ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸುವ ಪ್ರಯತ್ನದಲ್ಲಿದ್ದೀರಾ ನಿಮಗೆ ಸುರ್ವಣವಕಾಶ

0

ನಮ್ಮ ಮುಂದೆ ಓಡಾಡುವ ಹತ್ತು ಹಲವು ಕಾರುಗಳನ್ನು ನೋಡಿದರೆ ನಾವು ಕೂಡ ಇಂಥದ್ದೇ ಒಂದು ಕಾರು ಖರೀದಿಸಿ ಕಾರಿನಲ್ಲಿ ಓಡಾಡಬೇಕು ಎಂಬ ಆಸೆ ಸಾಮಾನ್ಯವಾಗಿ ಇರುತ್ತದೆ, ಆದರೆ ಕಾರನ್ನು ಕೊಂಡುಕೊಳ್ಳುವಷ್ಟು ಹಣ ಇರುವುದಿಲ್ಲ. ಕಾರು ಖರೀದಿಸಲು ಹಣ ಇಲ್ಲ ಎಂದು ಯೋಚನೆ ಮಾಡುತ್ತಿದ್ದೀರಾ. ಕಡಿಮೆ ದರದಲ್ಲಿ ಸಿಗುವ ಒಳ್ಳೆಯ ಕಂಪನಿಗಳ ಕಾರುಗಳ ಬಗ್ಗೆ ಹಾಗೂ ಅವುಗಳ ಕಂಡೀಷನ್ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮಾರುತಿ ಸುಜುಕಿ ವ್ಯಾಗನಾರ್ ವ್ಯಾಗನಾರ್ ನ ಈ ಸೆಗ್ಮೆಂಟ್ ಬಹಳ ಜನಪ್ರಿಯವಾಗಿದೆ. ಕಂಪನಿಯು ಹೊಸ ವ್ಯಾಗನಾರ್ ಅನ್ನು 2019ರಲ್ಲಿ ಬಿಡುಗಡೆ ಮಾಡಿದೆ. ಈ ಕಾರನ್ನು ಸೂಕ್ತ ಬೆಲೆಗೆ ಪಡೆಯಬಹುದು. ಹೊಸ ವಾಹನದ ಶೋ ರೂಂ ಬೆಲೆ ಸುಮಾರು 4.19 ಲಕ್ಷದಿಂದ 5.69 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಈ ಕಾರು ಕಡಿಮೆ ಬೆಲೆಗೆ ಸಿಗುತ್ತಿರುವ ಕಾರಾಗಿದೆ. ಮಾರುತಿ ಸ್ವಿಫ್ಟ್ ಈ ಕಾರು ಕಂಪನಿಯ ಪ್ರಸಿದ್ಧ ಹ್ಯಾಚ್‌ಬ್ಯಾಕ್ ಕಾರು ಸ್ವಿಫ್ಟ್‌ನ ಪೆಟ್ರೋಲ್ ಮಾದರಿ ಕೂಡ ಸಾಕಷ್ಟು ಜನಪ್ರಿಯವಾಗಿದೆ. ಎಂಟರಿಂದ ಹತ್ತು ವರ್ಷದ ಹಳೆಯ ಕಾರನ್ನು ಎರಡು ಮೂರು ಲಕ್ಷ ರೂಪಾಯಿಗಳಿಗೆ ಖರೀದಿಸಬಹುದು ಇದು ಬಂಪರ್ ಕೊಡುಗೆಯಾಗಿದೆ. ಈ ಕಾರು ಮಾರುತಿಯ ಉನ್ನತ ಕಾರುಗಳಲ್ಲಿ ಒಂದಾಗಿದೆ. ಇದರ ಶಕ್ತಿಯುತ ಎಂಜಿನ್ ಮತ್ತು ಸ್ಪೇಸ್ ಖರೀದಿದಾರರಿಗೆ ಬಹಳ ಇಷ್ಟವಾಗುತ್ತದೆ. 

