WhatsApp Group Join Now
Telegram Group Join Now

ನಮ್ಮೆಲ್ಲರಿಗೂ ತಿಳಿದಿರುವ ಹಾಗೆ ಹಿಂದಿನ ಕಾಲದಲ್ಲಿ ಎಲ್ಲರೂ ಚಿಮಣಿ ದೀಪ ಉಪಯೋಗಿಸಿ ಜೀವನ ಸಾಗಿಸುತ್ತಾ ಬಂದರು ಕಾಲ ಕ್ರಮೇಣ ಆಧುನಿಕ ಪದ್ಧತಿ ಬೆಳೆದಂತೆಲ್ಲ ತಮ್ಮ ಜೀವನ ಶೈಲಿಯನ್ನು ಕೂಡ ಬದಲಿಸಿಕೊಳ್ಳಲು ಶುರುಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ವಿದ್ಯುತ್ ನ ಸಂಪರ್ಕ ಇಲ್ಲ ಅಂದ್ರೆ ಯಾವ ಕೆಲಸವನ್ನು ಕೂಡ ಕ್ರಮಬದ್ದವಾಗಿ ಮಾಡಲು ಸಾಧ್ಯವೇ ಇಲ್ಲ ಹಾಗಾಗಿ ಹೊಸದಾಗಿ ತಮ್ಮ ಮನೆಗೆ ವಿದ್ಯುತ್ ಪಡೆಯಲು ಏನೆಲ್ಲಾ ನಿಯಮ ಅನುಸರಿಸಬೇಕು ಎಂದು ನಮ್ಮ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ

ವಿದ್ಯುತ್ ಕನೆಕ್ಷನ್ ತೆಗೆದುಕೊಳ್ಳುವುದಕ್ಕೆ ಎರಡು ವಿಧಾನಗಳಿವೆ.
ಮೊದಲನೆ ವಿಧಾನ ಆನ್ಲೈನ್, ಎರಡನೇ ವಿಧಾನ ಆಫ್ಲೈನ್
ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿ ಜೆಸ್ಕಾಂ, ಮೆಸ್ಕಾಂ,ಹೆಸ್ಕಾಂ,ಬೆಸ್ಕಾಂ ಇವುಗಳ ನಿರ್ದಿಷ್ಟ website ಅರ್ಜಿ ಸಲ್ಲಿಸಬಹುದು.

ಇನ್ನೂ ಆಫ್ಲೈನ್ ಅಲ್ಲಿ ಕೂಡ ಅರ್ಜಿ ಸಲಿಸಬಹುದು ಅದು ಹೇಗೆ ಅನ್ನೋದನ್ನ ನೋಡೋಣ ಬನ್ನಿ.
ತನ್ನ ಮನೆಗೆ ಹೊಸದಾಗಿ ವಿದ್ಯುತ್ ಸಂಪರ್ಕವನ್ನು ಪಡೆಯುವ ವ್ಯಕ್ತಿಯು ತನ್ನ ಆಧಾರ್ ಕಾರ್ಡ್(ಅಡ್ರೆಸ್ಸ್ ಪ್ರೂಫ್ ಮತ್ತು ಐಡಿ ) ಅನ್ನು ಲಗತಿಸ್ಬೇಕು. ಕಂದಾಯ ರಶೀದಿ (tax paid receipt) ಅನ್ನು ಗ್ರಾಮೀಣ ಭಾಗದಲ್ಲಿ ತಮ್ಮ ಸ್ಥಳೀಯ ಗ್ರಾಮ ಪಂಚಾಯತಿ ಅಲ್ಲಿ ಪಡೆಯಬೇಕು. ನಗರದಲ್ಲಿ ಹೊಸ ಕನೆಕ್ಷನ್ ಪಡೆಯಬೇಕಾದರೆ ಅಲ್ಲಿನ. ಸಂಬಂಧಪಟ್ಟ ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಅಲ್ಲಿ ಕೊಡುವ ಮನೆ ಕಂದಾಯ ರಶೀದಿ ಪಡೆಯಬೇಕು.

