ಸಿಂಹ ರಾಶಿ ಯುಗಾದಿ ಭವಿಷ್ಯ 2023 ಹೇಗಿದೆ ಗೊತ್ತಾ..

0

ಇನ್ನೇನು ಯುಗಾದಿ ಬಂದೇ ಬಿಟ್ಟಿತು. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎನ್ನುವ ಸಾಲಿನಂತೆ, ಯಾರಿರಲಿ ಇಲ್ಲದಿರಲಿ ಯುಗಾದಿಯ ಹಬ್ಬ ಬಂದೇ ಬರುತ್ತದೆ. ಅದೆಂದಿಗೂ ತಪ್ಪದು. ಹಾಗೆ ಜೊತೆಯಲ್ಲಿ ರಾಶಿ ಭವಿಷ್ಯಗಳು, ಗ್ರಹಗತಿಗಳು ಸಹ ಬದಲಾಗುತ್ತವೆ. ಈ ಯುಗಾದಿಯ ನಂತರ ಆರಂಭವಾಗುವ ಶೋಭಾಕೃತ ಅಥವಾ ಶೋಭನ ಸಂವತ್ಸರದಲ್ಲಿ ಸಿಂಹ ರಾಶಿಯ ವರ್ಷ ಭವಿಷ್ಯ ಹೇಗಿರಲಿದೆ ಎಂದು ತಿಳಿಯೋಣ ಬನ್ನಿ.

ಮಖಾ ನಕ್ಷತ್ರದ ಒಂದರಿಂದ ನಾಲ್ಕನೇ ಪಾದಗಳು, ಹುಬ್ಬಾನಕ್ಷತ್ರದ ಎಲ್ಲ ಪಾದಗಳು, ಉತ್ತರಾ ನಕ್ಷತ್ರದ ಒಂದು ಪಾತ್ರಗಳು ಸಿಂಹ ರಾಶಿಯಲ್ಲಿ ಗೋಚರಿಸುವ ನಕ್ಷತ್ರಗಳಾಗಿವೆ. ಈ ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಶೋಭಾಕೃತ ಸಂವತ್ಸರದ ಆರಂಭದಿಂದ ಅಂದರೆ 22 ಮಾರ್ಚ್ 2023ರಿಂದಲೂ ಸಂವತ್ಸರದ ಕೊನೆಯ ತನಕ ಶನಿಯ ಪ್ರಭಾವವು ಇರಲಿದೆ. ಅಷ್ಟಮದಲ್ಲಿ ಇರುವಂತಹ ಗುರುವು ಸಹ ಏಪ್ರಿಲ್ ಕೊನೆಯ ವಾರದಲ್ಲಿ ತನ್ನ ಸ್ಥಾನವನ್ನು ಬದಲಿಸುತ್ತಾನೆ.

ಅಕ್ಟೋಬರ್30 ರಂದು ರಾಹುವು ಸಿಂಹರಾಶಿಯ ರೇವತಿ ನಕ್ಷತ್ರಕ್ಕೆ ಬರುತ್ತಾನೆ. ಗುರುವಿನ ಸ್ಥಾನ ಬದಲಾಗುವುದರಿಂದ ಈ ರಾಶಿಯವರ ಜೀವನದಲ್ಲಿ ಬಹಳಷ್ಟು ಬದಲಾವಣೆಗಳು ಆಗಲಿವೆ. ವರ್ಷದ ಆರಂಭದಲ್ಲಿಯೆ ಗುರು ಒಂಬತ್ತನೆಯ ಮನೆಗೆ ಬರುವುದರಿಂದ ಇಷ್ಟು ದಿನಗಳ ಕಷ್ಟಗಳಿಂದ ಹೊರ ಬಂದು ನೆಮ್ಮದಿಯನ್ನು ಕಾಣಲಿದ್ದಾರೆ. ಅಷ್ಟಮದಲ್ಲಿ ಇದ್ದ ಗುರುವಿನ ಪ್ರಭಾವದಿಂದ ಅನುಭವಿಸಿದ ತೊಂದರೆ ತಾಪತ್ರಯಗಳು ದೂರವಾಗಿ, ‌ಮಾನಸಿಕ ಹಾಗೂ ದೈಹಿಕ ಆರೋಗ್ಯವು ಸುಧಾರಿಸಲಿದೆ.

ಈ ಸಂವತ್ಸರದ ಕಂದಾಯ ಫಲಗಳನ್ನು ನೋಡುವುದಾದರೆ ಆಯ 14 ಇದ್ದರೆ, ವ್ಯಯವು 2 ಇದೆ. ಸಿಂಹರಾಶಿಯವರಿಗೆ ಈ ವರ್ಷವು ಅತ್ಯಧಿಕ ಆದಾಯವನ್ನು ತರುವಂತಹ ವರ್ಷವಾಗಿದೆ. ಖರ್ಚುಗಳು ಬಹಳವೇ ಕಡಿಮೆಯಾಗಲಿದೆ. ಆರೋಗ್ಯ 2ರಷ್ಟಿದ್ದರೆ ಅನಾರೋಗ್ಯವು 4 ಭಾಗದಷ್ಟು ಇರಲಿದೆ. ರಾಜನ ಕೋಪ 1ರಷ್ಟಿದ್ದರೆ 4ರಷ್ಟು ಆಶೀರ್ವಾದ ದೊರೆಯಲಿದೆ. ಸುಖ ಆರರಷ್ಟು ಇದ್ದರೆ, ದುಃಖದ ಪರಿಣಾಮ ಮೂರರಷ್ಟು ಇರಲಿದೆ‌. ಸಿಂಹರಾಶಿಯವರಿಗೆ ಈ ವರ್ಷವು ರಾಜಯೋಗವು ದೊರೆಯಲಿದ್ದು, ಎಲ್ಲ ರೀತಿಯಲ್ಲಿ ಉತ್ತಮವಾಗಿದೆ. ಹಣಕಾಸಿನ ಹರಿವು ಹೆಚ್ಚಾಗುತ್ತದೆ.

ಗುರುವು ಏಪ್ರಿಲ್ ಒಂದು ತಿಂಗಳು ಅಷ್ಟಮದಲ್ಲಿ ಇರುವುದರಿಂದ ಕೆಲಸಗಳು ನಿಧಾನವಾಗಿ ನಡೆಯುತ್ತವೆ‌. ಅದರ ನಂತರ ಎಲ್ಲ ಕೆಲಸಗಳು ಸರಾಗವಾಗಿ ನಡೆಯಲಿದೆ. ಸಪ್ತಮದಲ್ಲಿರುವ ಶನಿಯಿಂದ ನಿಮಗೆ ಧೈರ್ಯ ಸಿಗಲಿದೆ. ಕೌಟುಂಬಿಕ ಸಮಸ್ಯೆಗಳು ಈ ರಾಶಿಯವರನ್ನು ಇಷ್ಟು ದಿನ ಬಾಧಿಸಿದ್ದಲ್ಲಿ, ಇನ್ನು ಮುಂದೆ ನಿಶ್ಚಿಂತೆಯಿಂದ ಇರಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲ ಆಗುವಂತಹ ಸಮಯ ಒದಗಲಿದ್ದು, ಈ ಸಮಯದಲ್ಲಿ ಪ್ರಯತ್ನಿಸುವುದು ಉತ್ತಮ. ಗೆಲವು ಬೇಕು ಎನ್ನುವ ಆಸೆಯನ್ನು ಈ ಶೋಭಾಕೃತ ಸಂವತ್ಸರವು ಈಡೇರಿಸಲಿದೆ.

ಸಿಂಹ ರಾಶಿಯಲ್ಲಿ ಜನಿಸಿದವರು ಬಹಳ ಪ್ರಬಲವಾಗಿರುತ್ತಾರೆ. ಹಾಗಾಗಿ ಕಷ್ಟಗಳನ್ನು ಎದುರಿಸಿ ನಿಲ್ಲುವ ಶಕ್ತಿ ಇವರಲ್ಲಿ ಸದಾ ಜಾಗೃತವಾಗಿ ಇರುತ್ತದೆ. ಜನರಿಂದ ಸಹಾಯ ಸಹಕಾರಗಳು ಇವರು ಹೊಸ ಸಂಘ ಸಂಸ್ಥೆಗಳ ಹುಟ್ಟಿಗೆ ಕಾರಣರಾಗಲಿದ್ದಾರೆ. ಈ ಮೂಲಕ ಸಮಾಜಸೇವೆ ಸಹ ನಡೆಸುತ್ತಾರೆ. ಅಷ್ಟಮದಲ್ಲಿ ಇರುವ ಗುರು ನವಮಕ್ಕೆ ಹೋಗುವ ತನಕ ಕಾಯಬೇಕಾದ ಅನಿವಾರ್ಯತೆಯಿದೆ. ಏಪ್ರಿಲ್ ತಿಂಗಳ ಕೊನೆಯ ತನಕ ಆದಷ್ಟು ಯಾವುದೇ ಹೊಸ ಕೆಲಸವನ್ನು ಆರಂಭ ಮಾಡುವುದು ಅಷ್ಟು ಉತ್ತಮವಲ್ಲ.

ಭಾಗ್ಯದಲ್ಲಿ ಗುರು ಬಂದ ನಂತರ ವಿವಾಹಕಾಲವು ಸಹ ಬರಲಿದ್ದು, ಎಲ್ಲ ರೀತಿಯಿಂದಲೂ ಭಾಗ್ಯಗಳು ಸಿಂಹರಾಶಿಯವರನ್ನು ಅರಸಿ ಬರಲಿದೆ. ನೂತನ ಭೂಮಿಯನ್ನು ಖರೀದಿಸುತ್ತಾರೆ. ಕಾನೂನಾತ್ಮಕ ಹೋರಾಟಗಳು ಮುಗಿದು ಇವರಿಗೆ ಜಯವಾಗಲಿದೆ. ಸಂತಾನ ಭಾಗ್ಯವನ್ನು ಸಹ ಗುರು ಕರುಣಿಸಲಿದ್ದಾನೆ. ಹೆಚ್ಚಾಗಿ ಜನಪ್ರಿಯತೆಯನ್ನು ಈ ಸಂವತ್ಸರದಲ್ಲಿ ಸಿಂಹ ರಾಶಿಯವರು ಪಡೆಯಲಿದ್ದಾರೆ. ಈ ವರ್ಷದಲ್ಲಿ ಬಹಳಷ್ಟು ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಇದಿಷ್ಟು ಸಿಂಹ ರಾಶಿಯವರ ಶೋಭಾಕೃತ ಸಂವತ್ಸರದ ವರ್ಷ ಭವಿಷ್ಯವಾಗಿದೆ.

Leave A Reply

Your email address will not be published.

error: Content is protected !!