ಹಾವು ಚೇಳು ಕಚ್ಚಿದ್ರೆ ತಕ್ಷಣ ಏನು ಮಾಡಬೇಕು ನೋಡಿ ಮನೆಮದ್ದು

0

ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಮನೆ ಮದ್ದು ಹೆಚ್ಚು ಮಹತ್ವ ಪಡೆದಿದೆ. ಮನೆಯಲ್ಲೇ ಸಿಗುವ ವಸ್ತುಗಳಿಂದ ತಯಾರಿಸಬಹುದಾದ ಮದ್ದುಗಳು ರೋಗದ ವಿರುದ್ಧ ರೋಗ ನಿರೋಧಕಗಳನ್ನು ಹೆಚ್ಚಿಸಿ ಹೋರಾಟ ಮಾಡುತ್ತವೆ. ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ದಿನಕ್ಕೊಂದು ಮನೆ ಮದ್ದನ್ನು ಓದುಗರಿಗೆ ತಿಳಿಸಿ ಕೊಡುತ್ತಿದೆ. ಚೇಳು ಸರ್ವೇ ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಅಥಾವ ಕೃಷಿ ಮಾಡುವ ಜಾಗಗಳಲ್ಲಿ ಕಾಣಸಿಗುತ್ತವೆ. ಚೇಳು ಕಚ್ಚುವುದು ಕೂಡ ಸಾಮನ್ಯ. ಆದ್ರೆ ಚೇಳು ಕಡಿತಕ್ಕೆ ಗಾಬರಿ ಆಗುವ ಅವಶ್ಯಕತೆ ಇಲ್ಲ. ಚೇಳು ವಿಷಕಾರಿ ಎಂಬುದು ಎಲ್ಲರಿಗೂ ತಿಳಿದ ವಿಷಯ. ಚೇಳು ಕಚ್ಚಿದ ನೋವು ಹೇಗಿರುತ್ತದೆ ಎನ್ನುವುದು ಕಚ್ಚಿಸಿಕೊಂಡ ವ್ಯಕ್ತಿಗೆ ಗೊತ್ತು. ಇಡೀ ಶರೀರ ತಡೆಯಲಾರದ ನೋವಿನಿಂದ ಕೂಡಿರುತ್ತದೆ.

ಹಾವು ಚೇಳು ಮು೦ತಾದ  ವಿಷ ಯುಕ್ತ ಜೀವಿಗಳು ಕಚ್ಚಿದರೇ ಬದುಕುಳಿಯುವುದು ತುಂಬಾ ಕಷ್ಟ. ಅನೇಕ ಮಂದಿ ಹಾವು ಕಚ್ಚಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟ ಅನೇಕ  ಉದಾಹರಣೆಗಳಿವೆ. ಹಾವುಗಳು ಕಡಿದೊಡನೆ ಹಲವು ಬಾರಿ ಹಾವು ವಿಷಕಾರಿ ಅಲ್ಲದಿದ್ದರೂ ವ್ಯಕ್ತಿಯು ಆತಂಕದಿಂದ ಮಾನಸಿಕವಾಗಿ ಕುಗ್ಗಿ ಪ್ರಾಣ ಕಳೆದುಕೊಳ್ಳುವುದುಂಟು. ಸಾಮಾನ್ಯವಾಗಿ ಹಾವು ಮತ್ತು ಚೇಳು ಕಚ್ಚಿದರೇ ಮಾಡಬೇಕಾದ ಮನೆ ಮದ್ದು ಏನೆಂದು ಈ ಕೆಳಗಿನಂತೆ ತಿಳಿಯೋಣ. .
  
ಚೇಳು ಕಚ್ಚಿದ ಜಾಗದಿಂದ ಸ್ವಲ್ಪ ಮೇಲ್ಭಾಗಕ್ಕೆ ಬಟ್ಟೆಯನ್ನು ಕಟ್ಟಬೇಕು. ರಕ್ತದ ಮೂಲಕ ವಿಷ ದೇಹದ ಇತರೆ ಭಾಗ ಸೇರದಂತೆ ಬಟ್ಟೆ ಕಟ್ಟಬೇಕು.ನಂತರ ಸುಣ್ಣವನ್ನು ಮತ್ತು ನಿಂಬೆ ಹಣ್ಣನ್ನು ಮಿಕ್ಸ್ ಮಾಡಿ ಅದರ ಮಿಶ್ರಣವನ್ನು ಕಚ್ಚಿದ ಜಾಗಕ್ಕೆ ಹಚ್ಚಿದರೆ 5-10 ನಿಮಿಷದಲ್ಲಿ ನೀಲಿಯಾಗಿ ವಿಷವನ್ನು ಹೀರುತ್ತದೆ. ಬೆಳ್ಳುಳ್ಳಿ ಸಹ ಚೇಳು ಕಚ್ಚಿದಾಗ ಉಪಯೋಗಿಸಬಹುದಾದ ಉತ್ತಮ ಮದ್ದು, ಚೇಳು ಕಚ್ಚಿದ ಜಾಗದಲ್ಲಿ ಬೆಳ್ಳುಳ್ಳಿ ಎಸಳನ್ನು ಅರೆದು ಹಚ್ಚುವುದರಿಂದ ನೋವು ಮತ್ತು ಉರಿ ಕಡಿಮೆ ಮಾಡುತ್ತದೆ. ಚೇಳು ಕಚ್ಚಿದ ಸ್ಥಳದಲ್ಲಿ ಮೂಲಂಗಿ ಹಾಗೂ ಉಪ್ಪಿನ ಪುಡಿ ಹಚ್ಚುವುದರಿಂದ ಉರಿ ಕಡಿಮೆಯಾಗುವುದು, ಹಾಗೂ ಯಾವುದೇ ರೀತಿಯ ವಿಷವು ದೇಹಕ್ಕೆ ಇರುವುದಿಲ್ಲ ಇದನ್ನು ಇನ್ನಿತರ ವಿಷಕಾರಿ ಜಂತು ಕಚ್ಚಿದಾಗಲೂ ಮಾಡಬಹುದು.

ಹಾವು ಚೇಳು ಕಚ್ಚಿದವರಿಗೆ  ಆಪಲ್ ರಸದಲ್ಲಿ ಅರ್ಧ ಗ್ರಾಂ ಕರ್ಪೂರವನ್ನು ಸೇರಿಸಿ ಗಂಟೆಗೊಮ್ಮೆ ಕುಡಿಸುತ್ತಿದ್ದರೆ, ಶರೀರದಲ್ಲಿರುವ ವಿಷ ಬೆವರು, ಮೂತ್ರದ ರೂಪದಲ್ಲಿ ಹೊರದೂಡಲ್ಪಡುತ್ತದೆ… ಚೇಳು ಕಚ್ಚಿದ ಜಾಗವನ್ನು ಸಾಬೂನಿನಿಂದ ತೊಳೆದು ಉತ್ತರಾಣಿ ಗಿಡದ ತಪ್ಪಲುಗಳು ಅಂದರೆ ಎಲೆಗಳು ಮತ್ತು ಅರಿಶಿನದೊಂದಿಗೆ  ಚೇಳು ಕಚ್ಚಿರುವ  ಜಾಗಕ್ಕೆ ಹಚ್ಚಬೇಕು. ನಂತರ ಅದನ್ನು ಬಟ್ಟೆಯಿಂದ ಕಟ್ಟಬೇಕು ಮತ್ತು ಇದರ ಸ್ವಲ್ಪ ಎಲೆಗಳನ್ನು ಚೇಳು ಕಚ್ಚಿದ ವ್ಯಕ್ತಿಗೆ  ತಿನ್ನಲು ಕೊಡಬೇಕು, ನಂತರ ನಿಧಾನವಾಗಿ ಉರಿ ಕಡಿಮೆಯಾಗುತ್ತದೆ.

ಇದರ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದು. ಡಾ ಪಿ. ಕೆ. ಪ್ರವೀಣ್ ಬಾಬು ಬಿ.ಎ.ಎಂ.ಎಸ್ . ಸನ್/ಆಫ್ ಡಾ. ಪಿ ಕರಿ ಬಸಪ್ಪ. ಬಿ.ಎಸ್.ಎ.ಎಂ (ಎಕ್ಸ್ ಗೌವರ್ನಮೆಂಟ್ ಆಯುರ್ವೇಧಿಕ್ ಮೆಡಿಕಲ್ ಆಫೀಸರ್) ಪ್ರವೀಣ್ ಹಾಸ್ಪಿಟಲ್ ಆಫ್ ಆಯುರ್ವೇದ. ಉತ್ತಮ್ ಲೇಔಟ್ ಚಿತ್ರದುರ್ಗ ರೋಡ್ (ಪಿ ಬಿ ರೋಡ್)
ದಾವಣಗೆರೆ ಕರ್ನಾಟಕ 6360104359

Leave A Reply

Your email address will not be published.

error: Content is protected !!
Footer code: