ಸೇನೆಗೆ ಸೇರಿದ ಸೈನಿಕರಲ್ಲಿ ಹಲವರು ದುರಂತಗಳಲ್ಲಿ ತಮ್ಮ ಪ್ರಾಣವನ್ನು ಬಲಿ ಕೊಡುತ್ತಾರೆ ಅವರ ಸಾವು ಅವರ ಕುಟುಂಬಕ್ಕೆ ಭರಿಸಲಾಗದ ನೋವನ್ನು ತರುತ್ತದೆ. ಸೇನೆಯ ಮೇಜರ್ ವೀರಮರಣ ಹೊಂದಿದ ನಂತರ ಅವರ ಪತ್ನಿ ಸೇನೆಗೆ ಸೇರಿರುವ ನಿದರ್ಶನವನ್ನು ನೋಡಬಹುದು. ಹಾಗಾದರೆ ಅವರು ಯಾರು, ಅವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ನಿತಿಕಾ ಕೌಲ್ ಅವರ ಪತಿ ವಿಭೂತಿಶಂಕರ್ ದೌಂಡಿಯಾಲ್ ಎಲ್ಲರನ್ನೂ ಬೆಚ್ಚಿಬೀಳಿಸುವ 2019ರ ಪುಲ್ವಾಮಾ ಧಾಳಿಯಲ್ಲಿ ಹುತಾತ್ಮರಾಗಿದ್ದಾರೆ. ವಿಭೂತಿ ಶಂಕರ್ ದೌಂಡಿಯಾಲ್ ಅವರು ಸೇನೆಯಲ್ಲಿ ಮೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಚೆನ್ನೈನಲ್ಲಿರುವ ಆಫಿಸರ್ಸ್ ಅಕಾಡೆಮಿಯಲ್ಲಿ ನಿತಿಕಾ ಕೌಲ್ ತರಭೇತಿ ಪಡೆದಿದ್ದಾರೆ. ಇದೀಗ ನಿತಿಕಾ ಕೌಲ್ ಅವರು ಸಹ ಮೇಜರ್ ಆಗಿ ನಿಷ್ಠೆಯಿಂದ ದೇಶ ಸೇವೆ ಮಾಡುವ ಪ್ರತಿಜ್ಞೆ ಮಾಡಿದರು. ನಿತಿಕಾ ಅವರು ತಮ್ಮ ಪತಿ ದೇಶ ಸೇವೆಯಲ್ಲಿ ಸದಾ ತಮ್ಮೊಂದಿಗೆ ಇರುತ್ತಾರೆ ಎಂದು ಹೇಳುತ್ತಾರೆ.
ಸೇನೆಗೆ ಸೇರಿದ ನಿತಿಕಾ ಕೌಲ್ ಅವರು ಮಹಿಳೆಯರು ಯಾವುದೆ ಸಮಸ್ಯೆಯನ್ನು ಧೈರ್ಯದಿಂದ ಎದುರಿಸಬೇಕು, ಸಮಯ ಹೇಗಿರುತ್ತದೆ ಎಂದು ಹೇಳಲು ಆಗುವುದಿಲ್ಲ ಎಂದು ಹೇಳುತ್ತಾರೆ. ನಿತಿಕಾ ಕೌಲ್ ಅವರು ಎಕ್ಸಾಮ್ ಬರೆದು ಟ್ರೇನಿಂಗ್ ಪಡೆದು ಸೇನೆಗೆ ಸೇರಿಕೊಂಡು ದೇಶ ಸೇವೆಗೆ ಸಿದ್ಧರಾಗಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ನಿತಿಕಾ ಕೌಲ್ ಅವರು ತಮ್ಮ ಪತಿ ಸೇನೆಗೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ ಅವರಂತೆ ತಾವು ದೇಶಕ್ಕಾಗಿ ಸೇವೆ ಸಲ್ಲಿಸುವ ನಿರ್ಧಾರ ಮಾಡಿದ್ದಾರೆ.
ಹೆಣ್ಣುಮಕ್ಕಳು ಎಲ್ಲಾ ರಂಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ ಇದೀಗ ನಿತಿಕಾ ಕೌಲ್ ಸೇನೆಗೆ ಸೇರಲು ನಿರ್ಧಾರ ಮಾಡಿರುವುದು ಒಳ್ಳೆಯ ವಿಚಾರವಾಗಿದೆ. ನಿತಿಕಾ ಕೌಲ್ ಅವರು ಉತ್ತಮ ರೀತಿಯಲ್ಲಿ ದೇಶ ಸೇವೆ ಮಾಡಲಿ ದೇವರು ಅವರಿಗೆ ಶಕ್ತಿ ಕೊಡಲಿ ಎಂದು ಆಶಿಸೋಣ.