ಸ್ವಂತ ಉದ್ಯೋಗ ಮಾಡಬೇಕು ಅನ್ನೋರಿಗಾಗಿ ಈ ಬಿಸಿನೆಸ್ ಟಿಪ್ಸ್

0

ಎಲ್ಲರಿಗೂ ಕೂಡ ತಮ್ಮದೇ ಆದ ಒಂದು ಹೊಸ ಉದ್ಯಮವನ್ನು ಪ್ರಾರಂಭಿಸಬೇಕು ಎಂಬುವ ಆಸೆ ಇರುತ್ತದೆ ಆದರೆ ಯಾವ ಉದ್ಯಮವನ್ನು ಪ್ರಾರಂಭಿಸಬೇಕು ಯಾವುದರಿಂದ ಲಾಭ ಬರುತ್ತದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಆದ್ದರಿಂದ ನಾವಿಂದು ನಿಮಗೆ ಇಂದಿನ ದಿನದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಒಂದು ಉದ್ಯಮದ ಬಗ್ಗೆ ತಿಳಿಸಿಕೊಡುತ್ತೇವೆ ಅದೇ ಇಷ್ಕಾ ಮಾರ್ಬಲ್ ಉದ್ಯಮ. ಈ ಒಂದು ಇಷ್ಕಾ ಮಾರ್ಬಲ್ ಉದ್ಯಮವನ್ನು ಯಾವ ರೀತಿಯಾಗಿ ಪ್ರಾರಂಭಿಸಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳುವುದಾದರೆ ಮಾರ್ಬಲ್ ಗೆ ಹೋಲಿಸಿದರೆ ಇಷ್ಕಾ ಮಾರ್ಬಲ್ ಉತ್ತಮ ಎಂದು ಹೇಳಬಹುದು ಯಾಕೆಂದರೆ ಇದನ್ನು ಗಾರೆ ಪ್ಲಾಸ್ಟರಿಂಗ್ ಇಲ್ಲದೆ ಅಂಟನ್ನು ಬಳಸಿ ನೇರವಾಗಿ ಹಚ್ಚಬಹುದು. ಬಣ್ಣ ಹೋಗಿದ್ದರು ಕೂಡ ಇದನ್ನು ನೇರವಾಗಿ ಹಚ್ಚಬಹುದು. ಇದನ್ನು ವಾಣಿಜ್ಯ ಉದ್ದೇಶ ಮತ್ತು ಗ್ರಹ ಬಳಕೆಗೆ ಉಪಯೋಗಿಸಬಹುದು.

ಅತಿ ಕಡಿಮೆ ಕರ್ಚಿನಲ್ಲಿ ಒಂದು ಒಳ್ಳೆಯ ಇಂಟೀರಿಯರ್ ಡಿಸೈನ್ ಅನ್ನು ಮಾಡಬಹುದು ಇದನ್ನು ಮಾಡುವುದಕ್ಕೆ ಪರಿಣಿತ ಕೆಲಸಗಾರರ ಅಗತ್ಯವಿಲ್ಲ ಒಂದು ಸಾವಿರಕ್ಕಿಂತ ಹೆಚ್ಚಿನ ಡಿಸೈನ್ಗಳು ನಿಮಗೆ ಸಿಗುತ್ತವೆ ಇದರ ಡೀಲರ್ಶಿಪ್ ತಾಲೂಕ ಹಾಗೂ ಜಿಲ್ಲಾಮಟ್ಟದಲ್ಲಿ ಸಿಗುತ್ತದೆ ಇದು ಸದ್ಯದಲ್ಲೇ ಒಳ್ಳೆಯ ಬೇಡಿಕೆ ಇರುವಂತಹ ಉದ್ಯಮವಾಗಿದೆ.

ಇಷ್ಕಾ ಮಾರ್ಬಲ್ ಇದರ ಕಂಪನಿಯ ಬಗ್ಗೆ ತಿಳಿದುಕೊಳ್ಳುವುದಾದರೆ ಇದು ಏಷ್ಕಾ ಪ್ಯೂಚರ್ ಪ್ರೈವೇಟ್ ಲಿಮಿಟೆಡ್ ಕಂಪನಿ ಯಾಗಿದೆ ತಮಿಳುನಾಡು ಮೂಲದ ಕಂಪನಿಯಾಗಿದೆ. ಈ ಉತ್ಪನ್ನಗಳು ಜಪಾನಿನಲ್ಲಿ ಉತ್ಪಾದನೆಯಾಗುತ್ತದೆ ಅದನ್ನ ಕಂಪನಿಗಳು ಖರೀದಿಸಿ ಭಾರತದಾದ್ಯಂತ ಪೂರೈಕೆ ಮಾಡುತ್ತಾರೆ. ಕರ್ನಾಟಕದಲ್ಲಿ ಈ ಕಂಪನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇದೆ ಅಲ್ಲಿಂದ ಇಡೀ ಕರ್ನಾಟಕಕ್ಕೆ ಪೂರೈಕೆ ಆಗುತ್ತದೆ.

ಹಾಗಾದರೆ ಇಷ್ಕಾ ಮಾರ್ಬಲ್ ಶೀಟ್ ಎಂದರೆ ಏನು ಎಂಬುದನ್ನು ತಿಳಿದುಕೊಳ್ಳೋಣ ಇಷ್ಕಾ ಮಾರ್ಬಲ್ ಶೀಟ್ ಎಂದರೆ ಇದನ್ನು ಆರ್ಟಿಫಿಶಿಯಲ್ ಮಾರ್ಬಲ್ ಎಂದು ಕರೆಯುತ್ತಾರೆ ಮಾರ್ಬಲ್ಸ್ ಅಥವಾ ಟೈಲ್ಸ್ ಗೆ ಬದಲಾಗಿ ಇದನ್ನು ಬಳಸಬಹುದು. ಇಷ್ಕಾ ಮಾರ್ಬಲ್ ನನ್ನ ಎಲ್ಲೆಲ್ಲಿ ಬಳಸಬಹುದು ಎಂಬುದು ನೋಡುವುದಾದರೆ ಪ್ಲೋರನ್ನು ಹೊರತುಪಡಿಸಿ ಮನೆಯ ಎಲ್ಲಾ ಕಡೆಗಳಲ್ಲಿ ಬಳಸಬಹುದು ಅಡುಗೆ ಕೋಣೆಯಲ್ಲಿ ಬಳಸುವುದು ದೇವರಕೋಣೆಯಲ್ಲಿ ಬಳಸಬಹುದು ಬಾತ್ ರೂಂನಲ್ಲಿ ಬಳಸಬಹುದು ಆಫೀಸ್ ರೂಂ ಗಳಲ್ಲಿಯೂ ಬಳಸಬಹುದು.

ಇಷ್ಕಾ ಮಾರ್ಬಲ್ ಗಳ ಮೇಲೆ ನೀರು ಬಿದ್ದರೂ ಅವುಗಳಿಗೆ ಏನು ತೊಂದರೆ ಆಗುವುದಿಲ್ಲ. ಅದರಿಂದ ನೀವು ಅಡುಗೆ ಮನೆಯಲ್ಲಿ ಬಾತ್ರೂಮಿನಲ್ಲಿ ಇದನ್ನು ಬಳಸುವುದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಮತ್ತು ಇದು ಎರಡುನೂರು ಡಿಗ್ರಿ ಸೆಲ್ಸಿಯಸ್ ವರೆಗೆ ಬೆಂಕಿಯನ್ನು ತಾಗಿಸಿದರು ಇದಕ್ಕೆ ಯಾವುದೇ ರೀತಿ ಪರಿಣಾಮ ಉಂಟಾಗುವುದಿಲ್ಲ.

