ಮದುವೆಯಾದ ನಂತರ ಗಂಡಿರಲಿ, ಹೆಣ್ಣಿರಲಿ ದಾಂಪತ್ಯ ಜೀವನದ ಸುಖವನ್ನು ಅನುಭವಿಸಬೇಕು ಆದರೆ ಪುರುಷರು ಕೆಲವು ಸಮಸೆಗಳನ್ನು ಎದುರಿಸುತ್ತಾರೆ ಅದರಲ್ಲಿ ವೀರ್ಯ ಸಮಸ್ಯೆಯು ಒಂದು ಪ್ರಮುಖ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ನಸುಗುನ್ನಿ ಮೂಲಕ ಮನೆ ಔಷಧಿಯನ್ನು ಮಾಡಿಕೊಳ್ಳಬಹುದು. ಹಾಗಾದರೆ ನಸುಗುನ್ನಿ ಬಗ್ಗೆ ಹಾಗೂ ಅದರ ಔಷಧಿಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ನಸುಗುನ್ನಿ ಇದೊಂದು ಸಸ್ಯವಾಗಿದ್ದು. ಇದು ಹಳ್ಳಿಗಳಲ್ಲಿ ಗಿಡ ಮರಗಳ ಸುತ್ತ ಹಬ್ಬಿರುತ್ತದೆ ನೀರಿರುವ ಕೆರೆದಂಡೆಗಳಲ್ಲಿ ಕಾಣಸಿಗುತ್ತದೆ. ನಸುಗುನ್ನಿ ಇದು ನೋಡಲು ಸುಂದರವಾಗಿರುವ ಕಾಯಿಯಾಗಿದೆ, ಈ ಕಾಯಿ ನೋಡಲು ಒಂದು ರೀತಿಯಲ್ಲಿ ಇಂಗ್ಲಿಷ್ ನ ಎಸ್ ಆಕಾರವನ್ನು ಹೊಂದಿರುತ್ತದೆ. ಈ ಗಿಡ ನೀಲಿ ಬಣ್ಣದ ಹೂವುಗಳನ್ನು ಮತ್ತು ಪ್ರಭಾವ ಶಾಲಿಗಳಾಗಿರುವ ಎಲೆಗಳನ್ನು ಹೊಂದಿರುತ್ತದೆ. ನಸುಗುನ್ನಿಯ ಬಲಿತ ಕಾಯಿಗಳ ಮೇಲೆ ರೋಮ ಇರುತ್ತದೆ, ಎಲೆ ಕಾಂಡದ ಮೇಲೂ ರೋಮ ಇರುತ್ತದೆ.
ಈ ಕಾಯಿಯ ರೋಮವನ್ನು ಯಾರಿಗಾದರೂ ತಾಗಿದರೆ ಬಹಳ ಹೊತ್ತಿನವರೆಗೆ ತುರಿಕೆ ಇರುತ್ತದೆ ಆದ್ದರಿಂದ ಈ ಕಾಯಿಯನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ಈ ಗಿಡ ಬಹುವಾರ್ಷಿಕ ಬೆಳೆಯಾಗಿದೆ. ಇದರ ಎಲೆ ಕಾಯಿಯನ್ನು ಸಾಂಬಾರು, ಪಲ್ಯ ಮಾಡಿಕೊಂಡು ಸೇವಿಸಬಹುದು. ನಸುಗುನ್ನಿಯ ಬೀಜವನ್ನು ತುಪ್ಪದಲ್ಲಿ ಹುರಿದು ಹಾಲಿನಲ್ಲಿ ಬೇಯಿಸಿ ಪೌಡರ್ ಮಾಡಿ ಪುರುಷರು ಸೇವಿಸಿದರೆ ವೀರ್ಯ ಹೆಚ್ಚುತ್ತದೆ. ಅದು ಮನಸ್ಸು ಖುಷಿಯಾಗಿರುವಂತೆ ನೋಡಿಕೊಳ್ಳುತ್ತದೆ. ನಸುಗುನ್ನಿ ಪುರುಷರ ವೀರ್ಯವನ್ನು ಹೆಚ್ಚಿಸುವ ಮೂಲಕ ವಿರ್ಯವರ್ಧಕವಾಗಿ ಕೆಲಸ ಮಾಡುತ್ತದೆ. ಶುಂಠಿ ಮತ್ತು ಅಮೃತ ಬಳ್ಳಿ, ನಸುಗುನ್ನಿ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಅನೇಕ ರೋಗಗಳು ನಿವಾರಣೆಯಾಗುತ್ತದೆ.
ನಸುಗುನ್ನಿ ಗಿಡವನ್ನು ಮನೆಯಲ್ಲಿ ಬೆಳೆಸಬಹುದು. ಈ ಗಿಡದಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ದಾಂಪತ್ಯ ಜೀವನದಲ್ಲಿ ಸರಸವಿರಬೇಕು ಆಗ ಮಾತ್ರ ಸಂಸಾರ ಚೆನ್ನಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಬರುವ ಕೆಲವು ಸಮಸ್ಯೆಗಳಿಗೆ ಈ ನಸುಗುನ್ನಿ ಔಷಧಿ ಉತ್ತಮವಾಗಿದೆ. ಅದರ ಪೌಡರ್ ಸೇವನೆಯಿಂದ ದಾಂಪತ್ಯ ಜೀವನದಲ್ಲಿ ಪುರುಷರು ಎದುರಿಸುವ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ, ನಸುಗುನ್ನಿ ಗಿಡವನ್ನು ಬೆಳೆಸಿ.