ಹಾಸ್ಯ ನಟ ಸಂಜು ಬಸಯ್ಯ ಅವರ ಪ್ರೇಯಸಿ ಯಾರು ಗೋತ್ತಾ, ತಮ್ಮ ಪ್ರೇಮ ಕಥೆಯನ್ನು ಬಿಚ್ಚಿಟ್ಟ ಸಂಜು ಬಸಯ್ಯ

0

ಹಾಸ್ಯ ನಟ ಸಂಜು ಬಸಯ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಝೀ ಕನ್ನಡದಲ್ಲಿ ಪ್ರಸಾರಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ತನ್ನ ಹಾಸ್ಯ ಜೀವನವನ್ನ ಆರಂಭ ಮಾಡಿದ ನಟ ಸಂಜು ಬಸಯ್ಯ ಅವರಿಗೆ ಇಂದು ರಾಜ್ಯದಲ್ಲಿ ಅಪಾರವಾದ ಅಭಿಮಾನಿಗಳು ಇದ್ದಾರೆ ಎಂದು ಹೇಳಬಹುದು. ಕಾಮಿಡಿ ಕಿಲಾಡಿಗಳು ಶೋ ನಂತರ ಕೆಲವು ಚಿತ್ರಗಳಲ್ಲಿ ಮತ್ತು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ನಟ ಸಂಜು ಬಸಯ್ಯ ಅವರ ತಮಾಷೆಗೆ ನಗದ ಮುಖವೇ ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಮೂರ್ತಿ ಚಿಕ್ಕದಾದರೂ ಕೀರ್ತಿ ಬಹಳ ದೊಡ್ಡದು ಅನ್ನುವ ಹಾಗೆ ನಟನೆಯನ್ನ ಮಾಡುತ್ತಾರೆ ಹಾಸ್ಯನಟ ಸಂಜು ಬಸಯ್ಯ ಅವರು. ಈ ಸಂಜು ಬಸಯ್ಯ ಅವರ ಜೀವನದಲ್ಲಿ ಒಂದು ಪ್ರೇಮ ಕಥೆ ಇದೆ ಅದನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಹಾಸ್ಯ ನಟ ಸಂಜು ಬಸಯ್ಯ ಅವರ ಪ್ರೇಯಸಿ ಯಾರು? ಅವರ ಪ್ರೇಮ ಕಥೆ ಏನೂ ಅನ್ನೋದನ್ನ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕನ್ನಡ ಕಿರುತೆರೆ ಲೋಕದಲ್ಲಿ ಅದೆಷ್ಟೋ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದ್ದು ಅನೇಕ ಕಲಾವಿದರು ಹೀರೋಗಳ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅದೇ ರೀತಿಯ ಕನ್ನಡ ಕಿರುತೆರೆಯಲ್ಲಿ ಹೊಸ ರಿಯಾಲಿಟಿ ಶೋಗಳು ಕೂಡ ಪ್ರಸಾರವಾಗುತ್ತಿದ್ದು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಂತಹ ಹಾಸ್ಯ ರಿಯಾಲಿಟಿ ಶೋಗಳಲ್ಲಿ ಕಾಮಿಡಿ ಕಿಲಾಡಿಗಳು ಕೂಡ ಒಂದು.

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಜನರನ್ನು ನಕ್ಕು ನಗಿಸುವ ಯಶಸ್ವಿಯಾಗಿತ್ತು. ಈ ರಿಯಾಲಿಟಿ ಶೋದಲ್ಲಿ ಸಾಕಷ್ಟು ಕಲಾವಿದರಿಗೆ ವೇದಿಕೆ ಸಿಕ್ಕಿದ್ದು ಅವರು ಇಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ಹಾಸ್ಯ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಂತೆ ಈ ಕಾರ್ಯಕ್ರಮದ ಮೂಲಕ ಕನ್ನಡಿಗರ ಮನೆಮಾತಾದ ಕಲಾವಿದರಲ್ಲಿ ಸಂಜುಬಸಯ್ಯ ಕೂಡ ಒಬ್ಬರು. ನೋಡಲು ಚಿಕ್ಕವರಾಗಿ ಕಂಡರೂ ಕೂಡ ಇವರ ಕಲೆ ನಿಜಕ್ಕೂ ಮೆಚ್ಚುವಂತದ್ದು.

