ಪ್ರತಿಯೊಬ್ಬ ಮನುಷ್ಯನಿಗೂ ಸ್ನಾನ ಎನ್ನುವುದು ಬಹು ಮುಖ್ಯವಾದದ್ದು ನಾವು ಸ್ವಚ್ಛವಾಗಿರಲು ಆರೋಗ್ಯವಾಗಿರಲು ದೇಹದಲ್ಲಿ ಉಮ್ಮಸ್ಸು ಮೂಡಲು ನಿದ್ದೆ ಚೆನ್ನಾಗಿ ಬರಲು ಮತ್ತು ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಸ್ನಾನದ ಅವಶ್ಯಕತೆ ಇದೆ ಸ್ನಾನ ಮಾಡಲು ವಿಜ್ಞಾನದ ಪ್ರಕಾರ ಕೆಲವು ನಿಯಮಗಳು ಇವೆ ಸರಿಯಾಗಿ ಸ್ನಾನ ಮಾಡದೆ ಒಟ್ಟಾರೆಯಾಗಿ ಸ್ನಾನ ಮಾಡುವುದರಿಂದ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು .
ನಮ್ಮ ಹಿರಿಯರು ಊಟದ ನಂತರ ಸ್ನಾನ ಮಾಡಲು ಆಕ್ಷೇಪ ಮಾಡುತ್ತಿದ್ದರು ಏಕೆಂದರೆ ಊಟದ ನಂತರ ಹೊಟ್ಟೆಯಲ್ಲಿ ಬೆಚ್ಚಗಿನ ಶಕ್ತಿ ಉದ್ಭವವಾಗುವುದರಿಂದ ಇದು ಪೋಷಕಾಂಶಗಳ ಹೀರುವಿಕೆಗೆ ಸಹಾಯಮಾಡುತ್ತದೆ ಊಟದ ನಂತರ ಸ್ನಾನ ಮಾಡುವುದರಿಂದ ಈ ಪ್ರಕ್ರಿಯೆ ತಿರುಚುತ್ತದೆ ಇದು ನಮ್ಮ ಜೀರ್ಣಕ್ರಿಯ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತದೆ ಆದ್ದರಿಂದ ಅಜೀರ್ಣದ ಸಮಸ್ಯೆ ಉಂಟಾಗಬಹುದು.
ಸೂರ್ಯ ಮುಳುಗಿದ ನಂತರ ಅಂದರೆ ಸಂಜೆಯ ಸಮಯ ಸ್ನಾನ ಮಾಡಬಾರದು ಎನ್ನುವುದು ತಜ್ಞರ ಹೇಳಿಕೆ ಸಂಜೆಯ ನಂತರ ದೇಹವು ದಣಿದಿರುವುದರಿಂದ ವಿಶ್ರಾಂತಿಯನ್ನು ಬಯಸುತ್ತಿರುತ್ತದೆ ಅದ ನಂತರ ಸ್ನಾನ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚಾಗಿ ನಿದ್ದೆ ಮಾಡಲು ಅಡ್ಡಿಯಾಗಬಹುದು. ಆದ್ದರಿಂದ ಬೆಳಗಿನ ಜಾವ ನಾಲ್ಕರಿಂದ ಐದು ಗಂಟೆಯ ಒಳಗೆ ಸ್ನಾನ ಮಾಡುವುದು ತುಂಬಾ ಉತ್ತಮ ಅದರಲ್ಲಿಯೂ ತಣ್ಣೀರಿನ ಸ್ನಾನ ಬೆಳಗಿನ ಜಾವ ಮಾಡುವುದರಿಂದ ದೇಹದಲ್ಲಿ ಹೊಸ ಚೈತನ್ಯ ಮೂಡುವುದು.
ತಣ್ಣಗಿನ ನೀರಿನಲ್ಲಿ ಸ್ನಾನವನ್ನು ಮಾಡುವುದು ನಮ್ಮ ದೇಹಕ್ಕೆ ಒಳ್ಳೆಯ ಫಲವನ್ನು ನೀಡುತ್ತದೆ, ದೇಹದ ನರಗಳಿಗೆ ಉತ್ತೇಜನ ನೀಡಿ ದಿನವಿಡಿ ಹುಮ್ಮಸ್ಸನ್ನು ನೀಡುತ್ತದೆ ಅಲ್ಲದೆ ಶ್ವಾಸಕೋಶದ ಕಾರ್ಯಕ್ಕೂ ಸಹಾಯಕವಾಗುತ್ತದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಂತಯೇ ಬಿಸಿನೀರಿನ ಸ್ನಾನವು ದೇಹದಲ್ಲಿ ಸೂಕ್ಷ್ಮಜೀವಿಗಳ ನಿರ್ಮೂಲನೆ ಮಾಡಲು ಸಹಾಯಮಾಡುತ್ತದೆ ದೇಹದಲ್ಲಿನ ನೋವುಗಳನ್ನು ನಿವಾರಣೆ ಮಾಡುತ್ತದೆ ಶೀತ ಜ್ವರ ಬಂದಾಗ ಬಿಸಿ ನೀರಿನ ಸ್ನಾನ ಮಾಡುವುದು ದೇಹಕ್ಕೆ ತುಂಬಾ ಒಳ್ಳೆಯದು.
ಇನ್ನು ಕಣ್ಣು ಮತ್ತು ಕೂದಲನ್ನು ಬಿಸಿ ನೀರಿನಿಂದ ತೊಳೆಯುವುದು ಅಷ್ಟೊಂದು ಸೂಕ್ತವಲ್ಲ ಎಂಬುದು ತಜ್ಞರ ಹೇಳಿಕೆಯಾಗಿದೆ. ವಯಸ್ಸಾದವರು ಬಿಸಿನೀರಿನ ಸ್ನಾನವನ್ನು ಮಾಡುವುದರಿಂದ ಅವರ ದೇಹವು ಆರಾಮದಾಯಕವಾಗಿ ಇರುವುದು ಹಾಗೆಯೇ ಯುವಕರು ತಣ್ಣೀರಿನ ಸ್ನಾನ ಮಾಡುವುದು ಉತ್ತಮ , ಚಿಕ್ಕ ಮಕ್ಕಳಿಗೆ ಅರೆಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸುವುದು ಒಳ್ಳೆಯದು. ಪಿತ್ತದ ಸಮಸ್ಯೆ ಇದ್ದವರು ತಣ್ಣೀರಿನ ಸ್ನಾನವನ್ನು ಮಾಡಬೇಕು ಕಫ ಅಥವಾ ವಾತದ ಸಮಸ್ಯೆ ಇದ್ದರೆ ಅವರು ಬಿಸಿನೀರಿನ ಸ್ನಾನವನ್ನು ಮಾಡಬೇಕು. ಒಂದು ವೇಳೆ ಸಂಜೆಯ ವೇಳೆ ಸ್ನಾನ ಮಾಡಬೇಕಾಗಿ ಬಂದಲ್ಲಿ ತಣ್ಣೀರನ್ನು ಸ್ನಾನ ಮಾಡಬಾರದು.
ಇನ್ನೂ ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಮೂರು ದಿನಗಳ ಕಾಲ ಸ್ನಾನ ಮಾಡಬಾರದು ಎಂಬುದು ಮೂಢನಂಬಿಕೆ ಈ ಸಮಯದಲ್ಲಿ ಮಹಿಳೆಯರು ತಮ್ಮ ದೇಹದ ಸೂಕ್ಷ್ಮ ಭಾಗಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಅದಕ್ಕಾಗಿ ಅರೇ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು.