ಹಿರಿಯ ಕಲಾವಿದ ನಟ ಟೆನ್ನಿಸ್ ಕೃಷ್ಣ ಅವರಿಗೂ ಇವತ್ತಿಗೂ ಮನೆಯಿಲ್ಲ, ದುಡಿಮೆಯಿಲ್ಲ, ಇವರ ಜೀವನ ಕಥೆ ಹೇಗಿದೆ ಗೊತ್ತಾ

0

ಟೆನ್ನಿಸ್ ಕೃಷ್ಣ ಅವರು ಉತ್ತರ ಕರ್ನಾಟಕ ಭಾಗದವರು ಮತ್ತು ರಂಗಭೂಮಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಟೆನ್ನಿಸ್ ಕೃಷ್ಣ ಅವರು ತುಂಬಾ ಆಸೆಪಟ್ಟು ಸಿನಿಮಾ ಇಂಡಸ್ಟ್ರಿ ಗೆ ಬಂದಿದ್ದರು. 1990ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದ ಟೆನ್ನಿಸ್ ಕೃಷ್ಣ 90ರ ದಶಕದಲ್ಲಿ ಹಲವಾರು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಲು ಪ್ರಾರಂಭದಲ್ಲಿ ಪ್ರಾರಂಭ ಮಾಡುತ್ತಾರೆ.

ಟೆನ್ನಿಸ್ ಕೃಷ್ಣ ಅವರು ರಾಜಕುಮಾರ್ ಅವರ ಜೊತೆ ಜೀವನ ಚೈತ್ರ, ಉಪೇಂದ್ರ ನಿರ್ದೇಶನದ ತರ್ಲೆ ನನ್ನ ಮಗ ಹೀಗೆ ಹತ್ತು ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಟೆನ್ನಿಸ್ ಕೃಷ್ಣ ಅವರಿಗೆ ಸಾಕಷ್ಟು ಹೆಸರು ಹಾಗೂ ಪ್ರಖ್ಯಾತಿಯನ್ನು ತಂದುಕೊಟ್ಟ ಸಿನಿಮಾ ಎಂದರೆ ಅಪ್ಪ ನಂಜಪ್ಪ ಮಗ ಗುಂಜಪ್ಪ ಸಿನಿಮಾ. ಟೆನ್ನಿಸ್ ಕೃಷ್ಣ ಅವರ ಮಾರಮ್ಮನ ಡಿಸ್ಕು ಡೈಲಾಗ್ ಅನ್ನು ಪ್ರೇಕ್ಷಕರು ಇಂದಿಗೂ ಮರೆಯಲು ಸಾಧ್ಯವಿಲ್ಲ.

ಉಪ್ಪಿ 2 ಸಿನಿಮಾದವರೆಗೂ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಟೆನ್ನಿಸ್ ಕೃಷ್ಣ. ಆದರೆ ಇತ್ತೀಚಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಟೆನ್ನಿಸ್ ಕೃಷ್ಣ ಅವರಿಗೆ ಅವಕಾಶಗಳು ತೀರ ಕಡಿಮೆಯಾಗಿ ಬಿಟ್ಟಿದೆ. ಟೆನ್ನಿಸ್ ಕೃಷ್ಣ ಅವರ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎಂದರೆ ಹೊಸಬರ ಸಿನಿಮಾದಲ್ಲಿ ಅವರಿಗೆ ಅವಕಾಶ ನೀಡಲಾಗುತ್ತದೆ ಅದುವೇ ಸಣ್ಣ ಪುಟ್ಟ ಪಾತ್ರಗಳಲ್ಲಿ ಹಾಗೂ ತೀರಾ ಕಡಿಮೆ ಸಂಭಾವನೆಯನ್ನು ನೀಡಲಾಗುತ್ತದೆ. ಇನ್ನೂ ಒಂದು ವೇಳೆ ದೊಡ್ಡ ದೊಡ್ಡ ನಾಯಕರ ಸಿನಿಮಾದಲ್ಲಿ ಅವಕಾಶ ದೊರೆತರೂ ಅದುವೇ ಕೇವಲ ಒಂದು ಅಥವಾ ಎರಡು ನಿಮಿಷದ ಪಾತ್ರ ದೊರೆಯುತ್ತಿದೆ.

