2020 ನೇ ಇಸ್ವಿ ಹಾಗೂ 2021ನೇ ಇಸ್ವಿ ನಮ್ಮ ಪಾಲಿಗೆ ಅದರಲ್ಲೂ ಕನ್ನಡ ಚಿತ್ರರಂಗಕ್ಕೆ ಕರಾಳ ವರ್ಷವಾಗಿದೆ. ಚಿರು ಸರ್ಜಾ ಅವರು ಹಠಾತ್ತನೆ ಮರಣ ಹೊಂದಿದ್ದು ಮೇಘನಾ ಅವರು ಶಾಕ್ ನಿಂದ ಹೊರಬಂದು ಮತ್ತೆ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ‌. ಹಾಗಾದರೆ ಮೇಘನಾ ರಾಜ್ ಅವರು ಯಾವ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಆಟಗಾರ ಸಿನಿಮಾದ ನಾಯಕ ಚಿರು ಸರ್ಜಾ ಹಾಗೂ ನಟಿ ಮೇಘನಾ ರಾಜ್ ಅವರು 8 ವರ್ಷಗಳ ಕಾಲ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಸಿನಿಮಾ ನಟ ಸುಂದರರಾಜ್ ಹಾಗೂ ನಟಿ ಪ್ರಮೀಳಾ ಜೋಷಾಯಿ ಅವರ ಮಗಳೆ ಮೇಘನಾ ರಾಜ್. ಚಿರು ಹಾಗೂ ಮೇಘನಾ ಎರಡು ಮನೆಯವರು ಒಪ್ಪಿದ ನಂತರ ಕ್ರಿಶ್ಚಿಯನ್ ಸಂಪ್ರದಾಯದಂತೆ ಹಾಗೂ ಹಿಂದೂ ಸಂಪ್ರದಾಯದಂತೆ ಮದುವೆಯಾದರು. ಬಹಳ ಸಂತೋಷದಿಂದ ಇದ್ದರು ಮನೆಯಲ್ಲಿ ಸಂತಸದ ವಾತಾವರಣ ಮನೆಮಾಡಿತ್ತು. ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರ ವಿವಾಹದಲ್ಲಿ ಮೇಘನಾ ರಾಜ್ ಹಾಗೂ ಚಿರು ಸರ್ಜಾ ಅವರು ಬಹಳ ಸಂತೋಷದಿಂದ, ಲವಲವಿಕೆಯಿಂದ ಪಾಲ್ಗೊಂಡಿದ್ದರು.

ಮೇಘನಾ ಅವರು ಮದುವೆಯಾಗಿ ಎರಡು ವರ್ಷಕ್ಕೆ ಗರ್ಭಿಣಿಯಾದರು. 2020 ರಲ್ಲಿ ಇದ್ದಕ್ಕಿದ್ದಂತೆ ಚಿರು ಅವರು ಹೃದಯಾಘಾತದಿಂದ ಸಾವನ್ನಪ್ಪಿದರು. ಮೇಘನಾ ಅವರಿಗೆ ದೊಡ್ಡ ಶಾಕ್ ಆಯಿತು. ತಮ್ಮ ಮಗುವಿಗಾಗಿ ದುಃಖವನ್ನು ಸಹಿಸಿಕೊಂಡರು. ಚಿರು ಮತ್ತೆ ಮೇಘನಾ ಅವರ ಮಡಿಲಿಗೆ ಬಂದಂತೆ ಮೇಘನಾ ಅವರು ಗಂಡು ಮಗುವಿಗೆ ಜನ್ಮ ನೀಡುತ್ತಾರೆ. ಮಗು ಜನಿಸಿದ ಕೆಲವೆ ದಿನಗಳಲ್ಲಿ ಎಲ್ಲೆಡೆ ಕೊರೋನ ವೈರಸ್ ಹರಡುತ್ತಿರುವ ಕಾರಣ ಮೇಘನಾ ಅವರ ತಾಯಿಗೆ ಕೊರೋನ ತಗುಲಿತು ನಂತರ ಗುಣವಾಯಿತು. ನಂತರ ಮಗುವಿಗೆ ಸಂಬಂಧಿಸಿದ ಶಾಸ್ತ್ರಗಳನ್ನು ಪೂರೈಸಿದರು ಅಂತೆಯೆ ರಾಯನ್ ಎಂದು ಹೆಸರಿಡುವ ಮೂಲಕ ನಾಮಕರಣ ಮಾಡಿದರು.

ನಟಿ ಮೇಘನಾ ರಾಜ್ ಬಹಳ ದಿನಗಳ ನಂತರ ರಿಯಾಲಿಟಿ ಶೊ ಹಾಗೂ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಡ್ಯಾನ್ಸಿಂಗ್ ಚಾಂಪಿಯನ್ ಎಂಬ ದೊಡ್ಡ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಮೇಘನಾ ರಾಜ್ ಅವರು ಕಾಣಿಸಿಕೊಂಡಿದ್ದಾರೆ. ಅದರಂತೆ ಪ್ರತಿಷ್ಠಿತ ಬ್ರ್ಯಾಂಡ್ ಒಂದರ ಜಾಹಿರಾತಿನಲ್ಲಿ ಅಭಿನಯಿಸುತ್ತಿದ್ದಾರೆ. ಪನ್ನಾಗಭರಣ ನಿರ್ದೇಶಿಸುತ್ತಿರುವ ಜಾಹೀರಾತಿನ ಚಿತ್ರೀಕರಣ ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ನಡೆಯುತ್ತಿದ್ದು. ಗೆಳೆಯ ಚಿರು ಸರ್ಜಾ ಅವರ ಕನಸನ್ನು ಈಡೇರಿಸಲು ಪನ್ನಾಗಭರಣ ನಿರ್ಮಾಣದಲ್ಲಿ ಮೇಘನಾ ರಾಜ್ ಮುಖ್ಯ ಪಾತ್ರದಲ್ಲಿ ಚಿತ್ರವೊಂದು ತಯಾರಾಗುತ್ತಿದೆ. ಅಧಿಕೃತವಾಗಿ ಈ ಚಿತ್ರದ ಪ್ರಕಟಣೆಯನ್ನು ಮೇಘನಾ ರಾಜ್ ಹಾಗೂ ಪನ್ನಾಗಭರಣ ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಮೇಘನಾ ಅವರು ಪುನಃ ಶೂಟಿಂಗ್ ಗೆ ಮರಳಿದ್ದು ಅವರ ಫೋಟೊ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಬಹುದು. ಮೇಘನಾ ಅವರ ಮುಂದಿನ ಕನಸು ಈಡೇರಲಿ ಎಂದು ಆಶಿಸೋಣ.

By admin

Leave a Reply

Your email address will not be published. Required fields are marked *

error: Content is protected !!
Footer code: