ರೈತರಿಗೆ ಅತ್ಯಂತ ಕಡಿಮೆ ಬಡ್ಡಿಯಲ್ಲಿ ಲೋನ್ ಸೌಲಭ್ಯ ಸಿಗತ್ತೆ ಈ ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ ನೋಡಿ

0

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಮುಂದಾಗಿದೆ. ರೈತರಿಗೆ ವಿಶೇಷವಾಗಿ ಎಸ್ ಬಿಐ ಅಗ್ರಿ ಗೋಲ್ಡ್ ಲೋನ್ ಕೊಡುಗೆಯನ್ನು ಘೋಷಿಸಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು ಹಾಗೂ ಸಾಲದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ರೈತರಿಗೆ ಎಸ್ ಬಿಐ ಬ್ಯಾಂಕ್ ನಿಂದ ಸಂತಸದ ಸುದ್ದಿಯೊಂದು ಬಂದಿದೆ. ಎಸ್ ಬಿಐ ಕಡಿಮೆ ಬಡ್ಡಿದರದ ಸಾಲವನ್ನು ಘೋಷಿಸಿದೆ. ಎಸ್ ಬಿಐ ಅಗ್ರಿ ಗೋಲ್ಡ್ ಲೋನ್ ಹೆಸರಿನಲ್ಲಿ ಸಾಲ ನೀಡುತ್ತದೆ. ರೈತರು ಎಸ್ ಬಿಐ ಯೋನೊ ಆಪ್ ನಲ್ಲಿ ಅರ್ಜಿ ಸಲ್ಲಿಸಿ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬಹುದು. ಈ ವಿಷಯವನ್ನು ಎಸ್ ಬಿಐ ಟ್ವಿಟರ್ ಮೂಲಕ ತಿಳಿಸಿದೆ. ಯೋನೊ ಆಪ್ ಮೂಲಕ ಅರ್ಜಿ ಸಲ್ಲಿಸಿದರೆ ಬಡ್ಡಿ ಕಡಿಮೆ ಇರುತ್ತದೆ, ಬಡ್ಡಿಯು ಕೇವಲ ಶೇ.7ರಿಂದ ಪ್ರಾರಂಭವಾಗುತ್ತದೆ. ಸಾಲಗಳನ್ನು ಬೇಗ ಅನುಮೋದಿಸಲಾಗುತ್ತದೆ. ರೈತರು ತಮ್ಮ ಇಚ್ಛೆಯಂತೆ ಮರುಪಾವತಿ ಆಯ್ಕೆಯನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು. ತಮ್ಮ ಸ್ವಂತ ಜಮೀನಿನಲ್ಲಿ ಅಥವಾ ಗುತ್ತಿಗೆ ಪಡೆದ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ರೈತರು ಸಹ ಎಸ್ ಬಿಐ ಅಗ್ರಿ ಗೋಲ್ಡ್ ಸಾಲವನ್ನು ಪಡೆಯಬಹುದಾಗಿದೆ.

ಈ ಸಾಲಗಳು ಹೈನುಗಾರಿಕೆ, ಕೋಳಿ, ಮೀನುಗಾರಿಕೆ, ಹಂದಿ ಸಾಕಣೆ, ಕುರಿ ಸಾಕಣೆ ಇತ್ಯಾದಿಗಳಿಗೆ ಅನ್ವಯಿಸುತ್ತದೆ. ಈ ಸಾಲಗಳನ್ನು ಯಂತ್ರೋಪಕರಣಗಳ ಖರೀದಿ, ಕೃಷಿ, ತೋಟಗಾರಿಕೆ, ಸಾರಿಗೆ ಇತ್ಯಾದಿಗಳಿಗೂ ಬಳಸಬಹುದು. ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಕೃಷಿ ನಿರ್ವಾಹಕರು ಈ ಸಾಲಗಳಿಗೆ ಅರ್ಹರಾಗಿರುತ್ತಾರೆ. ಎಸ್ ಬಿಐ ಅಗ್ರಿ ಗೋಲ್ಡ್ ಲೋನ್ ಚಿನ್ನದ ಆಭರಣಗಳ ಮೇಲೂ ಲಭ್ಯವಿದೆ. 24 ಕ್ಯಾರೆಟ್, 22 ಕ್ಯಾರೆಟ್, 20 ಕ್ಯಾರೆಟ್ ಮತ್ತು 18 ಕ್ಯಾರೆಟ್ ಶುದ್ಧ ಚಿನ್ನ ಮತ್ತು ಆಭರಣಗಳನ್ನು ಎರವಲು ಪಡೆಯಬಹುದು. 50 ಗ್ರಾಂವರೆಗೆ ಬ್ಯಾಂಕ್ ಚಿನ್ನದ ನಾಣ್ಯಗಳ ಮೇಲೆ ಸಾಲ ನೀಡುತ್ತದೆ. ಈ ಸಾಲಗಳು ಗೋಲ್ಡ್ ಬಾರ್ ಗಳಿಗೆ ಅನ್ವಯಿಸುವುದಿಲ್ಲ. ಎಸ್ ಬಿಐನಲ್ಲಿ ಚಿನ್ನದ ಸಾಲದ ಬಡ್ಡಿ ದರಗಳು ಸಾಮಾನ್ಯವಾಗಿ ಶೇ. 7.5 ರಿಂದ ಪ್ರಾರಂಭವಾಗುತ್ತದೆ.

ರೈತರು ಯೋನೊ ಎಸ್ ಬಿಐ ಅಪ್ಲಿಕೇಷನ್ ಮೂಲಕ ಅರ್ಜಿ ಸಲ್ಲಿಸಿದರೆ 7% ಬಡ್ಡಿ ಅನ್ವಯಿಸುತ್ತದೆ. ಎಸ್ ಬಿಐ ಯೋನೊ ಅಪ್ಲಿಕೇಷನ್ ನಲ್ಲಿ ಅಗ್ರಿ ಗೋಲ್ಡ್ ಲೋನ್ ಗಾಗಿ ಅರ್ಜಿ ಸಲ್ಲಿಸಲು ಯೋನೊ ಎಸ್ ಬಿಐ ಅಪ್ಲಿಕೇಷನ್ ಅನ್ನು ತೆರೆಯಬೇಕು. ನಿಮ್ಮ ಬ್ಯಾಂಕ್ ಖಾತೆ ವಿವರದೊಂದಿಗೆ ನೀವು ಅಪ್ಲಿಕೇಷನ್ ಗೆ ಲಾಗ್ ಇನ್ ಮಾಡಬೇಕಾಗುತ್ತದೆ. ಮುಖಪುಟದಲ್ಲಿ ಯೋನೊ ಕೃಷಿ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ನಂತರ ಖಾತಾ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಗ್ರಿ ಗೋಲ್ಡ್ ಲೋನ್ ಮೇಲೆ ಕ್ಲಿಕ್ ಮಾಡಿ ಅಪ್ಲೈ ಫಾರ್ ಲೋನ್ ಮೇಲೆ ಕ್ಲಿಕ್ ಮಾಡಬೇಕು ನಂತರ ರೈತರ ಎಲ್ಲ ವಿವರಗಳನ್ನು ನಮೂದಿಸಬೇಕು ಹಾಗೂ ನೀವು ಎಷ್ಟು ಸಾಲವನ್ನು ಬಯಸುತ್ತೀರಿ ಎಂಬುದನ್ನು ತಿಳಿಸಬೇಕು.

ಸಾಲ ತೆಗೆದುಕೊಳ್ಳಲು ಕಾರಣವನ್ನು ನಮೂದಿಸಬೇಕು. ಜಮೀನಿನ ವಿವರವನ್ನು ಲಗತ್ತಿಸಬೇಕು. ಅಪ್ಲಿಕೇಷನ್ ಒಂದು ಉಲ್ಲೇಖ ಸಂಖ್ಯೆಯೊಂದಿಗೆ ಬರುತ್ತದೆ. ಆ ಸಂಖ್ಯೆಯೊಂದಿಗೆ ಹತ್ತಿರದ ಎಸ್ ಬಿಐ ಶಾಖೆಗೆ ಹೋಗಬೇಕು ಅಲ್ಲಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸಾಲ ಮಂಜೂರು ಮಾಡಲಾಗುವುದು. ಯೋನೊ ಎಸ್ ಬಿಐ ವೆಬ್ ಸೈಟ್ ಅಥವಾ ಮೊಬೈಲ್ ಅಪ್ಲಿಕೇಷನ್ ನಲ್ಲಿ ಲೋನ್ ಗಳಿಗೆ ಅರ್ಜಿ ಸಲ್ಲಿಸುವ ಮೂಲಕ ಕಡಿಮೆ ಬಡ್ಡಿಯ ಸಾಲಗಳನ್ನು ಪಡೆಯಬಹುದು. ರೈತರು ಯೋನೊ ಎಸ್ ಬಿಐ ಪ್ಲಾಟ್ ಫಾರ್ಮ್ ಮೂಲಕ ಅಗ್ರಿ ಲೋನ್ ಮತ್ತು ಗೋಲ್ಡ್ ಲೋನ್, ಕಾರ್ ಲೋನ್ ಮತ್ತು ದ್ವಿಚಕ್ರ ವಾಹನ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ರೈತ ಬಾಂಧವರಿಗೆ ತಿಳಿಸಿ, ಎಸ್ ಬಿಐ ನೀಡುವ ಸೌಲಭ್ಯವನ್ನು ಸರಿಯಾಗಿ ಬಳಸಿಕೊಳ್ಳಿ.

Leave A Reply

Your email address will not be published.

error: Content is protected !!