WhatsApp Group Join Now
Telegram Group Join Now

ಜಗತ್ತಿನ ಮುಂದೆ ತಮ್ಮನ್ನು ತಾವು ಚೆನ್ನಾಗಿ ತೋರಿಸಿಕೊಳ್ಳಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ
ಹೌದು ಎಲ್ಲರಿಗೂ ಹಲವಾರು ಜನಗಳ ಮುಂದೆ ತಮ್ಮನ್ನು ತಾವು ಚೆನ್ನಾಗಿ ತೋರಿಸಿಕೊಳ್ಳಬೇಕು ಮತ್ತು ತಮ್ಮ ಬಾಹ್ಯ ಸೌಂದರ್ಯ ಚೆನ್ನಾಗಿ ಇರಬೇಕು ಮತ್ತು ಅದಕ್ಕೆ ಹಲವಾರು ಜನರು ಮೆಚ್ಚುಗೆ ವ್ಯಕ್ತ ಪಡಿಸಬೇಕು ಎಂಬುದು ಬಹುತೇಕರ ಆಸೆಯಾಗಿರುತ್ತದೆ

ಬದಲಾದಂತಹ ಇತ್ತೀಚಿನ ದಿನಮಾನಗಳಲ್ಲಿ ನಾವು ನಮ್ಮ ಬಾಹ್ಯ ಸೌಂದರ್ಯದ ಜೊತೆಗೆ ಬೇರೆಯವರನ್ನು ಆಕರ್ಷಿಸಬೇಕು ಎನ್ನುವ ಆಸೆ ಎಲ್ಲರಲ್ಲೂ ಸಾಮಾನ್ಯವಾಗಿ ಮನೆಮಾಡಿರುತ್ತದೆ ಹಾಗಾದರೆ ನಾವು ನಮ್ಮನ್ನು ಹೊರಜಗತ್ತಿಗೆ ಅಂದರೆ ಬಾಹ್ಯ ಜಗತ್ತಿಗೆ ಹೇಗೆ ಬೇಕು ಹಾಗೆ ತೋರಿಸಿಕೊಂಡರೆ ಜನರು ನಮ್ಮತ್ತ ಆಕರ್ಷಿತರಾಗುತ್ತಾರಾ? ಈ ಪ್ರಶ್ನೆಗೆ ಉತ್ತರ ಖಂಡಿತ ಇಲ್ಲ.

First impression is the best impression ಎಂಬ ಮಾತನ್ನು ನಾವು ಸಾಮಾನ್ಯವಾಗಿ ಕೇಳಿರುತ್ತೇವೆ
ಹಾಗಾಗಿ ನಾವು ನಮ್ಮ ಮೊದಲ ಭೇಟಿಯಲ್ಲೇ ಜನರನ್ನು ನಮ್ಮತ್ತ ಸೆಳೆಯುವುದು ಹೇಗೆಂದರೆ ನಾವು ಧರಿಸುವಂತಹ ಬಟ್ಟೆ ಅಂದರೆ ನಮ್ಮ ಡ್ರೆಸ್ ಸೆನ್ಸ್ ತುಂಬಾ ಚೆನ್ನಾಗಿರಬೇಕು

ಆ ಡ್ರೆಸ್ಸಿಂಗ್ ಸೆನ್ಸ್ ಹೇಗೆ ಇರಬೇಕು ಎಂಬುದರ ಬಗ್ಗೆ ನಾವಿಂದು ನಿಮಗೆ ತಿಳಿಸಿ ಕೊಡುತ್ತಿದ್ದೇವೆ
ಮೊದಲನೆಯದಾಗಿ ನಾವು ಧರಿಸುವಂತಹ ಶರ್ಟ್ ಗಳ ಕಲರ್ಸ್ ಸೆಲೆಕ್ಷನ್
ಹೌದು ನಾವು ಧರಿಸುವಂತಹ ಶರ್ಟ್ ನ ಬಣ್ಣ ನಮ್ಮ ಚರ್ಮದ ಬಣ್ಣಕ್ಕೆ ಹೋಲಿಕೆಯಾಗುವ ಇರಬೇಕು
ಉದಾಹರಣೆಗೆ ನಮ್ಮದು ಕಪ್ಪು ಬಣ್ಣದ ಚರ್ಮವಾಗಿದ್ದರೆ ಕಡುಗಪ್ಪು ಬಣ್ಣದ ಶರ್ಟ್ ಅನ್ನು ಧರಿಸುವುದು ಅಸಭ್ಯವಾಗಿ ಕಾಣಿಸುತ್ತದೆ

ಸಾಮಾನ್ಯವಾಗಿ ಎಲ್ಲರೂ ತಮ್ಮ ಶರ್ಟ್ ಗಳಿಗೆ ಕೊಡುವಂತಹ ಪ್ರಾಮುಖ್ಯತೆಯನ್ನು ಪ್ಯಾಂಟ್ ಗಳಿಗೆ ಕೊಡುವುದಿಲ್ಲ ನಿಮ್ಮ ಔಟ್ಲುಕ್ ಚೆನ್ನಾಗಿ ಇರಬೇಕು ಎಂದರೆ ನಾವು ಎಷ್ಟು ಶರ್ಟ್ ಗಳಿಗೆ ಪ್ರಾಮುಖ್ಯತೆಯನ್ನು ಕೊಡುತ್ತೇವೆ ಅಷ್ಟೇ ಪ್ರಾಮುಖ್ಯತೆಯನ್ನು ನಮ್ಮ ಪ್ಯಾಂಟ್ ಗಳಿಗೂ ಕೂಡ ಕೊಡಬೇಕಾಗಿರುತ್ತದೆ ಅಲ್ಲದೆ ನಮ್ಮ ಶರ್ಟ್ ನ ಕಲರ್ ನಮ್ಮ ಪ್ಯಾಂಟ್ನ ಕಲರ್ ಜೊತೆಗೆ ಹೊಂದಾಣಿಕೆಯಾಗುತ್ತದೆಯೇ ಎಂಬುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ

ನಾವು ಧರಿಸುವ ಶರ್ಟ್ ನಮ್ಮ ಪ್ಯಾಂಟ್ ಕಲರ್ ನ ಜೊತೆಗೆ ಹೊಂದಾಣಿಕೆ ಯಾಗುವುದು ಮತ್ತು ನಮ್ಮ ಚರ್ಮದ ಬಣ್ಣಕ್ಕೆ ಹೊಂದಾಣಿಕೆ ಯಾವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ನಮ್ಮ ಶರೀರಕ್ಕೆ ಫಿಟ್ ಆಗುವಂತಹ ಧರಿಸು ಗಳನ್ನು ಧರಿಸುವುದು ಕೂಡ ಆಗಿರುತ್ತದೆ ಹಾಗಾಗಿ ನಮ್ಮ ಬಾಡಿಗೆ ಫಿಟ್ ಆಗುವಂತಹ ಬಟ್ಟೆಗಳನ್ನು ಧರಿಸುವುದು ಇಲ್ಲಿ ಮುಖ್ಯ

ಅಷ್ಟೇ ಅಲ್ಲದೆ ಯಾವುದೇ ಕಾರಣಕ್ಕೂ ತುಂಬಾ ತೆಳ್ಳಗಿರುವ ಅಥವಾ ದಪ್ಪಗಿರುವ ವ್ಯಕ್ತಿಗಳು ತಮ್ಮ ದೇಹಕ್ಕೆ ಫಿಟ್ ಆಗಿರುವಂತಹ ಬಟ್ಟೆಗಳನ್ನು ಧರಿಸಬಾರದು ಇದರಿಂದ ಅವರ ಬಾಹ್ಯ ಸೌಂದರ್ಯ ಕಡಿಮೆಯಾಗುತ್ತದೆ ಹೀಗೆ ತೆಳ್ಳಗಿರುವ ಮತ್ತು ತುಂಬಾ ದಪ್ಪಗಿರುವ ವ್ಯಕ್ತಿಗಳು ತಮ್ಮ ದೇಹಕ್ಕೆ ಅನುಗುಣವಾಗಿ ಒಂದಿಂಚು ಹೆಚ್ಚಾಗಿರುವಂತಹ ಬಟ್ಟೆಗಳನ್ನು ಧರಿಸುವುದು ಒಳಿತು

ಅಷ್ಟು ಮಾತ್ರವಲ್ಲ ನಾವು ಎಷ್ಟೇ ಚೆನ್ನಾಗಿ ಬಟ್ಟೆಗಳನ್ನು ಧರಿಸಿದರೆ ಅದರೊಂದಿಗೆ ಚಪ್ಪಲಿಗಳನ್ನು ಧರಿಸಿದರೆ ನಾವು ಹೊರಜಗತ್ತಿಗೆ ಅಷ್ಟು ಸುಂದರವಾಗಿ ಕಾಣಲಾರೆವು ಹಾಗಾಗಿ ನಾವು ಧರಿಸುವ ಬಟ್ಟೆಗಳಿಗೆ ಹೊಂದಾಣಿಕೆ ಆಗುವಂತಹ ಶೂಸ್ ಗಳನ್ನು ಧರಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಜೊತೆಗೆ ನಾವು ಧರಿಸಿರುವ ಬಟ್ಟೆಗಳಿಗೆ ಅನುಗುಣವಾದಂತಹ ಕೈಗಡಿಯಾರಗಳನ್ನು ನಾವು ಬಳಸಲೇಬೇಕಾಗುತ್ತದೆ

ಇಷ್ಟು ಮಾತ್ರವಲ್ಲ ನಾವು ಯಾವುದೇ ಕಾರಣಕ್ಕೂ ಒಂದೇ ರೀತಿಯ ಬಟ್ಟೆಗಳಿಗೆ ಸ್ಟಿಕ್ ಆನ್ ಆಗಬಾರದು
ನಾವು ಎಲ್ಲಾ ರೀತಿಯ ಬಟ್ಟೆಗಳನ್ನು ಟ್ರೈ ಮಾಡಬೇಕು ಈ ರೀತಿಯಾಗಿ ಎಲ್ಲ ರೀತಿಯ ಬಟ್ಟೆಗಳನ್ನು ಧರಿಸುವುದು ಮಾತ್ರ ಅಲ್ಲದೆ ನಮ್ಮಲ್ಲಿನ self-confidence ಕೂಡ ಹೆಚ್ಚಾಗಿರಬೇಕು ಮೊದಲು ನಮ್ಮನ್ನು ನಾವು ನಂಬಬೇಕು ನಮ್ಮ ಸೌಂದರ್ಯ ಹೊರಜಗತ್ತಿಗೆ ಚೆನ್ನಾಗಿ ಕಾಣಿಸುತ್ತದೆ ಎಂಬುದು ನಮ್ಮ ಅರಿವಿಗೆ ಮೊದಲು ಬರಬೇಕು. ಹೀಗೆ ಮಾಡಿದ್ದೇ ಆದಲ್ಲಿ ನಮ್ಮ ಬಾಹ್ಯ ಸೌಂದರ್ಯದ ಜೊತೆಗೆ ನಾವು ಹೊರಜಗತ್ತಿಗೆ ತೆರೆದುಕೊಂಡದ್ದು ಆದಲ್ಲಿ ನಾವು ಇತರರನ್ನು ಆಕರ್ಷಿಸುವುದು ಬಹಳ ಸುಲಭವಾಗುತ್ತದೆ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: