WhatsApp Group Join Now
Telegram Group Join Now

ಗ್ರಾಮಾಂತರ ಪ್ರದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಮಹತ್ವದ ಪಾತ್ರವಹಿಸುತ್ತದೆ. ಕುರಿಯನ್ನು ಬಡವರ ಸಣ್ಣ ಮತ್ತು ಅತಿ ಸಣ್ಣ ರೈತರ ಕಿರುಕಾಮಧೇನು ಎಂದು ಕರೆಯಬಹುದು. ಉಣ್ಣೆ, ಮಾಂಸ, ಚರ್ಮ, ಗೊಬ್ಬರ ಇತ್ಯಾದಿ ಉಪಯುಕ್ತ ವಸ್ತುಗಳಿಂದ ದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಉತ್ತಮ ಪಾತ್ರವನ್ನು ವಹಿಸಿದೆ. ಕುರಿ ಸಾಕಾಣಿಕೆ ಸಣ್ಣ, ಅತಿ ಸಣ್ಣ ರೈತರ ಮತ್ತು ಕೃಷಿ ಕಾರ್ಮಿಕರ ಮುಖ್ಯ ಕಸುಬಾಗಿದೆ. ನಮ್ಮ ರಾಜ್ಯದಲ್ಲಿ ಕುರಿಗಳನ್ನು ಮುಖ್ಯವಾಗಿ ಮಾಂಸ, ಉಣ್ಣೆ, ಚರ್ಮ ಮತ್ತು ಗೊಬ್ಬರಗಳಿಗಾಗಿ ಸಾಕುತ್ತಾರೆ. ಕುರಿ ಸಾಕಾಣಿಕೆ ಸುಲಭ ಹಾಗೂ ಲಾಭದಾಯಕ. ಕುರಿಗಳು ಎಂತಹ ಸಂಕಷ್ಟ ಸಮಯದಲ್ಲೂ ಬದುಕಿ ಉಳಿಯಬಲ್ಲವು. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕುರಿಗಳಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಆಧುನಿಕ ತಂತ್ರಜ್ಞಾನ, ಮೇವು ವಿಜ್ಞಾನ ಹಾಗೂ ತಳಿಯ ಅಭಿವೃದ್ಧಿ ಜ್ಞಾನವನ್ನು ಅಳವಡಿಸಿ ಕುರಿಗಳನ್ನು ಸಾಕಿದರೆ ಹೆಚ್ಚಿನ ಲಾಭ ಗಳಿಸಬಹುದು. ಇಂದು ಕುರಿ ಸಾಕಾಣಿಕೆಯು ಅಲೆಮಾರಿ ಜನರಿಗೆ, ಕೃಷಿ ಕೂಲಿಗಾರರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಎಲ್ಲಾ ವರ್ಗದವರಿಗೆ ಜೀವಂತ ಚಲಿಸುವ ನಿಧಿಗೆ ಸಮಾನವಾಗಿದೆ. ಶಿಕಾರಿಪುರದ ಆದುನಿಕ ತಂತ್ರಜ್ಞಾನವನ್ನು ಬಳಸಿ ಕುರಿ ಮತ್ತು ಕೋಳಿ ಸಾಕಣೆಯನ್ನು ಮಾಡಿದ್ದಾರೆ.

ಇವರು ಮೊದಲನೆಯದಾಗಿ ಎರಡು ಕುರಿಯಿಂದ ಆರಂಭಿಸಿ ಹಂತಹಂತವಾಗಿ ಬಂದ ಲಾಭದಲ್ಲಿಯೇ ಕುರಿಯನ್ನು ಹೆಚ್ಚಿಸುತ್ತಾ ನೂರಕ್ಕೂ ಹೆಚ್ಚು ಟಗರುಗಳನ್ನು ಪ್ರಸ್ತುತವಾಗಿ ಸಾಕಿದ್ದಾರೆ. ಇವರು ಹೇಳುವ ಪ್ರಕಾರ ಕುರಿ ಸಾಕಣೆ ಮಾಡಬಯಸುವವರು ಮೊದಲು ಕುರಿಯನ್ನು ಸರಿಯಾಗಿ ಆಯ್ಕೆ ಮಾಡಿ ಖರೀದಿ ಮಾಡಬೇಕು. ಹೆಚ್ಚಾಗಿ ಮೂರು ತಿಂಗಳ ನಂತರದ ಮರಿಗಳನ್ನು ಖರೀದಿ ಮಾಡಬೇಕು. ಕುರಿಗಳಿಗೆ ಮೇವುಗಳನ್ನು ರಾ ಮಟಿರಿಯಲ್ ಮುಖಾಂತರ ನಾವೆ ತಯಾರಿಸಿ ಕೊಳ್ಳುವುದರಿಂದ ಹೆಚ್ಚಿನ ಹಣ ಉಳಿತಾಯವಾಗುತ್ತದೆ. ಜೋಳದ ಕಡಿಗೆ ಪಾಲಿಶ್ ತವ್ದು, ಗೋದಿ ಭೂಸ, ರವಾ ಬೂಸ, ಸೋಯಾಬಿನ್ ಹಿಂಡಿ ಮಿಕ್ಸ್ ಮಾಡಿ ದಿನಕ್ಕೆ 2 ಬಾರಿ ನೀಡುವುದರಿಂದ ಕುರಿಗಳು ದಷ್ಟ ಪುಷ್ಟವಾಗಿ ಬೆಳೆಯುತ್ತದೆ.

ಅದರಂತೆಯೇ ನಾಟಿ ಕೋಳಿ. ಗಿರಿಧರ್ ಕೋಳಿಗಳನ್ನು ಕೂಡ ಸಾಕಿದ್ದಾರೆ. ಇದರಿಂದಲೂ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಕೋಳಿಗಳಿಂದ ಮೊಟ್ಟೆಗಳು ದೊರಕುತ್ತದೆ. ಜೊತೆಗೆ 3,4 ತಿಂಗಳಿನಲ್ಲಿ 4 ರಿಂದ 5 ಕೆಜಿ ತೂಕದಲ್ಲಿ ಕೋಳಿಯೂ ಬರುತ್ತದೆ. ಇದನ್ನು ವಿವಿಧ ರೀತಿನಲ್ಲಿ ಮಾರಾಟ ಮಾಡಬಹುದು. ಕೋಳಿ ಸಾಕಣೆಯಲ್ಲಿ ಆದಾಯವು ಬಹಳ ಬೇಗನೇ ದೊರಕುತ್ತದೆ. ಕೋಳಿಗಳಿಗೆ ಬರುವ ಕಾಯಿಲೆಗಳಿಗೆ ಔಷಧಗಳು ದೊರಕುವುದರಿಂದ ಆರಾಮವಾಗಿ ಕೋಳಿಗಳನ್ನು ಸಾಕಬಹುದಾಗಿದೆ. ಹೀಗೆ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಇವರು ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: