ಮನೆಯ ಈ ದಿಕ್ಕಿನಲ್ಲಿ ಲಕ್ಷ್ಮಿಯ ಫೋಟೋ ಇಟ್ಟರೆ ಹಣದ ಹರಿವು ನಿಲ್ಲೋದೇ ಇಲ್ಲ

0

ನಮ್ಮ ಪುರಾಣ ಗ್ರಂಥ ಹಾಗೂ ಶಾಸನಗಳಲ್ಲಿ ಲಕ್ಷ್ಮಿಯನ್ನು ಸಂಪತ್ತಿನ ಅಧಿದೇವತೆ ಎಂಬುದಾಗಿ ಕರೆಯಲಾಗುತ್ತದೆ. ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಿದ್ದರೆ ಹಾಗೂ ನಿಮ್ಮ ಮೇಲೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಇದ್ದರೆ ಖಂಡಿತವಾಗಿ ನಿಮ್ಮ ಜೀವನ ಎನ್ನುವುದು ಸಂಪತ್ತು ಹಾಗೂ ಸಂತೋಷ ನೆಮ್ಮದಿಯಿಂದ ಸಮೃದ್ಧವಾಗಿರುತ್ತದೆ ಎಂಬ ನಂಬಿಕೆ ಇದೆ.

ಆದರೆ ನಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಕ್ಕೆ ಆಕೆಯನ್ನು ಒಲಿಸುವುದು ಮುಖ್ಯವಾಗಿರುತ್ತದೆ. ಹೀಗಾಗಿ ಲಕ್ಷ್ಮೀದೇವಿಯನ್ನು ಮನೆಯಲ್ಲಿ ಇರುವಂತೆ ಒಲಿಸಿಕೊಳ್ಳುವ ವಿಧಾನ ಯಾವುದು ಎಂಬುದನ್ನು ಮೊದಲಿಗೆ ನಾವೆಲ್ಲರೂ ತಿಳಿದುಕೊಳ್ಳಬೇಕಾಗುತ್ತದೆ. ಹೀಗಾಗಿ ಸಂಪತ್ತಿನ ಅಧಿದೇವತೆ ಹಾಗೂ ಶ್ರೀ ಭಗವಾನ್ ಮಹಾವಿಷ್ಣುವಿನ ಪತ್ನಿಯಾಗಿರುವ ಮಹಾಲಕ್ಷ್ಮಿಯನ್ನು ಮೆಚ್ಚಿಸುವುದು ಹೇಗೆ ಎಂಬ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ.

ವಾಸ್ತುಶಾಸ್ತ್ರದಲ್ಲಿ ಲಕ್ಷ್ಮಿಯನ್ನು ಒಲಿಸಿಕೊಳ್ಳುವ ವಿಧಾನ ಯಾವುದು ಎಂಬುದನ್ನು ಹೇಳಲಾಗಿದೆ ಅದನ್ನು ತಿಳಿದುಕೊಳ್ಳೋಣ. ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಸರಿಯಾದ ದಿಕ್ಕಿನಲ್ಲಿ ಲಕ್ಷ್ಮಿ ದೇವಿಯ ಫೋಟೋವನ್ನು ಇಟ್ಟರೆ ಖಂಡಿತವಾಗಿಯೂ ಮನೆಯಲ್ಲಿ ಧನ ಸಂಪತ್ತು ಹರಿಯುತ್ತದೆ ಎಂಬುದಾಗಿ ಹೇಳಲಾಗುತ್ತದೆ.

ಒಂದು ವೇಳೆ ತಪ್ಪಾದ ದಿಕ್ಕಿನಲ್ಲಿ ಲಕ್ಷ್ಮೀದೇವಿಯ ಫೋಟೋವನ್ನು ಇಟ್ಟು ಪೂಜಿಸಿದರೆ ಖಂಡಿತವಾಗಿ ಮನೆಯಲ್ಲಿ ಆಗಬಾರದ ಘಟನೆಗಳು ನಡೆಯುತ್ತವೆ ಹಾಗೂ ಆರ್ಥಿಕವಾಗಿ ಕೂಡ ನೀವು ಅಧೋ ಗತಿಯನ್ನು ಹೊಂದಲಿದ್ದೀರಿ ಎಂಬುದಾಗಿ ತಿಳಿದು ಬಂದಿದೆ. ಹಾಗಿದ್ದರೆ ವಾಸ್ತುಶಾಸ್ತ್ರದ ಪ್ರಕಾರ ಸರಿಯಾದ ದಿಕ್ಕಿನಲ್ಲಿ ಅಂದರೆ ಯಾವ ದಿಕ್ಕಿನಲ್ಲಿ ಲಕ್ಷ್ಮಿ ದೇವಿಯ ಫೋಟೋವನ್ನು ಇಟ್ಟು ಪೂಜಿಸಬೇಕು ಎಂಬುದನ್ನು ತಿಳಿಯೋಣ ಬನ್ನಿ.

ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ವಿಧಾನವೆಂದರೆ ಪಶ್ಚಿಮ ದಿಕ್ಕಿನಲ್ಲಿ ಲಕ್ಷ್ಮೀದೇವಿಯ ಫೋಟೋವನ್ನು ಪೂರ್ವ ದಿಕ್ಕಿಗೆ ಮುಖ ಮಾಡುವಂತೆ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಕಂಡು ಬರುವುದಿಲ್ಲ ಹಾಗೂ ಕುಟುಂಬದ ಎಲ್ಲಾ ಸದಸ್ಯರು ಸುಖ ಸಂತೋಷದಿಂದ ಹಾಗೂ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದೆ ಸಮೃದ್ಧವಾಗಿ ಜೀವನ ಮಾಡಬಹುದು ಎಂಬ ಉಲ್ಲೇಖವಿದೆ.

ಅದರಲ್ಲೂ ವಿಶೇಷವಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಕಮಲದ ಮೇಲೆ ಕುಳಿತುಕೊಂಡು ಎರಡು ಪಕ್ಕಗಳಲ್ಲಿ ಆನೆಗಳು ಹಣದ ಮಳೆಯನ್ನು ಸುರಿಸುತ್ತಿರುವ ಫೋಟೋವನ್ನು ಇಟ್ಟರೆ ಹಾಗೂ ಅದನ್ನು ಪೂಜಿಸಿದರೆ ಖಂಡಿತವಾಗಿ ನಿಮ್ಮ ಅದೃಷ್ಟ ಇನ್ನಷ್ಟು ಬಲಗೊಳ್ಳುತ್ತದೆ ಎಂಬ ಉಲ್ಲೇಖ ಇದೆ.

Leave A Reply

Your email address will not be published.

error: Content is protected !!