ಗಂಟಲಿನಲ್ಲಿ ಕಿರಿಕಿರಿ ಹಾಗೂ ಕೆಮ್ಮು ಸಾಮಾನ್ಯವಾಗಿ ಎಲ್ಲರಿಗೂ ಆಗುತ್ತದೆ. ಕೆಲವರಿಗೆ ಕೆಲವು ರೀತಿಯ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ ಕೆಮ್ಮು ಅಥವಾ ಗಂಟಲಿನಲ್ಲಿ ಕಿರಿಕಿರಿ ಉಂಟಾಗುತ್ತದೆ. ಅಂದರೆ ಹೆಚ್ಚಾಗಿ ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಕೆಮ್ಮು ಉಂಟಾಗುತ್ತದೆ. ಹಾಗೆಯೇ ಗಂಟಲಿನಲ್ಲಿ ಕಿರಿಕಿರಿ ಸಹ ಉಂಟಾಗುತ್ತದೆ. ಆದ್ದರಿಂದ ನಾವು ಇಲ್ಲಿ ಗಂಟಲಿನಲ್ಲಿ ಕಿರಿಕಿರಿ ಮತ್ತು ಕೆಮ್ಮಿಗೆ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಆದಷ್ಟು ಯಾವುದೇ ಸಣ್ಣ ಪುಟ್ಟ ಆರೋಗ್ಯದ ತೊಂದರೆ ಉಂಟಾದರೆ ಮನೆಮದ್ದನ್ನೇ ಮಾಡಬೇಕು. ಏಕೆಂದರೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳು ದೇಹಕ್ಕೆ ಉಂಟಾಗುವುದಿಲ್ಲ. ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಹಾಕಿ ಬಾಯಿ ಮುಕ್ಕಳಿಸಬೇಕು. ನಂತರದಲ್ಲಿ ಜೇನುತುಪ್ಪಕ್ಕೆ ಚಿಟಿಕೆ ಕರಿಮೆಣಸಿನ ಪುಡಿಯನ್ನು ಹಾಕಿ ತಿನ್ನಬೇಕು. ಇದರಿಂದ ಗಂಟಲಿನಲ್ಲಿ ಕಿರಿಕಿರಿ ಇದ್ದರೆ ಕಡಿಮೆ ಆಗುತ್ತದೆ. ಕರಿ ಮೆಣಸಿನ ಪುಡಿ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದಕ್ಕೆ ಹಲವಾರು ಸಾಮಗ್ರಿಗಳು ಬೇಕಾಗುತ್ತದೆ.
ಹಾಗೆಯೇ ಎಲ್ಲವೂ ಮನೆಯಲ್ಲೇ ಇರುತ್ತದೆ. ಆದ್ದರಿಂದ ಯಾವುದನ್ನು ವಿಶೇಷವಾಗಿ ತರುವ ಅವಶ್ಯಕತೆ ಉಳಿಯುವುದಿಲ್ಲ. ಮೊದಲು ಎರಡು ವೀಲ್ಯೆದೆಲೆಯನ್ನು ತೆಗೆದುಕೊಳ್ಳಬೇಕು. ನಂತರದಲ್ಲಿ ಅದಕ್ಕೆ ಎರಡು ಕಾಳುಮೆಣಸನ್ನು ಬಳಸಬೇಕು. ಹಾಗೆಯೇ ಎರಡು ಎಸಳು ಬೆಳ್ಳುಳ್ಳಿ ಹಾಕಬೇಕು. ಒಂದು ಚೂರು ಶುಂಠಿಯನ್ನು ತೆಗೆದುಕೊಳ್ಳಬೇಕು. ಇದನ್ನು ಸಿಪ್ಪೆ ತೆಗೆದು ಕಾಲು ಇಂಚಿನಷ್ಟು ಹಾಕಬೇಕು. ಅದಕ್ಕೆ ಒಂದು ಕಾಲು ಇಂಚಿನಷ್ಟು ಬೆಲ್ಲವನ್ನು ಹಾಕಬೇಕು. ಕೊನೆಯದಾಗಿ ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿಯ ಚೂರುಗಳನ್ನು ಸ್ವಲ್ಪ ಹಾಕಬೇಕು.
ಕೊನೆಯದಾಗಿ ಒಂದು ಚೂರು ಉಪ್ಪನ್ನು ಹಾಕಬೇಕು.
ಇವುಗಳನ್ನು ಕೊನೆಯದಾಗಿ ಕವಳದ ಹಾಗೆ ಮಾಡಚಬೇಕು. ಇದನ್ನು ಬಾಯಿಗೆ ಹಾಕಿ ರಸವನ್ನು ನುಂಗುತ್ತಾ ಹೋಗಬೇಕು. ಹಾಗೆಯೇ ಇನ್ನೊಂದು ಮನೆಮದ್ದು ಎಂದರೆ ಮೊದಲು ಈರುಳ್ಳಿಯನ್ನು ತುರಿದುಕೊಳ್ಳಬೇಕು. ನನಂತರ ಶುಂಠಿಯನ್ನು ಜಜ್ಜಿ ಹಾಕಬೇಕು. ಅದಕ್ಕೆ ಸ್ವಲ್ಪ ನೀರನ್ನು ಹಾಕಬೇಕು. ಇಡಕ್ಕೆ ಕಾಲುಮೆಣಸನ್ನು ಪುಡಿ ಮಾಡಿ ಹಾಕಬೇಕು. ಇದನ್ನು ಸ್ವಲ್ಪ ಹೊತ್ತು ಚೆನ್ನಾಗಿ ಕುದಿಸಬೇಕು. ಕುದಿಸುವಾಗ ಸ್ವಲ್ಪ ಬೆಲ್ಲ ಹಾಕಬೇಕು. ನಂತರದಲ್ಲಿ ಅದು ಚೆನ್ನಾಗಿ ಕುದ್ದಿದ ಮೇಲೆ ಒಂದು ಲೋಟಕ್ಕೆ ಹಾಕಿ ಸೋಸಿಕೊಂಡು ಕುಡಿಯಬೇಕು.