ಮನೆಯಲ್ಲಿನ ಅಡುಗೆ ಮನೆಯ ಡಬ್ಬದಲ್ಲಿ ಹಣ ಕಂಡುಬರುತ್ತದೆ. ಅಮ್ಮಂದಿರು ಮೊದಲಿನಿಂದಲೂ ಅಕ್ಕಿ ಹಿಟ್ಟಿನ ಡಬ್ಬದಲ್ಲಿ, ಸಾಸಿವೆ ಡಬ್ಬದಲ್ಲಿ ಹಣವನ್ನು ಸಂಗ್ರಹಿಸಿಡುತ್ತಿದ್ದರು. ಅದರಂತೆ ಅಡುಗೆಗೆ ಸಂಬಂಧಿಸಿ ಕೆಲವು ಟಿಪ್ಸ್ ಗಳನ್ನು ಅನುಸರಿಸಿದರೆ ಹಣ ಉಳಿತಾಯ ಆಗುತ್ತದೆ. ಹಾಗಾದರೆ ಅಡುಗೆ ಮನೆಯ ಟಿಪ್ಸ್ ಗಳ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ನಾವು ದಿನನಿತ್ಯ ಅಡುಗೆ ಮಾಡುವಾಗ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದರಿಂದ ಹಣ ಉಳಿಸಬಹುದು. ಅಂಗಡಿಯಿಂದ ಹಾಲಿನ ಪ್ಯಾಕ್ ತೆಗೆದುಕೊಂಡು ಬಂದರೆ ಅವರು ಅದನ್ನು ಫ್ರಿಜ್ ನಲ್ಲಿ ಇಡುವುದರಿಂದ ಪ್ಯಾಕ್ ನಿಂದ ಹಾಲನ್ನು ಪಾತ್ರೆಗೆ ಹಾಕಿದಾಗ ಹಾಲಿನ ಕೆನೆ ಪ್ಯಾಕೆಟ್ ಗೆ ಅಂಟಿಕೊಳ್ಳುತ್ತದೆ. ಪ್ಯಾಕೆಟ್ ಒಳಗೆ ನೀರು ಹಾಕಿದರೂ ಎಲ್ಲಾ ಕೆನೆ ಪಾತ್ರೆಗೆ ಬರುವುದಿಲ್ಲ. ಪ್ಯಾಕೆಟ್ ಒಡೆಯುವ ಮೊದಲು ಸಣ್ಣ ಉರಿಯಲ್ಲಿ ಬಿಸಿ ತಾಕುವಂತೆ ಪ್ಯಾಕೆಟ್ ಅನ್ನು ಹಿಡಿಯಬೇಕು ಆಗ ಕೆನೆ ಮೆಲ್ಟ್ ಆಗಿ ಪಾತ್ರೆಗೆ ಹಾಕಬಹುದು. ಪ್ಯಾಕೆಟ್ ಇಂದ ಹಾಲನ್ನು ಹಾಕುವಾಗ ಒಣಗಿದ ಪಾತ್ರೆಗೆ ಹಾಲನ್ನು ಹಾಕಬಾರದು.
ಎರಡು ಸ್ಪೂನ್ ನೀರು ಹಾಕಿ ವದ್ದೆ ಮಾಡಬೇಕು ಆ ನೀರು ಬೇಡ ಎಂದರೆ ಚೆಲ್ಲಬಹುದು. ವದ್ದೆ ಪಾತ್ರೆಗೆ ಹಾಲನ್ನು ಹಾಕಬೇಕು ಆಗ ಹಾಲು ತಳ ಹಿಡಿಯುವುದಿಲ್ಲ. ಹಾಲನ್ನು ಫ್ರಿಜ್ ನಲ್ಲಿಡಲು ಮರೆತುಹೋದರೆ ಹಾಲು ಕೆಟ್ಟು ಹೋಗಿದೆ ಎಂಬ ಅನುಮಾನವಿದ್ದರೆ ಆಗ ಹಾಲಿಗೆ ಚಿಟಿಕೆ ಅಡುಗೆ ಸೋಡಾ ಹಾಕಿ ಹಾಲು ಕಾಸಿದರೆ ಹಾಲು ಒಡೆದುಹೋಗುವುದಿಲ್ಲ ಚೆನ್ನಾಗಿರುತ್ತದೆ. ನಾವು ದಿನನಿತ್ಯ ಬಳಸುವ ಪ್ಯಾಕೆಟ್ ಹಾಲಿಗೆ ಜಾಸ್ತಿ ನೀರನ್ನು ಮಿಕ್ಸ್ ಮಾಡುತ್ತಾರೆ ಅದನ್ನು ನಾವು ಟೆಸ್ಟ್ ಮಾಡಬಹುದು. ಒಂದು ಪ್ಲೇಟ್ ಅನ್ನು ಕ್ರಾಸ್ ಆಗಿ ಇಟ್ಟು ಪ್ಲೇಟ್ ನಲ್ಲಿ ಒಂದು ಡ್ರಾಪ್ ಪ್ಯೂರ್ ಹಾಲನ್ನು ಹಾಕಿ ಅದು ನಿಧಾನವಾಗಿ ಕೆಳಗೆ ಹರಿಯುತ್ತದೆ ಮತ್ತು ಬಿಳಿ ಬಣ್ಣ ಕ್ಲಿಯರ್ ಆಗಿ ಕಾಣಿಸುತ್ತದೆ.
ನೀರು ಬೆರೆಸಿದ ಹಾಲಿನ ಡ್ರಾಪ್ ಹಾಕಿದಾಗ ಫಾಸ್ಟ್ ಆಗಿ ಕೆಳಗೆ ಹರಿಯುತ್ತದೆ ಮತ್ತು ಬಿಳಿ ಬಣ್ಣದ ಮಾರ್ಕ್ ಕ್ಲಿಯರ್ ಆಗಿ ಕಾಣಿಸುವುದಿಲ್ಲ. ನೀರು ಬೆರೆಸಿದ ಹಾಲು ಯಾವುದು, ಶುದ್ಧ ಹಾಲು ಯಾವುದು ಎಂದು ಈ ಮೂಲಕ ನೋಡಬಹುದು. ಅಡುಗೆ ಮಾಡುವಾಗ ಕೆಲವು ಟಿಪ್ಸ್ ಗಳನ್ನು ಬಳಸುವ ಮೂಲಕ ಅಡುಗೆಯನ್ನು ಕಡಿಮೆ ಸಮಯದಲ್ಲಿ ಮಾಡಬಹುದು ಅದರೊಂದಿಗೆ ಹಣವನ್ನು ಉಳಿಸಬಹುದು. ಈ ಎಲ್ಲಾ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಅದರಲ್ಲೂ ಮಹಿಳೆಯರಿಗೆ ತಿಳಿಸಿ, ಈ ಮೇಲೆ ತಿಳಿಸಿದ ಎಲ್ಲ ಅಂಶಗಳನ್ನು ಪಾಲಿಸಿ.