ಯಾರಿಗೂ ತಿಳಿಯದ ದೇವದತ್ತ್ ಪಡಿಕ್ಕಲ್ ಕಣ್ಣೀರ ಕಥೆ

0

ಐದು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ವಿರಾಟ್ ಕೊಹ್ಲಿ ಮತ್ತು ಉಣ್ಮುಕ್ತ ಚಂದ್ ನಡುವಿನ  ಚಾರಿಟಿ ಪಂದ್ಯದಲ್ಲಿ ಚಂಪ್ ತಂಡದಲ್ಲಿದ್ದ  ಬೆಂಗಳೂರಿನ ಯುವ ಕ್ರಿಕೆಟಿಗನಿಗಿದ್ದ ಒಂದು ಆಸೆ ಎಂದರೆ ಕೊಹ್ಲಿಯ ಜೊತೆ ಒಂದು ಫೋಟೋವನ್ನು ತೆಗೆಸಿಕೊಳ್ಳುವುದು ಆಗಿತ್ತು. ಈ ಆಸೆಯನ್ನು ವಿರಾಟ್ ಕೊಹ್ಲಿ ಅವರು ಪೂರೈಸಿದರು. ಒಂದು ವಿರಾಟ್ ಕೊಹ್ಲಿ ಅವರ ಜೊತೆಗಿನ ಫೋಟೋವನ್ನು ಹಂಬಲಿಸಿದ್ದ ಆ ಯುವಕ ಈಗಿನ ಆರ್ಸಿಬಿ ತಂಡದ ಆರಂಭಿಕ ಆಟಗಾರನಾಗಿರುವ ದೇವದತ್ ಪಡಿಕ್ಕಲ್. ಆದ್ದರಿಂದ ನಾವು ಇಲ್ಲಿ ಇವರ ಬಗೆಗಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ದೇವದತ್ ಪಡಿಕ್ಕಲ್ 7ಜುಲೈ ರಂದು ಕೇರಳದ ಎಟಪ್ಪಾಲ್‌ನಲ್ಲಿ ಹುಟ್ಟಿದರು. 2011ರಲ್ಲಿ ಇವರ ಕುಟುಂಬವು ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದಮೇಲೆ ಕರ್ನಾಟಕ ಇನ್ಸ್‌ಟಿಟ್ಯೂಟ್ ಆಫ್ ಕ್ರಿಕೆಟ್‌ನಲ್ಲಿ ತರಬೇತಿ ಪಡೆಯಲು ಆರಂಭಿಸಿದರು. 2018ರಿಂದ 16 ಮತ್ತು 19 ವರ್ಷದೊಳಗಿನವರ ತಂಡದಲ್ಲಿ ಕರ್ನಾಟಕದ ಪರ ಆಡಲು ಆರಂಭಿಸಿದರು. 2017ರ ಕರ್ನಾಟಕ ಪ್ರಿಮಿಯರ್ ಲೀಗ್‌ನಲ್ಲಿ ಬಳ್ಳಾರಿ ಟಸ್ಕರ್ಸ್ ತಂಡ ಇವರನ್ನು ಆಯ್ದುಕೊಂಡಿತು. 2018-19ರ ಸಾಲಿನ ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಪರ 28 ನವೆಂಬರ್ 2018ರಲ್ಲಿ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.

2018 ಡಿಸೆಂಬರ್‌ನಲ್ಲಿ ನಡೆದ 2019 ರ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಡಿಕ್ಕಲ್ ಅವರನ್ನು ಖರೀದಿಸಿತು. 26ಸೆಪ್ಟೆಂಬರ್ 2019ರಲ್ಲಿ ಕರ್ನಾಟಕದ ಪರ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವ ಮೂಲಕ ಲಿಸ್ಟ್ ಏ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಹನ್ನೊಂದು ಪಂದ್ಯದಲ್ಲಿ 609 ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಅತಿಹೆಚ್ಚು ಗಳಿಸಿದ ಆಟಗಾರ ಎನಿಸಿಕೊಂಡರು. ಅಕ್ಟೋಬರ್ 2019 ರಲ್ಲಿ ಇವರನ್ನು 2019-20 ಸಾಲಿನ ದೇವಧರ್ ಟ್ರೋಫಿಯ ಇಂಡಿಯ-ಏ ಕ್ರಿಕೆಟ್ ತಂಡದಲ್ಲಿ ಹೆಸರಿಸಲಾಯಿತು.

2019-20 ಸಾಲಿನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕದ ಪರ ಆಡಿ 8 ನವೆಂಬರ್ 2019ರಲ್ಲಿ ಟ್ವೆಂಟಿ೨೦ ಪಾದಾರ್ಪಣೆ ಮಾಡಿದರು. ದೇವದತ್ ಪಡಿಕ್ಕಲ್ ಅವರನ್ನು 2019ರ ಐಪಿಎಲ್ ಟೂರ್ನಿಗೆ ಬೆಂಗಳೂರು ತಂಡ ಖರೀದಿ ಮಾಡುತ್ತದೆ. ನಂತರ 2020ರಲ್ಲಿ ಓಪನರ್ ಆಗಿ ಆಡುವ ಅವಕಾಶ ಆರ್ಸಿಬಿ ತಂಡದಲ್ಲಿ ದೊರಕುತ್ತದೆ. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು ಆಡಿದ ಮೊದಲನೆಯ ಮ್ಯಾಚಿನಲ್ಲಿ 50 ರನ್ ಹೊಡೆಯುತ್ತಾರೆ. ಇದರಿಂದ ಆರ್ಸಿಬಿ ತಂಡದಲ್ಲಿ ಕಾಡುತ್ತಿದ್ದ ಓಪನರ್ ಸಮಸ್ಯೆಯನ್ನು ನೀಗಿಸುತ್ತಾರೆ. 20 ವರ್ಷದ ಯುವ ಆಟಗಾರ ಭಾರತ ತಂಡದಲ್ಲಿ ಆಡಿ ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸಲಿ ಎಂದು ಎಲ್ಲರೂ ಬಯಸುತ್ತಾರೆ.

Leave A Reply

Your email address will not be published.

error: Content is protected !!