ಇನ್ನು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯನಟ ಸಂಜು ಬಸಯ್ಯ ಅವರ ಸುದ್ದಿ ಹರಿದಾಡುತ್ತಿದ್ದು ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ಹೌದು ಸಾಮಾಜಿಕ ಜಾಲತಾಣದಲ್ಲಿ ಸಂಜು ಬಸಯ್ಯ ಅವರ ಮದುವೆಯ ವಿಷಯ ಸಕತ್ ವೈರಲ್ ಆಗಿದ್ದು ಅವರು ಮದುವೆಯಾಗುತ್ತಿರುವ ಹುಡುಗಿಯ ಜೊತೆಗೆ ತೆಗೆಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಹಾಸ್ಯ ನಟ ಸಂಜು ಬಸಯ್ಯ ಅವರು ಮದುವೆಯಾಗುತ್ತಿರುವ ಈ ಹುಡುಗಿ ಯಾರು ಮತ್ತು ಇವರ ಪರಿಚಯ ಹೇಗಾಯಿತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ

ನೋಡಲು ಚಿಕ್ಕ ಮಕ್ಕಳಂತೆ ಕಾಣುವ ಸಂಜು ಬಸಯ್ಯ ಅವರು ಪ್ರಾರಂಭದಲ್ಲಿ ಸಾಕಷ್ಟು ಅವಮಾನಕ್ಕೆ ಒಳಗಾಗಿದ್ದರು. ಆದರೆ ಇದನ್ನೆಲ್ಲವನ್ನು ಮೆಟ್ಟಿನಿಂತು ಇಂದು ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಹಾಸ್ಯ ಕಲಾವಿದರಾಗಿ ತಮ್ಮ ಕಲೆ ಏನೆಂಬುದನ್ನು ಸಾಬೀತುಪಡಿಸಿದ್ದಾರೆ. ಮೂಲತಃ ಉತ್ತರ ಕರ್ನಾಟಕದವರಾದ ಇವರು ಆರ್ಕೆಸ್ಟ್ರಾ ಹಾಗೂ ನಾಟಕಗಳಲ್ಲಿ ಅಭಿನಯಿಸುತ್ತಾ ಜನರಿಗೆ ಮನರಂಜನೆ ನೀಡುತ್ತಾ ಬಂದಿದ್ದಾರೆ. ಅನೇಕ ಹಾಸ್ಯ ಪಾತ್ರಗಳ ಮೂಲಕ ಮಿಂಚಿ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ಸಂಜು ಬಸಯ್ಯ ಅವರು ಇದೀಗ ಸಿನಿಮಾಗಳಲ್ಲಿ ಕೂಡ ಅಭಿನಯಿಸುತ್ತಿದ್ದಾರೆ. ಇಷ್ಟೆಲ್ಲಾ ಪ್ರಖ್ಯಾತಿಯನ್ನು ಗಳಿಸುತ್ತಿರುವ ಸಂಜುಬಸಯ್ಯ ಅವರು ನೋಡಲು ಚಿಕ್ಕವನಾಗಿದ್ದರೂ ಕೂಡ ಅವರಿಗೆ ಒಬ್ಬರು ಪ್ರೇಯಸಿ ಇದ್ದಾರೆ.

ಸಂಜು ಬಸಯ್ಯ ಅವರ ಪ್ರೇಯಸಿ ಯಾವ ನಟಿಗೂ ಕೂಡ ಕಮ್ಮಿ ಇಲ್ಲ. ಇನ್ನು ತಮ್ಮ ಪ್ರೇಮ ಕತೆಯನ್ನು ಬಿಚ್ಚಿಟ್ಟ ಸಂಜು ಬಸಯ್ಯ ಹಾಗೂ ಅವರ ಪ್ರೇಯಸಿ ನಾವಿಬ್ಬರೂ ಒಂದು ನಾಟಕ ಕಂಪನಿಯಲ್ಲಿ ಒಟ್ಟಾಗಿ ಪ್ರವೇಶ ಮಾಡಿದೆವು. ನಂತರ ನಾಟಕಗಳಲ್ಲಿ ಅಭಿನಯಿಸುತ್ತಾ ಒಬ್ಬರಿಗೊಬ್ಬರು ಪರಿಚಯವಾದೆವು. ಆ ಸಮಯದಲ್ಲಿ ನಮ್ಮಿಬ್ಬರ ಮಧ್ಯೆ ಪ್ರೀತಿ ಚಿಗುರಿ ನಾನು ಅವರಿಗೆ 5 ವರ್ಷಗಳ ಹಿಂದೆ ಪ್ರಪೋಸ್ ಮಾಡಿದ್ದೆ. ಇದಕ್ಕೆ ಆಕೆ ಕೂಡ ಒಪ್ಪಿಕೊಂಡಿದ್ದಳು ಎಂದು ಹೇಳಿದ್ದಾರೆ. ಇನ್ನು ಸಂಜು ಬಸಯ್ಯ ಅವರ ಪ್ರೇಯಸಿ ಮಾತನಾಡಿ ನನಗಿಂತ ಸಂಜು ಬಸಯ್ಯ ಅವರು ಆರು ತಿಂಗಳು ದೊಡ್ಡವರು ಎಂದು ತಮ್ಮ ವಯಸ್ಸಿನ ಬಗ್ಗೆ ಹೇಳಿದರು.

ಇನ್ನು ವಿಷಯಕ್ಕೆ ಬರುವುದಾದರೆ ಸಂಜು ಬಸಯ್ಯ ಅವರ ಪ್ರೇಯಸಿ ಹೆಸರು ಪಲ್ಲವಿ. ಇನ್ನು ಪಲ್ಲವಿ ಹಾಗೂ ಸಂಜು ಬಸಯ್ಯ ಅವರು ಚಿಕ್ಕವಯಸ್ಸಿನಿಂದಲೂ ಒಟ್ಟಿಗೆ ಬೆಳೆದವರು. ಅಷ್ಟಲ್ಲದೇ ಇವರಿಬ್ಬರು ಕಳೆದ 8 ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಪ್ರೀತಿಯ ಕುರಿತಾಗಿ ಮಾತನಾಡಿದ ಸಂಜುಬಸಯ್ಯ ಅವರು ಅವಳು ನೋಡಲು ಎಷ್ಟು ಮುದ್ದಾಗಿದ್ದಾಳೆ ಅಷ್ಟೇ ಅವಳ ಮನಸ್ಸು ಕೂಡ ಆಗಿದೆ ಎಂದು ಹೇಳಿದ್ದಾರೆ.

ಇದೀಗ ಸಂಜು ಬಸಯ್ಯ ಹಾಗೂ ಪಲ್ಲವಿಯವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿವೆ. ಇನ್ನು ತಮ್ಮ ಬಹುವರ್ಷಗಳ ಪ್ರೀತಿಗೆ ಸದ್ಯದಲ್ಲಿಯೇ ಮದುವೆಯೆಂಬ ನೀಡಲಿದ್ದಾರೆ. ಹೌದು ಸಂಜು ಬಸಯ್ಯ ಅವರು ತಮ್ಮ ಪ್ರೇಯಸಿ ಪಲ್ಲವರೊಂದಿಗೆ ಸದ್ಯದಲ್ಲಿಯೇ ಮದುವೆಯಾಗಲಿದ್ದಾರೆ ಎಂಬ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಆದರೆ ಇವರಿಬ್ಬರು ಯಾವಾಗ ಮದುವೆಯಾಗುತ್ತಾರೆ ಎಂಬ ಕುತೂಹಲ ಇದೀಗ ಸಾಕಷ್ಟು ಕನ್ನಡಿಗರ ಮನಸ್ಸಿನಲ್ಲಿ ಉಳಿದಿದೆ. ಏನೇ ಆಗಲಿ ಅವರ ಪ್ರೀತಿ ಮೆಚ್ಚುವಂತದ್ದು.

Leave A Reply

Your email address will not be published.

error: Content is protected !!