ಸುಧಾಮೂರ್ತಿ ಅಮ್ಮನವರ ಸ್ಫೂರ್ತಿಧಾಯಕ ಮಾತುಗಳನೊಮ್ಮೆ ಕೇಳಿ

0

ಸುಧಾಮೂರ್ತಿ ಇವರ ಸಾಧನೆ ಅಪಾರ. ಎಷ್ಟೋ ಕೋಟಿಗಳ ಒಡತಿ ಇವರಾದರೂ ಕೂಡ ಯಾವುದೇ ರೀತಿಯ ಅಹಂಕಾರವಿಲ್ಲ. ಯಾವುದೇ ರೀತಿಯ ಸನ್ಮಾನ ಮತ್ತು ಹೊಗಳಿಕೆಗಳನ್ನು ಇಷ್ಟ ಪಡುವುದಿಲ್ಲ. ಸುಧಾ ಕುಲಕರ್ಣಿಯವರ ತಂದೆ ರಾಮಚಂದ್ರ ಕುಲಕರ್ಣಿ ಅವರು ಹುಬ್ಬಳ್ಳಿಯ ಕೆ.ಎಂ. ಕಾಲೇಜಿನ ಸ್ತ್ರೀ ರೋಗ ತಜ್ಞರು, ಪ್ರಾಧ್ಯಾಪಕರು. ತಾಯಿ ವಿಮಲಾ ಕುಲಕರ್ಣಿಯವರು ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದರು. ಈ ದಂಪತಿಗಳಿಗೆ ೪ ಜನ ಮಕ್ಕಳು. ಅವರು ಬೆಂಗಳೂರಿನ ಟಾಟಾ ಇನ್ಸ್ಟಿ ಟ್ಯೂಟ್’ ನಲ್ಲಿ ಎಮ್.ಇ ಕಂಪ್ಯೂಟರ್ ಸೈನ್ಸ್ ಪದವಿ ಗಳಿಸಿದರು. ಆದ್ದರಿಂದ ನಾವು ಇಲ್ಲಿ ಅವರ ಸಂದೇಶದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ ಇವರಾಗಿದ್ದಾರೆ. ಸುಧಾ ಅವರ ಪ್ರಾಥಮಿಕ ಮಾಧ್ಯಮಿಕ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸವೆಲ್ಲಾ ಅವರ ಹಾವೇರಿ ಜಿಲ್ಲೆಯ ಶಿಗ್ಗಾಂವ್ ಹುಟ್ಟಿದೂರಿನಲ್ಲಿ ನಡೆಯಿತು. 1966ರಲ್ಲಿ ಹುಬ್ಬಳ್ಳಿಯ ನ್ಯೂ ಎಜ್ಯುಕೇಶನ್ ಸೊಸೈಟಿ ಯ ಗರ್ಲ್ಸ್ ಇಂಗ್ಲಿಷ್ ಸ್ಕೂಲ್‍ ನಿಂದ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದರು. 1972ರಲ್ಲಿ ಹುಬ್ಬಳ್ಳಿಯ ಬಿ.ವಿ.ಬಿ.ಕಾಲೇಜ ಆಫ್ ಇಂಜನಿಯರಿಂಗ್‍ ನಲ್ಲಿ ಇಲೆಕ್ಟ್ರಿಕಲ್ ಇಂಜನಿಯರಿಂಗ್ ನ ಎಲ್ಲ ಚತುರ್ಮಾಸಗಳಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು.

ಪ್ರತಿಯೊಬ್ಬರ ಜೀವನದಲ್ಲೂ ಪ್ರತಿಯೊಂದು ಘಟನೆಗಳು ಒಂದೊಂದು ಪಾಠವನ್ನು ಕಲಿಸುತ್ತವೆ. ಇದರಲ್ಲಿ ಎದುರಿಸುವ ಧೈರ್ಯ ಒಡವೆ ಇದ್ದಂತೆ. ಎದುರಿಸುವ ಧೈರ್ಯ ಮನುಷ್ಯನಲ್ಲಿ ಇದ್ದರೆ ಎಂತಹ ಪರಿಸ್ಥಿತಿಯಲ್ಲಿ ಕೂಡ ಗೆದ್ದು ಬರಬಹುದು. ಹೊಸ ಬಟ್ಟೆ ಹಾಕುವುದು, ಒಂದಿಷ್ಟು ಮನೆಯನ್ನು ಖರೀದಿ ಮಾಡುವುದು ಇವುಗಳೆಲ್ಲ ಧೈರ್ಯ ಆಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಅವನ ಬಗ್ಗೆ ತಿಳಿದಿರಬೇಕು. ಅಂದರೆ ಅವರವರ ಸಾಮರ್ಥ್ಯದ ಬಗ್ಗೆ ಅವರಿಗೆ ತಿಳಿದಿರಬೇಕು. ಇದಕ್ಕೆ ಒಂದು ಉದಾಹರಣೆ ಎಂದರೆ ಯಾರೋ ಒಬ್ಬ ವ್ಯಕ್ತಿ ತಾನು ಹಿಮಾಲಯ ಪರ್ವತವನ್ನು ಏರಬಲ್ಲೆ ಎಂದರೆ ಅದು ಸಾಧ್ಯವಿಲ್ಲ.

ಹಿಮಾಲಯ ಪರ್ವತವನ್ನು ಏರಲು ದೈಹಿಕವಾಗಿ ಮೊದಲು ಸದೃಢ ಆಗಿರಬೇಕು. ಹಾಗೆಯೇ ನಂತರದಲ್ಲಿ ಮಾನಸಿಕವಾಗಿ ಸದೃಢ ಆಗಿರಬೇಕು. ಹಾಗೆಯೇ ದುಃಖವೇ ಆಗಲಿ ಸುಖವೇ ಆಗಲಿ ಯಾರ ಮೇಲೂ ಕೂಡ ಅವಲಂಬಿತವಾಗಿ ಜೀವನ ನಡೆಸಬಾರದು. ಇವರು ಕಾಲೇಜಿಗೆ ಹೋಗುವಾಗ ಶೌಚಾಲಯ ಇರುತ್ತಿರಲಿಲ್ಲ. ಹೆಣ್ಣು ಮಕ್ಕಳಿಗೆ ಶೌಚಾಲಯ ಇಲ್ಲವೆಂದರೆ ಬಹಳ ಕಷ್ಟವಾಗುತ್ತದೆ. ಅವರು ಈ ಕಷ್ಟವನ್ನು ಅನುಭವಿಸಿದ್ದರಿಂದ ಹೆಣ್ಣು ಮಕ್ಕಳಿಗೆ ತೊಂದರೆ ಆಗಬಾರದು ಎಂದು ಸುಮಾರು 2500ಶೌಚಾಲಯಗಳನ್ನು ನಿರ್ಮಾಣ ಮಾಡಿಸಿದ್ದಾರೆ. ಇವರು ಬಹಳ ಸ್ವಾಭಿಮಾನಿ ಮತ್ತು ಸರಳ ವ್ಯಕ್ತಿ.

Leave A Reply

Your email address will not be published.

error: Content is protected !!