WhatsApp Group Join Now
Telegram Group Join Now

ಆತ್ಮೀಯ ಓದುಗರೆ ಮನುಷ್ಯ ಅಂದ ಮೇಲೆ ಒಂದಲ್ಲ ಒಂದು ಶಾರೀರಿಕ ಸಮಸ್ಯೆ ಕಾಡುತ್ತಲೇ ಇರುತ್ತದೆ ಆದ್ರೆ ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಆದ್ರೆ ಅದಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳುವುದು ಉತ್ತಮ. ಬನ್ನಿ ಈ ಮೂಲಕ ಕಣ್ಣಿನ ಸುತ್ತಲೂ ಆಗಿರುವಂತ ಈ ಕಪ್ಪು ನಿವಾರಣೆಗೆ ಪರಿಹಾರ ಹೇಗೆ ಕಂಡುಕೊಳ್ಳುವುದು ಅನ್ನೋದನ್ನ ತಿಳಿಯೋಣ.

ಕಣ್ಣಿನ ಕೆಲ ಭಾಗದಲ್ಲಿ ಈ ಕಪ್ಪು ಯಾವ ಕಾರಣಕ್ಕೆ ಆಗುತ್ತದೆ ಅನ್ನೋದನ್ನ ನೋಡುವುದಾದರೆ ಸರಿಯಾಗಿ ನಿದ್ರೆ ಮಾಡಿಲ್ಲ ಅಂದ್ರೆ ಅಥವಾ ವಿಟಮಿನ್ ಗಾಲ ಕೊರತೆ ಹಾಗೂ ಹೆಚ್ಚು ಬಿಸಿಲಿನ ತಾಪದಿಂದಲೂ ಕೂಡ ಆಗಬಹುದು. ಮನೆಮದ್ದು:ಹಸಿ ಆಲೂಗಡ್ಡೆಯ ರಸವನ್ನು ತೆಗೆದುಕೊಂಡು ಪ್ರತಿದಿನ ಕಣ್ಣಿನ ಕೆಳಭಾಗಕ್ಕೆ ಹಚ್ಚಿ ಮಸಾಜ್ ಮಾಡಿ ವಾಷ್ ಮಾಡುವುದರಿಂದ ಕಣ್ಣಿನ ಕೆಳಗೆ ಕಪ್ಪಾಗುವುದು ಕಡಿಮೆಯಾಗುತ್ತದೆ. ಅಲ್ಲದೇ ಸ್ವಲ್ಪ ಬಾದಾಮಿ ಎಣ್ಣೆ, ಸ್ವಲ್ಪ ತೆಂಗಿನ ಎಣ್ಣೆ, ಸ್ವಲ್ಪ ಆಲೋವೆರಾ ಜಲ್, ವಿಟಮಿನ್ ಇ ಕ್ಯಾಪ್ಸೂಲ್ ಒಳಗಿರುವ ಜಲ್ ಮಿಕ್ಸ್ ಮಾಡಿ ಜಲ್ ರೀತಿಯಲ್ಲಿ ಮಲಗುವ ಮುನ್ನ ಕಣ್ಣಿನ ಕೆಳಗೆ ಹಚ್ಚಿಕೊಳ್ಳಬೇಕು ಇದರಿಂದ ಕಣ್ಣಿನ ಕೆಳಭಾಗ ಕಪ್ಪಾಗಿರುವುದು ಕಡಿಮೆಯಾಗುತ್ತದೆ ಮತ್ತು ಕಣ್ಣಿನ ಆರೋಗ್ಯ ಹೆಚ್ಚಾಗುತ್ತದೆ.

2 ನೇ ಮನೆಮದ್ದು: ಎರಡು ಸ್ಪೂನ್ ಕಾಫಿ ಪೌಡರ್, ಜೇನುತುಪ್ಪ, ಹಸಿ ಆಲೂಗಡ್ಡೆ ರಸ ಮೂರನ್ನು ಸೇರಿಸಿ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿ 15-20 ನಿಮಿಷದ ನಂತರ ವಾಷ್ ಮಾಡಬೇಕು. ಪ್ಯಾಕ್ ಮಾಡಿಕೊಂಡಾಗ ಶವಾಸನದಲ್ಲಿ ವಿಶ್ರಾಂತಿ ಪಡೆಯಬೇಕು ಇದರಿಂದ ಕಣ್ಣಿನ ಕೆಳಗೆ ಕಪ್ಪಾಗಿರುವುದು ಕಡಿಮೆಯಾಗುತ್ತದೆ ಮತ್ತು ಮುಖದ ಕಾಂತಿ ಹೆಚ್ಚುತ್ತದೆ. ಸುಲಭವಾಗಿ ಮಾಡಬಹುದಾದ ಮನೆ ಮದ್ದನ್ನು ಮಾಡಿಕೊಂಡು ಕಣ್ಣಿನ ಕೆಳಗೆ ಆಗುವ ಕಪ್ಪನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ಯಾವುದು ಹೆಚ್ಚಿನ ಹಣ ಖರ್ಚಾಗುವುದಿಲ್ಲ ಹಣ ಹಾಗು ಸಮಯ ಉಳಿಸುವ ಜೊತೆಗೆ ಒಳ್ಳೆಯ ತ್ವಚೆಯ ಅರೋಗ್ಯ ವೃದ್ಧಿಸಿಕೊಳ್ಳಬಹುದು

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: