WhatsApp Group Join Now
Telegram Group Join Now

ತಲೆನೋವು ಬಂದರೆ ಸಾಕು ನಮಗೆ ಯಾವುದೇ ಕೆಲಸದಲ್ಲೂ ಆಸಕ್ತಿ ಇರದು. ಪದೇ ಪದೇ ಕಿರಿಕಿರಿ ಉಂಟಾಗುತ್ತದೆ ಒಂದೇ ಸಮನೆ ಕೋಪ ಬರುತ್ತದೆ. ಒಂದು ರೀತಿಯಲ್ಲಿ ಅಸಹನೆ ನಮ್ಮನ್ನು ಬಿಡದೆ ಕಾಡಲಾರಂಭಿಸುತ್ತದೆ. ಎಷ್ಟೋ ಬಾರಿ ಈ ತಲೆನೋವಿನ ಸಮಸ್ಯೆಯಿಂದಾಗಿ ಬದುಕಿನ ನೆಮ್ಮದಿಯನ್ನೇ ಕಳೆದುಕೊಳ್ಳುತ್ತೇವೆ. ಅದರಲ್ಲೂ ಈ ಮೈಗ್ರೇನ್ ಹೆಸರು ಕೇಳಿದರೆ ಯಾವುದೋ ಸೌಮ್ಯ ಔಷಧಿಯ ಹೆಸರಂತೆ ತೋರುವ ಈ ಪದ ವಾಸ್ತವದಲ್ಲಿ ತಲೆನೋವಿನ ಅತ್ಯುಗ್ರ ರೂಪವಾಗಿದೆ. ತಲೆನೋವುಗಳಲ್ಲಿ ಹಲವು ವಿಧಗಳಿವೆ. ಕೆಲವು ಒಂದು ಬದಿ, ಕೆಲವು ನಟ್ಟ ನಡುವೆ, ಕೆಲವು ತಲೆಯ ಹಿಂಭಾಗ ಹೀಗೆಲ್ಲಾ ಆವರಿಸುತ್ತವೆ. ಸಾಮಾನ್ಯ ತಲೆನೋವು ನೋವು ನಿವಾರಕ ಮಾತ್ರೆಗಳು ಅಥವಾ ನೋವು ಕಡಿಮೆ ಮಾಡುವಂತಹ ಜಂಡು ಬಾಮ್ ಅಥವಾ ಅಮೃತಾಂಜನದಂತಹ ಸರಳ ಬಾಮ್ ಗಳನ್ನು ಹಚ್ಚಿಕೊಳ್ಳುವ ಮೂಲಕ ಕೊಂಚ ಕಾಲದ ಬಳಿಕ ಕಡಿಮೆಯಾಗುತ್ತದೆ. ಆದರೆ ಮೈಗ್ರೇನ್ ಸಾಮಾನ್ಯವಾಗಿ ಒಂದೇ ಬದಿ ಆವರಿಸುವ ಮತ್ತು ಅಪರೂಪಕ್ಕೆ ಎರಡೂ ಬದಿ ಆವರಿಸುವ ಬಗೆಯ ತಲೆನೋವಾಗಿದೆ. ಇಂತಹ ತಲೆನೋವಿಗೆ ನಾವು ಕೆಲವೇ ಕ್ಷಣದಲ್ಲಿ ನೀವು ಕಡಿಮೆ ಮಾಡುವ ಒಂದು ಮನೆಮದ್ದನ್ನು ಹೇಗೆ ಮಾಡಿಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳೋಣ.

ಕೆಲವೊಮ್ಮೆ ನಮ್ಮ ಒತ್ತಡದ ಬದುಕಿನಿಂದಾಗಿಯೂ ಕೂಡ ಈ ತಲೆನೋವು ಬರಬಹುದು. ಸಾಮಾನ್ಯವಾಗಿ ಕಾಣುವ ಈ ತಲೆನೋವು ಒಮ್ಮೆ ಪ್ರಾರಂಭವಾದರೆ ಸಾಕು ನಂತರ ನಮ್ಮ ಇಡೀ ಸಮಯವನ್ನೆ ವ್ಯರ್ಥ ಗೊಳಿಸುವಷ್ಟು ತಾಕತ್ತು ಈ ತಲೆನೋವಿಗಿರುತ್ತದೆ. ಆದರೆ ಈ ತಲೆನೋವಿನ ಲ್ಲಿಯೂ ಕೂಡ ಹಲವಾರು ವಿಧಗಳಿವೆ, ಮತ್ತು ಅದಕ್ಕೆ ಅನುಗುಣವಾಗಿ ಚಿಕಿತ್ಸೆಯು ಇರುತ್ತದೆ. ಆದರೆ ವಿಪರ್ಯಾಸವೆಂದರೆ ಕೆಲವರಿಗೆ ತಲೆನೋವು ನಿತ್ಯದ ಕಾಯಿಲೆಯಾಗಿರುತ್ತದೆ. ಒತ್ತಡ ಇಲ್ಲದ ಮನುಷ್ಯರೇ ಇಲ್ಲ.ಹಾಗಾಗಿ ಕೆಲವೊಮ್ಮೆ ಕೆಲಸದ ಒತ್ತಡ, ಸಾಂಸಾರಿಕ ಸಮಸ್ಯೆ, ಹಣಕಾಸಿನ ಸಮಸ್ಯೆ ಅಥವಾ ಖಾಸಗಿ ಸಮಸ್ಯೆಗಳಿಂದ ಹೀಗೆ ಹತ್ತು ಹಲವಾರು ಕಾರಣಗಳಿಂದಾಗಿ ತಲೆನೋವು ಬರಬಹುದು. ಮಾನಸಿಕ ಒತ್ತಡ,ದೇಹದಲ್ಲಿ ನಿರ್ಜಲೀಕರಣ, ಅಥವಾ ಪರಿಸರದ ಕೆಲವು ಒತ್ತಡ ಅಂದರೆ ಶಬ್ದ ಮಾಲಿನ್ಯ ಅಥವಾ ಪ್ರಬಲವಾದ ಬೆಳಕನ್ನು ನೋಡುವ ಮುಖೇನ ಅಥವಾ ಇನ್ನಿತರ ಪರಿಸರ ವೈಪರೀತ್ಯಗಳು ತಲೆನೋವನ್ನು ಉಂಟುಮಾಡಬಹುದು. ಇವೆಲ್ಲ ನಮಗೆ ಬಿಡದೇ ಕಾಡುವ ತಲೆನೋವಿಗೆ ಸಾಮಾನ್ಯ ಕಾರಣಗಳು.

ಇನ್ನು ಈ ತಲೆನೋವಿಗೆ ಸುಲಭ ಪರಿಹಾರಗಳು ಏನೂ ಅಂತಾ ನೋಡುವುದಾದರೆ , ಮೊದಲನೆಯದಾಗಿ ಒತ್ತಡವನ್ನು ಕಮ್ಮಿ ಮಾಡಿಕೊಂಡರೆ ತಲೆನೋವು ತನ್ನಿಂದ ತಾನೇ ಕಮ್ಮಿಯಾಗುತ್ತದೆ. ಇದಕ್ಕಾಗಿ ನಿರಂತರವಾಗಿ ಪ್ರಾಣಾಯಾಮ ಹಾಗೂ ಧ್ಯಾನವನ್ನು ಕಡ್ಡಾಯವಾಗಿ ಮಾಡಬೇಕು ಅಥವಾ ಬಿಸಿನೀರು ಕಾಯಿಸಿ ಅದರ ಹಬೆಯನ್ನು ಉಸಿರಿನ ಮೂಲಕ ಹೀರಿಕೊಂಡರೂ ಕೂಡ ತಲೆನೋವನ್ನು ಕಮ್ಮಿ ಮಾಡಿಕೊಳ್ಳಬಹುದು. ತಲೆಯ ಭಾದೆ ನಮಗೆ ಅಷ್ಟರ ಮಟ್ಟಿಗೆ ತೊಂದರೆ ನೀಡಿರುತ್ತದೆ. ಆದರೆ ತಲೆ ನೋವು ಬಂದ ತಕ್ಷಣ ನಾವು ಅದಕ್ಕೆ ಸೂಕ್ತವಾದ ಮಾತ್ರೆ ಎಲ್ಲಿದೆ ಎಂದು ಮೊದಲು ಹುಡುಕುತ್ತೇವೆ. ಪ್ರತಿ ಬಾರಿ ಕೂಡ ಇದು ಸಾಧ್ಯವಿಲ್ಲ. ತಲೆನೋವಿನ ಸಮಸ್ಯೆಗಳನ್ನು ಮತ್ತು ಅಡ್ಡಪರಿಣಾಮಗಳನ್ನು ಹೋಗಲಾಡಿಸಿಕೊಳ್ಳಲು ಮಾತ್ರೆಗಿಂತ ಅಧಿಕ ಶಕ್ತಿಶಾಲಿಯಾದ ಮನೆಮದ್ದುಗಳು ನಮ್ಮ ಬಳಿಯೇ ಇವೆ. ಆದರೆ ನಾವು ಅವುಗಳನ್ನು ಬಳಸಿಕೊಳ್ಳುವ ವಿಧಾನಗಳನ್ನು ತಿಳಿದುಕೊಳ್ಳಬೇಕು ಅಷ್ಟೇ.

ಈ ಒಂದು ಆಯುರ್ವೇದದ ಮನೆ ಮದ್ದು ನಮ್ಮ ತಲೆನೋವಿಗೆ ತಕ್ಷಣ ಪರಿಹಾರ ನೀಡುತ್ತದೆ. ಹಾಗಿದ್ದರೆ ಅದನ್ನು ಹೇಗೆ ಮಾಡಿಕೊಳ್ಳುವುದು ಎನ್ನುವುದನ್ನು ನೋಡೋಣ. ಒಂದು ಇಂಚಿನಷ್ಟು ಹಸಿ ಶುಂಠಿ ತೆಗೆದುಕೊಂಡು ಅದರ ಮೇಲಿನ ಸಿಪ್ಪೆ ತೆಗೆದು ಚಿಕ್ಕ ತುಂಡು ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿ ಸೋಸಿಕೊಳ್ಳಬೇಕು. ನಂತರ ಒಂದು ಬೌಲ್ ಗೆ ನಾವು ರೆಡಿ ಮಾಡಿ ಇಟ್ಟುಕೊಂಡ ಶುಂಠಿ ರಸವನ್ನು ಎರಡರಿಂದ ಮೂರು ಸ್ಪೂನ್ ಅಷ್ಟು ತೆಗೆದುಕೊಂಡು ಅದಕ್ಕೆ ಮೂರು ಲವಂಗವನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಹಾಕಬೇಕು. ನಂತರ ಅರ್ಧ ಚಮಚ ಅಷ್ಟು ಬೆಲ್ಲ ಅಥವಾ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿಕೊಂಡು ಬೆಳಿಗ್ಗೆ ಮತ್ತು ರಾತ್ರಿ ಊಟದ ನಂತರ ತೆಗೆದುಕೊಳ್ಳಬೇಕು. ಇದೆ ರೀತಿ ಇನ್ನೊಂದು ಮನೆ ಮದ್ದು ಎಂದರೆ , ಒಂದು ಬೌಲ್ ಗೆ ಮೂರು ಚಮಚದಷ್ಟು ಶುಂಠಿ ರಸ ತೆಗೆದುಕೊಂಡು ಅದಕ್ಕೆ ಒಂದು ಚಮಚ ಚಕ್ಕೆ ಪುಡಿ ಸೇರಿಸಿ ಮಿಕ್ಸ್ ಮಾಡಿಕೊಂಡು ಇದನ್ನು ನಮ್ಮ ಹಣೆಗೆ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು. ಇದು ತಿನ್ನುವ ಅಥವಾ ಕುಡಿಯುವ ಔಷಧ ಅಲ್ಲಾ ಬದಲಿಗೆ ಹಣೆಗೆ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು. ಈ ಎರಡೂ ಮನೆಮದ್ದುಗಳನ್ನು ಮಾಡಿಕೊಳ್ಳುವುದರಿಂದ ನಾವು ಆದಷ್ಟು ಬೇಗ ಎಂತಹ ತಲೆನೋವು ಇದ್ದರೂ ಸಹ ಅದನ್ನು ಪರಿಹರಿಸಿಕೊಳ್ಳಬಹುದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: