ಆತ್ಮೀಯ ಓದುಗರೇ ಇಂದಿನ ದಿನಮಾನಗಳಲ್ಲಿ ಹೆಣ್ಣು ಮನಸು ಮಾಡಿದ್ರೆ ನಿಜಕ್ಕೂ ಎನ್ನನ್ನು ಬೇಕಾದ್ರು ಮಾಡಬಲ್ಲ ಶಕ್ತಿವಂತಳಾಗಿದ್ದಾಳೆ. ಇಂದಿನ ಸಮಾಜದಲ್ಲಿ ಒಂಟಿಯಾಗಿರುವ ಹೆಣ್ಣು ಕಂಡರೆ ಬೇರೆಯದ್ದೇ ರೀತಿಯಲ್ಲಿ ನೋಡುವ ಈ ಸಮಾಜದಲ್ಲಿ ಹೇಗೆ ಬದುಕಬೇಕು ಅನ್ನೋದನ್ನ ಪ್ರತಿ ಹೆಣ್ಣು ಮಕ್ಕಳು ನಿಜಕ್ಕೂ ತಿಳಿದುಕೊಳ್ಳಬೇಕು. ವಿಷ್ಯಕ್ಕೆ ಬರೋಣ ಇಲ್ಲಿ ಒಬ್ಬ ಸಾಮಾನ್ಯ ಹೆಣ್ಣು ಮಹಾನಗರಪಾಲಿಕೆಯಲ್ಲಿ ಕಸ ಒಡೆಯುವಂತ ಕೆಲಸ ಮಾಡುತ್ತಿದ್ದಳು, ಆದ್ರೆ ನಂತರ ದಿನಗಳಲ್ಲಿ ತನ್ನ ಶ್ರಮ ಹಾಗೂ ಆಸಕ್ತಿಯಿಂದ ಜಿಲ್ಲಾದಿಕಾರಿಯಾಗುತ್ತಾಳೆ ನಿಜಕ್ಕೂ ಈ ಹೆಣ್ಣು ಯಾರು ಅದು ಹೇಗೆ ಈಕೆಯ ಲೈಫ್ ಸ್ಟೋರಿ ಹೇಗಿತ್ತು ಅನ್ನೋದನ್ನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ
ಪ್ರಿಯ ಬಂಧುಗಳೇ ಈಕೆ ಆಶಾ ಕಂದ್ರ ಎಂಬ ಮಹಿಳೆ ಜೋಧ್ಪುರದಲ್ಲಿ ವಾಸ ಮಾಡುತ್ತಿದ್ದಾರೆ. ಇವರು ತಮ್ಮ ಗಂಡನಿಂದ ವಿಚ್ಛೇದನ ಪಡೆದುಕೊಂಡು ತಮ್ಮ ಇಬ್ಬರು ಮಕ್ಕಳನ್ನು ಸ್ವತಃ ಇವರೇ ನೋಡಿಕೊಳ್ಳುತ್ತಾ ಇದ್ದಾರೆ. ಮಕ್ಕಳನ್ನು ಸಾಕುವುದಕ್ಕೆ ಜೋಧ್ಪುರ ಬಿದಿಯ ಮಹಾನಗರ ಪಾಲಿಕೆಯಲ್ಲಿ ಕಸ ಗುಡಿಸುವ ಕೆಲಸವನ್ನು ಮಾಡುತ್ತಿದ್ದರು ಆಶಾ. ಒಮ್ಮೆ ಆಶಾ ಅವರು ನಿಂತಿರುವುದಕ್ಕೆ ಜಿಲ್ಲಾಧಿಕಾರಿ ಬಂದು ಏಕೆ ಇಲ್ಲಿ ನಿಂತಿದ್ದೀಯಾ ಎಂದು ಅವಮಾನ ಮಾಡಿದ್ದಾರೆ. ಅದರಂತೆಯೇ ಇವರು ಸಾಕಷ್ಟು ಅವಮಾನಗಳನ್ನು ಸಹ ಏದುರಿಸಿದ್ದಾರೆ.
ತಮ್ಮ ಗಂಡನಿಂದ ಹಲವು ವರ್ಷಗಳ ಕಾಲ ದೂರವಿದ್ದ ಕಾರಣ ಮಕ್ಕಳ ಜವಾಬ್ದಾರಿ ಇವರ ಮೇಲೆ ಇರುವುದರಿಂದ ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ ಪದವಿಯನ್ನು ಸಹ ಓದಿ ಮುಗಿಸಿದರು ನಂತರ ನಾಗರಿಕ ಸೇವಾ ಪರೀಕ್ಷೆಯನ್ನು ಬರೆದರು. ಈ ಪರೀಕ್ಷೆಯ ಫಲಿತಾಂಶಗಳು ತಡವಾಗಿ ಬಂದ ಕಾರಣ ಮಕ್ಕಳನ್ನು ಸಾಕುವುದಕ್ಕೆ ಕೆಲಸ ಮಾಡಬೇಕೆಂದು ಮಹಾನಗರ ಪಾಲಿಕೆಯಲ್ಲಿ ಕಸ ಗುಡಿಸುವ ಕೆಲಸವನ್ನು ಮಾಡುತ್ತಿದ್ದರು.
ಸಾಕಷ್ಟು ಅವಮಾನಗಳನ್ನು ಎದುರಿಸಿದ್ದ ಆಶಾ ಅವರು 2 ವರ್ಷ ಆದ ಬಳಿಕ ಅವರ ಜೀವನವೇ ಬದಲಾಯಿತು. ಹೌದು ಸ್ಪರ್ಧಾತ್ಮಕ ಪರೀಕ್ಷೆ ಅನ್ನು ಬರೆದ ಈಕೆ ಅದರಲ್ಲಿ ಉತ್ತೀರ್ಣ ಆದರು. ಈಗ ಅವರು ಉಪ ಸಂಗ್ರಹ ಅಧಿಕಾರಿಯಾಗಿ ನೇಮಕ ಗೊಂಡಿದ್ದಾರೆ. ಇದರಿಂದ ಆಶಾ ಅವರು ತುಂಬಾ ಸಂತಸವಾಗಿದ್ದಾರೆ ಹೌದು ಇವರು ಪಟ್ಟ ಕಷ್ಟಕ್ಕೆ ಪ್ರತಿಫಲ ಸಿಕ್ಕಿತು. ತುಂಬಾ ಅವಮಾನಗಳನ್ನು ಸಹಿಸಿಕೊಂಡು ಬಂದೆ ಆದರೆ ಈಗ ನಾನು ಜಿಲ್ಲಾಧಿಕಾರಿ ಆಗಿರುವುದು ನನಗೆ ತುಂಬಾ ಸಂತೋಷವಾಗುತ್ತ .
ಇದೆ ನನ್ನ ಈ ಸಾಧನೆಗೆ ನನಗೆ ಅವಮಾನ ಮಾಡಿದವರೆ ಕಾರಣ ಎಂದು ತಿಳಿಸಿದ್ದಾರೆ
. ಈ ರೀತಿಯಾಗಿ ಎಲ್ಲಾ ಹೆಣ್ಣು ಮಕ್ಕಳು ಸಹ ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಭವಿಷ್ಯದಲ್ಲಿ ದೊಡ್ಡ ಸ್ಥಾನಕ್ಕೆ ಬರಬೇಕು ಆಗ ಈ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಸಿಗಬೇಕಾಗಿರುವ ಎಲ್ಲಾ ತರದ ಗೌರವವೂ ಕೂಡ ಸಿಗುತ್ತದೆ. ನಿಜಕ್ಕೂ ಈ ಹೆಣ್ಣಿನ ಜೀವನದ ಸ್ಟೋರಿ ಅದೆಷ್ಟೋ ಹೆಣ್ಣುಮಕ್ಕಳಿಗೆ ಸ್ಪೂರ್ತಿ ಆಗೋದ್ರಲ್ಲಿ ಅನುಮಾನವೆಯಿಲ್ಲ ನಿಮಗೆ ಈಕೆಯ ಜೀವನ ಕಥೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಧನ್ಯವಾದಗಳು