ಇತ್ತೀಚಿಗೆ ಟೆನಿಸ್ ಕೃಷ್ಣ ಅವರು ತನಗೆ ಅವಕಾಶ ಕೊಡಿ ಅವಕಾಶ ನೀಡಿದ್ದಕ್ಕಾಗಿ ನಿಮಗೆ ಕಮಿಷನ್ ರೂಪದಲ್ಲಿ ಹಣವನ್ನು ನೀಡುತ್ತೇನೆ ಎಂದು ಹೇಳುತ್ತಿದ್ದಾರೆ. ಈ ಹಿಂದೆ ದೊಡ್ಡಣ್ಣ ಮತ್ತು ಟೆನ್ನಿಸ್ ಕೃಷ್ಣ ಕಾಂಬಿನೇಷನ್ ತುಂಬಾ ಹಿಟ್ಟಾಗಿತ್ತು, ಆದರೆ ಇವರಿಬ್ಬರ ನಡುವೆ ನಡೆಯುವ ಕಾಮಿಡಿ ದೃಶ್ಯಗಳಲ್ಲಿ ದೊಡ್ಡಣ್ಣ ಅವರು ಟೆನಿಸ್ ಕೃಷ್ಣ ಅವರ ಕೆನ್ನೆಗೆ ಜೋರಾಗಿ ಹೊಡೆಯುತ್ತಿದ್ದರಂತೆ. ಇದರಿಂದ ಟೆನ್ನಿಸ್ ಕೃಷ್ಣ ಅವರಿಗೂ ಬೇಸರವಿತ್ತು ಇದನ್ನೇ ದಾಳವಾಗಿ ಬಳಸಿಕೊಂಡ ಕೆಲವು ಜನರು ಇವರಿಬ್ಬರ ನಡುವೆ ಬೆಂಕಿಯನ್ನು ಹಚ್ಚಿದರು.

ಇನ್ನು ಕೆಲವರು ಟೆನ್ನಿಸ್ ಕೃಷ್ಣ ಅವರಿಗೆ ದೊಡ್ಡಣ್ಣ ಅವರ ಜೊತೆ ನಟನೆ ಮಾಡಲು ಇಷ್ಟ ಇಲ್ಲ ಮತ್ತು ದೊಡ್ಡಣ್ಣ ಅವರಿಗೆ ಟೆನ್ನಿಸ್ ಕೃಷ್ಣ ಅವರ ಜೊತೆ ನಟನೆ ಮಾಡಲು ಇಷ್ಟವಿಲ್ಲ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಾರೆ. ಈ ರೀತಿಯ ಸುಳ್ಳು ಸುದ್ದಿಯಿಂದ ಮೊದಲು ಪೆಟ್ಟು ತಿಂದಿದ್ದು ಟೆನ್ನಿಸ್ ಕೃಷ್ಣ, ಯಾವಾಗ ಇವರಿಬ್ಬರ ಕಾಂಬಿನೇಷನ್ ಕಡಿಮೆಯಾಗುತ್ತದೆಯೋ ಆಗ ಟೆನ್ನಿಸ್ ಕೃಷ್ಣ ಅವರಿಗೆ ಅವಕಾಶಗಳು ಕಡಿಮೆಯಾಗಲು ಶುರುವಾಗುತ್ತದೆ.

ಇದಾದ ನಂತರ ಇನ್ನೂ ಕೆಲವರು ಟೆನ್ನಿಸ್ ಕೃಷ್ಣ ಅತಿ ಹೆಚ್ಚಿನ ಸಂಭಾವನೆಯನ್ನು ಕೇಳುತ್ತಾರೆ ಆತನನ್ನು ಹಾಕಿಕೊಂಡು ಸಿನಿಮಾ ಮಾಡುವುದು ಕಷ್ಟ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಾರೆ. ಇದರಿಂದ ಟೆನ್ನಿಸ್ ಕೃಷ್ಣ ಅವರಿಗೆ ಅವಕಾಶಗಳು ತೀರಾ ಕಡಿಮೆಯಾಗಿ ಜೀವನದಲ್ಲಿ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಳ್ಳುತ್ತಾರೆ. 600ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ಟೆನ್ನಿಸ್ ಕೃಷ್ಣ ಅವರ ಪರಿಸ್ಥಿತಿ ಈ ರೀತಿ ಆದರೆ ಇನ್ನೂ ಹೊಸ ನಟರ ಪರಿಸ್ಥಿತಿ ಯಾವ ರೀತಿ ಇರಬಹುದು ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.

Leave A Reply

Your email address will not be published.

error: Content is protected !!