ಜೀರಿಗೆಯ ಪ್ರಯೋಜನವನ್ನು ತಿಳಿದರೆ ನೀವು ಕೂಡ ಆಶ್ಚರ್ಯ ಚಕಿತರಾಗುತ್ತಿರಿ.
ನಾವು ಕೇವಲ ಜೀರಿಗೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾತ್ರ ಸಹಕರಿಸುತ್ತದೆ ಅಂತ ನಂಬಿದ್ದೇವೆ. ಆದರೆ ಭೂಲೋಕದ ಅಮೃತ ದಂತಿರುವ ಈ ಜೀರಿಗೆಯನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಈ ಜೀರಿಗೆ ಕಾಳುಗಳಲ್ಲಿ ನೈಸರ್ಗಿಕದತ್ತವಾದ ಅಗಾಧವಾದ ಔಷಧೀಯ ಗುಣ ಅಡಗಿರುವ ಕಾರಣ ಇದನ್ನು ಭೂಲೋಕದ ಅಮೃತ ಅಂತ ಕರೆದರೆ ತಪ್ಪಾಗಲಾರದು. ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿಕೊಡುವಂತಹ ಈ ಜೀರಿಗೆಯನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಬಳಸಿಕೊಳ್ಳುವುದರಿಂದ ಬಹಳಷ್ಟು ಪ್ರಯೋಜನವಿದೆ. ಜೊತೆಗೆ ಇದು ಆರೋಗ್ಯವನ್ನು ಸ್ಥಿರವಾಗಿ ಇಡಲು ಸಹಕರಿಸುತ್ತದೆ. ಈ ಜೀರಿಗೆ ಕಾಳುಗಳು ಜೀರ್ಣ ಶಕ್ತಿಯಿಂದ ಹಿಡಿದು ದೇಹದ ತೂಕ ಕಡಿಮೆ ಮಾಡಲು ನೆರವಾಗುತ್ತದೆ.
ಭಾರತೀಯ ಅಡುಗೆ ಪದ್ಧತಿಯಲ್ಲಿ ಜೀರಿಗೆಗೆ ಪ್ರಮುಖ ಸ್ಥಾನವಿದೆ. ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಜೀರಿಗೆ ಪಾತ್ರ ದೊಡ್ಡದು. ಅನಾದಿಕಾಲದಿಂದಲೂ ಸಾಂಪ್ರದಾಯಿಕ ಔಷಧವಾಗಿ ಜೀರಿಗೆ ಬಳಕೆಯಲ್ಲಿದೆ. ಜೀರ್ಣಕ್ರಿಯೆಯನ್ನು ಉತ್ತಮಪಡಿಸುವ ಜತೆಗೆ ಆಹಾರದಿಂದ ಹರಡುವ ಸೋಂಕನ್ನು ತಡೆಯಲು ಜೀರಿಗೆ ನೆರವಾಗುತ್ತದೆ. ಸಂಶೋಧನೆಯಲ್ಲಿಯೂ ಜೀರಿಗೆಯಲ್ಲಿ ಆರೋಗ್ಯ ಗುಣಗಳು ಸಾಬೀತಾಗಿದೆ. ಜೀರಿಗೆಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ ಹಾಗೂ ಕೊಲೆಸ್ಟ್ರಾಲ ಮಟ್ಟವನ್ನೂ ಸುಧಾರಿಸುತ್ತದೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಹೀಗಾಗಿ ಜೀರಿಗೆ ದೇಹದ ಸಂಪೂರ್ಣ ಆರೋಗ್ಯಕ್ಕೆ ಉತ್ತಮ ಎನ್ನಬಹುದು.
ಜೊತೆಗೆ ಜೀರಿಗೆಯು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.
ಅಜೀರ್ಣ ಸಮಸ್ಯೆಗೆ ಜೀರಿಗೆ ರಾಮಬಾಣವಾಗಿದೆ. ಆಧುನಿಕ ಸಂಶೋಧನೆಯಲ್ಲಿಯೂ ಜೀರಿಗೆ ಚಯಾಪಯ ಕ್ರಿಯೆಯನ್ನು ಉತ್ತಮಪಡಿಸುತ್ತದೆ ಎಂದು ಸಾಬೀತಾಗಿದೆ. ಜೀರಿಗೆ ಪಿತ್ತಜನಕಾಂಗದಿಂದ ಬಿಡುಗಡೆಯಾಗುವ ಪಿತ್ತರಸವನ್ನು ಹೆಚ್ಚಿಸುತ್ತದೆ. ಇದು ಕರುಳಿನಲ್ಲಿರುವ ಕೊಬ್ಬು ಮತ್ತು ಕೆಲವು ಅನಗತ್ಯ ಪೋಷಕಾಂಶಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೀರಿಗೆಯಲ್ಲಿ ಯಥೇಚ್ಛವಾದ ಕಬ್ಬಿಣದ ಅಂಶವಿದೆ. ಒಂದು ಚಮಚ ಜೀರಿಗೆಯಲ್ಲಿ ಸುಮಾರು 1.4 ಮಿಗ್ರಾಂ ಕಬ್ಭಿಣದ ಅಂಶವನ್ನು ಹೊಂದಿರುತ್ತದೆ ಎನ್ನುತ್ತಾರೆ ತಜ್ಞರು. ಮಹಿಳೆಯರ ಮುಟ್ಟಿನ ಸಮಸ್ಯೆಗೆ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಬ್ಬಿಣದ ಅಂಶ ಅತಿ ಮುಖ್ಯವಾಗಿದೆ. ಅದು ಜೀರಿಗೆಯಿಂದ ದೊರಕುತ್ತದೆ.
ಜೀರಿಗೆಯಲ್ಲಿನ ಕೆಲವು ಅಂಶಗಳು ಮಧುಮೇಹ ನಿಯಂತ್ರಣಕ್ಕೆ ನೆರವಾಗುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಮಧುಮೇಹವನ್ನು ಒಂದ ಹಂತದವರೆಗೆ ನಿಯಂತ್ರಣದಲ್ಲಿಡಲು ಜೀರಿಗೆ ಸಹಾಯಕವಾಗಿದೆ. ಹೀಗಾಗಿ ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ಯಾವುದೇ ರೀತಿಯಲ್ಲಿ ಜೀರಿಗೆಗಳ ಸೇವನೆ ಒಳ್ಳೆಯದು. ಹಾಗೂ ದಿನನಿತ್ಯ ಜೀರಿಗೆ ಕಾಳಿನ ನೀರನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ನಮ್ಮದಾಗಿಸಿ ಕೊಳ್ಳಬಹುದು. ಸಕ್ಕರೆ ಖಾಯಿಲೆಯಿಂದಬಳಲುತ್ತಿದ್ದರು ನಿಯಂತ್ರಣಕ್ಕೆ ತರಬಹುದಾಗಿದೆ.
ಹೀಗೆ ಜೀರಿಗೆಯನ್ನು ಆ ಸಮಸ್ಯೆಗೆ ತಕ್ಕ ಹಾಗೆ ಬಳಸಿಕೊಳ್ಳುವುದರಿಂದ ಒಳ್ಳೆಯ ಫಲಿತಾಂಶವನ್ನು ನೀಡುವುದರಲ್ಲಿ ಸಂಶಯವೇ ಇಲ್ಲ. ನೀವು ಕೂಡ ಜೀರಿಗೆಯನ್ನ ಇನ್ನು ಮುಂದೆ ಯಾವುದಾದರೂ ರೂಪದಲ್ಲಿ ಸೇವಿಸುತ್ತಾ ಬನ್ನಿ. ಇದು ಹೇಗಾದರೂ ನಿಮ್ಮ ಆರೋಗ್ಯವನ್ನು ವೃದ್ಧಿ ಮಾಡುತ್ತದೆ. ಇಂದಿನ ಮಾಹಿತಿ ಉಪಯುಕ್ತವಾಗಿದೆ ಅಂದಲ್ಲಿ ನಿಮ್ಮ ಅನಿಸಿಕೆಯನ್ನ ನಮಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಬೇರೆಯವರಿಗೂ ಶೇರ್ ಮಾಡಿ ಧನ್ಯವಾದಗಳು.