ಶರೀರಕ್ಕೆ ರಕ್ತವೃದ್ಧಿಸುವ ಈ ಹಣ್ಣುಗಳನ್ನು ವಾರದಲ್ಲಿ ಒಮ್ಮೆಯಾದ್ರೂ ತಿನ್ನಿ

0

ಇಂದಿನ ಜೀವನ ಶೈಲಿ, ಆಹಾರ ಪದ್ಧತಿಯಲ್ಲಿ ಸತ್ವಯುತ ಆಹಾರಕ್ಕಿಂತ ಕಲಬೆರಕೆ ಆಹಾರ ಹೆಚ್ಚಾಗಿದೆ. ನಮ್ಮ ದೇಹದ ಆರೋಗ್ಯವು ರಕ್ತವನ್ನು ಅವಲಂಬಿಸಿದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದರೆ ಹಲವು ಖಾಯಿಲೆಗಳಿಗೆ ದಾರಿಯಾಗುತ್ತದೆ. ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶ ಹೆಚ್ಚು ಮಾಡುವ ಆಹಾರಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಇಂದಿನ ದಿನಗಳಲ್ಲಿ ಬಹಳಷ್ಟು ಜನರು ರಕ್ತಹೀನತೆ ಅಂದರೆ ಹಿಮೋಗ್ಲೋಬಿನ್ ಕೊರತೆ ಈ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ರಕ್ತ ಹೀನತೆ ಸಮಸ್ಯೆಯಿಂದ ಆಕ್ಟೀವ್ ಆಗಿರಲು ಸಾಧ್ಯವಾಗುವುದಿಲ್ಲ. ಹಿಮೋಗ್ಲೋಬಿನ್ ಹೆಚ್ಚಿಗೆ ಮಾಡಿಕೊಳ್ಳಲು ಕೆಲವು ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ತರಕಾರಿಗಳ ಜ್ಯೂಸ್ ಕುಡಿಯುವುದರಿಂದ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ. ಜ್ಯೂಸ್ ಮಾಡಲು ಬೇಕಾಗುವ ಸಾಮಗ್ರಿಗಳು ಕ್ಯಾರೆಟ್, ದಾಳಿಂಬೆ, ಬಿಟರೂಟ್, ಖರ್ಜೂರ, ನೀರು.

ಮಾಡುವ ವಿಧಾನವೆಂದರೆ 1 ಕ್ಯಾರೆಟ್ ತೆಗೆದುಕೊಂಡು ಅದರ ಸಿಪ್ಪೆ ತೆಗೆದು ಸಣ್ಣದಾಗಿ ಕಟ್ ಮಾಡಿಕೊಳ್ಳಬೇಕು. ಒಂದು ಬೀಟರೂಟ್ ಸಿಪ್ಪೆತೆಗೆದು ಅದನ್ನು ಕೂಡ ಸಣ್ಣದಾಗಿ ಕಟ್ ಮಾಡಿಕೊಳ್ಳಬೇಕು. ಬಿಟರೂಟ್ ನಲ್ಲಿ ಹೆಚ್ಚು ಐರನ್ ಅಂಶವಿದ್ದು ಪೋಲಿಕ್ ಆ್ಯಸಿಡ್, ಪೊಟ್ಯಾಷಿಯಂ ಹಾಗೂ ಫೈಬರ್ ಅಂಶವಿದೆ. ಇದು ಹಿಮೊಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಒಂದು ದಾಳಿಂಬೆಯ ಒಳಗಿನ ಕಾಳುಗಳನ್ನು ಬಿಡಿಸಿಕೊಳ್ಳಬೇಕು.

ದಾಳಿಂಬೆಯಲ್ಲಿ ಐರನ್, ವಿಟಮಿನ್ ಸಿ, ಕ್ಯಾಲ್ಶಿಯಂ ಇದು ಹಿಮೊಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಸಣ್ಣದಾಗಿ ಕತ್ತರಿಸಿಕೊಂಡ ಬೀಟರೂಟ್, ಕ್ಯಾರೆಟ್, ದಾಳಿಂಬೆ ಕಾಳು ಇದರ ಜೊತೆಗೆ ನಾಲ್ಕರಿಂದ ಐದು ಖರ್ಜೂರ, ನೀರನ್ನು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ನಂತರ ಸೋಸಿ ಲೋಟದಲ್ಲಿ ಹಾಕಿ ಕುಡಿಯಬೇಕು. ಈ ಜ್ಯೂಸನ್ನು ದಿನ ಬಿಟ್ಟು ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಏಳುದಿನಗಳವರೆಗೆ ಅಂದರೆ ಒಂದು ವಾರದವರೆಗೆ ಕುಡಿಯುತ್ತಿರಬೇಕು ಹೀಗೆ ಮಾಡಿದರೆ ಏಳು ದಿನಗಳಲ್ಲಿ ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶ ಹೆಚ್ಚಾಗುತ್ತದೆ.

ರಕ್ತದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಹಿಮೋಗ್ಲೋಬಿನ್ ಕಂಡುಬಂದರೆ ಅನೀಮಿಯಾ ಖಾಯಿಲೆ ಬರುತ್ತದೆ. ಈ ಖಾಯಿಲೆ ಸಾಮಾನ್ಯವಾಗಿ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ರಕ್ತದಲ್ಲಿ ರೆಡ್ ಬ್ಲಡ್ ಸೆಲ್ಸ್ ಕಡಿಮೆ ಆದಾಗ ರಕ್ತಹೀನತೆ ಸಮಸ್ಯೆ ಕಾಣಿಸುತ್ತದೆ. ದೇಹದಲ್ಲಿ ರಕ್ತ ಕಡಿಮೆ ಇರುವವರು ಬೇಗನೆ ಆಯಾಸಕ್ಕೆ ಒಳ್ಳಗಾಗುತ್ತಾರೆ, ಕಣ್ಣು ಹಳದಿ ಬಣ್ಣಕ್ಕೆ ತಿರುಗುತ್ತದೆ ಅವರ ದೇಹ ಬೆವರುತ್ತದೆ. ಈ ಲಕ್ಷಣಗಳು ಕಂಡುಬಂದರೆ ಅದಕ್ಕೆ ಚಿಕಿತ್ಸೆ ಮಾಡಿಕೊಳ್ಳಬೇಕು ಇಲ್ಲದಿದ್ದರೆ ರೋಗಕ್ಕೆ ಕಾರಣವಾಗುತ್ತದೆ.

ಪ್ರತಿದಿನ ಹಣ್ಣು, ತರಕಾರಿಗಳನ್ನು ಸೇವಿಸುವುದರಿಂದ ರಕ್ತದಲ್ಲಿ ಹಿಮೊಗ್ಲೋಬಿನ್ ಅಂಶವನ್ನು ಹೆಚ್ಚಿಸಬಹುದು. ರಕ್ತಹೀನತೆ ಸಮಸ್ಯೆ ಎದುರಿಸುತ್ತಿರುವವರು ಕಬ್ಬಿಣ ಅಂಶ ಹೆಚ್ಚಾಗಿರುವ ಆಹಾರವನ್ನು ಸೇವಿಸಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ರಕ್ತಹೀನತೆ ಸಮಸ್ಯೆ ಇಲ್ಲದೆ ಇದ್ದವರು ಸಹ ಕಬ್ಬಿಣದ ಅಂಶ ಹೆಚ್ಚಿರುವ ತರಕಾರಿ, ಹಣ್ಣುಗಳನ್ನು ಸೇವಿಸುವುದು ಉತ್ತಮ.

Leave A Reply

Your email address will not be published.

error: Content is protected !!