ಕೆಲವೊಮ್ಮೆ ವಾತಾವರಣದ ಬದಲಾವಣೆ ಯಿಂದ ಕೆಮ್ಮು ಕಫ ಕಂಡು ಬರುತ್ತದೆ ಹಾಗೆಯೇಕೆಮ್ಮು ಕಫ ಬಂದಾಗ ಎಲ್ಲರೂ ಆಸ್ಪತ್ರೆ ಯ ಕಡೆಗೆ ಮುಖಮಾಡುವರೆ ಹೆಚ್ಚು ಇರುತ್ತಾರೆ ಅಡುಗೆ ಮನೆಯಲ್ಲಿ ಇರುವ ಕೆಲವು ಪದಾರ್ಥಗಳನ್ನು ಬಳಸುವುದರಿಂದ ಕೆಮ್ಮು ಕಫ ಅಂತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಗಂಟಲಿನಲ್ಲಿ ಕೆರೆತ ಅಥವಾ ಕಿರಿಕಿರಿ ಉಂಟಾಗುತ್ತಿದೆ ಎಂದರೆ ಕೆಮ್ಮು ಪ್ರಾರಂಭವಾಗುವುದು ಎನ್ನುವುದನ್ನು ಅಂದಾಜಿಸಬಹುದು.
ಕೆಮ್ಮು ಅನೇಕ ರೋಗಗಳಲ್ಲಿ ಕಾಣಿಸಿಕೊಳ್ಳುತ್ತದೆ ನೆಗಡಿ ಗಂಟಲುನೋವು ಎದೆಯ ಕ್ಷಯ ನ್ಯುಮೋನಿಯ ದಡಾರ ಸಿಡುಬು ನಾಯಿ ಕೆಮ್ಮು ಪ್ಲೂರಸಿ ಬ್ರಾಂಕೈಟಿಸ್ ಬ್ರಾಂಕಿಯೆಕ್ಟೇಸಿಸ್ ಮುಂತಾದವು. ಸಾಮಾನ್ಯವಾಗಿ ಕೆಮ್ಮಿನ ಲಕ್ಷಣಗಳನ್ನು ಗಮನಿಸಿ ಕಾಯಿಲೆಯ ಸ್ವರೂಪವನ್ನು ನಿರ್ಧರಿಸಬಹುದು ನಾವು ಈ ಲೇಖನದ ಮೂಲಕ ಕೆಮ್ಮು ಮತ್ತು ಕಫವನ್ನು ಬಗೆಹರಿಸಿಕೊಳ್ಳುವ ಮನೆಮದ್ದಿನ ಬಗ್ಗೆ ತಿಳಿದುಕೊಳ್ಳೋಣ.
ತುಂಬಾ ಕೆಮ್ಮು ಮತ್ತು ಕಫ ಇದ್ದಾಗ ನಾವು ಮನೆಯಲ್ಲಿ ಇರುವ ಸಾಮಗ್ರಿಗಳನ್ನು ಬಳಸಿ ಕಡಿಮೆ ಮಾಡಿಕೊಳ್ಳಬಹುದು ಕೆಮ್ಮು ಕಫ ಕಡಿಮೆ ಮಾಡಲು ಒಂದು ದೊಡ್ಡದಾದ ವೀಳ್ಯದೆಲೆ ಹಾಗೆಯೇ ದೊಡ್ಡಪತ್ರೆ ಎಲೆ ಹಾಗೂ ತುಳಸಿ ಬೇಕಾಗುತ್ತದೆ ಬೆಳ್ಳುಳ್ಳಿ ಎಸಳು ಬೇಕಾಗುತ್ತದೆ ಹಾಗೆಯೇ ಮೆಣಸಿನ ಕಾಳು ಹಾಗೂ ಕಲ್ಲು ಉಪ್ಪು ಬೇಕಾಗುತ್ತದೆ.
ಮೊದಲು ವೀಳ್ಯದೆಲೆಯ ತೊಟ್ಟು ಮತ್ತು ತುದಿಯನ್ನು ಕಟ್ಟು ಮಾಡಿಕೊಳ್ಳಬೇಕು ವೀಳ್ಯದೆಲೆಯ ಮಧ್ಯ ಭಾಗದಲ್ಲಿ ದೊಡ್ಡಪತ್ರೆ ಎಲೆಯನ್ನು ಇಡಬೇಕು ದೊಡ್ಡಪತ್ರೆ ಎಲೆಯ ಮೇಲೆ ಒಂದು ತುಳಸಿ ಹಾಗೆಯೇ ಒಂದು ಎಸಳು ಬೆಳ್ಳುಳ್ಳಿ ಹಾಕಬೇಕು ಹಾಗೆಯೇ ಒಂದು ಕಾಳು ಮೆಣಸಿನ ಕಾಳು ಮತ್ತು ಒಂದು ಕಲ್ಲು ಉಪ್ಪು ನಂತರ ವೀಳ್ಯದೆಲೆಯನ್ನು ಫೋಲ್ಡ್ ಮಾಡಬೇಕು .
ಎಲ್ಲಿಯೂ ಸಹ ಹಾಕಿರುವ ಪದಾರ್ಥ ಹೊರಗೆ ಬೀಳದ ಹಾಗೆ ನಂತರ ಫೋರ್ಕ್ ಅಥವಾ ಕಡ್ಡಿಯ ಸಹಾಯದಿಂದ ಚುಚ್ಚಿ ನಂತರ ಎರಡು ನಿಮಿಷ ಬಿಸಿ ಮಾಡಬೇಕು ನಂತರ ಪೂರ್ತಿ ತಣ್ಣಗಾಗಲು ಬಿಡಬೇಕು ನಂತರ ತಿನ್ನಬೇಕು ಈ ರೀತಿ ಮೂರು ದಿನಗಳ ಕಾಲ ತಿನ್ನಬೇಕು ಇದರಿಂದ ಕೆಮ್ಮು ಕಫ ನಿವಾರಣೆ ಆಗುತ್ತದೆ
ಚಿಕ್ಕ ಮಕ್ಕಳಿಗೆ ರಸ ತೆಗೆದು ಕುಡಿಸುದರಿಂದ ಕೆಮ್ಮು ಕಫ ನಿವಾರಣೆ ಆಗುತ್ತದೆ ಇದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇರುವುದಿಲ್ಲ ಹೀಗೆ ಮಾಡುವ ಮೂಲಕ ಮನೆಯಲ್ಲಿನ ಪದಾರ್ಥಗಳನ್ನು ಬಳಸಿ ಕೆಮ್ಮು ಕಫವನ್ನು ನಿವಾರಣೆ ಮಾಡಬಹುದು.ಮನೆ ಮದ್ದನ್ನು ಬಳಸಿ ಆದಷ್ಟು ಬೇಗ ಕೆಮ್ಮನ್ನು ನಿವಾರಣೆ ಮಾಡಿಕೊಳ್ಳಬಹುದು ಯಾಕೆಂದರೆ ಕೆಮ್ಮು ವಿಪರೀತವಾದರೆ ಗಂಟಲು ನೋವು ಹೊಟ್ಟೆ ನೋವು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ .