ನಾವಿಂದು ನಿಮಗೆ ಜಿ ಇ ಆರ್ ಡಿ ಎಂದರೇನು ಅದು ಯಾಕಾಗಿ ಬರುತ್ತದೆ ಯಾರಿಗೆ ಬರುತ್ತದೆ ಅದರ ಲಕ್ಷಣಗಳೇನು ಅದನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಜಿ ಇ ಆರ್ ಡಿ ಎಂದರೆ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಅಂದರೆ ನಾವು ಮಾಡಿರುವಂತಹ ಊಟ ವಾಪಸ್ ಬರುವಂತಹ ಅನುಭವ ಆಗುವಂಥದ್ದು. ಜಿ ಇ ಆರ್ ಡಿ ಉಂಟಾದಾಗ ತುಂಬಾ ಎದೆಯುರಿ ಹುಳಿತೇಗು ಬರುತ್ತದೆ ಮಾಡಿದಂತಹ ಊಟ ಹಿಂದೆ ಬಂದಂತೆ ಅನಿಸುತ್ತದೆ ಮಾಡಿದಂತಹ ಊಟ ಜೀರ್ಣವಾಗದೇ ಇರುತ್ತದೆ. ಜಿ ಇ ಆರ್ ಡಿ ಉಂಟಾಗುವುದಕ್ಕೆ ಕಾರಣ ಕೆಲವರಿಗೆ ಊಟ ಮಾಡಿದ ತಕ್ಷಣ ನೀರು ಕುಡಿಯುವಂತಹ ಅಭ್ಯಾಸ ಇರುತ್ತದೆ.
ಊಟದ ಎರಡು ಮೂರು ನಿಮಿಷ ಮೊದಲು ನೀರು ಕುಡಿಯುವಂತಹದ್ದು ಊಟದ ಜೊತೆ ಜೊತೆಗೆ ನೀರು ಕುಡಿಯುವಂತಹ ಅಭ್ಯಾಸ ಇರುತ್ತದೆ ಆ ರೀತಿಯಾಗಿ ನೀರು ಕುಡಿಯುವ ಅಭ್ಯಾಸ ಇರುವುದರಿಂದ ನಾವು ಮಾಡಿದಂತಹ ಊಟ ತಕ್ಷಣವೇ ಹೊಟ್ಟೆಯನ್ನು ಸೇರಿಕೊಳ್ಳುತ್ತದೆ ಆಗ ಜೀರ್ಣಾಂಗ ಪ್ರಕ್ರಿಯೆಗೆ ಅಡ್ಡಿಪಡಿಸುವ ಕ್ರಿಯೆಯಾಗಿ ಕಾರ್ಯನಿರ್ವಹಿಸುವುದರಿಂದ ನೀರು ಜೀರ್ಣಕಾರಿ ಉರಿಯನ್ನು ಕಡಿಮೆ ಮಾಡುತ್ತದೆ ಅದು ಜೀರ್ಣಕಾರಿ ರಸಗಳನ್ನ ದುರ್ಬಲಗೊಳಿಸುತ್ತದೆ ಆಗ ತಿಂದಂತಹ ಆಹಾರ ಹಿಂದೆ ಬರುವಂತಹ ಸಾಧ್ಯತೆ ಇರುತ್ತದೆ. ಇದರಿಂದ ಅವರಿಗೆ ಹುಳಿತೇಗು ಬರುತ್ತದೆ ಹಾಗಾಗಿ ನಾವು ಮೊದಲಿಗೆ ಊಟದ ಜೊತೆ ಅಥವಾ ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸ ಇದ್ದರೆ ಅದನ್ನು ನಿಲ್ಲಿಸಬೇಕು. ಊಟಕ್ಕಿಂತ ಅರ್ಧಗಂಟೆ ಮೊದಲು ನೀರು ಕುಡಿಯುವುದು ಒಳ್ಳೆಯದು.
ಇನ್ನು ಹೈಪೋ ಅಸಿಡಿಟಿಯಿಂದ ಕೂಡ ಜಿ ಇ ಆರ್ ಡಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅಂತವರು ಸೇಬು ಹಣ್ಣಿನ ವಿನೇಗರ್ ಸಿಗುತ್ತದೆ ಅದನ್ನು ತಂದು ಒಂದು ಚಮಚ ಸೇಬು ವಿನೆಗರ್ ಅನ್ನು ಒಂದು ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಊಟಕ್ಕಿಂತ ಹದಿನೈದು ನಿಮಿಷ ಮೊದಲು ಕುಡಿಯಬೇಕು. ಇದನ್ನ ಬೆಳಿಗ್ಗೆ ಮಧ್ಯಾಹ್ನ ಸಂಜೆ ಮೂರು ಹೊತ್ತು ಕೂಡ ತೆಗೆದುಕೊಳ್ಳಬಹುದು. ಹೀಗೆ ಮಾಡುವುದರಿಂದ ತಿಂದಂತಹ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗುತ್ತದೆ.
ಜೊತೆಗೆ ಜಿ ಇ ಆರ್ ಡಿ ಬರದಂತೆ ತಡೆಯುವುದಕ್ಕೆ ನೀವು ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸಬೇಕು. ಅಧಿಕ ಚಹಾ ಕಾಫಿ ಮತ್ತು ಕರಿದ ತಿಂಡಿಗಳನ್ನು ಸೇವಿಸಬೇಡಿ ಧೂಮಪಾನ ಮತ್ತು ಅಲ್ಕೋಹಾಲ್ ಅನ್ನ ತ್ಯಜಿಸಬೇಕು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಈ ರೀತಿಯಾಗಿ ನಾವು ತಿಳಿಸಿರುವ ಕ್ರಮಗಳನ್ನು ಅನುಸರಿಸುವುದರಿಂದ ನೀವು ಜಿ ಇ ಆರ್ ಡಿ ಸಮಸ್ಯೆಯಿಂದ ದೂರ ಇರಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.