ಹೆಸರಿನ ಮೂಲಕ ನಕ್ಷತ್ರ ಮತ್ತು ರಾಶಿಯನ್ನು ತಿಳಿಯುವುದು ಹೇಗೆ? ಇಲ್ಲಿದೆ ನೋಡಿ

0

ಪ್ರತಿಯೊಬ್ಬರಿಗೂ ಸಹ ಯಾವ ಯಾವ ರಾಶಿಗೆ ಯಾವ ಯಾವ ನಕ್ಷತ್ರ ಬರುತ್ತದೆ ಹಾಗೆಯೇ ಹೆಸರಿನ ಮೂಲಕ ಜನ್ಮ ನಕ್ಷತ್ರವನ್ನು ಹಾಗೆಯೇ ಜನ್ಮ ನಕ್ಷತ್ರದ ಮೂಲಕ ಹೆಸರನ್ನು ಇರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವುದೇ ಇಲ್ಲ ಪ್ರತಿ ಮನೆಯಲ್ಲಿ ಮಗು ಹುಟ್ಟಿತು ಎಂದರೆ ಮಗುವಿನ ಜನ್ಮ ನಕ್ಷತ್ರದ ಮೂಲಕ ಮಗುವಿಗೆ ಹೆಸರನ್ನು ಇಟ್ಟು ನಾಮಕರಣ ಮಾಡುತ್ತಾರೆ ಪ್ರತಿಯೊಬ್ಬರಿಗೂ ಸಹ ರಾಶಿ ಮತ್ತು ನಕ್ಷತ್ರದ ಮೂಲಕ ಹೆಸರಿನ ಮೊದಲಿನ ಅಕ್ಷರ ನಿರ್ಣಯ ಆಗುತ್ತದೆ ಹನ್ನೆರಡು ರಾಶಿಗಳು ಇರುತ್ತದೆ ಹಾಗೆಯೇ ಇಪ್ಪತ್ತೇಳು ನಕ್ಷತ್ರಗಳು ಇರುತ್ತದೆ ಹೆಸರಿನ ಮೊದಲಿನ ಅಕ್ಷರವನ್ನು ನಿರ್ಣಯಿಸಿ ರಾಶಿ ಮತ್ತು ಜನ್ಮ ನಕ್ಷತ್ರವನ್ನು ತಿಳಿಯಬಹುದು.

ಜನ್ಮ ನಕ್ಷತ್ರದಿಂದ ನಮ್ಮ ಜನ್ಮ ರಾಶಿ ಹಾಗೂ ಜನ್ಮ ಲಗ್ನವನ್ನು ತಿಳಿದುಕೊಳ್ಳಬಹುದು ನಾವು ಹುಟ್ಟಿದ ನಕ್ಷತ್ರದಿಂದ ರೂಪುಗೊಳ್ಳುವ ನಮ್ಮ ಜನ್ಮಕುಂಡಲಿಯಿಂದ ಮುಂದೆ ನಾವೇನಾಗುತ್ತೇವೆಯೋ ಅದು ನಿರ್ಧರಿತವಾಗಿರುತ್ತದೆ ನಾವು ಈ ಲೇಖನದ ಮೂಲಕ ಜನ್ಮ ರಾಶಿ ಮತ್ತು ಜನ್ಮ ನಕ್ಷತ್ರ ಹಾಗೂ ಯಾವ ಯಾವ ರಾಶಿಗೆ ಯಾವ ಯಾವ ನಕ್ಷತ್ರ ಬರುತ್ತದೆ ಹಾಗೂ ಹೆಸರಿನ ಮೂಲಕ ರಾಶಿ ಮತ್ತು ನಕ್ಷತ್ರವನ್ನು ತಿಳಿಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ರಾಶಿಯನ್ನು ತಿಳಿಯುವ ಎರಡು ವಿಧಾನಗಳು ಎಂದರೆ ಜನ್ಮ ನಕ್ಷತ್ರದ ಮೂಲಕ ಹಾಗೂ ನಾಮ ನಕ್ಷತ್ರದ ಮೂಲಕ ಇವೆರಡರಿಂದ ರಾಶಿಯನ್ನು ಕಂಡು ಹಿಡಿಯಬಹುದು ಅದರಲ್ಲಿ ಜನ್ಮ ನಕ್ಷತ್ರದಲ್ಲಿ ಹುಟ್ಟಿದ ದಿನಾಂಕದಿಂದ ತಿಳಿಯಲಾಗುತ್ತದೆ ಹಾಗೆಯೇ ಹೆಸರಿನ ಮೊದಲನೇ ಅಕ್ಷರದಿಂದ ನಾಮ ನಕ್ಷತ್ರವನ್ನು ತಿಳಿಯಲಾಗುತ್ತದೆ ರಾಶಿ ಕುಂಡಲಿಯಲ್ಲಿ ಹನ್ನೆರಡು ರಾಶಿಗಳು ಇಪ್ಪತ್ತೇಳು ನಕ್ಷತ್ರಗಳು ನೂರಾ ಎಂಟು ಪಾದಗಳ ಸಂಪೂರ್ಣ ಸಮೂಹವೇ ರಾಶಿ ಕುಂಡಲಿಯಾಗಿದೆ