ತಮ್ಮ ಎರಡು ಪಾಸ್ಪರ್ಟ್ ಸೈಜ್ ಫೋಟೋ ಅನ್ನು ಕೊಡ್ಬೇಕು
ತಮ್ಮ ಪ್ರದೇಶಕ್ಕೆ ಸಂಭಂದ ಪಟ್ಟ ಸ್ಥಳೀಯ ಸಂಸ್ಥೆ ಕೊಡುವ ನೋ ಒಬ್ಜಕ್ಷನ್ ಸರ್ಫೈಕ್ಯಾಟೆ ತೆಗೆದುಕೊಳ್ಳಬೇಕು. ಈ ಮೇಲಿನ ಎಲ್ಲಾ ದಾಖಲೆ ಜೊತೆಗೆ ಸಂಬಂಧಪಟ್ಟ ವಿದ್ಯುತ್ ಇಲಾಖೆ ಗೆ ಹೋಗಿ ಸಲ್ಲಿಸಬೇಕು.ಅದರ ಜೊತೆಗೆ ಮುಂಗಡ ಹಣವನ್ನು ಕಟ್ಟಿ ರಶೀದಿ ಪಡೆಯಬೇಕು. ಎಲ್ಲವನ್ನು ಪರಿಶೀಲಿಸಿದ ಅಧಿಕಾರಿಗಳು ತಕ್ಷಣ ಮನೆಗೆ ನಿಯಮಾನುಸಾರವಾಗಿ ಹೊಸ ಸಂಪರ್ಕ ಕೊಡುತ್ತಾರೆ.

ಇಲ್ಲಿ ಮುಖ್ಯ ವಾಗಿ ಗಮನಿಸಬೇಕಾದ ಅಂಶವೆಂದರೆ ಮೊದಲು ತಾತ್ಕಾಲಿಕ ಸಂಪರ್ಕ ಬಳಕೆಗೆ ಕೊಡುತ್ತಾರೆ ನಂತರ ನಮ್ಮ ಬಳಕೆಯ ಅನುಸಾರ ವಿದ್ಯುತ್ ಲೆಕ್ಕ ಹಾಕಿ ಖಾಯಂ ಅನುಮತಿ ನೀಡುತ್ತಾರೆ. ತಾತ್ಕಾಲಿಕ ವಿದ್ಯುತ್ ಕನೆಕ್ಷನ್ ಪ್ರಿಪೇಯ್ಡ್ ರಿಚಾರ್ಜ್ ಮಾಡ್ಬೇಕು ಕೊನೆಗೂ ಹೊಸ R R ವಿದ್ಯುತ್ ಕನೆಕ್ಷನ್ ಕೊಡುತ್ತಾರೆ.

ಹೊಸ ವಿದ್ಯುತ್ ಸಂಪರ್ಕದಲ್ಲಿ ಪಾಲಿಸಬೇಕಾದ ನಿಯಮಗಳು
ಮುಂಗಡ ಠೇವಣಿ ಪಾವತಿಸಿದ ನಂತರ ವ್ಯಾಟ್ ಬಳಕೆ ಆಧಾರದ ಮೇಲೆ ಅವಲಂಬನೆಯಾಗುತ್ತದೆ.
ಉದಾಹರಣೆಗೆ.. 1kw h ಅಂದಾಜು 500/600 ರೂಪಾಯಿ ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಉಪಯೋಗಿಸುತ್ತಾರೆ. ನಗರ ಪ್ರದೇಶದಲ್ಲಿ 1khw – 5kWh ಉಪಯೋಗಿಸುತ್ತಾರೆ ಎಂಬ ಮಾಹಿತಿ ಇದೆ.
ಮೊದಲಿಗೆ ತಾತ್ಕಾಲಿಕ ಸಂಪರ್ಕ ಜೊತೆಗೆ ಪ್ರಿಪೇಯ್ಡ್ ಮೀಟರ್ ನಂತ್ರ ತಿಂಗಳ ನಂತರ ವಿದ್ಯುತ್ ಸರಾಸರಿ ಬಳಕೆಯ ಮೇರೆಗೆ ಹೊಸ R R ನಂಬರ್ ಕೊಡುತ್ತಾರೆ. ನಗರ ವಿದ್ಯುತ್ ಸರಬರಾಜು ಅವರ ಅನುಮತಿ ಮೇರೆಗೆ ಅರ್ಹ ಅಭ್ಯರ್ಥಿ ಮೀಟರ್ ಕೊಡುತ್ತಾರೆ. ಉಳಿದ ಉಪಕರಣಗಳು ಅಂದ್ರೆ ಸಪೋಟಿಂಗ್ ಬೋರ್ಡ್ ವೈರ್ ಇವೆಲ್ಲವನ್ನು ನಾವೇ ಸರಬರಾಜು ಮಾಡ್ಬೇಕು. ಕೊನೆಗೆ ಸಂಬಂಧಪಟ್ಟ ಲೈನ್ ಮ್ಯಾನ್ ಮನೆಗೆ ಬಂದು ಜೋಡಿಸುತ್ತಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: