ಯುಗಾದಿ ಭವಿಷ್ಯ: ಯಾವ ರಾಶಿಯವರು ಎಚ್ಚರದಿಂದ ಇರಬೇಕು?

0

Ugadi Astrology on today: ಪ್ರಕೃತಿ ವರ್ಷಕ್ಕೊಮ್ಮೆ ತನ್ನ ರೂಪವನ್ನು ಮರಳಿ ತರುತ್ತದೆ. ಬೇಸಿಗೆಯಿಂದ ಆರಂಭವಾಗಿ ಹೊಸ ಚಿಗುರನ್ನು ಬರಿಸಿ, ಹೂವು ಕಾಯಿಗಳನ್ನು ಬಿಟ್ಟು, ಮಳೆಯಲ್ಲಿ ಬಿದ್ದ ಬೀಜಕ್ಕೆ ಮೊಳಕೆ ಬರಿಸುತ್ತದೆ‌. ಚಳಿಯಲ್ಲಿ ತನ್ನೆಲ್ಲ ಸತ್ವವನ್ನು ಕಳೆದುಕೊಂಡು ಮತ್ತೆ ವಸಂತಾಗಮನಕ್ಕೆ ಸಜ್ಜಾಗುವ ಸುಂದರ ಕಾಲಚಕ್ರದ ಪರಿಯನ್ನು ಸಂವತ್ಸರ ಎಂದು ಕರೆಯಲಾಗುತ್ತದೆ. ಮಳೆ ಚಳಿಯನ್ನು ಕಂಡು ಕೊನೆಗೆ ಬೇಸಿಗೆಯಲ್ಲಿ ಬಂದು ನಿಲ್ಲುವ ಈ ಕಾಲನ ಮಾಯೆಯನ್ನು ಅರಿಯುವುದಕ್ಕಾಗಿ ರಾಶಿ ಭವಿಷ್ಯಗಳನ್ನು ಒಳಗೊಂಡ ಪಂಚಾಂಗವನ್ನು ಬರೆಯುತ್ತಾರೆ.

ಅಂತಹ ಪಂಚಾಂಗದಲ್ಲಿ ಯಾವ ರಾಶಿಗೆ ಹೇಗೆ ಫಲಗಳನ್ನು ಹೇಳಿದ್ದಾರೆ ಎನ್ನುವುದನ್ನು ತಿಳಿಯೋಣ. ಈ ಹಿಂದೆ ಕಳೆದ ಶುಭಕೃತ ಸಂವತ್ಸರವು ಬಹಳ ಒಳ್ಳೆಯ ಫಲಗಳನ್ನು ಕೆಲವು ರಾಶಿಗಳಿಗೆ ನೀಡಿದ್ದರೆ, ಇನ್ನು ಕೆಲವು ರಾಶಿಗಳಿಗೆ ಅನಾರೋಗ್ಯ ಸಾಲಬಾಧೆ ಇಂತಹ ಸಮಸ್ಯೆಗಳನ್ನು ತಂದೊಡ್ಡಿತ್ತು. ಈಗ ಹೊಸದಾಗಿ ಆರಂಭವಾಗುವ ಶೋಭಾಕೃತ ಸಂವತ್ಸರವು, ಹಳೆಯ ಸಂವತ್ಸರಕ್ಕಿಂತ ಭಿನ್ನ ಹಾಗೂ ನೂತನವಾದ ಶುಭದ‌ ಫಲಗಳನ್ನು ತರಲಿದೆ. ಶುಭದಿಂದ ಶೋಭೆಯತ್ತ ಈ ಸಂವತ್ಸರವು ಚಲಿಸಲಿದೆ.

ಗುರು ಶುಕ್ರ ಹಾಗೂ ರಾಹು ಕೇತುವಿನ ನಿರ್ದಿಷ್ಟ ಚಲನೆಯಿಂದ ವರ್ಷದ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ಇವುಗಳನ್ನೇ ನಾವು ಕಾಮ, ಕ್ರೋಧ, ಲೋಭ, ಮೋಹ ಎನ್ನುವುದಾಗಿಯು ಸಹ ಕರೆಯಬಹುದು. ಮನುಷ್ಯ ತನ್ನ ಆಸೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನ ಮಾಡುತ್ತಾನೆ. ಅದರಿಂದಲೇ ಉಳಿದ ಎಲ್ಲ ಕರ್ಮಗಳು ಸಹ ಉತ್ಪತ್ತಿಯಾಗುತ್ತಾ ಅವನ ಸುತ್ತ ಗ್ರಹಗತಿಗಳ ಪರಿಣಾಮ ಶುರುವಾಗುತ್ತವೆ. ಇವುಗಳು ಕಾಲ ಚಕ್ರದ ಜೊತೆಯಲ್ಲಿ ಸಾಗುವಂತವುಗಳಾಗಿದ್ದು, ಕೆಲವೊಮ್ಮೆ ಸುಖ ದುಃಖಗಳನ್ನು ನೀಡುತ್ತವೆ.

ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುವ ಮನಸ್ಥಿತಿ ಮನುಷ್ಯನಲ್ಲಿ ಅತೀ ಕಡಿಮೆಯಾಗಿರುತ್ತದೆ. ಅಂತಹ ಸಮಯದಲ್ಲಿ ಅವನು ಮಾನಸಿಕ ಅಸ್ವಸ್ಥತೆಗೂ ಗುರಿಯಾಗುತ್ತಾನೆ. ಕಷ್ಟಗಳನ್ನು ಎದುರಿಸುವ ಮನೋಧೈರ್ಯ ಅವನಲ್ಲಿ ಕಡಿಮೆಯಾದಾಗ, ಜಾತಕಗಳನ್ನು ನೋಡಿ ಅದರಂತೆ ಕೆಲಸಗಳನ್ನು ಮಾಡುತ್ತಾರೆ. ಆಗ ಅವನ ಕೆಲವೊಂದು ಕರ್ಮಗಳು ವೇಗವಾಗಿ ಕಳೆದು ಮತ್ತೆ ಉನ್ನತಿಯನ್ನು ಸೇರುತ್ತಾನೆ. ಇದು ಹಿಂದಿನಿಂದ ನಡೆದು ಬಂದ ಪದ್ಧತಿಯಾಗಿದೆ.

ರಾಹು ಹಾಗೂ ಕೇತು ಗ್ರಹಗಳು ಹೆಚ್ಚಾಗಿ ದುಃಖವನ್ನು ನೀಡುವ ಗ್ರಹಗಳಾಗಿದ್ದು, ಅವು ಮನುಷ್ಯನ ಉನ್ನತಿಗಾಗಿ ಚಲಿಸುವುದು ಬಹಳ ಅಪರೂಪವಾಗಿದೆ. ರಾಹು ಕೇತುವನ್ನು ಹೊರತು ಪಡಿಸಿ ಉಳಿದ ಗ್ರಹಗಳು ಮನುಷ್ಯನ ಕರ್ಮದ ಫಲಗಳನ್ನು ನಿರ್ಧರಿಸುವಂತವುಗಳಾಗಿದ್ದು, ಇದರಿಂದ ಲೋಭ ‌ಹಾಗೂ ಮೋಹಗಳು ಹೆಚ್ಚುತ್ತವೆ. ಇವುಗಳು ಹೆಚ್ಚಿದಂತೆ ಲಾಭ, ನಷ್ಟಗಳ ಪ್ರಮಾಣವು ಹೊಯ್ದಾಟ ನಡೆಸುತ್ತದೆ. ಇದರಿಂದ ಮನುಷ್ಯನ ಸುಖ ಶಾಂತಿಗಳು ಸದಾಕಾಲ ಹೆಚ್ಚು ಕಡಿಮೆ ಆಗುತ್ತಲೆ ಇರುತ್ತದೆ.

ಕಾಲದ ಘಟ್ಟವಾದ ಯುಗಾದಿಯಿಂದ ಶೋಭಾಕೃತ ಸಂವತ್ಸರದ ಕೊನೆಯಾಗುವವ ತನಕವು ಬುಧನು ರಾಜನಾಗಿದ್ದು ಹಾಗೆ ಮಂತ್ರಿಯಾಗಿ ಶುಕ್ರನು, ಸಸ್ಯಾಧಿಪತಿಯಾಗಿ ಚಂದ್ರನು ಇರಲಿದ್ದಾರೆ. ಧಾನ್ಯಾಧಿಪತಿಯಾಗಿ ಶನಿಯು, ಅರ್ಕಾಧಿಪತಿಯಾಗಿ ಗುರುವು ಮತ್ತು ಪಶುನಾಯಕನಾಗಿ ಬಲರಾಮನು ಇರಲಿದ್ದಾರೆ. ಮೇಘಾಧಿಪನಾಗಿ ಗುರುವು, ರಸಾಧಿಪನಾಗಿ ಬುಧನು ಹಾಗೂ ನಿರಸಾಧಿಪತಿಯಾಗಿ ಚಂದ್ರನು ಇರಲಿದ್ದಾರೆ.

ಈ ಶೋಭಾಕೃತ ಸಂವತ್ಸರದಲ್ಲಿ ಬುಧನು ರಾಜನಾಗಿರುವುದರಿಂದ ಗಾಳಿಯು ತನ್ನ ವೇಗವನ್ನು ಹೆಚ್ಚಿಸಿಕೊಳ್ಳಲಿದೆ. ಮಳೆಯು ಕಡಿಮೆಯಾಗುವ ಸಾಧ್ಯತೆಗಳಿವೆ. ಪ್ರಜೆಗಳಲ್ಲಿ ರೋಗದ ವಾತಾವರಣವು ಹೆಚ್ಚಲಿದೆ. ರಾಜಕೀಯದಲ್ಲಿ ವಿಪರೀತ ಜಗಳಗಳು, ದೂಷಣೆಗಳು ನಡೆಯಲಿವೆ. ಹಸಿರು ಬೆಳೆಗಳು ಈ ಬಾರಿ ಚೆನ್ನಾಗಿ ಬರಲಿದೆ. ಹೈನುಗಾರಿಕೆ ಅಥವಾ ಹಾಲಿಗೆ ಸಂಬಂಧಿಸಿದ ಉದ್ಯೋಗಗಳು ಹಾಗೂ ಉತ್ಪನ್ನಗಳ ಲಾಭಾಂಶ ಹೆಚ್ಚಾಗುತ್ತದೆ. ಇದು ಈ ಸಂವತ್ಸರದ ಸಂವತ್ಸರ ಫಲವಾಗಿದೆ. ಆದ್ದರಿಂದ ಮೇಷ, ಮಿಥುನ, ಮಕರ, ವೃಶ್ಚಿಕ ಹಾಗು ಕಟಕ ರಾಶಿಯವರು ಎಚ್ಚರದಿಂದ ಇರೋದು ಉತ್ತಮ

Leave A Reply

Your email address will not be published.

error: Content is protected !!