ಹೆಂಗಸರಿಗೆ ಹೆಚ್ಚು ಇಷ್ಟವಾಗೋದು ಈ 7 ರೀತಿಯ ಗಂಡಸರು ಮಾತ್ರ

0

ಗಂಡಿರಲಿ, ಹೆಣ್ಣಿರಲಿ ಶಾರೀರಿಕ ಸಂತೋಷವನ್ನು ಬಯಸುವುದು ಸಹಜ. ಮಹಿಳೆಯರು ತಮ್ಮ ಮನಸನ್ನು ಬಹುಬೇಗನೆ ಕೊಡುವುದಿಲ್ಲ. ಅವರು ಕೆಲವು ಲಕ್ಷಣಗಳನ್ನು ಹೊಂದಿದ ಪುರುಷರಿಗೆ ಮನಸೋಲುತ್ತಾರೆ. ಹಾಗಾದರೆ ಯಾವ ರೀತಿಯ ಪುರುಷರನ್ನು ಮಹಿಳೆಯರು ಇಷ್ಟಪಡುತ್ತಾರೆ ಎಂಬುದರ ಬಗ್ಗೆ ಕಾಮಸೂತ್ರದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಪ್ರಕೃತಿ ಸಹಜವಾದ ಶಾರೀರಿಕ ಸಂತೋಷದ ಬಗ್ಗೆ ಕಾ’ಮಶಾಸ್ತ್ರದಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ. ಸನಾತನ ಕಾಲದ ಶಿವ-ಪಾರ್ವತಿಯರ ಪವಿತ್ರ ಪ್ರೇಮ ಸಂವಾದಗಳನ್ನು ಕೇಳಿ ಶಿವನ ವಾಹನ ನಂದಿ ಸುಂದರ ಸಂಸಾರದ ಬಗ್ಗೆ ಕೆಲವು ಉಲ್ಲೇಖಗಳನ್ನು ಮಾಡಿದನು. ನಂತರ ಆಚಾರ್ಯ ಶ್ವೇತಕೇತು ಋಷಿಗಳು ನಂದಿಯ ಉಲ್ಲೇಖಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿದರು. ನಂತರ ಕೊನೆಯದಾಗಿ ವಾತ್ಸಾಯನ ಋಷಿ ಇನ್ನಷ್ಟು ಅಭಿವೃದ್ಧಿಗೊಳಿಸಿ ಕಾಮಸೂತ್ರ ಎಂದು ಹೆಸರಿಟ್ಟನು. ಕಾ’ಮಸೂತ್ರ ಸ್ವೇಚ್ಛಾಚಾರ, ಅಕ್ರಮ ಅ’ತ್ಯಾಚಾರಿಗಳಿಗೆ ದಾರಿ ಹುಡುಕುವುದಲ್ಲ. ಧರ್ಮವು ಇಂದ್ರೀಯ ಸುಖವನ್ನು ಪಾವಿತ್ರ್ಯತೆಯಿಂದ ಮಾಡಿಕೊಳ್ಳಬೇಕು ಎಂದು ಹೇಳುತ್ತದೆ. ಕಾಮಸೂತ್ರದ ಪ್ರಕಾರ ಏಳು ರೀತಿಯ ಪುರುಷರು ಮಹಿಳೆಯರಿಗೆ ಇಷ್ಟವಾಗುತ್ತಾರೆ. ಮಹತ್ವಾಕಾಂಕ್ಷೆಯುಳ್ಳ ಮತ್ತು ಉತ್ಸಾಹಿಯಾಗಿರುವ ಪುರುಷರನ್ನು ಸ್ತ್ರೀಯರು ಇಷ್ಟಪಡುತ್ತಾರೆ. ಒಂದೆ ಸ್ಥಿತಿಯಲ್ಲಿ ಇರುವ ಪುರುಷರೆಂದರೆ ಸ್ತ್ರೀಯರಿಗೆ ಇಷ್ಟವಾಗುವುದಿಲ್ಲ. ಗುರಿಯನ್ನು ಇಟ್ಟುಕೊಂಡು ಅದರತ್ತ ಸಾಗುವ ಪುರುಷರೆಂದರೆ ಮಹಿಳೆಯರು ಇಷ್ಟಪಡುತ್ತಾರೆ.

ಸಾಹಸಿ ಸ್ವಭಾವದ ಪುರುಷರೆಂದರೆ ಮಹಿಳೆಯರಿಗೆ ಇಷ್ಟ. ಸೌಮ್ಯ ಸ್ವಭಾವದ ಪುರುಷರೊಂದಿಗೆ ಮಾತು, ಸ್ನೇಹ ಒಳ್ಳೆಯದೆನಿಸಿದರೂ ಭದ್ರತೆಯ ಮನೋಭಾವನೆ ಮಹಿಳೆಯರಲ್ಲಿ ಬರುವುದಿಲ್ಲ. ಅಗತ್ಯ ಬಿದ್ದಾಗ ತನ್ನೊಂದಿಗೆ ಇರುವ ಮಹಿಳೆಯನ್ನು ರಕ್ಷಣೆ ಮಾಡಲು ಆಗದೆ ಇರುವ ಪುರುಷನನ್ನು ಮಹಿಳೆಯರು ಇಷ್ಟಪಡುವುದಿಲ್ಲ. ಮಹಿಳೆಯರು ಭಾವನಾ ಜೀವಿಗಳಾಗಿರುತ್ತಾರೆ. ಭಾವನಾರಹಿತನಾದ ಪುರುಷನೆಂದರೆ ಮಹಿಳೆಯರಿಗೆ ಇಷ್ಟವಾಗುವುದಿಲ್ಲ. ಹೆಂಡತಿಯ ಭಾವನೆಗಳಿಗೆ, ಕಣ್ಣೀರಿಗೆ ಬೆಲೆ ಕೊಡುವ ಪುರುಷ ಮಹಿಳೆಗೆ ಹತ್ತಿರವಾಗುತ್ತಾನೆ. ಪ್ರೇಮದಲ್ಲಿ ಬೂಟಾಟಿಕೆ ಇದ್ದರೆ ಅಂತಹ ಪುರುಷನನ್ನು ಮಹಿಳೆ ಹತ್ತಿರವೂ ಸೇರಿಸುವುದಿಲ್ಲ. ಸ್ವಚ್ಛವಾದ ಪ್ರೀತಿಯನ್ನು ತೋರಿಸುವ ಪುರುಷರೆಂದರೆ ಮಹಿಳೆಯರಿಗೆ ಇಷ್ಟವಾಗುತ್ತದೆ. ನಂಬಿಸಿ ಮೋಸ ಮಾಡುವ, ಪರ ಸ್ತ್ರಿ ಸಹವಾಸ ಹೊಂದಿರುವ ಪುರುಷರನ್ನು ಮಹಿಳೆಯರು ಇಷ್ಟಪಡುವುದಿಲ್ಲ.

ಜ್ಞಾನವುಳ್ಳ ಪುರುಷನು ಮಹಿಳೆಗೆ ಇಷ್ಟವಾಗುತ್ತಾನೆ. ಸ್ತ್ರೀಯರು ತಾವೆಷ್ಟೇ ಬುದ್ಧಿವಂತರಾಗಿದ್ದರೂ ತನ್ನ ಗಂಡ ತನಗಿಂತ ಹೆಚ್ಚು ಬುದ್ದಿವಂತನಾಗಿರಲಿ ಎಂದು ಬಯಸುತ್ತಾರೆ. ಕಲಾತ್ಮಕ ಪುರುಷರೆಂದರೆ ಮಹಿಳೆಯರಿಗೆ ಇಷ್ಟವಾಗುತ್ತಾರೆ. ಪುರುಷರಿಗೆ ಸಂಗೀತ, ನೃತ್ಯ, ಮುಂತಾದವುಗಳ ಬಗ್ಗೆ ಸ್ವಲ್ಪವಾದರೂ ಜ್ಞಾನವಿರಬೇಕು. ಸ್ವಾತಂತ್ರ್ಯ ಪ್ರಿಯನಾಗಿರುವ ಪುರುಷರನ್ನು ಸ್ತ್ರೀಯರು ಇಷ್ಟಪಡುತ್ತಾರೆ. ಗಂಡನ ಪ್ರೇಮ ಹೆಂಡತಿಯ ಉಸಿರು ಕಟ್ಟುವಂತಿರಬಾರದು ಹೆಂಡತಿಗೂ ಸ್ವತಂತ್ರ ಕೊಡುವ ಪುರುಷನೆಂದರೆ ಮಹಿಳೆಯರಿಗೆ ಇಷ್ಟವಾಗುತ್ತಾರೆ. ಇಂತಹ ಸ್ವಭಾವಗಳು ಇಲ್ಲದ ಪುರುಷರು ತಮ್ಮ ಸ್ವಭಾವದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಉತ್ತಮ.

Leave A Reply

Your email address will not be published.

error: Content is protected !!