ಕರ್ನಾಟಕ ಸರ್ಕಾರದ ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿ ನಡೆಯುತ್ತಿದ್ದು ಒಂದು ಹುದ್ದೆಗೆ ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು ಯಾವೆಲ್ಲಾ ಹುದ್ದೆಗಳು ಖಾಲಿ ಇವೆ ಅರ್ಜಿ ಸಲ್ಲಿಸಲು ಯಾವ ಅರ್ಹತೆಯನ್ನು ಹೊಂದಿರಬೇಕು ಮತ್ತು ಅರ್ಜಿಯನ್ನು ಹೇಗೆ ಸಲ್ಲಿಸಬೇಕು ವೇತನ ಯಾವ ರೀತಿಯಾಗಿ ಇರುತ್ತದೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಕರ್ನಾಟಕ ರಾಜ್ಯದ ಪಂಚಾಯತ್ ರಾಜ್ ಇಲಾಖೆಯಿಂದ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು ನೀವು ಫೆಬ್ರುವರಿ 27 2022 ರ ವರೆಗೆ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೂವತ್ನಾಲ್ಕು ವರ್ಷದ ಒಳಗಿನವರಾಗಿರಬೇಕು.
ಗ್ರಾಮೀಣ ಅಭಿವೃದ್ಧಿ ನಿಗಮದಿಂದ ಯಾವೆಲ್ಲಾ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಂಬುದನ್ನು ನೋಡುವುದಾದರೆ ಏರಿಯಾ ಮ್ಯಾನೇಜರ್, ಅಕೌಂಟೆಂಟ್ ಕ್ಲರ್ಕ್, ಕ್ಲರ್ಕ್ ಟೈಪಿಸ್ಟ್ ಜೂನಿಯರ್, ಕ್ಲರ್ಕ್ ಟೈಪಿಸ್ಟ್ ಸೀನಿಯರ್ ,ಕಂಪ್ಯೂಟರ್ ಆಪರೇಟರ್, ಡ್ರೈವರ್ ಮತ್ತು ಗಾರ್ಡ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವ ವಿದ್ಯಾರ್ಹತೆಯನ್ನು ಪಡೆದಿರಬೇಕು ಎಂಬುದನ್ನು ನೋಡುವುದಾದರೆ ಎಸೆಸೆಲ್ಸಿ ಮತ್ತು ಪಿಯುಸಿ ಪಾಸ್ ಆಗಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಎಂಬುದನ್ನು ನೋಡುವುದಾದರೆ ಬಾಗಲಕೋಟೆ ಜಿಲ್ಲೆಯಲ್ಲಿ 291 ಹುದ್ದೆಗಳು ಬೆಂಗಳೂರು ಅರ್ಬನ್ ಏರಿಯಾದಲ್ಲಿ 326 ಹುದ್ದೆಗಳು ಬೆಂಗಳೂರು ರೂರಲ್ ವಿಭಾಗದಲ್ಲಿ 273 ಹುದ್ದೆಗಳು ಬೆಳಗಾವಿಯಲ್ಲಿ 291 ಹುದ್ದೆಗಳು ಬಳ್ಳಾರಿಯಲ್ಲಿ 315 ಹುದ್ದೆಗಳು ಬೀದರ್ ನಲ್ಲಿ 300 ಉದ್ದೆಗಳು ವಿಜಯಪುರದಲ್ಲಿ 324 ಹುದ್ದೆಗಳು ಚಾಮರಾಜನಗರದಲ್ಲಿ 264 ಹುದ್ದೆಗಳು
ಚಿಕ್ಕಬಳ್ಳಾಪುರದಲ್ಲಿ 282 ಹುದ್ದೆಗಳು ಚಿಕ್ಕಮಗಳೂರಿನಲ್ಲಿ 291 ಹುದ್ದೆಗಳು ಚಿತ್ರದುರ್ಗದಲ್ಲಿ 273 ಹುದ್ದೆಗಳು ದಕ್ಷಿಣಕನ್ನಡದಲ್ಲಿ 291 ಹುದ್ದೆಗಳು ದಾವಣಗೆರೆಯಲ್ಲಿ 315 ಧಾರವಾಡದಲ್ಲಿ 300 ಹುದ್ದೆಗಳು ಗದಗ್ 324 ಹುದ್ದೆಗಳು ಗುಲ್ಬರ್ಗ 264 ಹುದ್ದೆಗಳು ಹಾಸನ 282 ಹಾವೇರಿ 291 ಹುದ್ದೆಗಳು ಈ ರೀತಿಯಾಗಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ನೇಮಕಾತಿ ನಡೆಯುತ್ತಿದೆ. ಒಟ್ಟು 9126 ಹುದ್ದೆಗಳ ಬೃಹತ್ ನೇಮಕಾತಿ ನಡೆಯುತ್ತಿದೆ.
ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಯಾವುದೇ ರೀತಿಯಾದಂತಹ ಲಿಖಿತ ಪರೀಕ್ಷೆಗಳು ಇರುವುದಿಲ್ಲ ನೇರನೇಮಕಾತಿ ನಡೆಯುತ್ತದೆ. ಅರ್ಜಿ ಸಲ್ಲಿಸುವ ಸಮಯದಲ್ಲಿ ನೀವು ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೀರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಬ್ಬರು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೇರಿಟ್ ಲಿಸ್ಟ್ ತಯಾರಿಸಿ ಆಯ್ಕೆಯನ್ನು ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ಪ್ರತಿ ತಿಂಗಳು ಇಪ್ಪತ್ನಾಲ್ಕು ಸಾವಿರ ರೂಪಾಯಿ ವೇತನ ಇರುತ್ತದೆ. ನೀವು ಕೂಡ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಈ ಒಂದು ನೇಮಕಾತಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.