ಮೇಷ ವೃಷಭ ಮಿಥುನ ಕಟಕ ಸಿಂಹ ಕನ್ಯಾ ತುಲಾ ವೃಶ್ಚಿಕ ಧನಸ್ಸು ಮಕರ ಕುಂಭ ಮೀನ ಇವು ಹನ್ನೆರಡು ರಾಶಿಗಳು. ಹಾಗೆಯೇ ನಕ್ಷತ್ರಗಳು ಇಪ್ಪತ್ತೇಳು ಇರುತ್ತದೆ ಅವು ಅಶ್ವಿನಿ ಭರಣಿ ಕೃತ್ತಿಕಾ ರೋಹಿಣಿ ಮೃಗಶಿರಾ ಆರಿದ್ರಾ ಪುನರ್ವಸು ಹಾಗೂ ಪುಷ್ಯ ಆಶ್ಲೇಷ ಮಖಾ ಪುಬ್ಬ ಉತ್ತರ ಮತ್ತು ಹಸ್ತ ಚಿತ್ತ ಸ್ವಾತಿ ವಿಶಾಖ ಅನುರಾಧ ಜ್ಯೇಷ್ಠ ಮೂಲ ಹಾಗೂ ಪೂರ್ವಾಷಾಢ ಉತ್ತರಾಷಾಢ ಶ್ರವಣ ಧನಿಷ್ಠ ಶತಾಭಿಷ ಮತ್ತು ಪೂರ್ವಭಾದ್ರ ಉತ್ತರಭಾದ್ರ ರೇವತಿ ಜ್ಯೋತಿಷ್ಯದಲ್ಲಿ ತಿಳಿಸುವಂತೆ ನಕ್ಷತ್ರಗಳಿಂದ ಮಾಡಿದ ಪಾಪ ತೊಲಗುತ್ತದೆ ಅಂದರೆ ನಕ್ಷತ್ರಗಳಿಗೆ ನಮ್ಮ ಪಾಪಗಳನ್ನು ತೊಳೆಯುವ ಶಕ್ತಿ ಇರುತ್ತದೆ .