ಇದರಲ್ಲಿ ಯಾವ ರೀತಿ ಅಳತೆಗಳು ಬರುತ್ತವೆ ಎಂಬುದನ್ನು ನೋಡಿದರೆ ನೋಡುವುದಾದರೆ ಸಾಮಾನ್ಯವಾಗಿ ನಾಲ್ಕು ಇಂಟು ಎಂಟು ಫೀಟ್ ಬರುತ್ತದೆ. ಅದನ್ನು ನಿಮಗೆ ಬೇಕಾದ ಅಳತೆಯಲ್ಲಿ ಕತ್ತರಿಸಿ ಹಾಕಿಕೊಳ್ಳಬಹುದು. ಕಂಪನಿ ಕಡೆಯಿಂದ ಬಿಲ್ಡರ್ಸ್ ಬಾಂಡ್ ಎಂಬ ಅಂಟು ಬರುತ್ತದೆ ಅದನ್ನು ಬಳಸಿ ಇಷ್ಕಾ ಮಾರ್ಬಲ್ ಗಳನ್ನು ಗೋಡೆಗೆ ಅಂಟಿಸಬಹುದು. ಪ್ಲಾಸ್ಟರಿಂಗ್ ಮಾಡದೇನೆ ಇವುಗಳನ್ನು ಗೋಡೆಗೆ ಅಂಟಿಸಬಹುದು ಆದರೆ ಕೆಲವು ಕಂಟ್ರಾಕ್ಟರುಗಳು ಹೇಳುವ ಪ್ರಕಾರ ಪ್ಲಾಸ್ಟರಿಂಗ್ ಮಾಡಿಸದೆ ಇಷ್ಕಾ ಮಾರ್ಬಲ್ ಗಳನ್ನು ಗೋಡಿಗೆ ಅಂಟಿಸಿದಾಗ ಅಷ್ಟೊಂದು ಶಕ್ತಿಯುತವಾಗಿರುವುದಿಲ್ಲ ಎಂದು ಹೇಳುತ್ತಾರೆ.

ಇಷ್ಕಾ ಮಾರ್ಬಲ್ ಗೆ ಕಂಪನಿ ಕಡೆಯಿಂದ ಹದಿನೈದು ವರ್ಷ ವಾರೆಂಟಿ ಇದೆ. ಜಿಲ್ಲಾಮಟ್ಟದ ಡೀಲರ್ಶಿಪ್ ಗಳಿಗೆ ಐದು ಲಕ್ಷ ಹಣ ಬೇಕಾಗುತ್ತದೆ ಅದೇ ತಾಲೂಕು ಮಟ್ಟದಲ್ಲಿ ಎರಡುವರೆ ಲಕ್ಷ ರುಪಾಯಿ ಹಣ ಬೇಕಾಗುತ್ತದೆ. ಇದರ ಡೀಲರ್ಶಿಫ್ ಅನ್ನ ಪಡೆದುಕೊಳ್ಳುವವರು ಅಂಗಡಿಯನ್ನು ಹಾಕಿಕೊಳ್ಳಬೇಕು ಎರಡುನೂರು ಸ್ಕ್ವೇರ್ ಫೀಟ್ ಜಾಗ ಇರುವ ಅಂಗಡಿಯನ್ನು ಮಾಡಿಕೊಳ್ಳಬೇಕು ಅದಕ್ಕೆ ಒಂದು ವ್ಯವಸ್ಥೆ ಮಾಡಿಕೊಳ್ಳಬೇಕು.

ಇಷ್ಕಾ ಮಾರ್ಬಲ್ ಕೆಲಸವನ್ನ ಮಾಡುವುದಕ್ಕೆ ಪರಿಣಿತ ಕೆಲಸಗಾರರ ಅಗತ್ಯವಿಲ್ಲ ಸಾಮಾನ್ಯ ಕಟ್ಟಿಗೆ ಕೆಲಸ ಮಾಡುವವರು ಕೂಡ ಇದರ ಕೆಲಸ ಮಾಡಬಹುದು. ಒಂದು ವೇಳೆ ಡೀಲರ್ಶಿಪ್ ಪಡೆದುಕೊಂಡಿರುವವರು ಯಾರಾದರೂ ಇಬ್ಬರು ಆಚಾರಿ ಕೆಲಸ ಮಾಡುವವರನ್ನು ನೇಮಿಸಿಕೊಂಡರೆ ಅವರಿಗೆ ಕಂಪನಿ ಕಡೆಯಿಂದ ಕೆಲಸದ ತರಬೇತಿ ನೀಡಲಾಗುತ್ತದೆ. ಈ ಕಂಪನಿಯ ಡೀಲರ್ ಶಿಪ್ ತೆಗೆದುಕೊಳ್ಳುವವರು ಕಂಪನಿಗೆ ಭೇಟಿ ನೀಡಿ ಅಲ್ಲಿರುವ ಉತ್ಪನ್ನಗಳನ್ನು ನೋಡಿ ಅವು ಇಷ್ಟವಾದರೆ ಮಾತ್ರ ಅಡ್ವಾನ್ಸ್ ಹಣವನ್ನು ಕೊಟ್ಟು ಅಗ್ರಿಮೆಂಟ್ ಮಾಡಿಕೊಳ್ಳಬಹುದು.

