ಪುನೀತ್ ದೊಡ್ಡ ಮಗಳು ಎಂತ ಕೆಲಸ ಮಾಡಿದ್ದಾರೆ ನೋಡಿ

0

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇನ್ನೂ ನೆನಪು ಮಾತ್ರ. ಹೃದಯಾಘಾತದಿಂದ ನಿಧನರಾದ ಪುನೀತ್ ಅವರು ನಮ್ಮೆಲ್ಲರ ಮನದಲ್ಲಿ ಇಂದಿಗೂ ಜೀವಂತ. ಪುನೀತ್ ಅವರ ಸಮಾಜ ಸೇವಾ ಕೆಲಸಗಳ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ ಇದೀಗ ಅವರ ದಾರಿಯಲ್ಲಿ ಅವರ ಮಕ್ಕಳು ನಡೆಯುತ್ತಿದ್ದಾರೆ. ಧೃತಿ ಅವರ ಸಮಾಜ ಸೇವಾ ಕೆಲಸದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಚಿತ್ರತಂಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಗು ಮುಖದ ಸರದಾರ ಇನ್ನೂ ನೆನಪು ಮಾತ್ರ. ಅಕ್ಟೋಬರ್ 29ರಂದು ನಮ್ಮ ನಿಮ್ಮೆಲ್ಲರ ಪ್ರೀತಿಯ ಪುನೀತ್ ರಾಜಕುಮಾರ್ ಅವರು ಇಹಲೋಕ ತೈಜಿಸಿದ್ದಾರೆ. ಕೆಲವು ದಿನಗಳ ಹಿಂದೆ ಅಪ್ಪು ಅವರ ಸ್ಮಾರಕಕ್ಕೆ ಹಾಲುತುಪ್ಪ ಕಾರ್ಯಕ್ರಮವನ್ನು ಅವರ ಕುಟುಂಬದವರು ಹಮ್ಮಿಕೊಂಡಿದ್ದರು. ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು 21 ವರ್ಷಗಳ ಕಾಲ ಅನ್ಯೋನ್ಯ ದಾಂಪತ್ಯ ಜೀವನ ನಡೆಸಿದರು. ಒಂದು ದಿನವೂ ಪುನೀತ್ ಅವರ ಕುಟುಂಬದ ಬಗ್ಗೆ ವಿವಾದ ಕೇಳಿ ಬಂದಿಲ್ಲ.

ಪುನೀತ್ ಹಾಗೂ ಅಶ್ವಿನಿ ಅವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಂತೋಷದಿಂದ ಜೀವನ ನಡೆಸುತ್ತಾ ಸಮಾಜ ಸೇವೆಗಳನ್ನು ಮಾಡುತ್ತಾ ನಿರ್ಮಾಪಕರಾಗಿ ಹೊಸಬರಿಗೆ ಅವಕಾಶ ಕೊಡುತ್ತಾ ಹಲವು ಒಳ್ಳೆಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದರು. ಪುನೀತ್ ರಾಜಕುಮಾರ್ ಅವರ ಮೊದಲ ಮಗಳು ಧೃತಿ ಸಹ ತನ್ನ ತಂದೆ ತಾಯಿಯರ ಹಾದಿಯಲ್ಲಿ ನಡೆಯುತ್ತಿದ್ದಾರೆ. ಪುನೀತ್ ಅವರ ಮರಣದ ನಂತರ ಅವರು ನಡೆಸಿಕೊಂಡು ಹೋಗುತ್ತಿದ್ದ ಎಲ್ಲಾ ಸಾಮಾಜಿಕ ಕೆಲಸಗಳನ್ನು ಅಶ್ವಿನಿ ಅವರು ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಧೃತಿ ಸಹ ತಂದೆ ತಾಯಿಯರಂತೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾಳೆ. ಧೃತಿ ಅವರು ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಧೃತಿ ಅವರು ತಂದೆ-ತಾಯಿ ಹೇಳಿಕೊಟ್ಟ ಪಾಠದಂತೆ ಸ್ವಾವಲಂಬಿಯಾಗಿ ಸ್ಕಾಲರ್ ಶಿಪ್ ಪಡೆದು ಓದಲು ವಿದೇಶಕ್ಕೆ ಹೋದರು ಈ ವಿಷಯ ನಿಜಕ್ಕೂ ಪುನೀತ್ ಹಾಗೂ ಅಶ್ವಿನಿ ದಂಪತಿಗೆ ಹೆಮ್ಮೆಯ ವಿಚಾರವಾಗಿದೆ.

ಧೃತಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಮಾಜಸೇವೆ ಕೆಲಸದಲ್ಲಿ ತೊಡಗಿಕೊಂಡಿರುವುದು ಮೆಚ್ಚುಗೆಯ ವಿಷಯವಾಗಿದೆ. ಕೆಲವು ತಿಂಗಳುಗಳ ಹಿಂದೆ ಧೃತಿ ಅವರು ಮಾಡಿರುವ ಕೆಲಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಧೃತಿ ಅವರು ಅಂಧರಿಗಾಗಿ ಹಣ ಸಂಗ್ರಹ ಮಾಡಿದ್ದರು ಅಲ್ಲದೆ ಕೆಲವು ಅಂಧರನ್ನು ದತ್ತು ಪಡೆದು ಅವರ ಓದು ಹಾಗೂ ಇನ್ನಿತರ ಖರ್ಚುಗಳನ್ನು ಇವರೆ ಭರಿಸಿದ್ದರು. ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರ ದೊಡ್ಡ ಗುಣಗಳು ಅವರ ಮಕ್ಕಳಿಗೂ ಬಂದಿರುವುದನ್ನು ನಾವು ನೋಡಿದ್ದೇವೆ ಇದೀಗ ಅವರ ಮೊಮ್ಮಕ್ಕಳಿಗೂ ಬಂದಿರುವುದನ್ನು ನೋಡಬಹುದು.

ಪುನೀತ್ ಅವರ ಮರಣದ ನಂತರ 11ನೇ ದಿನದ ಪೂಜೆಯ ಅಂಗವಾಗಿ ಸಾವಿರಾರು ಅಭಿಮಾನಿಗಳಿಗೆ ಅಣ್ಣಾವ್ರ ಕುಟುಂಬ ಅನ್ನದಾನ ಮಾಡಿತ್ತು. ಆ ಸಮಯದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ಹಾಗೂ ಮಕ್ಕಳು ಶಿವಣ್ಣ ಸೇರಿದಂತೆ ಕುಟುಂಬಸ್ಥರೆಲ್ಲರೂ ಊಟವನ್ನು ಬಡಿಸಿ ಭಾವುಕರಾದರು. ಅಶ್ವಿನಿ ಅವರಂತೂ ಕಣ್ಣೀರಿಡುತ್ತಲೆ ಅಭಿಮಾನಿಗಳಿಗೆ ಊಟ ಬಡಿಸಿದ್ದರು.

ಇನ್ನೊಂದು ಕಡೆ ಅಪ್ಪು ಅವರ ಎರಡನೆ ಮಗಳು ವಂದಿತಾ ತನ್ನ ತಂದೆಯ 11ನೇ ದಿನದ ಕಾರ್ಯವನ್ನು ಮುಗಿಸಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಶಾಲೆಗೆ ಹೋಗಿದ್ದಾರೆ. ಪುನೀತ್ ಅವರು ಬದುಕಿದ್ದಾಗ ಸಾಕಷ್ಟು ಜನರಿಗೆ ಸಾಕಷ್ಟು ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಪುನೀತ್ ಅವರು ಮಾಡಿದ ಸಮಾಜಮುಖಿ ಕೆಲಸಗಳನ್ನು ಅವರ ಪತ್ನಿ ಅಶ್ವಿನಿ ಹಾಗೂ ಮಕ್ಕಳು ಮುಂದುವರಿಸಿಕೊಂಡು ಹೋಗುವ ನಿರ್ಧಾರವನ್ನು ಮಾಡಿದ್ದಾರೆ. ಅಪ್ಪು ಅವರ ಸಾವಿನ ಸುದ್ದಿಯನ್ನು ಸಹಿಸುವುದು ನಿಜಕ್ಕೂ ಕಷ್ಟವೆ ಆದರೂ ಅವರ ಕುಟುಂಬದವರಿಗೆ ಸಹಿಸುವ ಶಕ್ತಿಯನ್ನು ದೇವರು ಕೊಡಲಿ ಹಾಗೂ ಕುಟುಂಬಸ್ಥರಿಗೆ ಒಳ್ಳೆಯದಾಗಲಿ ಎಂದು ಆಶಿಸೋಣ.

Leave A Reply

Your email address will not be published.

error: Content is protected !!