ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ನಕಲಿ ದಾಖಲೆಗಳನ್ನು ನೀಡಿ ಮೋಸ ಮಾಡಿದಂತಹ ಪ್ರಕರಣಗಳು ಎಲ್ಲ ಕಡೆಗಳಲ್ಲಿ ಕಂಡು ಬರುತ್ತಿವೆ. ನಮ್ಮ ಬಳಿ ಇರುವಂತಹ ದಾಖಲೆಗಳು ಸರಿಯಾಗಿ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ನಮಗೆ ಒಳ್ಳೆಯದು ಹಾಗಾಗಿ ನಾವಿಂದು ನಿಮಗೆ ನಿಮ್ಮ ಬಳಿ ಇ ಸ್ಟಾಂಪ್ ಪೇಪರ್ ಇದ್ದರೆ ಅಥವಾ ಬಾಂಡ್ ಪೇಪರ್ ಇದ್ದರೆ ಆ ಒಂದು ಪೇಪರ್ ಅಸಲಿ ದಾಖಲೆಯೇ ಅಥವಾ ನಕಲಿಯೇ ಎನ್ನುವುದನ್ನ ಆನ್ಲೈನ್ ಮುಖಾಂತರ ಪರಿಶೀಲನೆ ಮಾಡಿ ಖಚಿತಪಡಿಸಿಕೊಳ್ಳಬಹುದು. ನಿಮ್ಮ ಬಳಿ ಮೊಬೈಲ್ ಇದ್ದರೆ ಸುಲಭವಾಗಿ ಯಾವ ರೀತಿಯಾಗಿ ಇ ಸ್ಟಾಂಪ್ ಪೇಪರ್ ನಕಲಿಯೇ ಅಥವಾ ಅಸಲಿಯೋ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ಮೊದಲಿಗೆ ಇಂಡಿಯಾ ಇ-ಸ್ಟ್ಯಾಂಪ್ ಸಿಸ್ಟಮ್ ಎನ್ನುವ ಅಫೀಷಿಯಲ್ ವೆಬ್ ಸೈಟ್ ಇದ್ದು ಅದನ್ನ ಮೊಬೈಲ್ನಲ್ಲಿ ತೆರೆಯಬೇಕು ಆಗ ನಿಮ್ಮ ಮುಂದೆ ಒಂದು ಪುಟ ಕಾಣಿಸಿಕೊಳ್ಳುತ್ತದೆ ಅಲ್ಲಿ ಇ-ಸ್ಟಾಂಪಿಂಗ್ ವೇರಿಫೈ ಸಿಸ್ಟಮ್ ಎನ್ನುವುದು ಕಾಣಿಸುತ್ತದೆ ಅದರ ಕೆಳಗೆ ಕೇಳುವಂತಹ ಮಾಹಿತಿಯನ್ನು ನೀವು ಒದಗಿಸಬೇಕಾಗುತ್ತದೆ. ಮೊದಲು ನೀವು ಯಾವ ರಾಜ್ಯದಲ್ಲಿ ಇ-ಸ್ಟ್ಯಾಂಪ್ ಪೇಪರನ್ನು ಪಡೆದುಕೊಂಡಿರುತ್ತಿರಿ ಆ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು.
ನಂತರ ಅಲ್ಲಿ ಸರ್ಟಿಫಿಕೇಟ್ ನಂಬರ್ ಎಂದು ಕೇಳುತ್ತದೆ ಇ-ಸ್ಟ್ಯಾಂಪ್ ಪೇಪರ್ ನಲ್ಲಿ ಸರ್ಟಿಫಿಕೇಟ್ ನಂಬರ್ ಇರುತ್ತದೆ ಅದನ್ನು ಇಲ್ಲಿ ಟೈಪ್ ಮಾಡಬೇಕು. ನಂತರ ಸ್ಟಾಂಪ್ ಡ್ಯುಟಿ ಟೈಪ್ ಎಂದು ಕೇಳುತ್ತದೆ ನಿಮ್ಮ ಸ್ಟಾಂಪ್ ಪೇಪರ್ನಲ್ಲಿ ಐದನೇ ಕಾಲಮ್ ನಲ್ಲಿ ಡಿಸ್ಕ್ರಿಪ್ಶನ್ ಆಫ್ ಡಾಕ್ಯುಮೆಂಟ್ ಎಂದು ಅಲ್ಲಿ ಆರ್ಟಿಕಲ್ ಸಂಖ್ಯೆ ಇರುತ್ತದೆ.