ಇಷ್ಕಾ ಮಾರ್ಬಲ್ ಶೀಟ್ಗಳು ವಾಟರ್ ಪ್ರೂಫ್ ಆಗಿದೆ ಇವುಗಳನ್ನು ನೀರಿನಲ್ಲಿ ಹಾಕಿದರು ಇದಕ್ಕೆ ಏನು ಆಗುವುದಿಲ್ಲ ಇದಕ್ಕೆ ಯಾವುದೇ ರೀತಿಯ ಹುಳ ಹಿಡಿಯುವುದಿಲ್ಲ ತುಕ್ಕು ಹಿಡಿಯುವುದಿಲ್ಲ. ಇದರ ಡೀಲರ್ ಶಿಪ್ ತೆಗೆದುಕೊಳ್ಳುವವರಿಗೆ ಕಂಪನಿಯವರ ಕಡೆಯಿಂದ ಪೂರ್ಣಪ್ರಮಾಣದ ಬೆಂಬಲ ಇರುತ್ತದೆ. ಕಡಿಮೆ ಬಂಡವಾಳದಲ್ಲಿ ಉತ್ತಮ ಲಾಭವನ್ನು ಪಡೆಯುವಂತಹ ಉದ್ಯಮ ಇದಾಗಿದೆ. ಇಷ್ಕಾ ಮಾರ್ಬಲ್ಸ್ ಗಳನ್ನು ನೀವು ಪೂರ್ತಿ ಗೋಡೆಗೂ ಹಾಕಬಹುದು ಮತ್ತು ಪ್ಲೈವುಡ್ ಗಳಿಂದ ಕೆಲಸ ಮಾಡಿ ಸೀಲಿಂಗ್ ಗು ಇದನ್ನು ಬಳಸಬಹುದು.

ಇದರ ಒಂದು ಶೀಟ್ ಹದಿನೆಂಟು ಕೆಜಿ ತೂಕವಿರುವ ದರಿಂದ ಇದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಲು ತೊಂದರೆ ಆಗುವುದಿಲ್ಲ. ನೀವು ಇಷ್ಕಾ ಮಾರ್ಬಲ್ ನ್ನು ಟೇಬಲ್ ಗಳಿಗೂ ಬಾಗಿಲುಗಳಿಗೆ ಉಪಯೋಗಿಸಬಹುದು ಟಿವಿ ಹಿಂದುಗಡೆ ಬಳಸಬಹುದು ಕಬೋರ್ಡ್ ಬಾಗಿಲುಗಳಿಗೆ ಬಳಸಬಹುದು ಪ್ಲೊರನ್ನು ಹೊರತುಪಡಿಸಿ ನಿಮಗೆ ಮನೆಯ ಯಾವ ಭಾಗಗಳಿಗೆ ಹಾಕುವುದಕ್ಕೆ ಇಷ್ಟ ಆಗುತ್ತದೆ ಅಲ್ಲೆಲ್ಲ ಇಷ್ಕಾ ಮಾರ್ಬಲ್ ಬಳಸಬಹುದು.

ಸ್ನೇಹಿತರೆ ನಿಮಗೂ ಕೂಡ ಇಷ್ಕಾ ಮಾರ್ಬಲ್ ಡೀಲರ್ಶಿಪ್ ಸಬ್ ಡೀಲರ್ ಶಿಪ್ ತೆಗೆದುಕೊಳ್ಳಬೇಕು ಎಂಬ ಆಸೆ ಇದ್ದರೆ ಕಂಪನಿ ಕಡೆಯಿಂದ ನೀವು ಇವುಗಳನ್ನು ಪಡೆದುಕೊಳ್ಳಬಹುದು ಜೊತೆಗೆ ಈ ಉದ್ಯಮವನ್ನು ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಗಳಿಸಬಹುದು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರಿಗೂ ತಿಳಿಸಿರಿ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: