ಈಗಿನ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದೇವೆ. ಸಾಮಾನ್ಯವಾಗಿ ಮಲಬದ್ಧತೆ, ಫೈಲ್ಸ್ ಸಮಸ್ಯೆ ಎಲ್ಲರಲ್ಲೂ ಕಂಡುಬರುತ್ತದೆ. ಈ ಸಮಸ್ಯೆಗೆ ಮನೆಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ಮನೆಮದ್ದನ್ನು ತಯಾರಿಸಬಹುದು. ಹಾಗಾದರೆ ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.
ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಮಲಬದ್ಧತೆ, ಫೈಲ್ಸ್ ಸಮಸ್ಯೆ ಕಾಡುತ್ತದೆ. ಕಾನ್ಸ್ಟಿಪೇಷನ್ ಸಮಸ್ಯೆ ಇರುವವರಿಗೆ ಫೈಲ್ಸ್ ಖಾಯಿಲೆ ಬರುತ್ತದೆ. ಈ ಸಮಸ್ಯೆಗೆ ಮನೆಯಲ್ಲಿ ಸುಲಭವಾಗಿ ಮಾಡಿಕೊಳ್ಳುವ ಮನೆ ಮದ್ದಿದೆ. ಈ ಮನೆ ಮದ್ದನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು ಆಲಂ, ಬಾಳೆಹಣ್ಣು, ಜೇನುತುಪ್ಪ. ಮನೆಮದ್ದನ್ನು ಮಾಡುವ ವಿಧಾನ ಆಲಂ ಅಥವಾ ಪಟಿಕ ಎಂದು ಕರೆಯುತ್ತಾರೆ. ಇದು ಆಂಟಿ ಸೆಪ್ಟಿಕ್ ಆಗಿ ಕೆಲಸ ಮಾಡುತ್ತದೆ, ನಮ್ಮ ದೇಹದ ಅನೇಕ ಖಾಯಿಲೆಗೆ ಇದು ರಾಮಬಾಣವಾಗಿದೆ. ಪಟಿಕ ಆಯುರ್ವೇದ ಅಂಗಡಿ ಅಥವಾ ಕೆಲವು ಗ್ರೋಸರಿ ಶಾಪ್ ಗಳಲ್ಲಿ ಸಿಗುತ್ತದೆ.
ನೀರಿನಲ್ಲಿರುವ ಕ್ರಿಮಿ ನಾಶ ಮಾಡಲು ಪಟಿಕವನ್ನು ಬಳಸುತ್ತಾರೆ. ಆಲಂ ಗಟ್ಟಿಯಾಗಿರುತ್ತದೆ ಅದನ್ನು ಕಟ್ ಮಾಡಿ ಪೀಸ್ ಮಾಡಿ ಅದನ್ನು ಹಂಚಿನ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು ಅದು ಕರಗಿ ನೀರಿನಂತೆ ಆಗಿ ನೀರು ಬತ್ತಿ ಬೂದಿಯಂತೆ ಆಗುತ್ತದೆ ಅಲ್ಲಿಯವರೆಗೆ ಹಾಗೆಯೆ ಇಡಬೇಕು. ತಣ್ಣಗಾದ ನಂತರ ಸ್ವಲ್ಪ ಕುಟ್ಟಬೇಕು ಆಗ ಪೌಡರ್ ಆಗುತ್ತದೆ. ನಂತರ 1 ಅಥವಾ 2 ಪಚ್ಚೆ ಬಾಳೆಹಣ್ಣನ್ನು ಮದ್ಯದಲ್ಲಿ ಕಟ್ ಮಾಡಿ ಸಣ್ಣ ಸಣ್ಣ ಪೀಸ್ ಆಗಿ ಕಟ್ ಮಾಡಬೇಕು. ಒಂದು ಚಿಟಿಕೆ ಪಟಿಕದ ಪೌಡರ್ ಅನ್ನು ಬಾಳೆಹಣ್ಣಿನ ಪೀಸ್ ಮೇಲೆ ಸ್ವಲ್ಪ ಸ್ವಲ್ಪ ಉದುರಿಸಬೇಕು. ನಂತರ ಒಂದು ಸ್ಪೂನ್ ಜೇನುತುಪ್ಪವನ್ನು ಮಿಕ್ಸ್ ಮಾಡಬೇಕು. ಬೆಳಗ್ಗೆ ತಿಂಡಿ ತಿಂದ ನಂತರ ಜೇನುತುಪ್ಪ ಮತ್ತು ಪಟಿಕದ ಪೌಡರ್ ಮಿಕ್ಸ್ ಮಾಡಿದ ಬಾಳೆಹಣ್ಣನ್ನು ಸೇವಿಸಬೇಕು. ತಂಡಿ ವಾತಾವರಣದಲ್ಲಿ ಬಾಳೆಹಣ್ಣನ್ನು ತಿಂದರೆ ಶೀತ ಆಗುತ್ತದೆ ಆದ್ದರಿಂದ ಜೇನುತುಪ್ಪವನ್ನು ಮಿಕ್ಸ್ ಮಾಡಿ ಸೇವಿಸುವುದರಿಂದ ಶೀತ, ನೆಗಡಿ ಆಗುವುದಿಲ್ಲ.
ಜೇನುತುಪ್ಪ ಸೇವಿಸುವುದರಿಂದ ಅಜೀರ್ಣ ಮುಂತಾದ ಸಮಸ್ಯೆ ನಿವಾರಣೆಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬಾರದು ಹಾಗೂ ರಾತ್ರಿ ಸಮಯದಲ್ಲಿಯೂ ಸೇವಿಸಬಾರದು ಏಕೆಂದರೆ ರಾತ್ರಿ ಸಮಯದಲ್ಲಿ ಸೇವಿಸಿದರೆ ತಂಡಿ ಆಗುವ ಸಂಭವ ಇರುತ್ತದೆ. ಈ ಮನೆಮದ್ದನ್ನು ಸೇವಿಸುವಾಗ ಬೆಳಗಿನ ತಿಂಡಿ ಗಟ್ಟಿಯಾಗಿರುವ ಅಥವಾ ಎಣ್ಣೆಯಲ್ಲಿ ಖರಿದ ತಿಂಡಿ ಆಗಿರಬಾರದು. ಉದ್ದನ್ನು ಬಳಸಿ ತಯಾರಿಸಿದ ಆಹಾರವನ್ನು ಈ ಸಮಯದಲ್ಲಿ ಸೇವಿಸಬಾರದು, ಆರೋಗ್ಯಯುತ ಆಹಾರವನ್ನು ಸೇವಿಸಬೇಕು. ಬಾಳೆಹಣ್ಣು ಸೇವಿಸುವುದರಿಂದ ಸಮಸ್ಯೆ ಆಗುವವರು ಒಂದು ಸ್ಪೂನ್ ಜೇನುತುಪ್ಪಕ್ಕೆ ಒಂದು ಚಿಟಿಕೆ ಆಲಂ ಪೌಡರ್ ಮಿಕ್ಸ್ ಮಾಡಿ ಸೇವಿಸಬೇಕು
ಇದನ್ನು ಕೂಡ ತಿಂಡಿ ತಿಂದ ನಂತರ ಸೇವಿಸಬೇಕು. ಈ ರೀತಿ 7 ದಿನ ಸೇವಿಸಬೇಕು ಇದರಿಂದ ಫೈಲ್ಸ್ ನಿವಾರಣೆಯಾಗುತ್ತದೆ. ಫೈಲ್ಸ್ ಇರುವವರು ತರಕಾರಿ, ಹಣ್ಣು, ಮೊಳಕೆ ಕಾಳುಗಳನ್ನು ಸೇವಿಸಬೇಕು. ಹೆಚ್ಚು ಟೆನ್ಷನ್ ಮಾಡಿಕೊಳ್ಳುವುದರಿಂದ ಮಲಬದ್ಧತೆ ಸಮಸ್ಯೆ ಕಂಡುಬರುತ್ತದೆ ಆದ್ದರಿಂದ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು. ಈ ಮಾಹಿತಿ ಉಪಯುಕ್ತವಾಗಿದ್ದು ತಪ್ಪದೆ ಎಲ್ಲರಿಗೂ ತಿಳಿಸಿ.