ಮಾರುತಿ ಆಲ್ಟೋ ಈ ಕಾರು ಕಡಿಮೆ ಬಜೆಟ್ ಹೊಂದಿರುವ ಜನರಿಗೆ ಇಷ್ಟವಾಗುವ ಕಾರಾಗಿದೆ ಅಲ್ಲದೆ ಉತ್ತಮ ಮೈಲೇಜ್‌ ಕೂಡಾ ನೀಡುತ್ತದೆ. ಹೊಸ ಆಲ್ಟೊ 800 LXI ಇದರ ಬೆಲೆಯ ಬಗ್ಗೆ ನೋಡುವುದಾದರೆ ಈ ಕಾರಿನ ಎಕ್ಸ್‌ಶೋ ರೂಂ ಬೆಲೆ 4.14 ಲಕ್ಷ ರೂಪಿಯಿಗಳಿಗಿಂತ ಹೆಚ್ಚಿದೆ. ಇದು ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ. ಇದು ಮಾತ್ರವಲ್ಲ, ಎಂಟರಿಂದ ಹತ್ತು ವರ್ಷದ ಹಳೆಯ ಕಾರನ್ನು ಖರೀದಿಸುವುದಾದರೆ 1.50 ರಿಂದ ಎರಡು ಲಕ್ಷದ ನಡುವೆ ನಿಮಗೆ ಉತ್ತಮ ಆಯ್ಕೆಗಳು ಸಿಗುತ್ತವೆ. ಈ ಕಾರು ಕೂಡ ಕಡಿಮೆ ಬೆಲೆಗೆ ಸಿಗುವ ಪೋಶ್ ಕಾರು. ಮಾರುತಿ ಸುಜುಕಿ ಬಲೆನೋ ಪ್ರಸ್ತುತ ಈ ಕಾರು ಮಾರುತಿಯ ಟಾಪ್ ಕಾರುಗಳಲ್ಲಿ ಒಂದಾಗಿದೆ. ಈ ಕಾರಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ಕಾರು ಹೆಚ್ಚು ಮೈಲೇಜ್, ಸ್ಪೇಸ್, ವಿನ್ಯಾಸ ಮತ್ತು ಬಣ್ಣದಲ್ಲಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕಾರು ಅಲ್ಫಾ, ಡೆಲ್ಟಾ, ಜೇಟಾ ಮುಂತಾದ ಆವೃತ್ತಿಗಳೊಂದಿಗೆ ಬರುತ್ತದೆ. 4.5 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಅಲ್ಫಾವನ್ನು ಖರೀದಿಸಬಹುದು. ಆದರೆ ಡೆಲ್ಟಾ, ಜೆಟಾಗೆ ಸ್ವಲ್ಪ ಹೆಚ್ಚಿನ ಬೆಲೆ ಕೊಡಬೇಕಾಗುತ್ತದೆ. ಮಾರುತಿ ಸುಜುಕಿ ಸ್ವಿಫ್ಟ್ ಡಿಸೈರ್ ಈ ಕಾರು ಕಂಪನಿಯ ಅತ್ಯುತ್ತಮ ವಿನ್ಯಾಸ, ಮೈಲೇಜ್ ಮತ್ತು ವೈಶಿಷ್ಟ್ಯಗಳಿಂದಾಗಿ ಕಂಪನಿಯ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸೇರಿದೆ. ಈ ಕಾರಿನ ಬೆಲೆ 6.81 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಿ 10.20 ಲಕ್ಷ ರೂಪಾಯಿಗಳವರೆಗೆ ಇದೆ ಆದರೆ ಎಂಟರಿಂದ ಹತ್ತು ವರ್ಷದೊಳಗಿನ ಈ ಕಾರನ್ನು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ 3.50 ಲಕ್ಷ ರೂಪಾಯಿಗಳಿಗೆ ಖರೀದಿಸಬಹುದು.

ಹ್ಯುಂಡೈ ಕ್ರೇಟಾ ಹ್ಯುಂಡೈನ ಈ ಕಾರು ಸಾಕಷ್ಟು ಜನಪ್ರಿಯವಾಗಿದೆ. ಈ ಕಾರಿನ ಹೊಚ್ಚ ಹೊಸ ಮಾದರಿ ದೆಹಲಿಯ ಎಕ್ಸ್ ಶೋರೂಂ ಬೆಲೆ  9,99.990 ರೂಪಾಯಿ. ನೀವು 3.50 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಗೆ ಸೆಕೆಂಡ್ ಹ್ಯಾಂಡ್ ಕ್ರೇಟಾವನ್ನು ಖರೀದಿಸಬಹುದು. ಇವುಗಳಲ್ಲಿ ಎಲ್ಲಾ ಕಾರುಗಳು ಕಡಿಮೆ ಬೆಲೆಗೆ ‌ಸಿಗುವ ಲಕ್ಸ್ಯೂರಿ ಕಾರುಗಳಾಗಿವೆ. ಈ ಕಾರುಗಳನ್ನು ಖರೀದಿಸುವುದರಿಂದ ವಾರೆಂಟಿ ಸಿಗುತ್ತದೆ. ಕಾರು ಪ್ರಿಯರಿಗೆ ಈ ಮಾಹಿತಿಯನ್ನು ತಪ್ಪದೆ ತಿಳಿಸಿ, ನಿಮ್ಮ ನೆಚ್ಚಿನ ಕಾರನ್ನು ನಿಮ್ಮದಾಗಿಸಿಕೊಳ್ಳಿ.

Leave A Reply

Your email address will not be published.

error: Content is protected !!
Footer code: