ರೋಗ ನಿರೋಧಕ ಶಕ್ತಿ ಈ ಪದವನ್ನು ಪೋಷಕರು ಲೇಖನಗಳಲ್ಲಿ ಅಥವಾ ಪಾಕವಿಧಾನಗಳಲ್ಲಿ ಮತ್ತು ಆಹಾರ ಉತ್ಪನ್ನಗಳಲ್ಲಿ ಸಾಮಾನ್ಯವಾಗಿ ನೋಡಿ ಅಥವಾ ಕೇಳಿರುತ್ತೀರಾ ಮತ್ತು ಮಾತನಾಡಿರುತ್ತೀರ. ಅದರಲ್ಲೂ ಈಗಿನ ಕೋರೋನ ಕಾಲದಲ್ಲಿ ಅಂತೂ ಯಾರ ಬಳಿ ಕೇಳಿದರೂ ಅತಿಯಾಗಿ ಬಳಕೆ ಆಗುವ ಪದ ಎಂದರೆ ರೋಗ ನಿರೋಧಕ ಶಕ್ತಿ ಕಡಿಮೆ ಇದೆ ಅಂತೆ ಅದನ್ನು ಹೆಚ್ಚಿಸಿಕೊಳ್ಳಬೇಕು ಅಂತಲೇ. ಹಾಗಿದ್ರೆ ನಿಜಕ್ಕೂ ಈ ರೋಗ ನಿರೋಧಕ ಶಕ್ತಿ ಅಥವಾ ಇಮ್ಯುನೀಟಿ ಇದು ನಮಗೆ ಹೇಗೆ ದೊರೆಯುತ್ತದೆ? ಯಾವುದಾದರೂ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದಲಾ? ಅಥವಾ ಕಷಯಾಗಳನ್ನು ಕುಡಿಯುವುದರಿಂದಲಾ? ರೋಗ ನಿರೋಧಕ ಶಕ್ತಿ ಇದರ ಉತ್ಪಾದನೆ ಆಗುವುದು ಆದರೂ ಹೇಗೆ? ಇದು ಕೆಲವು ಜನರಲ್ಲಿ ಹೆಚ್ಚು ಮತ್ತು ಇನ್ನು ಕೆಲವು ಜನರಲ್ಲಿ ಕಡಿಮೆ ಇರುತ್ತದೆ ಯಾಕೆ ಹೀಗೆ? ವ್ಯಾಧಿ ಕ್ಷಮತ್ವ ಎಂದೂ ಕರೆಯಲ್ಪಡುವ ಈ ರೋಗ ನಿರೋಧಕ ಶಕ್ತಿಯ ಬಗ್ಗೆ ನಾವು ಈ ಲೇಖನದ ಮೂಲಕ ವಿವರವಾಗಿ ತಿಳಿದುಕೊಳ್ಳೋಣ.
ರೋಗಗಳ ವಿರುದ್ಧ ನಮಗೆ ಹೋರಾಡಲು ಬೇಕಾದ ಶಕ್ತಿಯನ್ನು ನಾವು ರೋಗ ನಿರೋಧಕ ಶಕ್ತಿ ಎನ್ನಬಹುದು. ಈ ರೋಗ ನಿರೋಧಕ ಶಕ್ತಿ ಬರೀ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಇರಬೇಕು. ಭೂಮಿಯ ಮೇಲೆ ಮಾನವನ ಜನನ ಆಗುವುದಕ್ಕಿಂತ ಮೊದಲೇ ವೈರಸ್ ಗಳು ಇದ್ದವು. ನಾವು ಈಗ ಮಾತ್ರವಲ್ಲ ಸಾಕಷ್ಟು ಕಾಲಗಳಿಂದಲೂ ಹಲವಾರು ರೀತಿಯ ವೈರಾಣುಗಳು ಅವುಗಳು ತರುವ ರೋಗಗಳನ್ನು ನೋಡಿದ್ದೇವೆ ಹಾಗೂ ಅನುಭವಿಸಿದ್ದೇವೆ ಇವತ್ತು ನಾವು ಎದುರಿಸುತ್ತಿರುವ ವೈರಾಣುಗಳ ಎದುರು , ವೈರಾಣು ಅದರ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದೆ. ಹೀಗಿದ್ದಾಗ ಇಂತಹ ಸಂದರ್ಭದಲ್ಲಿ ನಾವು ಬದುಕಲು ಕೂಡಾ ಹೋರಾಟ ಮಾಡುವುದು ಅಗತ್ಯವಾಗಿದೆ. ವೈರಸ್ ಗಳನ್ನು ನಾವು ಹೊಡೆದು ಕೊಂಡು ಬಂದುಕುತ್ತೇವೆ ಅಂದರೆ ಅದು ನಮ್ಮ ಮೂರ್ಖತನವಾಗುತ್ತದೆ. ಇನ್ನು ಹಾಗೆ ಮಾಡುವುದರಿಂದ ನಮಗೆ ಯಾವುದೇ ಲಾಭವೂ ಇಲ್ಲ.
ಅದರ ಬದಲಾಗಿ ನಾವು ಆ ವೈರಸ್ ಗಳು ನಮ್ಮ ದೇಹಕ್ಕೆ ಹಾಕಿ ಹಾನಿ ಮಾಡದ ಹಾಗೇ ನಾವು ಎಚ್ಚರಿಕೆಯನ್ನು ವಹಿಸಬಹುದು. ಈ ವೈರಸ್ ಗಳು ನಮ್ಮ ಸುತ್ತಮುತ್ತಲೂ ಇದ್ದರೂ ಸಹ ಅವುಗಳಿಂದ ನಮಗೆ ಯಾವುದೇ ಅಪಾಯ ಉಂಟಾಗದ ಹಾಗೆ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು. ನಮ್ಮ ಕಣ್ಣಿಗೆ ಕಾಣಿಸದ ವೈರಸ್ ಗಳು ಇನ್ನೂ ಎಷ್ಟೆಷ್ಟೋ ಇದೆ. ಹಾಗಾಗಿ ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಪ್ರಪಂಚದಲ್ಲಿ ಇರುವ ಯಾವುದೇ ವೈರಸ್ ಗಳು ನಮ್ಮನ್ನು ಕಾಡಲು ಸಾಧ್ಯವಿಲ್ಲ.
ಹಾಗಿದ್ದರೆ ನಾವು ರೋಗ ನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎನ್ನುವ ಪ್ರಶ್ನೆ ಎಲ್ಲರಿಗೂ ಉದ್ಭವ ಆಗುವುದು ಸಹಜ. ನಾವು ಅಂದುಕೊಳ್ಳಬಹುದು ವಿಟಮಿನ್ ಸಿ ಮಾತ್ರೆಯನ್ನು ಒಂದು ತೆಗೆದುಕೊಂಡರೆ , ಇಲ್ಲವೇ ಯಾವುದೋ ಕಷಾಯ ಮಾಡಿ ಕುಡಿದರೆ ರಾತ್ರಿ ಬೆಳಗ್ಗೆ ಆಗುವಶ್ಟರಲ್ಲಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು. ಆದರೆ ಇದು ನಮಗೆ ಬೇಕು ಅಂದ ಕೂಡಲೇ ಹೆಚ್ಚುವ ಪ್ರಕ್ರಿಯೆ ಅಲ್ಲಾ. ರೋಗ ನಿರೋಧಕ ಶಕ್ತಿ ಇದು ನಮಗೆ ಜನ್ಮದತ್ತವಾಗಿ ತಂದೆ ತಾಯಿ ಇಂದ ಅನುವಂಶಿಕವಾಗಿ ಬರುವ ಬಳುವಳಿ ಎಂದೇ ಹೇಳಬಹುದು. ಇನ್ನು ಕೆಲವರಿಗೆ ನಮಗೆ ಹುಟ್ಟಿದಾಗಿನಿಂದಲೂ ರೋಗ ನಿರೋಧಕ ಶಕ್ತಿ ಇಲ್ಲಾ ಹಾಗಿದ್ದಾಗ ನಾವೇನು ಮಾಡಬೇಕು ಎಂಬ ಪ್ರಶ್ನೆ ಇರುತ್ತದೆ. ಹಾಗಿದ್ದಾಗ ನಿರಾಶರಾಗದೇ ನಾವೂ ಕೂಡಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಮನದಲ್ಲಿ ಇಟ್ಟುಕೊಳ್ಳಬೇಕು ಆದರೆ ಅದು ಬೇಕು ಅಂದಾಕ್ಷಣ ದೊರೆಯುವುದಿಲ್ಲ. ಅದಕ್ಕೆ ತಕ್ಕಂತೆ ಆಹಾರ ಸೇವನೆ ಯೋಗ ವ್ಯಾಯಾಮ ಮಾಡಬೇಕು. ಆಹಾರ ತಿನ್ನಲು ಅಥವಾ ಕುಡಿಯಲು ಆದರೂ ಅದಕ್ಕೆ ಪ್ರಮಾಣ ಇರಬೇಕು ಇತಿ ಮಿತಿ ಇರಬೇಕು. ಯಾವ ಆಹಾರವನ್ನು ಹೇಗೆ ಎಷ್ಟು ತೆಗೆದುಕೊಂಡರೆ ನಮಗೆ ಒಳ್ಳೆಯದು ಯಾವ ಆಹಾರ ಸೇವಿಸಬೇಕು ಅಥವಾ ಬೇಡ ಎನ್ನುವುದರ ಅರಿವು ಕೂಡಾ ನಮಗೆ ಇರಬೇಕು.