ಕಡಿಮೆ ಬಂಡವಾಳದಲ್ಲಿ ಅಧಿಕ ಆಧಾಯ, ರೈತನ ಕೈ ಹಿಡಿದ ನುಗ್ಗೆ ಪೌಡರ್ ಸಂಪೂರ್ಣ ವಿವರ ಇಲ್ಲಿದೆ

0

ನುಗ್ಗೆ ಸೊಪ್ಪನ್ನು ಇಂದಿನ ಔಷಧೀಯ ಉತ್ಪನ್ನಗಳಲ್ಲಿ ಮತ್ತು ಪ್ರಾಣಿಗಳ ಆಹಾರ ಉತ್ಪನ್ನ ಗಳಿಗೆ ಕೂಡ ಹೇರಳವಾಗಿ ಬಳಸಲಾಗುತ್ತಿದೆ ಇಂದು ವಿಶ್ವದಲ್ಲಿ ಅನೇಕ ರಾಷ್ಟ್ರಗಳು ನುಗ್ಗೆ ಮರದ ಎಲೆಗಳನ್ನು ತರಕಾರಿಯ ರೂಪದಲ್ಲಿ ತಮ್ಮ ಪ್ರತಿದಿನದ ಆಹಾರದಲ್ಲಿ ಬಳಸುತ್ತಾರೆ ಅದರಲ್ಲೂ ಆಫ್ರಿಕಾ ದೇಶದಲ್ಲಿ ಹಲವಾರು ಪ್ರದೇಶಗಳಲ್ಲಿನ ಜನರು ಬರಗಾಲದ ದಿನಗಳಲ್ಲಿ ಕೇವಲ ನುಗ್ಗೆ ಸೊಪ್ಪನ್ನು ತಿಂದು ಜೀವಿಸುತ್ತಾರೆ

ಹೀಗೆ ನುಗ್ಗೆ ಸೊಪ್ಪಿನ ಬೇಡಿಕೆ ಜಾಸ್ತಿ ಇರುತ್ತದೆ ನುಗ್ಗೆ ಸೊಪ್ಪಿನಲ್ಲಿ ಯಥೇಚ್ಛವಾದ ಆಂಟಿ ಆಕ್ಸಿಡೆಂಟ್ ಗಳು ವಿಟಮಿನ್ ಸಿ ಜಿಂಕ್ ಮತ್ತು ಇತರ ಸಕ್ರಿಯ ವಸ್ತುಗಳಿಂದ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುವಂತಹ ಫ್ರೀ ರ್ಯಾಡಿಕಲ್ ಗಳ ವಿರುದ್ಧ ಹೋರಾಡಿ ದೇಹದ ಕೋಶಗಳ ಒಳಗೆ ಡಿ ಎನ್ ಎ ಗಳ ನಾಶಕ್ಕೆ ಕಾರಣವಾಗುವುದನ್ನು ತಪ್ಪಿಸುತ್ತದೆ.ನಾವು ಈ ಲೇಖನದ ಮೂಲಕ ನುಗ್ಗೆ ಸೊಪ್ಪಿನ ಬೆಳೆಯ ಬಗ್ಗೆ ತಿಳಿದುಕೊಳ್ಳೋಣ .

ಬಸವರಾಜ್ ಎನ್ನುವರು ನುಗ್ಗೆ ಸೊಪ್ಪಿನ ಗಿಡವನ್ನು ಬೆಳೆಯುತ್ತಿದ್ದಾರೆ ನುಗ್ಗೆ ಸೊಪ್ಪಿನ ಪೌಡರ್ ಅಲ್ಲಿ ದೇಹಕ್ಕೆ ಉಪಯುಕ್ತ ಪೌಷ್ಟಿಕಾಂಶ ಇರುತ್ತದೆ ಹಾಗೆಯೇ ಒಂದು ಕೇಜಿ ನುಗ್ಗೆ ಸೊಪ್ಪಿನ ಪೌಡರ್ ಗೆ ಮುನ್ನೂರ ಐವತ್ತು ರೂಪಾಯಿಯಷ್ಟು ಬೆಲೆ ಇರುತ್ತದೆ ಕೊರಿಯರ್ ಮೂಲಕ ಕಳುಹಿಸಲು ಐವತ್ತು ರೂಪಾಯಿಯಷ್ಟು ಕೊರಿಯರ್ ಚಾರ್ಜ್ ಬರುತ್ತದೆ ಮೂರು ತಿಂಗಳಿಗೇ ಒಮ್ಮೆ ನುಗ್ಗೆ ಸೊಪ್ಪು ಕಟಾವಿಗೆ ಬರುತ್ತದೆ ಅದರ ಹಣ್ಣೆಳೆಯನ್ನು ತೆಗೆದು ಹಸುಗಳಿಗೆ ಹಾಕಬೇಕು

ಎರಡೂವರೆ ಸಾವಿರ ಗಿಡ ಐದು ಎಕರೆ ಜಾಗದಲ್ಲಿ ಬೆಳೆಯಬಹುದು ಒಂದೊಂದು ಗಿಡಕ್ಕೆ ಎರಡು ಪುಟು ಅಷ್ಟು ಅಂತರ ಇರಬೇಕು ಮುಂಚಿತವಾಗಿ ನುಗ್ಗೆ ಎಲೆಗಳನ್ನು ಕೊಯ್ದು ಒಂದು ದಿನ ಬಿಟ್ಟರೆ ನುಗ್ಗೆ ಸೊಪ್ಪು ತಾನಾಗಿಯೇ ಉದುರುತ್ತದೆ ಹಾಗೆಯೇ ದಂಟು ಸಹ ಹಸುಗಳಿಗೆ ಹಾಕಬಹುದು ಕಬ್ಬಿಣಾಂಶ ಹೆಚ್ಚಾಗಿ ಇರುವುದರಿಂದ ಬೀ ಪಿ ಶುಗರ್ ಇರುವರು ಉಪಯೋಗಿಸಬಹುದು ನುಗ್ಗೆಕಾಯಿಗೆ ಎಂದು ಬೆಳೆಸುವ ಗಿಡ ಬೇರೆ ಇರುತ್ತದೆ ಹಾಗೆಯೇ ನುಗ್ಗೆ ಸೊಪ್ಪಿಗೆ ಬೆಳೆಸುವ ಗಿಡ ಬೇರೆ ಇರುತ್ತದೆ.

ನುಗ್ಗೆಕಾಯಿ ಬೆಳೆಯುವ ಗಿಡದಲ್ಲಿ ಸೊಪ್ಪನ್ನು ಕೊಯ್ಯುವುದು ತುಂಬಾ ಕಷ್ಟ ಏಕೆಂದರೆ ನುಗ್ಗೆ ಕಾಯಿ ಬೆಳೆಯುವ ಗಿಡವು ತುಂಬಾ ಎತ್ತರಕ್ಕೆ ಬೆಳೆಯುತ್ತದೆ ಹಾಗೆಯೇ ನುಗ್ಗೆ ಸೊಪ್ಪಿನ ಇಪ್ಪತ್ತು ಗಿಡದಲ್ಲಿ ಒಂದು ಕೇಜಿ ಯಷ್ಟು ನುಗ್ಗೆಸೊಪ್ಪಿನ ಪೌಡರ್ ಅನ್ನು ಮಾಡಬಹುದು ಸಾವಯುವ ಕೃಷಿಯ ಮುಖಾಂತರ ಹೆಚ್ಚಿನ ಲಾಭವನ್ನು ಗಳಿಸಬಹುದು ರಾಸಾಯನಿಕ ಗೊಬ್ಬರ ಬಳಸುವುದಕ್ಕಿಂತ ಸಾವಯುವ ಕೃಷಿ ಯಿಂದ ಅಧಿಕ ಇಳುವರಿ ಮತ್ತು ಮಣ್ಣಿನ ಫಲವತ್ತೆಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ನುಗ್ಗೆ ಸೊಪ್ಪಿನ ಗಿಡಕ್ಕೆ ಗಂಜಲ ಹಾಗೂ ನೀರನ್ನು ಡ್ರಿಪ್ ಪೈಪ್ ಮೂಲಕ ನೀಡಲಾಗುತ್ತದೆ ರಾಸಾಯನಿಕ ಗೊಬ್ಬರ ಇಲ್ಲದೇ ನುಗ್ಗೆ ಸೊಪ್ಪಿನ ಬೆಳೆಯನ್ನು ಬೆಳೆಯಬಹುದು

ನಾಟಿ ಕೋಳಿ ಮೊಟ್ಟೆಗೆ ಕಡಲೆ ಕಾಯಿ ಎಣ್ಣೆಯನ್ನು ಮಿಕ್ಸ್ ಮಾಡಿ ಎಲ್ಲ ಗಿಡಕ್ಕೆ ಹಾಕಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಆಧುನಿಕ ರಾಸಾಯನಿಕ ಗೊಬ್ಬರವನ್ನು ಬಳಸದೆ ಹೆಚ್ಚು ಲಾಭವನ್ನು ಪಡೆಯಬಹುದು ನುಗ್ಗೆ ಸೊಪ್ಪಿನ ಜೊತೆಗೆ ಬೇರೆ ಬೆಳೆಯನ್ನು ಬೆಳೆಯುವ ಮೂಲಕ ಹೆಚ್ಚು ಆದಾಯ ಪಡೆಯಬಹುದು ಅದರಲ್ಲಿ ತೊಂಡೆಕಾಯಿ ಕೃಷಿ ಇಲಾಖೆಯಲ್ಲಿ ಸಿಗುವ ಸಹಾಯ ಧನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ತುಂಬಾ ಪ್ರಮುಖ ಹಾಗೂ ಉತ್ತಮವಾಗಿ ಇರುತ್ತದೆ. ಹೀಗೆ ನುಗ್ಗೆ ಸೊಪ್ಪನ್ನು ಬೆಳೆಯುವ ಮುಖಾಂತರ ಕಡಿಮೆ ಖರ್ಜಿನಲ್ಲಿ ಹೆಚ್ಚು ಆದಾಯವನ್ನು ಪಡೆಯಬಹುದು.

Leave A Reply

Your email address will not be published.

error: Content is protected !!