ನಮ್ಮ ಪ್ರಕೃತಿಯಲ್ಲಿ ಸಿಗುವಂತ ಅದೆಷ್ಟೋ ಸಸ್ಯ ಪ್ರಬೇಧಗಳು ಉತ್ತಮ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿದೆ ಅಷ್ಟೇ ಅಲ್ಲದೆ ನಿಸರ್ಗದಲ್ಲಿ ಸಿಗುವ ಹಲವು ಗಿಡಗಳಿಂದ ಹಲವಾರು ಉಪಯೋಗಗಳು ಇವೆ ಅದರಲ್ಲಿ ನೆಲನೆಲ್ಲಿಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಒಂದು ಗಿಡ ನೆಲನೆಲ್ಲಿಯನ್ನು ಅಥವಾ ಅಂಗಡಿಯಲ್ಲಿ ಸಿಗುವ ಒಣ ನೆಲನೆಲ್ಲಿಯ ದಂಟನ್ನು ತೆಗೆದುಕೊಂಡು ಅದನ್ನು ಕಟ್ ಮಾಡಿ ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಎರಡು ಗ್ಲಾಸ್ ನೀರನ್ನು ಹಾಕಿ ಕುದಿಯಲು ಇಡಬೇಕು ಒಂದು ಲೋಟ ಆಗುವಷ್ಟು ಕುದಿಸಿದ ನಂತರ ಸೋಸಿಕೊಂಡು ಜೋನಿ ಬೆಲ್ಲ ಹಾಕಿಕೊಂಡು ಕುಡಿಯಬೇಕು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೆಚ್ಚು ಉಪಯುಕ್ತ. ಇದು ನಮ್ಮ ದೇಹದಲ್ಲಿ ರಸಾಯನದಂತೆ ಕೆಲಸ ಮಾಡುತ್ತದೆ.
ಹೌದು ರಸಾಯನ ಅಂದ್ರೆ ದೇಹದ ಮುಪ್ಪಿನ ಅವಧಿಯನ್ನು ಮುಂದೂಡುತ್ತದೆ ಯೌವನವನ್ನು ಹೆಚ್ಚಿಸಿಕೊಳ್ಳಬಹುದು. ವೈರಸ್ ಹೆಚ್ಚಾಗಿರುವ ಈ ಸಮಯದಲ್ಲಿ ಪ್ರತಿದಿನ ಕುಡಿಯುವುದರಿಂದ ಉಪಯುಕ್ತವಾಗಿದೆ. ಇದು ಹೆಪಟೈಟಿಸ್ ಬಿ ವೈರಸ್ ನ್ನು ಕೊಲ್ಲುತ್ತದೆ ಎಂದು ಸಂಶೋಧನೆಗಳು ತಿಳಿಸಿದೆ ಹೊರ ದೇಶಗಳಲ್ಲಿ ಹೆಪಟೈಟಿಸ್ ಬಿ ಚಿಕಿತ್ಸೆಗೆ ನೆಲನೆಲ್ಲಿಯನ್ನು ಬಳಸುತ್ತಾರೆ.
ಜೀವ ನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ಇದನ್ನು ಕುಡಿಯುವುದರಿಂದ ದೇಹ ತಂಪಾಗಿ ಯಾವುದೇ ಅಡ್ಡ ಪರಿಣಾಮವಿಲ್ಲ. ಚರ್ಮದ ಸಮಸ್ಯೆ ಮತ್ತು ಮೂತ್ರ ಸರಾಗವಾಗಿ ಆಗಲು ಇದು ಸಹಕಾರಿಯಾಗಿದೆ. ಹಿಂದೆಲ್ಲ ಇದನ್ನು ಅಡುಗೆಯಲ್ಲಿ ಬಳಸುತ್ತಿದ್ದರು ಹಾಗಾಗಿ ಅವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿತ್ತು ಆದರೆ ಈಗ ಅದನ್ನು ಅಡುಗೆಗೆ ಬಳಸುತ್ತಿಲ್ಲ. ವೈರಸ್ ಹೆಚ್ಚಾಗುತ್ತಿರುವುದರಿಂದ ನೆಲನೆಲ್ಲಿಯನ್ನು ಹೆಚ್ಚು ಬೆಳೆಸಿ ಮತ್ತು ಬಳಸಿ. ಇದನ್ನು ಸದಾಕಾಲ ಬಳಸುತ್ತಿರಬೇಕು.
ಅಷ್ಟೇ ಅಲ್ಲದೆ ಕುಡಿತದ ಛಟವನ್ನು ಹೊಂದಿರುವವರು ಕುಡಿತ ಬಿಟ್ಟು ನೆಲನೆಲ್ಲಿ ಕಷಾಯ ಕುಡಿಯುವುದರಿಂದ ಲಿವರ್ ಡ್ಯಾಮೇಜ್ ಆಗಿದ್ದರೂ ಸಹಜ ಸ್ಥಿತಿಗೆ ಬರುತ್ತದೆ. ಡ್ರೈ ಸ್ಕಿನ್ ಇರುವವರು ಇದರ ಕಷಾಯದೊಂದಿಗೆ ತುಪ್ಪ ಅಥವಾ ಹಾಲನ್ನು ಕುಡಿಯಬೇಕು. ಇದು ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಕಂಡುಬರುತ್ತದೆ ಮನೆಯಲ್ಲಿಯೇ ಬೆಳೆಸಿಕೊಳ್ಳಬಹುದು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ನೆಲನೆಲ್ಲಿಯನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳಿರಿ.