WhatsApp Group Join Now
Telegram Group Join Now

ಮೂತ್ರ ಪಿಂಡಗಳು ಮಾನವ ದೇಹದಲ್ಲಿನ ಬಹಳ ಮುಖ್ಯವಾದ ಅಂಗವಾಗಿದೆ  ದೇಹದ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯಲು ಮೂತ್ರ ಪಿಂಡಗಳು ಸಾಕಷ್ಟು ಕೊಡುಗೆ ನೀಡುತ್ತದೆ. ಈಗಿನ ಜನರ ಜೀವನ ಶೈಲಿಯ ಬದಲಾಗುತ್ತಿರುವ ಪರಿಣಾಮಗಳ ದೃಷ್ಟಿಯಿಂದ ಜನರಿಗೆ ಮೊದಲಿಗಿಂತ ಹೆಚ್ಚು ಮೂತ್ರಪಿಂಡದ ತೊಂದರೆಗಳು ಕಾಣಿಸಲು ಪ್ರಾರಂಭವಾಗಿದೆ. ಸಮಸ್ಯೆಗಳು ಪ್ರಾರಂಭವಾಗುವ ಮೊದಲೇ ಅದನ್ನು ನೀವು ಗುರುತಿಸಿದರೆ ಅವಗಳನ್ನು ಎದುರಿಸಲು ಸುಲಭವಾಗುತ್ತದೆ ಇದನ್ನು ಕಡೆಗಣಿಸದೆ, ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆ ಪಡೆದುಕೊಂಡರೆ ಒಳ್ಳೆಯದು. ರಕ್ತದಲ್ಲಿನ ಕಲ್ಮಶವನ್ನು ಶುದ್ಧೀಕರಿಸುವ ಕೆಲಸ ಮಾಡುವಂತಹ ಕಿಡ್ನಿಯು ರಕ್ತದೊತ್ತಡ ಎಲೆಕ್ಟ್ರೋಲೈಟ್ ಸಮತೋಲನ ಮತ್ತು ಕೆಂಪು ರಕ್ತ ಕಣಗಳ ಉತ್ಪತ್ತಿಯಲ್ಲೂ ನೆರವಾಗುವುದು.

ಕೆಲವು ಅಂಶಗಳು ಕಿಡ್ನಿ ಕಾರ್ಯದ ಮೇಲೆ ಪ್ರಭಾವ ಬೀರಬಹುದು ಮತ್ತು ಇದರಿಂದ ಕಿಡ್ನಿಯು ಮುಂದೆ ದೀರ್ಘಕಾಲಿಕವಾಗಿ ಸಮಸ್ಯೆಗಳನ್ನು ಎದುರಿಸಬಹುದು. ಕಿಡ್ನಿ ಸಮಸ್ಯೆ, ಮಧುಮೇಹ, ಅಧಿಕ ರಕ್ತದೊತ್ತಡ, ಅಪಧಮನಿ ಕಾಯಿಲೆ, ಧೂಮಪಾನ, ಬೊಜ್ಜು ಇತ್ಯಾದಿಗಳು ಕಾರಣವಾಗಿರುವುದು.. ಕಿಡ್ನಿಗೆ ತುಂಬಾ ಕೆಟ್ಟ ರೀತಿಯಲ್ಲಿ ಹಾನಿಯಾಗುವ ತನಕ ಯಾವುದೇ ರೀತಿಯ ಪರಿಣಾಮವು ದೇಹದಲ್ಲಿ ಕಂಡುಬರುವುದಿಲ್ಲ. ಸಾಕಷ್ಟು ಜನರಿಗೆ ಕಿಡ್ನಿ ತೊಂದರೆ ನಿಧಾನವಾಗಿ ಹಾನಿ ಮಾಡುತ್ತದೆ ಎಂಬುದು ತಿಳಿದಿಲ್ಲ. ಕಿಡ್ನಿ ತೊಂದರೆ ಉಲ್ಬಣಗೊಳ್ಳುವವರೆಗೂ ಯಾವುದೇ ಲಕ್ಷಣಗಳು ನೀಡುವುದಿಲ್ಲ. ಕಿಡ್ನಿ ತೊಂದರೆ ಕಂಡು ಬಂದರೆ ಆದಷ್ಟು ಬೇಗ ಗುರುತಿಸುವುದು ಸೂಕ್ತ. ಏಕೆಂದರೆ ಅತಿಯಾಗಿ ಉಲ್ಬಣವಾದರೆ ಕಿಡ್ನಿ ಹಾನಿಗೊಳಗಾಗುವುದನ್ನ ತಡೆಯಲು ಕಷ್ಟವಾಗುತ್ತದೆ.

ಮೂತ್ರದಲ್ಲಿ  ಬದಲಾವಣೆ,  2.ಕೆಲವೊಮ್ಮೆ ನೀವು ಮೂತ್ರ ಮಾಡುವಾಗ ನೋವು ಅಥವಾ ಒತ್ತಡ ಕಂಡು ಬರುವುದು, ಮೂತ್ರ ಕೋಶದ ಸೋಂಕಿನಿಂದ ಮೂತ್ರದಲ್ಲಿ ನೋವು ಮತ್ತು ಕಿರಿ ಕಿರಿ ಕಾಣಿಸಿಕೊಳ್ಳಬಹುದು ಮತ್ತು ಈ ಸೋಂಕು ಕಿಡ್ನಿಯನ್ನು  ತಲುಪಿದರೆ ಜ್ವರ ನೋವು ಕೂಡ ಕಾಣಿಸಿ ಕೊಳ್ಳುವುದು.3. ಮೂತ್ರದಲ್ಲಿ ರಕ್ತ ಹೋಗುವಿಕೆ. 4. ಕಿಡ್ನಿ ದೇಹದ ಹೆಚ್ಚಿನ ತ್ಯಾಜ್ಯ ದ್ರವವನ್ನು ಹೊರ ಹಾಕುವ ಕೆಲಸ ಮಾಡುತ್ತದೆ, ಕಿಡ್ನಿ ಸಮಸ್ಯೆಯಿಂದ ಕೆಲಸ ಮಾಡುವುದು ನಿಲ್ಲಿಸಿದರೆ ಮುಖಕ್ಕೆ ಕೈ ಕಾಲುಗಳು ಬಾವು ಕಾಣಿಸಿಕೊಳ್ಳುತ್ತದೆ.. 5. ವಿಪರೀತ ಆಯಾಸ ಮತ್ತು ದುರ್ಬಲತೆ. 6. ತಲೆ ತಿರುಗುವಿಕೆ ಮತ್ತು ಏಕಾಗ್ರತೆ ಸಮಸ್ಯೆ, ಕಿಡ್ನಿ ಸಮಸ್ಯೆಗೆ ಸಂಬಂಧಿಸಿದಂತೆ ಅನೀಮಿಯಾದಿಂದಾಗಿ ಮೆದುಳಿಗೆ ಆಮ್ಲಜನಕದ ಕೊರತೆ ಉಂಟಾಗಿ ತಲೆ ತಿರುಗುವಿಕೆ ಕಾಣಿಸಿಕೊಳ್ಳುತ್ತದೆ.

ಯಾವಾಗಲೂ ಚಳಿ ಆಗುವುದು ಹಾಗೂ ಕಿಡ್ನಿ ಸಮಸ್ಯೆಯಿಂದ ಹೊರಗೆ ವಾತಾವರಣ ಬಿಸಿಯಿದ್ದಾಗಲೂ ಕೂಡ ಚಳಿಯಾಗಬಹುದು, ಕಿಡ್ನಿ ಬ್ಯಾಕ್ಟೀರಿಯಾದ ಸೋಂಕಿನಿಂದಾಗಿ ಚಳಿ ಜ್ವರ ಕೂಡ ಕಾಣಿಸುತ್ತದೆ. 8. ಚರ್ಮದ ತೊಂದರೆ ಮತ್ತು ತುರಿಕೆ. 9. ಅಮೋನಿಯಾ ಉಸಿರಾಟ ಮತ್ತು ರುಚಿ ಹದಗೆಡುವುದು. 10. ವಾಕರಿಕೆ ಮತ್ತು ವಾಂತಿ. 11..ಉಸಿರಾಟದ ತೊಂದರೆ 12. ಬೆನ್ನು ಮತ್ತು ಪಕ್ಕೆಲುಬುಗಳ ನೋವು.

ಹೊಟ್ಟೆಯಲ್ಲಿ ಗಂಟಾಗುವುದು ಮತ್ತು ಸೊಂಟದಲ್ಲಿ ನೋವಾಗುವುದು ಮೇಲಿನ ಲಕ್ಷಣಗಳಲ್ಲಿ ಯಾವುದಾದರೂ ಕಂಡು ಬಂದರೆ ಕಿಡ್ನಿಯ ರೋಗದ ಸಂಭವ ಹೆಚ್ಚಾಗುವುದರಿಂದ ತಕ್ಷಣ ತಜ್ಞ ವೈದ್ಯರನ್ನು ಕಂಡು ಪರೀಕ್ಷಿಸಿಕೊಳ್ಳಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: