ಬಂಡವಾಳ ಇಲ್ಲದೆ ಹಣಗಳಿಸುವ 4 ದಾರಿಗಳು ಯಾವುವು ತಿಳಿದುಕೊಳ್ಳಿ

0

ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದೆಂದರೆ ಯಾರಿಗೆ ತಾನೆ ಇಷ್ಟ ಆಗತ್ತೆ ನಾವೇ ನಮ್ಮ ಬಿಸಿನೆಸ್ ಗೆ ಓನರ್ ಆಗಿದ್ದರೆ ಇನ್ನೊಬ್ಬರ ಮಾತನ್ನು ಕೇಳುವ ಪ್ರಮೇಯವೆ ಬರುವುದಿಲ್ಲ ಆದರೆ ಬಿಸಿನೆಸ್ ಮಾಡಲು ಇನ್ವೆಸ್ಟ್ ಮಾಡಬೇಕಾಗುತ್ತದೆ ಆದರೆ ಇನ್ವೆಸ್ಟಮೆಂಟ್ ಇಲ್ಲದೆ ಆನ್ ಲೈನ್ ಬಿಸಿನೆಸ್ ಮೂಲಕ ಹಣ ಗಳಿಸಬಹುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಈಗಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಿದ್ದಾರೆ ಇದರಿಂದ ಆನ್ಲೈನ್ ಬಿಸಿನೆಸ್ ಎನ್ನುವುದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇನ್ನು ಇನ್ವೆಸ್ಟಮೆಂಟ್ ಇಲ್ಲದೆ ಮನೆಯಲ್ಲಿ ಕುಳಿತುಕೊಂಡು ಮೊಬೈಲ್ ಇಂಟರ್ನೆಟ್ ಮೂಲಕ ಬಿಸಿನೆಸ್ ಮಾಡಿ ಹಣ ಗಳಿಸಬಹುದು. ಫ್ರೀಲಾನ್ಸಿಂಗ್ ಇದರಲ್ಲಿ ಹಲವು ಆಯ್ಕೆಗಳಿವೆ ಮೊದಲನೆಯದು ಕಂಟೆಂಟ್ ರೈಟಿಂಗ್ ಹಲವು ಕಂಪನಿಗಳಿಗೆ ಕಂಟೆಂಟ್ ರೈಟಿಂಗ್ ಬೇಕಾಗುತ್ತದೆ. ಮೊದಲಿಗೆ ಕೋರ್ ವೆಬ್ ಸೈಟ್ ನಲ್ಲಿ ಹಲವಾರು ಜನರು ತಮ್ಮ ಹಲವು ಪ್ರಶ್ನೆಗಳನ್ನು ಕೇಳಿರುತ್ತಾರೆ ಅವುಗಳಲ್ಲಿ ಯಾವ ಪ್ರಶ್ನೆ ಬಗ್ಗೆ ತಿಳಿದಿರುತ್ತದೆ ಆ ಪ್ರಶ್ನೆಗೆ ಉತ್ತರವನ್ನು ಬರೆಯಬೇಕು ಇದರಿಂದ ನಮ್ಮ ರೈಟಿಂಗ್ ಇಂಪ್ರೂವ್ ಆಗುತ್ತದೆ.

ಲಿಂಕಡಿನ್ ವೆಬ್ಸೈಟ್ ಮೂಲಕ ಬ್ಲಾಗ್ಸ್ ಗಳನ್ನು ಬರೆಯುವುದರಿಂದ ನಿಮ್ಮ ರೈಟಿಂಗ್ ಅಭಿವೃದ್ಧಿಯಾಗುತ್ತದೆ ಹಾಗೂ ಇದರಿಂದ ಅವಕಾಶಗಳು ಸಿಗುತ್ತವೆ. ಫ್ರೀಲಾನ್ಸಿಂಗ್ ನಲ್ಲಿ ಗ್ರಾಫಿಕ್ ಡಿಸೈನ್ಸ್ ಮತ್ತು ವಿಡಿಯೊ ಎಡಿಟಿಂಗ್ ಎಂದು ಇರುತ್ತದೆ. ದೊಡ್ಡ ದೊಡ್ಡ ಕಂಪನಿಗಳಿಗೆ ಅವರ ಆ್ಯಡ್ ಗಳನ್ನು ಇಂಪ್ರೂವ್ ಮಾಡಲು ಗ್ರಾಫಿಕ್ ಡಿಸೈನರ್ ಬೇಕಾಗುತ್ತದೆ. ಯೂಟ್ಯೂಬ್ ನಲ್ಲಿ ಗ್ರಾಫಿಕ್ ಡಿಸೈನ್ ಬಗ್ಗೆ ವಿಡಿಯೊಗಳಿರುತ್ತದೆ ಅವುಗಳನ್ನು ನೋಡಿ ಕಲಿಯಬಹುದು.

