WhatsApp Group Join Now
Telegram Group Join Now

ನಾವು ಆರೋಗ್ಯವಾಗಿ ಇದ್ದೇವೆ ಎಂದು ಹೇಳಲು ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯ ಸಹ ಸರಿಯಾಗಿ ಇರಬೇಕು ಅದರಂತೆ ಒಂದು ಕೆಲಸವನ್ನು ಮಾಡಲು ದೈಹಿಕವಾಗಿ ಸಧೃಢತೆಯನ್ನು ಹೊಂದಿದ್ದರೆ ಸಾಲದು ಮಾನಸಿಕವಾಗಿ ಸಧೃಢರಾಗಿ ಇರಬೇಕು ನಾವು ಪ್ರತಿದಿನ ಮೆದುಳನ್ನು ಚುರುಕು ಗೊಳಿಸುವ ವ್ಯಾಯಾಮವನ್ನು ಮಾಡಬೇಕು ಇದರಿಂದ ಮೆದುಳಿನ ಆರೋಗ್ಯ ಸಹ ಚೆನ್ನಾಗಿ ಇರುತ್ತದೆ ಮೆದುಳನ್ನು ಚುರುಕು ಗೊಳಿಸುವ ಮೂಲಕ ಮನಸ್ಸು ಸಹ ಪ್ರಶಾಂತವಾಗಿ ಇರುತ್ತದೆ ಮೆದುಳು ದೇಹದ ಅತ್ಯಂತ ಸಂಕೀರ್ಣವಾದ ಭಾಗವಾಗಿದೆ ಹಾಗೇಯೇ ದೈಹಿಕ ಕಾರ್ಯವನ್ನು ನಿಯಂತ್ರಿಸುತ್ತದೆ ಮತ್ತು ಭಾವನೆಯನ್ನು ಪ್ರಕ್ರಿಯೆಗೊಳಿಸುತ್ತದೆ.

ಇವೆಲ್ಲ ಕಾರ್ಯಗಳು ಸುಗಮವಾಗಿ ನಡೆಯಬೇಕು ಹಾಗೂ ಮೆದುಳಿನ ಕಾರ್ಯವನ್ನು ಚುರುಕುಗೊಳಿಸಲು ನಾವು ಕೆಲವೊಂದು ವ್ಯಾಯಾಮವನ್ನು ಮಾಡಬೇಕು ನಮ್ಮ ಮೆದುಳು ಎಲ್ಲ ಸಮಯದಲ್ಲಿ ಸಹ ಕೆಲಸ ಮಾಡುತ್ತದೆ ನಾವು ಮಲಗಿದರು ಸಹ ಮೆದುಳು ತನ್ನ ಕಾರ್ಯವನ್ನು ಮಾಡುತ್ತಲೆ ಇರುತ್ತದೆ ನಾವು ಈ ಲೇಖನದ ಮೂಲಕ ಮೆದುಳಿನ ವ್ಯಾಯಾಮದ ಬಗ್ಗೆ ತಿಳಿದುಕೊಳ್ಳೋಣ.

ಈ ಜಗತ್ತಿನಲ್ಲಿ ತೊಂಬತ್ತು ಶೇಕಡಾ ಜನರು ಬಲಗೈ ಅಲ್ಲಿ ಬರೆಯುತ್ತಾರೆ ಒಂಬತ್ತು ಶೇಕಡಾ ಜನರು ಎಡಗೈ ಅಲ್ಲಿ ಬರೆಯುತ್ತಾರೆ ಆದರೆ ಒಂದು ಶೇಕಡಾ ಜನರು ಎರಡು ಕೈ ಅಲ್ಲಿ ಬರೆಯುತ್ತಾರೆ ಇವರು ಎರಡು ಕೈ ಅಲ್ಲಿ ಸಮವಾಗಿ ಕೆಲಸ ಮಾಡುತ್ತಾರೆ ಪ್ರತಿಯೊಬ್ಬರೂ ಒಂದು ಕೈ ಇಂದ ಕೆಲಸ ಮಾಡುವ ಜೊತೆಗೆ ಇನ್ನೊಂದು ಕೈ ಇಂದ ಕೆಲಸ ಮಾಡುವ ಕ್ರಮವನ್ನು ರೂಢಿಸಿಕೊಳ್ಳಬೇಕು ಬಲಗೈ ಇಂದ ಕೆಲಸ ಮಾಡುತ್ತಿದ್ದರೆ ಎಡ ಗೈ ಯಿಂದ ಕೆಲಸ ಮಾಡುವ ಕ್ರಮವನ್ನು ಪ್ರತಿದಿನ ಮಾಡುವ ಮೂಲಕ ರೂಢಿಸಿಕೊಳ್ಳಬೇಕು

ಪ್ರತಿದಿನ ಬೆಳಿಗ್ಗೆ ಉಪಹಾರ ಮಾಡುವುದು ಮೊಬೈಲ್ ಬಳಕೆ ಮಾಡುವುದು ಹಾಗೆಯೇ ಕಂಪ್ಯೂಟರ್ ಬಳಕೆ ಮಾಡುವುದು ಎಲ್ಲವನ್ನೂ ಬಲಗೈ ಯಿಂದ ಮಾಡುತ್ತಿದ್ದರೆ ಎಡಗೈ ಯಿಂದ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಎಡಗೈ ಯಿಂದ ಕೆಲಸ ಮಾಡುತ್ತಿದ್ದರೆ ಬಲಗೈ ಯಿಂದ ಕೆಲಸ ಮಾಡುವುದನ್ನು ಕಲಿಯಬೇಕು ಹೀಗೆ ಮಾಡುವುದರಿಂದ ಪ್ರತಿದಿನ ಬ್ರೇನ್ ಗೆ ಚಾಲೆಂಜ್ ಕೊಡಬಹುದು ಇದರಿಂದ ಮೆದುಳು ಚುರುಕುಗೊಳ್ಳುತ್ತದೆ ಹೀಗೆ ಮಾಡುವುದರಿಂದ ಮೆದುಳಿನಲ್ಲಿ ಹೊಸ ಜೀವಕೋಶಗಳು ಹುಟ್ಟಿಕೊಳ್ಳುತ್ತದೆ ಇದು ಒಂದು ಮೆದುಳಿನ ವ್ಯಾಯಾಮವಾಗಿದೆ.

ಪ್ರತಿನಿತ್ಯದ ಕ್ರಮವನ್ನು ಬದಲಾಯಿಸುವುದು ಬಹಳ ಕಷ್ಟದ ಕೆಲಸವಾಗಿ ಇರುತ್ತದೆ ಪ್ರತಿನಿತ್ಯ ಮಾಡುವ ಮೂಲಕ ಸುಲಭವಾಗುತ್ತದೆ ಇನ್ನೊಂದು ವ್ಯಾಯಾಮ ಎಂದರೆ ಪ್ರತಿದಿನ ನೋಡುವ ವ್ಯಕ್ತಿಯನ್ನು ನಾಲ್ಕು ಭಾಗವನ್ನು ಜ್ಞಾನ ದಿಂದ ನೋಡಬೇಕು ನಂತರ ಮನೆಯಲ್ಲಿ ಅದನ್ನೇ ಯೋಚಿಸಬೇಕು ಬೇರೆಯವರ ಹತ್ತಿರ ಇರುವ ನಾಲ್ಕು ವಸ್ತುಗಳನ್ನು ಸರಿಯಾಗಿ ನೋಡಬೇಕು ಬೇರೆಯವರ ಕ್ಯಾಮೆರಾ ವಾಚ್ ಸುಟ್ ಹೇರ್ ಸ್ಟೈಲ್ ಕಲರ್ ಹೀಗೆ ಬೇರೆ ಬೇರೆ ವಸ್ತು ರೀತಿ ಸರಿಯಾಗಿ ಗಮನಿಸಬೇಕು .ಮನೆಗೆ ಬಂದ ಮೇಲೆ ಎಲ್ಲವನ್ನೂ ಅವಲೋಕಿಸಬೇಕು

ಇವೆಲ್ಲವೂ ನೆನಪಿಗೆ ಇದೆಯಾ ಇಲ್ಲವೆಂದು ನೋಡಬೇಕು ಹೀಗೆ ಅವಲೋಕನ ಮಾಡುತ್ತ ನಾಲ್ಕಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಸ್ತುಗಳನ್ನು ಹಾಗೂ ಜನರನ್ನು ಅವಲೋಕನ ಮಾಡಬೇಕು ಇದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಚೋಕಸ್ಟಿಕ್ ಬಳಕೆ ಮಾಡಬೇಕು ದಿನದಲ್ಲಿ ಒಂದು ಬಾರಿಯಾದರೂ ಚೋಕಸ್ಟಿಕ್ ಬಳಕೆ ಮಾಡಿ ಊಟ ಮಾಡುವ ಮೂಲಕ ಮೆದುಳಿನಲ್ಲಿ ಇರುವ ಡೆಂಡ್ರಾಯ್ಸ ಬೆಳವಣಿಗೆ ಹೊಂದುತ್ತದೆ ಇದು ಮೆದುಳು ಚೆನ್ನಾಗಿ ಇರುವಂತೆ ಮಾಡುತ್ತದೆ ಹಾಗೆಯೇ ಚೋಕಸ್ಟಿಕ್ ಬಳಕೆ ಮಾಡುವುದರಿಂದ ಊಟ ಮಾಡುವುದುದರ ಬಗ್ಗೆ ಗಮನ ಇರುತ್ತದೆ ಹಾಗೆಯೇ ಜೀರ್ಣ ಕ್ರಿಯೆ ಸಹ ಸರಿಯಾಗಿ ಆಗುತ್ತದೆ .

ಎರಡು ಸಾವಿರದ ಹದಿನೈದರಲ್ಲಿ ನಡೆದ ಸಂಶೋಧನೆಯಲ್ಲಿ ತೊಂಬತ್ತು ಸೆಕೆಂಡ್ ವರೆಗೆ ಬಲಗೈ ಅನ್ನು ಮುಷ್ಟಿ ಮಾಡಿ ಹಿಡಿದರೆ ಅದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಹಾಗೆಯೇ ತೊಂಬತ್ತು ಸೆಕೆಂಡ್ ವರೆಗೆ ಎಡಗೈ ಅನ್ನು ಮುಷ್ಟಿ ಮಾಡಿ ಹಿಡಿದರೆ ನೆನಪು ಮಾಡಿದ್ದನು ಅವಲೋಕಿಸಿವುದಕ್ಕೆ ಸಹಾಯ ಆಗುತ್ತದೆ ಹಾಗೆಯೇ ಆರೋಗ್ಯಯುತ ಮೆದುಳಿಗಾಗಿ ವಾರದಲ್ಲಿ ಮೂರು ದಿನ ಆದರೂ ಇಪ್ಪತ್ತು ನಿಮಿಷ ನಡೆಯುವುದು ಓಡಾಡುವುದು ಈಜುವುದು ಹಾಗೆಯೇ ಇಪ್ಪತ್ತರಿಂದ ಮೂವತ್ತು ನಿಮಿಷದ ನಡಿಗೆ ತುಂಬಾ ಒಳ್ಳೆಯದು.

ಇವೆಲ್ಲ ವ್ಯಾಯಾಮದಿಂದ ಮೆದುಳಿನಲ್ಲಿ ಇರುವ ಹಿಪೋ ಕ್ಯಾಂಪಸ್ ಎಂದು ಕರೆಯುವ ಭಾಗ ಸ್ವಲ್ಪ ದೊಡ್ಡದಾಗುತ್ತದೆ ಇದರ ಶಕ್ತಿಯನ್ನು ವ್ಯಾಯಾಮ ಮಾಡುವುದರಿಂದ ಹೆಚ್ಚು ಮಾಡಬಹುದು ಹಾಗಾಗಿ ವಾರದಲ್ಲಿ ಮೂರು ದಿನ ಮೆದುಳಿಗೆ ಅನುಕೂಲಕರವಾದ ವ್ಯಾಯಾಮ ಮಾಡಬೇಕು ಇವು ಇದು ವ್ಯಾಯಾಮವು ಮೆದುಳಿನ ಶಕ್ತಿಯನ್ನು ಹೆಚ್ಚಿಸವುದರ ಜೊತೆಗೆ ಮೆದುಳನ್ನು ಚುರುಕುಗೊಳಿಸುತ್ತದೆ ಮತ್ತು ಮೆದುಳನ್ನು ಆರೋಗ್ಯಯುತವಾಗಿ ಇರುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: