ಅಮಾವಾಸ್ಯೆಯಂದು ಜನಿಸಿದವರಲ್ಲಿ ಈ ಅಪರೂಪದ ಶಕ್ತಿಗಳು ಇರುತ್ತವೆ

0

ಭಾರತೀಯ ಸಂಪ್ರದಾಯದಲ್ಲಿ ಅಮಾವಾಸ್ಯೆಗೆ ತುಂಬಾ ಮಹತ್ತರವಾದ ದಿನವಾಗಿದೆ ಹಾಗೂ ಅಮಾವಾಸ್ಯೆಯಲ್ಲಿ ಕೆಲವರು ಹೊರಗಡೆ ಹೋಗುವುದಿಲ್ಲ ಹಿಂದಿನ ಕಾಲದಿಂದಲೂ ಚಂದ್ರನ ಹದಿನೈದು ಚಕ್ರಗಳು ಮಾನವನ ಅಂಗಶಾಸ್ತ್ರದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ ಎಂದು ನಂಬಿಕೊಂಡು ಬಂದಿದ್ದಾರೆ. ಚಂದ್ರನ ಚಕ್ರವು ಜಲಮೂಲಗಳ ಮೇಲೆಯೂ ಪ್ರಭಾವ ಬೀರುತ್ತದೆ ಇದರಿಂದಾಗಿ ಸಮುದ್ರದಲ್ಲೂ ಉಬ್ಬರವಿಳಿತಗಳೂ ಕಂಡು ಬರುತ್ತದೆ.

ಮನುಷ್ಯನ ನಡವಳಿಕೆಯ ಮೇಲೂ ಚಂದ್ರನು ಪ್ರಭಾವ ಬೀರುವುದರಿಂದ ವ್ಯಕ್ತಿಯು ಪ್ರಕ್ಷುಬ್ಧನಾಗಬಹುದು, ಇತರರಿಗೆ ಕಿರಿಕಿರಿಯುಂಟು ಮಾಡಬಹುದು ಅಥವಾ ಇತರರಿಗೆ ಕೆಟ್ಟವನಾಗಬಹುದು. ಆದ್ದರಿಂದ ಅಮಾವಾಸ್ಯೆ ಹಾಗೂ ಹುಣ್ಣಿಯ ಕುರಿತು ಹಲವಾರು ಆಚರಣೆಗಳು ಕೆಲವರಿಗೆ ಅಮವಾಸ್ಯೆ ಒಳ್ಳೆಯದಾ ಕೆಟ್ಟದ ಎಂಬ ಕುತೂಹಲ ಇರುತ್ತದೆ ನಾವು ಈ ಲೇಖನದ ಮೂಲಕ ಅಮಾವಾಸ್ಯೆಯ ಬಗ್ಗೆ ತಿಳಿದುಕೊಳ್ಳೋಣ.

ಅನೇಕರಲ್ಲಿ ಅಮಾವಾಸ್ಯೆಯ ದಿನ ಒಳ್ಳೆಯದಲ್ಲ ಎಂಬ ನಂಬಿಕೆ ಇದೆ ಅಮಾವಾಸ್ಯೆಯ ದಿನ ದುಷ್ಟ ಶಕ್ತಿಗಳು ಶಕ್ತಿ ಪಡೆಯುತ್ತದೆ ಹಾಗೂ ಸ್ವತಂತ್ರವಾಗಿ ಓಡಾಡುತ್ತದೆ ಎನ್ನುತ್ತಾರೆ ಮಾಟ ಮಂತ್ರಗಳನ್ನು ಮಾಡುವವರಿಗೆ ಅಮಾವಾಸ್ಯೆ ಸೂಕ್ತ ದಿನ ಎನ್ನಲಾಗುತ್ತದೆ ದೀಪಾವಳಿಯಂದು ಬರುವ ಅಮಾವಾಸ್ಯೆಯಲ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ ಹಾಗಾಗಿ ದೀಪಾವಳಿಯಂದು ದೇವರನ್ನು ಪೂಜಿಸಿ ದುಷ್ಟಶಕ್ತಿಗಳು ಬರದಂತೆ ದೀಪಗಳನ್ನು ಹಚ್ಚುತ್ತಾರೆ.

ದೇಶದ ಕೆಲವೊಂದು ಭಾಗಗಳಲ್ಲಿ ಮಹಾಕಾಳಿಯು ದುಷ್ಟಶಕ್ತಿಗಳನ್ನು ನಾಶ ಮಾಡುವುದರಿಂದ ಅಮಾವಾಸ್ಯೆಯಂದು ಮಹಾಕಾಳಿಯನ್ನು ಆರಾಧಿಸುತ್ತಾರೆ. ಗರುಡ ಪುರಾಣದಲ್ಲಿ ಮಹಾವಿಷ್ಣುವು ಪೂರ್ವಜರು ತಮ್ಮ ಆಹಾರವನ್ನು ಸೇವಿಸಲು ಅಮಾವಾಸ್ಯೆಯಂದು ತಮ್ಮ ವಂಶಸ್ಥರ ಬಳಿಗೆ ಬರುತ್ತಾರೆ ಮತ್ತು ಅವರಿಗೆ ಏನೂ ಅರ್ಪಿಸದಿದ್ದರೆ ಅಸಮಾಧಾನಗೊಳ್ಳುತ್ತಾರೆ ಎಂದು ಹೇಳುತ್ತಾನೆ.

ಆದ್ಧರಿಂದ ಅಮಾವಾಸ್ಯೆಯಂದು ಶ್ರಾದ್ಧವನ್ನು ಮಾಡಿ ಆಹಾರ ತಯಾರಿಸಿ ಪೂರ್ವಜರು ದೀಪಾವಳಿಯಂತಹ ಅನೇಕ ಹಬ್ಬಗಳನ್ನು ಅಮಾವಾಸ್ಯೆಯಂದು ಆಚರಿಸುತ್ತಾರೆ ಅಮಾವಾಸ್ಯೆ ಹೊಸ ಆರಂಭವನ್ನು ಸೂಚಿಸುತ್ತದೆ. ಅಮಾವಾಸ್ಯೆಯ ದಿನ ಗಂಡು ಮಕ್ಕಳು ಜನಿಸಿದರೆ ತುಂಬಾ ಒಳ್ಳೆಯದು ಅಮವಾಸ್ಯೆ ದಿನ ಹುಟ್ಟಿದ ಗಂಡು ಮಕ್ಕಳು ತುಂಬಾ ಧೈರ್ಯ ಶಾಲಿಗಳು ಆಗಿರುತ್ತಾರೆ ಹಾಗೆಯೇ ಜೀವನದಲ್ಲಿ ಮುಂದೆ ಬರುತ್ತಾರೆ

ಹಾಗೆ ಭೀಮನಂತೆ ಬಲವನ್ನು ಹೊಂದಿರುತ್ತಾರೆ ಕೋಪಿಸ್ಟರು ಆಗಿರುತ್ತಾರೆ ಇವರು ಯಾವುದೇ ಕಾರ್ಯ ಮಾಡುವಾಗಲೂ ತುಂಬಾ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ ಹೆಚ್ಚು ಅಭಿವೃದ್ಧಿ ಮಾರ್ಗಗಳಲ್ಲಿ ಹೋಗಲು ಇಷ್ಟ ಪಡುತ್ತಾರೆ ಒಂದು ವೇಳೆ ಕೆಟ್ಟ ಮಾರ್ಗಗಳಲ್ಲಿ ಹೋದರೆ ಅವರಷ್ಟು ಕೆಟ್ಟ ವ್ಯಕ್ತಿಗಳು ಬೇರೆ ಯಾರೂ ಇರುವುದಿಲ್ಲ ಹಾಗೆಯೇ ಜೀವನದಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ ಉದಾರ ಮನಸ್ಥಿತಿಯವರು ಪೂಜೆ ಪುನಸ್ಕಾರಗಳು ಅಮವಾಸ್ಯೆ ದಿನದಂದು ಮಾಡಿದರೆ ಒಳ್ಳೆಯದು .

ಗೋಚಾರದಲ್ಲಿ ಚೆನ್ನಾಗಿ ಗುರು ಮತ್ತು ಶನಿ ಇದ್ದರೆ ತುಂಬಾ ಮುನ್ನಡೆಯನ್ನು ಹೊಡುತ್ತಾರೆ ಹಾಗೆಯೇ ಶನಿ ಮತ್ತು ಗುರು ನೀಚ ಸ್ಥಾನದಲ್ಲಿ ಇದ್ದರೆ ಜೀವನದಲ್ಲಿ ತುಂಬಾ ತೊಂದರೆಗೆ ಒಳಗಾಗುತ್ತಾರೆ ಅಮಾವಾಸ್ಯೆಯ ಶುಕ್ರವಾರ ಮತ್ತು ಮಂಗಳವಾರ ಹುಟ್ಟಿದ ಹೆಣ್ಣು ಮಕ್ಕಳು ತುಂಬಾ ಏಳಿಗೆಯನ್ನು ಹೊಂದುತ್ತಾರೆ ಮದುವೆ ಮಾಡಿಕೊಂಡು ಹೋದರು ಸಹ ಗಂಡ ನ ಮನೆಗೆ ಏಳಿಗೆ ಆಗುತ್ತದೆ ಹಾಗೆಯೇ ಇವರು ಕಾಲಿಟ್ಟ ಮನೆಯಲ್ಲಿ ಹಣಕಾಸಿನ ಕೊರತೆ ಕಂಡುಬರುವುದಿಲ್ಲ .

ನಂಬಿಕೆಯ ಪ್ರಕಾರ ಅಮಾವಾಸ್ಯೆಯ ದಿನ ಉಪವಾಸ ಮಾಡಿದರೆ ಆಸೆಗಳೆಲ್ಲವೂ ಈಡೇರುತ್ತದೆ ಅಮಾವಾಸ್ಯೆಯ ದಿನ ಐದು ಹಣ್ಣುಗಳನ್ನು ಹಸುವಿಗೆ ನೀಡಬೇಕು ಹೀಗಾಗಿ ಮನೆಯಲ್ಲಿ ಸಂತೋಷ ನೆಲೆಸಿರುತ್ತದೆ ಮೀನುಗಳಿಗೆ ಗೋದಿ ಹಿಟ್ಟಿನ ಉಂಡೆಯನ್ನು ಹಾಕಬೇಕು ಇದರಿಂದ ವ್ಯಕ್ತಿಗೆ ಪೂರ್ವಜರಿಂದ ಆಶೀರ್ವಾದ ಸಿಗುತ್ತದೆ. ಹಾಗೆಯೇ ಮನೆ ದೇವರ ಆಶೀರ್ವಾದವನ್ನು ಸುಲಭವಾಗಿ ಪಡೆಯಬಹುದು ಆದಾಯ ಮತ್ತು ಸಂಪತ್ತಿಗೆ ಸಂಭಂದಿಸಿದ ಎಲ್ಲ ಸಮಸ್ಯೆಗಳು ನಿವಾರಣೆ ಆಗುತ್ತದೆ

ಅಮವಾಸ್ಯೆಯ ದಿನ ಬಿಳಿ ಅಕ್ಕಿಯನ್ನು ಕುಕುಮದಲ್ಲಿ ಮಿಶ್ರಣ ಮಾಡಿ ಶಂಖದ ಒಳಗೆ ಇರಿಸಿ ತುಪ್ಪದ ದೀಪವನ್ನು ಹಚ್ಚಬೇಕು ಹಾಗೂ ಓಂ ಬ್ರಿಂ ಶ್ರೀಯ ಭಟ್ ಮಂತ್ರವನ್ನು ಹನ್ನೊಂದು ಬಾರಿ ಜಪಿಸಬೇಕು ನಂತರ ಎಲ್ಲವನ್ನೂ ಒಟ್ಟುಗೂಡಿಸಿ ನದಿಯಲ್ಲಿ ಬಿಡಬೇಕು ಹೀಗೆ ಮಾಡುವುದರಿಂದ ಹಣದ ಹರಿವು ಹೆಚ್ಚುತ್ತದೆ ಹಾಗೂ ಶ್ರೀಮಂತರಾಗಬಹುದು ಹಾಗೆಯೇ ಕಷ್ಟ ಪಟ್ಟು ಕೆಲಸವನ್ನು ಮಾಡಬೇಕು ಹೀಗೆ ಅಮವಾಸ್ಯೆ ಪ್ರಸಿದ್ದಿಯನ್ನು ಪಡೆದಿದೆ.

Leave A Reply

Your email address will not be published.

error: Content is protected !!