ಅರೋಗ್ಯ ಕೆಟ್ಟ ಮೇಲೆ ಸರಿ ಪಡಿಸಿಕೊಳ್ಳುವ ಮೊದಲು ಅರೋಗ್ಯ ಕೆಡದಂತೆ ನೋಡಿಕೊಳ್ಳುವುದು ಉತ್ತಮ. ಆತ್ಮೀಯ ಓದುಗರೇ ನೈಸರ್ಗಿಕವಾಗಿ ಸಿಗುವಂತ ಹಣ್ಣು ತರಕಾರಿಗಳು ಮನುಷ್ಯನ ಅರೋಗ್ಯ ವೃದ್ಧಿಸುವಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಅದೇ ನಿಟ್ಟಿನಲ್ಲಿ ದ್ರಾಕ್ಷಿ ಕೂಡ ಒಳ್ಳೆವ ಹಣ್ಣಾಗಿದ್ದು ಇದರಲ್ಲಿ ಶರೀರಕ್ಕೆ ಬೇಕಾಗುವಂತ ವಿಟಮಿನ್ ಹಾಗೂ ಆರೋಗ್ಯಕರ ಅಂಶಗಳನ್ನು ನೀಡುತ್ತೆ.
ಈ ಮೂಲಕ ಒಣದ್ರಾಕ್ಷಿ ಎಷ್ಟೊಂದು ಪ್ರಯೋಜನಕಾರಿ ಅನ್ನೋದನ್ನ ತಿಳಿದುಕೊಳ್ಳೋಣ
ಒಣದ್ರಾಕ್ಷಿಯಲ್ಲಿ ಉಳಿದ ಡ್ರೈ ಫ್ರೂಟ್ಸ್ ಗಳಿಗಿಂತ ಹೆಚ್ಚಿನ ಪೋಷಕಾಂಶಗಳು ಇರುತ್ತವೆ. ಇದರಲ್ಲಿ ಬಂಗಾರದ ಬಣ್ಣದ ದ್ರಾಕ್ಷಿಯನ್ನು ಅಡುಗೆಯಲ್ಲಿ ಬಳಸುತ್ತಾರೆ. ಆದರೆ ಇದನ್ನು ನೇರವಾಗಿ ತಿನ್ನುವವರು ಬಹಳ ಕಡಿಮೆ. ದಿನನಿತ್ಯ ರಾತ್ರಿ ಮಲಗುವ ಮುನ್ನ 7 ರಿಂದ 8 ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಡಬೇಕು.
ಇದು ಬೆಳಿಗ್ಗೆ ನೀರಿನಲ್ಲಿ ಚೆನ್ನಾಗಿ ನೆನೆದಿರುತ್ತದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಹಾಗೆಯೇ ಈ ನೀರನ್ನು ಕುಡಿಯಬೇಕು. ಹಾಗೆಯೇ ಇದನ್ನು ಬೀಸಿ ಜ್ಯೂಸ್ ಮಾಡಿ ಕೂಡ ಕುಡಿಯಬಹುದು. ಇದರಿಂದ ಅನೇಕ ಪ್ರಯೋಜನಗಳು ಇವೆ. ಇದರಲ್ಲಿ ಕಬ್ಬಿಣ, ಮೆಗ್ನೀಷಿಯಂ, ಪೊಟ್ಯಾಶಿಯಂ ಮತ್ತು ಫೈಬರ್ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಜೀರ್ಣಶಕ್ತಿ ಹೆಚ್ಚಾಗಿ ಮಲಬದ್ಧತೆ ಕಡಿಮೆಯಾಗುತ್ತದೆ.ಎಲ್ಲಾ ರೀತಿಯ ಹೊಟ್ಟೆಯ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಅಷ್ಟೇ ಅಲ್ಲದೆ ಕೀಲುನೋವು ಮಂಡಿನೋವು ಅಷ್ಟೇ ಅಲ್ಲದೆ ಲಿವರ್ ಸಮಸ್ಯೆ ಕಣ್ಣಿನ ಸಮಸ್ಯೆ ಮುಂತಾದ ಶಾರೀರಿಕ ಸಮಸ್ಯೆಗಳಿಗೆ ಇದು ಮದ್ದಾಗಿ ಕೆಲಸ ಮಾಡುತ್ತೆ