ಫ್ರೀಲಾನ್ಸಿಂಗ್ ನಲ್ಲಿ ಉಪಶೀರ್ಷಿಕೆ ಬರವಣಿಗೆ ಸಬ್ ಟೈಟಲ್ ರೈಟಿಂಗ್ ಎಂದು ಇರುತ್ತದೆ. ಫೈವರ್, ಫ್ರೀಲಾನ್ಸಿಂಗ್ ವೆಬ್ಸೈಟ್ ಗಳಲ್ಲಿ ಪ್ರೊಫೈಲ್ ಬಿಲ್ಡ್ ಮಾಡಿದಾಗ ಅವಕಾಶಗಳು ತನ್ನಿಂತಾನೆ ಸಿಗುತ್ತವೆ. ಯೂಟ್ಯೂಬ್ ನಲ್ಲಿ ಚಾನೆಲ್ ಮಾಡಿಕೊಂಡು ಯಾವುದಾದರೂ ವಿಷಯದ ಬಗ್ಗೆ ಆನ್ಲೈನ್ ಟೀಚಿಂಗ್ ಮಾಡಬಹುದು. ಈಗಾಗಲೆ ಟೀಚರ್ ಆಗಿ ವರ್ಕ್ ಮಾಡುತ್ತಿರುವವರಿಗೆ ಈ ಬಿಸಿನೆಸ್ ಉತ್ತಮವಾಗಿದೆ ಮನೆಯಲ್ಲೆ ಇದ್ದುಕೊಂಡು ಆನ್ಲೈನ್ ಟ್ಯೂಷನ್ ಮಾಡಬಹುದು.

ಸೋಶಿಯಲ್ ಇನ್ಫ್ಲುಎನ್ಸರ್ ಸೋಶಿಯಲ್ ವಿಡಿಯೋಗಳಲ್ಲಿ ಹೆಚ್ಚಿನ ಆಕ್ಟೀವ್ ಆಗಿದ್ದರೆ ಹಲವು ಕಂಪನಿಗಳು ತಮ್ಮ ಪ್ರೊಡಕ್ಟ್ ಅಥವಾ ಸರ್ವಿಸ್ ಪ್ರಮೋಟ್ ಮಾಡಲು ನೋಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಇರುವುದರಿಂದ ಆ ಕಂಪನಿಯ ಇನ್ಫ್ಲುಎನ್ಸರ್ ಆಗಬಹುದು. ಹಣ ಬರುತ್ತದೆ ಎಂದು ಮೋಸದ ಪ್ರೊಡಕ್ಟ್ ಗಳನ್ನು ಪ್ರಮೋಟ್ ಮಾಡಬಾರದು. ಅಫಿಲಿಯೇಟ್ ಮಾರ್ಕೆಟಿಂಗ್ ಬಿಸಿನೆಸ್ ಭಾರತದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿಲ್ಲ ಆದರೆ ಮುಂದಿನ ದಿನಗಳಲ್ಲಿ ಪ್ರಾಮುಖ್ಯತೆ ಪಡೆಯಬಹುದು.

ಅಮೆಜಾನ್, ಫ್ಲಿಪ್ ಕಾರ್ಟ್ ನಂತಹ ದೊಡ್ಡ ದೊಡ್ಡ ಕಂಪನಿಗಳು ತಮ್ಮ ಪ್ರೊಡಕ್ಟ್ ಗಳನ್ನು ನೇರವಾಗಿ ಜನರಿಗೆ ರೀಚ್ ಮಾಡುತ್ತಾರೆ ಇನ್ನೊಂದು ರೀತಿಯಲ್ಲಿ ಅಫಿಲಿಯೇಟ್ ಮೂಲಕವೂ ಮಾಡುತ್ತಾರೆ. ಆನ್ಲೈನ್ ಬಿಸಿನೆಸ್ ಒಂದೆ ದಿನದಲ್ಲಿ ಒಂದೆ ತಿಂಗಳಿನಲ್ಲಿ ಆಗುವಂತದ್ದಲ್ಲ ಇಂದಿನಿಂದಲೆ ನಿಧಾನವಾಗಿ ಪ್ರಾರಂಭಿಸಬೇಕು ವಿಡಿಯೋಗಳನ್ನು ಬಳಸಿಕೊಂಡು ನಮ್ಮ ಆನ್ಲೈನ್ ಬಿಸಿನೆಸ್ ಅನ್ನು ಪ್ರಾರಂಭಿಸಿಕೊಳ್ಳಬಹುದು. ನಮ್ಮ ಪ್ರಯತ್ನದಿಂದ ಮನೆಯಲ್ಲಿ ಕುಳಿತುಕೊಂಡು ಹಣ ಗಳಿಸಬಹುದು ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಆನ್ಲೈನ್ ಬಿಸಿನೆಸ್ ಶುರು ಮಾಡಿ ಹಣ ಗಳಿಸಿ.

Leave A Reply

Your email address will not be published.

error: Content is protected !!