ಮೇಷ ರಾಶಿಯಲ್ಲಿರುವರಿಗೆ ಅಶ್ವಿನಿ ಮತ್ತು ಭರಣಿ ಹಾಗೂ ಕೃತಿಕಾ ನಕ್ಷತ್ರ ಬರುತ್ತದೆ ಅದರಲ್ಲಿ ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರಿಗೆ ಚ ಚೆ ಚೋ ಲ ಇರುವ ಹೆಸರನ್ನು ಇಡಬಹುದು ಹಾಗೆಯೇ ಭರಣಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಲಿ ಲು ಲೆ ಲೋ ಅಕ್ಷರದ ಹೆಸರನ್ನು ಇಡಬಹುದು ಹಾಗೆಯೇ ಕೃತಿಕಾ ನಕ್ಷತ್ರದಲ್ಲಿ ಹುಟ್ಟಿದವರು ಅ ಅಕ್ಷರದ ಹೆಸರನ್ನು ಇಡಬಹುದು ಹಾಗೆಯೇ ವೃಷಭ ರಾಶಿಯವರಿಗೆ ಕೃತಿಕಾ ರೋಹಿಣಿ ಹಾಗೂ ಮೃಗಶಿರ ನಕ್ಷತ್ರ ಬರುತ್ತದೆ ಕೃತಿಕಾ ನಕ್ಷತ್ರದಲ್ಲಿ ಜನಿಸಿದವರಿಗೆ ಎರಡನೇ ಪಾದದಲ್ಲಿ ಇ ಹಾಗೂ ಮೂರನೇ ಪಾದದಲ್ಲಿ ಉ ಹಾಗೂ ನಾಲ್ಕನೇ ಪಾದದಲ್ಲಿ ಎ ಅಕ್ಷರದ ಬರುತ್ತದೆ. ರೋಹಿಣಿ ನಕ್ಷತ್ರದವರು ಒಂದನೇ ಪಾದದಲ್ಲಿ ಒ ಹಾಗೂ ಎರಡನೇ ಪಾದದಲ್ಲಿ ವ ಹಾಗೂ ಮೂರನೇ ಪಾದದಲ್ಲಿ ವಿ ಹಾಗೂ ನಾಲ್ಕನೇ ಪಾದದಲ್ಲಿ ವು ಅಕ್ಷರ ಬರುತ್ತದೆ

ಮೃಗಶಿರ ನಕ್ಷತ್ರದಲ್ಲಿ ಜನಿಸಿದವರಿಗೆ ಒಂದನೇ ಪಾದದಲ್ಲಿ ವೆ ಹಾಗೂ ಎರಡನೇ ಪಾದದಲ್ಲಿ ವೋ ಅಕ್ಷರ ಬರುತ್ತದೆ ಹಾಗೆಯೇ ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಮೃಗಶಿರ ಆರಿದ್ರಾ ಮತ್ತು ಪುನರ್ವಸು ನಕ್ಷತ್ರ ಬರುತ್ತದೆ ಅದರಲ್ಲಿ ಮೃಗಶಿರ ನಕ್ಷತ್ರದಲ್ಲಿ ಜನಿಸಿದವರಿಗೆ ಕ ಮತ್ತು ಕಿ ಹೆಸರಿನ ಅಕ್ಷರದ ಹೆಸರನ್ನು ಇಡಬೇಕು

ಆರಿದ್ರಾ ನಕ್ಷತ್ರದಲ್ಲಿ ಜನಿಸಿದವರಿಗೆ ಒಂದನೇ ಪಾದದಲ್ಲಿ ಕು ಹಾಗೂ ಎರಡನೇ ಪಾದದಲ್ಲಿ ಘ ಹಾಗೂ ನಾಲ್ಕನೇ ಪಾದದಲ್ಲಿ ಘು ಬರುತ್ತದೆ ಪುನರ್ವಸು ನಕ್ಷತ್ರದಲ್ಲಿ ಜನಿಸಿದವರಿಗೆ ಒಂದನೇ ಪಾದದಲ್ಲಿ ಕೆ ಹಾಗೂ ಎರಡನೇ ಪಾದದಲ್ಲಿ ಕೊ ಹಾಗೂ ಮೂರನೇ ಪಾದದಲ್ಲಿ ಹ ಅಕ್ಷರ ಬರುತ್ತದೆ ಹಾಗೆಯೇ ಕಟಕ ರಾಶಿಯಲ್ಲಿರುವರಿಗೆ ಪುನರ್ವಸು ಹಾಗೂ ಪುಷ್ಯ ಹಾಗೂ ಆಶ್ಲೇಷ ನಕ್ಷತ್ರ ಬರುತ್ತದೆ ಅದರಲ್ಲಿ ಪುನರ್ವಸು ನಕ್ಷತ್ರದ ನಾಲ್ಕನೇ ಪಾದದಲ್ಲಿ ಹಿ ಅಕ್ಷರ ಬರುತ್ತದೆ ಪುಷ್ಯ ನಕ್ಷತ್ರದವರಿಗೆ ಮೊದಲನೇ ಪಾದದಲ್ಲಿ ಹು ಹಾಗೆಯೇ ಎರಡನೆ ಪಾದದಲ್ಲಿ ಹೆ ಹಾಗೂ ಮೂರನೇ ಪಾದದಲ್ಲಿ ಹೋ ಹಾಗೂ ನಾಲ್ಕನೇ ಪಾದದಲ್ಲಿ ಡ ಅಕ್ಷರ ಬರುತ್ತದೆ .

