗೆ ಬೆಚ್ಚಗಿನ ನೀರಿನಲ್ಲಿ 1 ಟೀಚಮಚ ಮೆಂತ್ಯ ಪುಡಿಯನ್ನು ತೆಗೆದುಕೊಳ್ಳಿ. ಇನ್ನೊಂದು ಪರಿಹಾರವೆಂದರೆ 1 ಚಮಚ ಮೆಂತ್ಯವನ್ನು ರಾತ್ರಿಯಿಡೀ ನೆನೆಸಿ, ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನ ಜೊತೆ ತೆಗೆದುಕೊಳ್ಳಿ. ಮೆಂತ್ಯ ಪುಡಿ, ಕರಿ ಜೀರಿಗೆ ಪುಡಿ ಹಾಗು ಕರಿ ಬೇವಿನ ಎಲೆಯ ಪುಡಿ ಈ ಮೂರನ್ನು ಸರಿ ಪ್ರಮಾಣದಲ್ಲಿ ಮಿಶ್ರಣ ಮಾಡಿ ಪ್ರತಿ ನಿತ್ಯ ಒಂದು ಲೋಟ ಬಿಸಿ ನೀರಿನ ಜೊತೆ ಸೇರಿಸಿ ದಿನ ನಿತ್ಯ ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯವಾಗುತ್ತೆ .

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: