ಇತ್ತೀಚಿನ ದಿನಗಳಲ್ಲಿ ಟಿವಿ ಮಾಧ್ಯಮಗಳಲ್ಲಿ ತೋರಿಸುವ ಜಾಹೀರಾತುಗಳು ಜನರ ಮೇಲೆ ತುಂಬಾ ಪ್ರಭಾವ ಬೀರುತ್ತಿವೆ ಎಷ್ಟರ ಮಟ್ಟಿಗೆ ಅಂದರೆ ಕೆಲವರು ಟಿವಿ ಜಾಹೀರಾತುಗಳನ್ನು ನೋಡಿ ತಮ್ಮ ಮನೆಗೆ ದಿನಸಿ ಮತ್ತು ಇತರೆ ವಸ್ತುಗಳನ್ನು ಖರೀದಿ ಮಾಡುತ್ತಾರೆ.ನಾವು ಇಂದು ಈ ಜಾಹೀರಾತುಗಳ ಹಿಂದಿರುವ ಕಹಿ ಸತ್ಯದ ಬಗ್ಗೆ ತಿಳಿದುಕೊಳ್ಳೋಣ. ಈ ಕೆಳಗಿನ ವೀಡಿಯೊ ನೋಡಿ
ಮೊದಲನೆಯದು ಹಣ್ಣುಗಳ ಜ್ಯೂಸ್. ಜನರು ಮಾಜಾ ಫ್ರೂಟಿ ಸ್ಪ್ರೈಟ್ ಮುಂತಾದ ಜ್ಯೂಸ್ ಗಳನ್ನು ನಿಜವಾದ ಹಣ್ಣುಗಳಿಂದ ತಯಾರಿಮಾಡುತ್ತಾರೆ ಮತ್ತು ಅದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ತಿಳಿದುಕೊಂಡಿರುತ್ತಾರೆ ಅದೇ ರೀತಿಯಲ್ಲಿ ಟಿವಿ ಜಾಹೀರಾತು ಗಳಲ್ಲಿ ನಮಗೆ ತುಂಬಾ ಆಕರ್ಷಣೀಯವಾಗಿ ತೋರಿಸುತ್ತಾರೆ ಆದರೆ ಇದರಲ್ಲಿ ನಿಜವಾಗಲೂ ಏನಿದೆ ಎಂಬುದನ್ನು ತಿಳಿದುಕೊಳ್ಳೋಣ.
ಡಬ್ಲ್ಯೂ ಹೆಚ್ ಒ ಅಂದರೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದಿನಕ್ಕೆ ಇಪ್ಪತ್ತು ಗ್ರಾಂ ಅಂದರೆ ಐದು ಟಿ ಚಮಚಕ್ಕಿಂತ ಜಾಸ್ತಿ ಸಕ್ಕರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಆದರೆ ನಾವು ಇಷ್ಟ ಪಟ್ಟು ಕುಡಿಯುವ ಆರುನೂರು ಎಂಎಲ್ ನ ಫ್ರೂಟಿ ಅಥವಾ ಮಾಜಾ ಬಾಟಲಿಯಲ್ಲಿ ನಿಜವಾದ ಜ್ಯೂಸ್ ಕೇವಲ ಹತ್ತೊಂಬತ್ತು ಶೇಕಡಾ ಮಾತ್ರ ಇರುತ್ತದೆ ಉಳಿದಿದ್ದೆಲ್ಲ ಜ್ಯೂಸ್ ತಯಾರಿಸಲು ಬಳಸುವ ಸಕ್ಕರೆ ನೀರು ಫುಡ್ ಕಲರ್ ಕೆಮಿಕಲ್ಸ್ ಇರುತ್ತದೆ.
ಪ್ರತಿ ನೂರು ಎಂ ಎಲ್ ಬಾಟಲಿಯಲ್ಲಿ ಹದಿಮೂರು ಗ್ರಾಂ ಸಕ್ಕರೆ ಇರುತ್ತದೆ ಅದೇರೀತಿ ಆರುನೂರು ಗ್ರಾಂನ ಬಾಟಲಿಯಲ್ಲಿ ಇಪ್ಪತ್ತೆಂಟು ಗ್ರಾಂ ಸಕ್ಕರೆ ಇರುತ್ತದೆ ಅಂದರೆ ಸುಮಾರು ಇಪ್ಪತ್ತು ಟಿ ಚಮಚ ಸಕ್ಕರೆ ಇರುತ್ತದೆ. ಅದೇ ರೀತಿ ಎರಡೂವರೆ ಲೀಟರ್ ನ ದೊಡ್ಡ ಬಾಟಲಿಯಲ್ಲಿ ಎಪ್ಪತ್ತರಿಂದ ಎಂಬತ್ತು ಟಿ ಚಮಚಗಳಷ್ಟು ಸಕ್ಕರೆ ಇರುತ್ತದೆ ಒಂದು ಗ್ಲಾಸ್ ಜ್ಯೂಸ್ ಕುಡಿದಾಗ ನಮಗೆ ಗೊತ್ತಿಲ್ಲದ ಹಾಗೆ ನಲವತ್ತು ಗ್ರಾಂ ಸಕ್ಕರೆ ಅಂದರೆ ಹತ್ತು ಟಿ ಚಮಚಗಳಷ್ಟು ಸಕ್ಕರೆ ನಮ್ಮ ದೇಹಕ್ಕೆ ಸೇರುತ್ತದೆ ನಾರ್ಮಲ್ ಆಗಿ ಇಷ್ಟು ಸಕ್ಕರೆಯನ್ನು ತಿಂದರೆ ನಮಗೆ ವಾಂತಿಯಾಗುತ್ತದೆ.
ಆ ರೀತಿ ಆಗದಿರಲಿ ಅಂತ ಈ ಹಣ್ಣಿನ ಜ್ಯೂಸ್ ಗಳಲ್ಲಿ ಪ್ರೊಸೆಸಿಂಗ್ ಮಾಡಿರುವ ಸಕ್ಕರೆಯನ್ನು ಬಳಸುತ್ತಾರೆ ಯಾವತ್ತೋ ಒಂದು ದಿನ ಇದನ್ನು ಕುಡಿದರೆ ನಮಗೆ ಏನು ಆಗುವುದಿಲ್ಲ ಆದರೆ ನಿರಂತರವಾಗಿ ಇದನ್ನು ಕುಡಿದರೆ ನಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ನಾವು ಆಸ್ಪತ್ರೆಯ ಪಾಲಾಗುತ್ತೆವೆ. ನಿಜ ಹೇಳಬೇಕೆಂದರೆ ಆರುನೂರು ಎಂಎಲ್ ನ ಒಂದು ಬಾಟಲಿಯಲ್ಲಿ ಒಂದು ಮಾವಿನ ಹಣ್ಣಿನಿಂದ ಬರುವಷ್ಟು ರಸ ಇರುವುದಿಲ್ಲ ಇವು ಹೆಸರಿಗೆ ಮಾತ್ರ ಜ್ಯೂಸ್ ಇದರಲ್ಲಿ ಬರಿ ಸಕ್ಕರೆ ಮಾತ್ರ ತುಂಬಿಕೊಂಡಿರುತ್ತದೆ ಇದರ ಬದಲು ನಾವೇ ಹಣ್ಣಿನಿಂದ ಜ್ಯೂಸ್ ಮಾಡಿ ಕುಡಿಯಬಹುದು.
ಇನ್ನು ಹೆಲ್ತ್ ಡ್ರಿಂಕ್ ಒಂದು ಬ್ರಾಂಡ್ ಹೇಳುತ್ತದೆ ನಮ್ಮ ಡ್ರಿಂಕ್ ಕುಡಿದರೆ ನಿಮ್ಮ ಮಕ್ಕಳು ಎತ್ತರವಾಗುತ್ತಾರೆ ಎಂದು ಇನ್ನೊಂದು ಬ್ರಾಂಡ್ ಹೇಳುತ್ತದೆ ನಮ್ಮಡ್ರಿಂಕ್ ನಿಮ್ಮ ಮಕ್ಕಳಿಗೆ ಕುಡಿಸಿ ಇದರಲ್ಲಿರುವ ಮೂವತ್ತಾರು ವಿಟಮಿನ್ಸ್ ನಿಮ್ಮ ಮಕ್ಕಳ ಮೆದುಳನ್ನು ಚುರುಕಾಗಿಸುತ್ತದೆ ಎಂದು. ಇಂತಹ ಜಾಹೀರಾತುಗಳನ್ನು ನಾವು ಪ್ರತಿದಿನ ಟಿವಿಯಲ್ಲಿ ನೋಡುತ್ತಲೇ ಇರುತ್ತಿವಿ ಆದರೆ ನಿಜಕ್ಕೂ ಹೆಲ್ತ್ ಡ್ರಿಂಕ್ ಎಂದು ಕರೆಯಲ್ಪಡುವ ಈ ಡಬ್ಬಗಳ ಒಳಗೆ ಏನಿದೆ ಎಂದು ಈಗ ನೋಡೋಣ. ಡಬ್ಲ್ಯೂ ಹೆಚ್ ಒ ವರದಿಯ ಪ್ರಕಾರ ದಿನಕ್ಕೆ ಐದಕ್ಕಿಂತ ಹೆಚ್ಚು ಚಮಚ ಸಕ್ಕರೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಈ ಹೆಲ್ತ್ ಡ್ರಿಂಕ್ ಗಳಲ್ಲಿರುವ ಪದಾರ್ಥಗಳನ್ನು ಪರೀಕ್ಷಿಸಿದಲ್ಲಿ ಬೊರ್ನಮಿಟಾ ದಲ್ಲಿ ಪ್ರತಿ ನೂರು ಗ್ರಾಂಗೆ ಮೂವತ್ತೇಳು ಗ್ರಾಂ ಸಕ್ಕರೆ ಕಾಂಪ್ಲೈನ ನಲ್ಲಿ ಪ್ರತಿ ನೂರು ಗ್ರಾಂಗೆ ಇಪ್ಪತ್ತೇಳು ಗ್ರಾಂ ಸಕ್ಕರೆ ಮತ್ತು ಹಾರ್ಲಿಕ್ಸ್ ನಲ್ಲಿ ಪ್ರತಿ ನೂರು ಗ್ರಾಂಗೆ ಹದಿಮೂರು ಗ್ರಾಂ ಸಕ್ಕರೆ ಇರುತ್ತದೆ. ಇನ್ನು ಪ್ರೊಟೀನ್ ಗಳ ವಿಷಯಕ್ಕೆ ಬಂದರೆ ಡಬ್ಲ್ಯೂ ಹೆಚ್ ಒ ಪ್ರಕಾರ ಒಬ್ಬ ವ್ಯಕ್ತಿಗೆ ಪ್ರತಿದಿನ ನಲವತ್ತೈದರಿಂದ ಅರವತ್ತೈದು ಗ್ರಾಂ ಪ್ರೊಟೀನ್ ಅಗತ್ಯವಿರುತ್ತದೆ
ಹಾಗೆ ಲೆಕ್ಕ ಹಾಕಿದರೆ ಇಪ್ಪತ್ತು ಗ್ರಾಂ ಬೊರ್ನಮಿಟಾ ಕುಡಿದರೆ ಕೇವಲ ಒಂದು ನಾಲ್ಕು ಗ್ರಾಂ ಪ್ರೊಟೀನ್, ಇಪ್ಪತ್ತು ಗ್ರಾಂ ಕಾಂಪ್ಲೈನ್ ಕುಡಿದರೆ ಎರಡು. ನಾಲ್ಕು ಗ್ರಾಂ ಪ್ರೊಟೀನ್ ಮಾತ್ರ, ಅದೇ ರೀತಿ ಇಪ್ಪತ್ತು ಗ್ರಾಂ ಹಾರ್ಲಿಕ್ಸ್ ಕುಡಿದಾಗ ಕೇವಲ ಎರಡು.ಎರಡು ಪ್ರೊಟೀನ್ ಸಿಗುತ್ತದೆ ಆದರೆ ನಮಗೆ ಪ್ರತಿದಿನ ಬೇಕಾಗಿರುವುದು ನಲವತ್ತೈದರಿಂದ ಅರವತ್ತೈದು ಗ್ರಾಂ ಪ್ರೊಟೀನ್. ಆದರೆ ಇವುಗಳನ್ನು ದಿನಕ್ಕೆ ಎರಡು ಬಾರಿ ಕುಡಿದರು ಇವು ನಮಗೆ ಬೇಕಾಗುವ ಪ್ರೊಟೀನ್ ಅನ್ನು ಒದಗಿಸುವುದಿಲ್ಲ.
ಇನ್ನು ವಿಟಮಿನ್ ಡಿ ವಿಷಯಕ್ಕೆ ಬಂದರೆ ಈ ಮೂರು ಹೆಲ್ತ್ ಡ್ರಿಂಕ್ಸ್ ಕೆವಲ ಮೂರರಿಂದ ನಾಲ್ಕರಷ್ಟು ಮೈಕ್ರೋ ವಿಟಮಿನ್ ಡಿ ಕೊಡುತ್ತದೆ. ಬೊರ್ನಮಿಟಾದಲ್ಲಿ ನಮಗೆ ಬೇಕಾಗಿರುವ ವಿಟಮಿನ್ಸ್ ಗಿಂತ ತುಂಬಾ ಕಡಿಮೆ ವಿಟಮಿನ್ ಇರುತ್ತದೆ. ಇನ್ನು ಕಾಂಪ್ಲೈನ ವಿಷಯಕ್ಕೆ ಬಂದರೆ ಇದು ನಿಮ್ಮ ಮಕ್ಕಳ ಎತ್ತರವನ್ನು ಹೆಚ್ಚಿಸುತ್ತದೆ ಇದು ಕ್ಲಿನಿಕಲ್ ಪ್ರೂಡ್ ಅಂತ ಹೇಳುವುದಕ್ಕೆ ಮುಖ್ಯ ಕಾರಣ ಎರಡು ಸಾವಿರದ ಎಂಟರಲ್ಲಿ ಇವರು ಒಂಬೈನೂರು ಮಕ್ಕಳಮೇಲೆ ನಡೆಸಿದ ಕ್ಲಿನಿಕಲ್ ಟ್ರಯಲ್ ಅಂತ ಹೇಳಬಹುದು
ಅದು ಯಾವ ರೀತಿ ಇತ್ತು ಎಂಬುದನ್ನು ನೋಡುವುದಾದರೆ ಈ ರಿಸರ್ಚ್ ನಲ್ಲಿ ಆ ಒಂಬೈನೂರು ಮಕ್ಕಳನ್ನು ಮೂರು ಕೆಟಗೆರೆಗಳನ್ನಾಗಿ ವಿಭಾಗಿಸಲಾಯಿತು ಅದರಲ್ಲಿ ಮೊದಲನೆಯ ಕೆಟಗೆರೆಯವರಿಗೆ ಪ್ರತಿ ದಿನ ಊಟ ಮಾತ್ರ ಕೊಡುತ್ತಾರೆ ಎರಡನೇ ಕೆಟಗೆರೆ ಮಕ್ಕಳಿಗೆ ಊಟದ ಜೊತೆಗೆ ನೀರಿನಲ್ಲಿ ಬೇರೆಸಿರುವ ಕಾಂಪ್ಲೈನ್ ಕೊಡುತ್ತಾರೆ ಮೂರನೇ ಕೆಟಗೆರೆಯ ಮಕ್ಕಳಿಗೆ ಊಟದ ಜೊತೆಗೆ ಹಾಲಿನಲ್ಲಿ ಬೆರೆಸಿರುವ ಕಾಂಪ್ಲೈನ್ ಕೊಡುತ್ತಾರೆ ಈ ರೀತಿ ಒಂದು ವರ್ಷಗಳ ಕಾಲ ನಡೆಯುತ್ತದೆ
ಫಲಿತಾಂಶವನ್ನು ನೋಡಿದಾಗ ಮೂರನೇ ಕೆಟಗೆರೆ ಮಕ್ಕಳು ಒಂದನೇ ಕೆಟಗೆರಿ ಮಕ್ಕಳಿಗಿಂತ ಎರಡು ಪಟ್ಟು ಜಾಸ್ತಿ ಎತ್ತರ ಬೆಳೆದಿರುತ್ತಾರೆ ಆದರೆ ಇಲ್ಲಿ ಆಶ್ಚರ್ಯದ ವಿಷಯವೆಂದರೆ ಈ ಪ್ರಯೋಗವನ್ನು ನಡೆಸುವುದಕ್ಕೆ ಬೇಕಾದ ಫಂಡ್ ಕೊಟ್ಟವರು ಹೆಂಝ್ ಎನ್ನುವ ವ್ಯಕ್ತಿ ಇವರು ಬೇರೆ ಯಾರು ಅಲ್ಲ ಕಾಂಪ್ಲೈನ್ ಕಂಪನಿಯ ಯಜಮಾನ. ನೀವೆ ಪ್ರಶ್ನೆ ಪತ್ರಿಕೆಯನ್ನು ತೆಗೆದು ಉತ್ತರ ಬರೆದು ಮಾರ್ಕ್ಸ್ ಹಾಕಿಕೊಂಡರೆ ಯಾವುದೇ ಪ್ರಯೊಜನ ಇರುವುದಿಲ್ಲ.
ಆದ್ದರಿಂದ ಕಾಂಪ್ಲೈನ್ ಕುಡಿದರೆ ಎತ್ತರ ಆಗುತ್ತಾರೆ ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ ಎಂದು ಎರಡು ಸಾವಿರದ ಎಂಟರಲ್ಲಿ ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ ಕಾಂಪ್ಲೈನ್ ಮೇಲೆ ಕೇಸು ದಾಖಲೆ ಮಾಡಿತ್ತು. ನಿಜ ಹೇಳಬೇಕೆಂದರೆ ನಮ್ಮ ಎತ್ತರ ನಮ್ಮ ಪೂರ್ವಿಕರು ನಮ್ಮ ಪೋಷಕರ ಜೀನ್ಸ್ ಆಧಾರದ ಮೇಲೆ ಇರುತ್ತದೆ ಅದನ್ನು ಬದಲಾಯಿಸಲು ಬರುವುದಿಲ್ಲ. ನಿಮ್ಮ ಮಕ್ಕಳು ಸರಿಯಾಗಿ ಊಟ ಮಾಡಿದರೆ ಈ ಬೊರ್ನಮಿಟಾ ಹಾರ್ಲಿಕ್ಸ್ ಕಾಂಪ್ಲೈನ್ ಯಾವುದು ಬೇಕಾಗುವುದಿಲ್ಲ .
ಮೂರನೆಯದು ಟೂತ್ ಪೇಸ್ಟ್. ಒಂದು ಬ್ರಾಂಡ್ ಹೇಳುತ್ತದೆ ಎಂಬತ್ತು ಶೇಕಡಾ ಡೆಂಟಿಸ್ಟ್ ಗಳು ರೆಕಮಂಡ ಮಾಡುವ ಟೂತ್ ಪೇಸ್ಟ್ ನಮ್ಮದು ಎಂದು ಹೇಳುತ್ತದೆ. ಇನ್ನೊಂದು ಬ್ರಾಂಡ್ ದಿನದ ಇಪ್ಪತ್ನಾಲ್ಕು ಗಂಟೆಯೂ ತಾಜಾತನವನ್ನು ನೀಡುತ್ತದೆ ಎಂದು ಹೇಳುತ್ತದೆ. ಇಂತಹ ಜಾಹೀರಾತುಗಳನ್ನು ನಾವು ನೋಡುತ್ತಿರುತ್ತೇವೆ ಆದರೆ ನಿಜಕ್ಕೂ ಆ ಟೂತ್ ಪೇಸ್ಟ್ ಅಷ್ಟು ಚೆನ್ನಾಗಿ ಕೆಲಸ ಮಾಡುವುದಕ್ಕೆ ಅದರಲ್ಲಿ ಏನು ಮಿಕ್ಸ್ ಮಾಡುತ್ತಾರೆ ಅಂತ ತಿಳಿದುಕೊಳ್ಳೋಣ.
ಮಾರ್ಕೆಟ್ ನಲ್ಲಿ ಸಿಗುವ ಟೂತ್ ಪೇಸ್ಟ್ ನಲ್ಲಿ ಟ್ರೈಕ್ಲೋಜಿನ್ ಇರುತ್ತದೆ ಇದು ತುಂಬಾ ಅಪಾಯಕಾರಿ ಕೆಮಿಕಲ್ಸ್ ಆಗಿದೆ ಕೆಲವು ದೇಶಗಳು ಇದನ್ನು ನಿಷೇಧಿಸಿದೆ. ಎರಡು ಸಾವಿರದ ಹದಿನಾರರಲ್ಲಿ ಇದನ್ನು ಸೋಪ್ ನಲ್ಲಿ ಬಳಕೆ ಮಾಡುವುದನ್ನು ನಿಷೇಧ ಮಾಡಿದ್ದಾರೆ.ಇದು ನಮ್ಮ ಹೊಟ್ಟೆಗೆ ಸೇರಿದರೆ ನಮ್ಮ ಕರುಳಿನ ಮೇಲಿರುವ ಒಳ್ಳೆಯ ಬ್ಯಾಕ್ಟೀರಿಯಾ ಸತ್ತು ಹೋಗುತ್ತದೆ.
ಈ ಟೂತ್ ಪೇಸ್ಟ್ ಗಳಲ್ಲಿರುವ ಮತ್ತೊಂದು ಕೆಮಿಕಲ್ಸ್ ಯಾವುದೆಂದರೆ ಫ್ಲೋರೈಡ್ ನಾವು ಬಳಸುವ ಎಲ್ಲಾ ಟೂತ್ ಪೇಸ್ಟ್ ನಲ್ಲಿ ಫ್ಲೋರೈಡ್ ಇರುತ್ತದೆ ಇದು ನಮ್ಮ ಹಲ್ಲಿನ ಎನಾಮೆಲ್ ನ್ನು ಸರಿಪಡಿಸುತ್ತದೆ ಎಂದು ಹೇಳುತ್ತಾರೆ ಕೆಲವು ಡೆಂಟಿಸ್ಟ್ ಗಳು ಇದನ್ನು ಲಿಮಿಟ್ ನಲ್ಲಿ ಉಪಯೋಗಿಸಿದರೆ ಯಾವುದೇ ತೊಂದರೆ ಇಲ್ಲ ಎಂದು ಹೇಳುತ್ತಾರೆ.
ಇನ್ನು ಕೆಲವು ಡೆಂಟಿಸ್ಟ್ ಗಳು ಇದು ತುಂಬಾ ಅಪಾಯಕಾರಿ ಎಂದು ಹೇಳುತ್ತಾರೆ. ಯಾರು ಏನೇ ಹೇಳಿದರೂ ಫ್ಲೋರೈಡ್ ಒಂದು ವಿಷ ಎಂಬುದು ಸುಳ್ಳಲ್ಲ. ಇವುಗಳಿಂದ ಹಾನಿಯಾಗುತ್ತದೆ ಎಂಬುದು ಟೂತ್ ಪೇಸ್ಟ್ ಕಂಪನಿಯವರಿಗು ಗೊತ್ತಿರುತ್ತದೆ ಆದ್ದರಿಂದ ಅವರು ಟೂತ್ ಪೇಸ್ಟ್ ಡಬ್ಬಗಳ ಮೇಲೆ ಎಲ್ಲೋ ಒಂದು ಮೂಲೆಯಲ್ಲಿ ಇದನ್ನು ನುಂಗಬಾರದೆಂದು ಬರೆದಿರುತ್ತಾರೆ ಟಿವಿ ಜಾಹೀರಾತುಗಳಲ್ಲಿ ಇದನ್ನು ಹೇಳುವುದಿಲ್ಲ.
ಜಾಹೀರಾತುಗಳನ್ನು ನೋಡಿ ಅದಕ್ಕೆ ಮಾರು ಹೋಗಿ ಅವುಗಳನ್ನು ಖರೀದಿಸುವ ಬರದಲ್ಲಿ ಅವುಗಳಿಂದ ನಮಗೇನು ಹಾನಿ ಆಗುತ್ತದೆ ಎಂಬುದನ್ನು ನಾವು ಗಮನಿಸುವುದಿಲ್ಲ ಜಾಹೀರಾತುಗಳಲ್ಲಿ ತೋರಿಸುವ ವಿಷಯಗಳು ಎಲ್ಲವೂ ನಿಜವಾಗಿರುವುದಿಲ್ಲ.ನಾವು ಜಾಹೀರಾತುಗಳಿಗೆ ಮಾರು ಹೋಗಿ ನಮ್ಮ ಜೀವವನ್ನೂ ಅಪಾಯಕ್ಕೆ ಸಿಲುಕೀಸುತ್ತಿದ್ದೆವೆ ಇನ್ನಾದರೂ ಎಚ್ಚೆತ್ತುಕೊಳ್ಳೊಣ.