ಆಶ್ಲೇಷ ನಕ್ಷತ್ರದಲ್ಲಿ ಜನಿಸಿದವರಿಗೆ ಮೊದಲನೇ ಪಾದದಲ್ಲಿ ಡಿ ಹಾಗೂ ಎರಡನೇ ಪಾದದಲ್ಲಿ ಡು ಹಾಗೂ ಮೂರನೇ ಪಾದದಲ್ಲಿ ಡೆ ಹಾಗೂ ನಾಲ್ಕನೇ ಪಾದದಲ್ಲಿ ಡೋ ಅಕ್ಷರ ಬರುತ್ತದೆ ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಮಖಾ ಮತ್ತು ಪುಬ್ಬ ಮತ್ತುಉತ್ತರ ನಕ್ಷತ್ರ ಬರುತ್ತದೆ ಅದರಲ್ಲಿ ಮಖಾ ನಕ್ಷತ್ರದಲ್ಲಿ ಜನಿಸಿದವರಿಗೆ ಮೊದಲನೇ ಪಾದದಲ್ಲಿ ಮ ಹಾಗೂ ಎರಡನೇ ಪಾದದಲ್ಲಿ ಜನಿಸಿದವರಿಗೆ ಮಿ ಹಾಗೂ ಮೂರನೇ ಪಾದದಲ್ಲಿ ಜನಿಸಿದವರಿಗೆ ಮು ಹಾಗೂ ನಾಲ್ಕನೆ ಪಾದದಲ್ಲಿ ಜನಿಸಿದವರಿಗೆ ಮೆ ಅಕ್ಷರ ಬರುತ್ತದೆ ಹಾಗೆಯೇ ಪುಬ್ಬ ನಕ್ಷತ್ರದಲ್ಲಿ ಜನಿದವರಿಗೆ ಮೋ ಹಾಗೂ ಟ ಮತ್ತು ಟಿ ಹಾಗೂ ನಾಲ್ಕನೇ ಪಾದದಲ್ಲಿ ಟು ಅಕ್ಷರ ಬರುತ್ತದೆ

ಹಾಗೆಯೇ ಉತ್ತರ ನಕ್ಷತ್ರದಲ್ಲಿ ಜನಿಸಿದವರಿಗೆ ಮೊದಲನೇ ಪಾದ ಟೆ ಅಕ್ಷರದಲ್ಲಿ ಹೆಸರು ಬರುತ್ತದೆ .ಕನ್ಯಾ ರಾಶಿಯವರಿಗೆ ಉತ್ತರ ನಕ್ಷತ್ರದಲ್ಲಿ ಟೋ ಪ ಹಾಗೂ ಪೀ ಮತ್ತು ಹಸ್ತಾ ನಕ್ಷತ್ರದಲ್ಲಿ ಪು ಷ ನ ಹಾಗೂ ನಾಲ್ಕನೆ ಪಾದದಲ್ಲಿ ಠ ಬರುತ್ತದೆ ಹಾಗೆಯೇ ಚಿತ್ತ ನಕ್ಷತ್ರದಲ್ಲಿ ಮೊದಲನೇ ಪಾದದಲ್ಲಿ ಪೆ ಹಾಗೂ ಎರಡನೇ ಪಾದದಲ್ಲಿ ಪೊ ಬರುತ್ತದೆ .

ತುಲಾ ರಾಶಿಗೆ ಚಿತ್ತಾ ನಕ್ಷತ್ರದಲ್ಲಿ ಜನಿಸಿದವರಿಗೆ ಮೂರನೇ ಪದ ರ ಹಾಗೂ ನಾಲ್ಕನೇ ಪಾದ ರಿ ಅಕ್ಷರ ಬರುತ್ತದೆ ಹಾಗೆಯೇ ತುಲಾ ರಾಶಿಗೆ ಸ್ವಾತಿ ನಕ್ಷತ್ರ ಸಹ ಬರುತ್ತದೆ ಸ್ವಾತಿ ನಕ್ಷತ್ರದಲ್ಲಿ ಜನಿಸಿದವರಿಗೆ ರು ಎರಡನೇ ಪಾದದಲ್ಲಿ ರೆ ಹಾಗೂ ಮೂರನೇ ಪಾದದಲ್ಲಿ ರೊ ಹಾಗೂ ನಾಲ್ಕನೇ ಪಾದದಲ್ಲಿ ತ ಅಕ್ಷರ ಬರುತ್ತದೆ ಹಾಗೆಯೇ ತುಲಾ ರಾಶಿಗೆ ವಿಶಾಖ ನಕ್ಷತ್ರ ಸಹ ಬರುತ್ತದೆ ವಿಶಾಖ ನಕ್ಷತ್ರದಲ್ಲಿ ಜನಿಸಿದವರಿಗೆ ತಿ ತು ತೆ ಅಕ್ಷರದ ಹೆಸರನ್ನು ಇಡಬೇಕು ಹಾಗೆಯೇ ವೃಶ್ಚಿಕ ರಾಶಿಯವರಿಗೆ ವಿಶಾಖ ನಕ್ಷತ್ರದ ನಾಲ್ಕನೇ ಪಾದದಲ್ಲಿ ತೋ ಅಕ್ಷರ ಹೆಸರನ್ನು ಇಡಬೇಕು .

ವೃಶ್ಚಿಕ ರಾಶಿಗೆ ಅನುರಾಧ ನಕ್ಷತ್ರ ಸಹ ಬರುತ್ತದೆ ಅದರಲ್ಲಿ ಒಂದನೇ ಪಾದ ನ ಮತ್ತು ಎರಡನೇ ಪಾದ ನಿ ಹಾಗೂ ಮೂರನೇ ಪಾದ ನು ಹಾಗೂ ನಾಲ್ಕನೇ ಪಾದದಲ್ಲಿ ನೆ ಅಕ್ಷರ ಬರುತ್ತದೆ ಹಾಗೆಯೇ ಜ್ಯೇಷ್ಠ ನಕ್ಷತ್ರದಲ್ಲಿ ಮೊದಲನೇ ಪಾದದ ಅಕ್ಷರ ನೋ ಹಾಗೂ ಎರಡನೇ ಪಾದದಲ್ಲಿ ಯ ಮತ್ತು ಮೂರನೇ ಪಾದದಲ್ಲಿ ಯಿ ಹಾಗೂ ನಾಲ್ಕನೇ ಪಾದದಲ್ಲಿ ಯು ಅಕ್ಷರದ ಹೆಸರುಗಳು ಬರುತ್ತದೆ ಧನುರ್ ರಾಶಿಯವರಿಗೆ ಮೂಲ ನಕ್ಷತ್ರ ಪೂರ್ವಾಷಾಢ ಹಾಗೂ ಉತ್ತರಾಷಾಢ ನಕ್ಷತ್ರ ಬರುತ್ತದೆ ಮೂಲ ನಕ್ಷತ್ರದಲ್ಲಿ ಜನಿಸಿದವರಿಗೆ ಯೆ ಎರಡನೇ ಪಾದದಲ್ಲಿ ಯೋ ಮೂರನೇ ಪಾದದಲ್ಲಿ ಬ ಹಾಗೂ ನಾಲ್ಕನೇ ಪಾದದಲ್ಲಿ ಬೀ ಅಕ್ಷರದ ಹೆಸರುಗಳು ಬರುತ್ತದೆ ಉತ್ತರಾಷಾಢ ನಕ್ಷತ್ರದಲ್ಲಿ ಬೆ ಅಕ್ಷರದ ಹೆಸರುಗಳು ಬರುತ್ತದೆ .

ಮಕರ ರಾಶಿಯವರಿಗೆ ಉತ್ತಾರಾಷಾಢ ನಕ್ಷತ್ರದಲ್ಲಿ ಬೋ ಜ ಜೇ ಎನ್ನುವ ಅಕ್ಷರದ ಹೆಸರುಗಳು ಬರುತ್ತದೆ ಶ್ರವಣ ನಕ್ಷತ್ರದಲ್ಲಿ ಶಿ ತು ಹಾಗೂ ಮೂರನೇ ಪಾದದಲ್ಲಿ ಶೆ ಹಾಗೂ ನಾಲ್ಕನೇ ಪಾದದಲ್ಲಿ ಶೋ ಅಕ್ಷರದ ಹೆಸರುಗಳು ಬರುತ್ತದೆ ಹಾಗೆಯೇ ಧನಿಷ್ಟ ನಕ್ಷತ್ರದಲ್ಲಿ ಗ ಹಾಗೂ ಗಿ ಅಕ್ಷರದ ಹೆಸರುಗಳು ಬರುತ್ತದೆ ಕುಂಭ ರಾಶಿಯಲ್ಲಿ ಜನಿಸಿದವರಿಗೆ ಶತಭಿಷ ನಕ್ಷತ್ರ ಪೂರ್ವ ಭಾದ್ರ ನಕ್ಷತ್ರ ಹಾಗೂ ಧನಿಷ್ಟ ನಕ್ಷತ್ರ ಕಂಡು ಬರುತ್ತದೆ .ಧನಿಷ್ಟ ನಕ್ಷತ್ರದಲ್ಲಿ ಜನಿಸಿದವರಿಗೆ ಗ ಹಾಗೂ ಗೆ ಅಕ್ಷರದ ಹೆಸರುಗಳು ಬರುತ್ತದೆ ಶತಭಿಷ ನಕ್ಷತ್ರದಲ್ಲಿ ಜನಿಸಿದವರಿಗೆ ಗೊ ಸ ಹಾಗೂ ಸಿ ಮತ್ತು ಸು ಅಕ್ಷರದ ಹೆಸರುಗಳು ಬರುತ್ತದೆ

ಹಾಗೆಯೇ ಪೂರ್ವಭಾದ್ರ ನಕ್ಷತ್ರದಲ್ಲಿ ಜನಿಸಿದವರಿಗೆ ಸೆ ಮತ್ತು ಸೊ ಮತ್ತು ದ ಹಾಗೂ ದಿ ಅಕ್ಷರದ ಹೆಸರುಗಳು ಬರುತ್ತದೆ .ಮೀನ ರಾಶಿಯಲ್ಲಿ ಜನಿಸಿದವರಿಗೆ ಪೂರ್ವಾಭಾದ್ರ ನಕ್ಷತ್ರದಲ್ಲಿ ದಿ ಹಾಗೂ ಉತ್ತರಭಾದ್ರ ನಕ್ಷತ್ರದಲ್ಲಿ ದು ಖ ಝ ಹಾಗೂ ಥ ಅಕ್ಷರದ ಹೆಸರುಗಳು ಬರುತ್ತದೆ ಹಾಗೆಯೇ ರೇವತಿ ನಕ್ಷತ್ರದಲ್ಲಿ ದೆ ಹಾಗೂ ದೊ ಮತ್ತು ಚ ಮತ್ತು ಚಿ ಅಕ್ಷರದ ಹೆಸರುಗಳು ಬರುತ್ತದೆ ಹೀಗೆ ಪ್ರತಿಯೊಂದು ರಾಶಿಯವರಿಗೆ ನಕ್ಷತ್ರ ಮತ್ತು ಹೆಸರಿನ ಮೊದಲನೇ ಅಕ್ಷರದ ಬೇರೆ ಬೇರೆ ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!