ಅದನ್ನ ನೀವು ಇಲ್ಲಿ ನಮೂದಿಸಬೇಕಾಗುತ್ತದೆ. ನಂತರ ನೀವು ಬಾಂಡ್ ಅನ್ನು ಯಾವ ದಿನಾಂಕದಂದು ತೆಗೆದುಕೊಂಡಿರುತ್ತಿರಿ ಆ ದಿನಾಂಕವನ್ನು ಅಲ್ಲಿ ನಮೂದಿಸಬೇಕು ನಂತರ ಅಲ್ಲಿ ಕೆಳಗೆ ಕಾಣಿಸುವಂತಹ ಕ್ಯಾಪ್ಚಾ ಕೊಡ್ ನಮೂದಿಸಬೇಕು. ಮತ್ತೊಮ್ಮೆ ಮೇಲೆ ತುಂಬಿರುವಂತಹ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ವೇರಿಫೈ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ಆಗ ಸ್ಟ್ಯಾಂಪ್ ಪೇಪರ್ ಪರಿಶೀಲನೆ ಆಗಿ ನಿಮ್ಮ ಮುಂದೆ ಮೂಲಪ್ರತಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಸ್ಟ್ಯಾಂಪ್ ಪೇಪರ್ ನಂಬರ್ ಇರುತ್ತದೆ ಜೊತೆಗೆ ನೀವು ಯಾವ ದಿನಾಂಕದಂದು ಇ ಸ್ಟಾಂಪ್ ತೆಗೆದುಕೊಂಡಿದ್ದೀರಿ ಆ ದಿನಾಂಕ ಅಲ್ಲಿ ಕಾಣಿಸುತ್ತದೆ. ನಂತರ ಯಾರ ಹೆಸರಿನಲ್ಲಿ ಸ್ಟ್ಯಾಂಪ್ ಪೇಪರ್ ಇದೆ ಮೊದಲ ವ್ಯಕ್ತಿ ಯಾರು ಎರಡನೇ ವ್ಯಕ್ತಿ ಯಾರು ಎಂಬುದು ಅಲ್ಲಿ ಕಾಣಿಸುತ್ತದೆ.
ಸ್ಟ್ಯಾಂಪ್ ಪೇಪರ್ ಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಕೂಡ ಅಲ್ಲಿ ಕಾಣಿಸುತ್ತದೆ ನಿಮ್ಮ ಬಳಿ ಇರುವಂತಹ ಸ್ಟಾಂಪ್ ಪೇಪರ್ ಆನ್ಲೈನಲ್ಲಿ ನಿಮಗೆ ಕಾಣಿಸಿದರೆ ಮಾತ್ರ ಅದು ಸ್ಟ್ಯಾಂಪ್ ಪೇಪರ್ ಮೂಲಪ್ರತಿಯಾಗಿರುತ್ತದೆ. ಈ ರೀತಿಯಾಗಿ ನಿಮ್ಮ ಬಳಿಯೂ ಕೂಡ ಇ-ಸ್ಟ್ಯಾಂಪ್ ಪೇಪರ್ ಅಥವಾ ಬಾಂಡ್ ಇದ್ದರೆ ಅದು ಮೂಲಪ್ರತಿ ಹೌದೇ ಅಲ್ಲವೇ ಎಂಬುದನ್ನು ಈ ರೀತಿಯಾಗಿ ಸುಲಭವಾಗಿ ಕುಳಿತಲ್ಲಿಯೇ ಪರಿಶೀಲನೆಯನ್ನು ಮಾಡಿಕೊಳ್ಳಬಹುದಾಗಿದೆ.
ಈ ರೀತಿಯಾಗಿ ಮೂಲ ದಾಖಲೆಗಳ ಪರಿಶೀಲನೆಯಿಂದ ಮಾಡಿಕೊಳ್ಳುವುದರಿಂದ ನಾವು ಮೋಸಹೋಗುವ ಸಂದರ್ಭದಿಂದ ತಪ್ಪಿಸಿಕೊಳ್ಳಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.