ಬೆಂಡೆಕಾಯಿಯಲ್ಲಿರುವ ಕರಗದ ನಾರನ್ನು ಜೀರ್ಣಿಸಿಕೊಳ್ಳಲು ನಮ್ಮ ಜೀರ್ಣಾಂಗಗಳಿಗೆ ಹೆಚ್ಚಿನ ಶಕ್ತಿಯ ಅವಶ್ಯಕತೆ ಇರುವುದರಿಂದ ದೇಹದಲ್ಲಿ ಶೇಖರವಾಗಿದ್ದ ಕೊಬ್ಬನ್ನು ವ್ಯಯಿಸಬೇಕಾಗಿ ಬರುತ್ತದೆ ಇದೇ ಕಾರಣದಿಂದ ಪ್ರತಿದಿನದ ಬೆಂಡೆಕಾಯಿಯ ಸೇವನೆಯ ಮೂಲಕ ಶೀಘ್ರವಾಗಿ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಬೆಂಡೆಕಾಯಿಯಲ್ಲಿ ಹೇರಳವಾದ ಫೈಬರ್ ಅಥವಾ ನಾರಿನಂಶ ಇರುವುದರಿಂದ ಡಯಾಬಿಟಿಸ್ಗೆ ರಾಮಬಾಣವಿದ್ದಂತೆ ಹಾಗೇ ರಕ್ತದ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿ ಜೀರ್ಣಕ್ರಿಯೆ ಸುಧಾರಿಸಲು ಕೂಡ ಸಹಕಾರಿಯಾಗಿದೆ ಡಯಾಬಿಟಿಸ್ ಇರುವರಲ್ಲಿ ಬಹುತೇಕರಲ್ಲಿ ಅಧಿಕ ಕೊಬ್ಬಿನಾಂಶ ಇರುತ್ತದೆ. ಅಂಥವರು ಬೆಂಡೆಕಾಯಿಯಂತಹ ಆ್ಯಂಟಿಆಕ್ಸಿಡೆಂಟ್ ಹೆಚ್ಚಾಗಿರುವ ತರಕಾರಿಯನ್ನು ತಿನ್ನುವುದರಿಂದ ದೇಹದ ಕೊಬ್ಬಿನಾಂಶ ಕಡಿಮೆಯಾಗುತ್ತದೆ.ನಾವು ಈ ಲೇಖನದ ಮೂಲಕ ಬೆಂಡೆಕಾಯಿಯ ಬಗ್ಗೆ ತಿಳಿದುಕೊಳ್ಳೋಣ.
ವರ್ಷವಿಡೀ ಸಿಗುವ ತರಕಾರಿಗಳಲ್ಲಿ ಬೆಂಡೆಕಾಯಿಯು ಒಂದು ಹಾಗೆಯೇ ಇದರಲ್ಲಿ ವಿವಿಧ ವಿಟಮಿನ್ ಪೌಷ್ಟಿಕಾಂಶಗಳು ತುಂಬಾ ಇರುತ್ತದೆ ಹಾಗೆಯೇ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಹಾಗಾಗಿ ಎಲ್ಲ ವರ್ಗದ ಮನೆಯ ಅಡುಗೆ ಮನೆಯಲ್ಲಿ ಸರ್ವೆ ಸಾಮಾನ್ಯವಾಗಿ ಇರುತ್ತದೆ ಬೆಂಡೆಕಾಯಿಯನ್ನು ರಾತ್ರಿ ನೆನೆಸಿ ಇಟ್ಟು ಬೆಳಿಗ್ಗೆ ಆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮೂರು ನಾಲ್ಕು ಬೆಂಡೆ ಕಾಯಿಯನ್ನು ತೊಳೆದು ನಂತರ ಅದನ್ನು ಕತ್ತರಿಸಿ ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಮುಚ್ಚಿ ಇಡಬೇಕು .ಹಾಗೆಯೇ ರಾತ್ರಿಯಲ್ಲ ಹಾಗೆ ಇರುಬೇಕು ಹಾಗೆಯೇ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆ ಕುಡಿಯಬೇಕು ಕರುಳು ಹಾಗೂ ಜೀರ್ಣ ಶಕ್ತಿ ಶುದ್ದ ಆಗುತ್ತದೆ ಅಲ್ಸರ್ ಇದ್ದರು ಕೂಡ ಕಡಿಮೆ ಆಗುತ್ತದೆ ಗ್ಯಾಸ್ ಎಸಿಡಿಟಿ ಮಲಬದ್ದತೆ ಸಮಸ್ಯೆ ಇದ್ದರೆ ನಿವಾರಣೆ ಆಗುತ್ತದೆ ಅಷ್ಟೇ ಅಲ್ಲದೆ ರಕ್ತ ಸಂಚಾರ ಹೆಚ್ಚು ಆಗುತ್ತದೆ ಮತ್ತು ಹೃದಯದ ಕಾರ್ಯ ವೈಖರಿ ಚೆನ್ನಾಗಿ ಇರುತ್ತದೆ ಅಧಿಕ ರಕ್ತದ ಒತ್ತಡ ಕಡಿಮೆ ಆಗುತ್ತದೆ.
ಮಧುಮೇಹ ರೋಗ ಇದ್ದರವರು ಈರೀತಿ ಮಾಡಿ ಕುಡಿಯುವುದರಿಂದ ಸಮಸ್ಯೆಯಿಂದ ಹೊರಬರಬಹುದು ರಕ್ತದಲ್ಲಿ ಇರುವ ಸಕ್ಕರೆ ಅಂಶವನ್ನು ಹತೋಟಿಯಲ್ಲಿ ಇಡಲು ಈ ನೀರು ಸಹಾಯ ಆಗುತ್ತದೆ ಬೆಂಡೆಕಾಯಿ ಕರುಳಿಗೆ ಬೇಕಾದ ಒಳ್ಳೆಯ ಬೀಜಗಳನ್ನು ಉತ್ಪತ್ತಿ ಮಾಡಲು ಸಹಾಯಕಾರಿಯಾಗಿದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ದೇಹದಲ್ಲಿ ಇರುವ ವಿಷಕಾರಿ ಅಂಶಗಳು ಹಾಗೂ ಕೊಲೆಸ್ಟ್ರಾಲ್ ಬೆಂಡೆಕಾಯಿ ಹೊರ ಹಾಕುತ್ತದೆ ನಮ್ಮ ದೇಹದಲ್ಲಿ ಇರುವ ರಕ್ತದ ಅಂಶವನ್ನು ಹೆಚ್ಚಿಸಲು ಸಹಾಯಕಾರಿಯಾಗಿದೆ. ಬೆಂಡೆಕಾಯಿಯನ್ನು ಬೇಯಿಸಿ ತಿನ್ನುದಕಿಂತ ಆದಷ್ಟು ಹಸಿಯಾಗಿ ತಿನ್ನುವುದು ಉತ್ತಮವಾಗಿದೆ ಬೆಂಡೆಕಾಯಿ ಅಲ್ಲಿ ಇರುವ ನಾರಿನ ಅಂಶವು ರಕ್ತವನ್ನು ಹೆಚ್ಚಿಸಲು ಸಹಾಯಕಾರಿಯಾಗಿದೆ ಬೆಂಡೆ ಕಾಯಿಯನ್ನು ಹಸಿಯಾಗಿ ತಿನ್ನುವುದರಿಂದ ಚರ್ಮ ಹೊಳಪಾಗುತ್ತದೆ ಬೆಂಡೆಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ವಿವಿಧ ಖಾಯಿಲೆಗಳಿಂದ ದೇಹವನ್ನು ರಕ್ಷಿಸಲು ಸಾಧ್ಯವಾಗುತ್ತದೆ ಹೀಗೆ ಬೆಂಡೆಕಾಯಿ ಅನೇಕ ಉಪಯೋಗವನ್ನು ಹೊಂದಿದೆ .