ಸಹಕಾರ ಸಂಘಗಳಲ್ಲಿ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಹುದ್ದೆಯ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಹೇಗೆ ಅರ್ಜಿ ಸಲ್ಲಿಸಬೇಕು? ಕೊನೆಯ ದಿನಾಂಕ, ವೇತನ ಈ ಎಲ್ಲದರ ಕುರಿತಾಗಿ ವಿವರವಾಗಿ ನಾವು ಈ ಲೇಖನದಲ್ಲಿ ನೋಡೋಣ.
ಅರ್ಜಿ ಆಹ್ವಾನ ಮಾಡಲಾದ ಇಲಾಖೆಯ ಹೆಸರು ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿ ಎಂದಾಗಿದ್ದು, ಹುದ್ದೆಯ ಹೆಸರು ಕಿರಿಯ ಸಹಾಯಕ ಎಂದಾಗಿದೆ. ಒಟ್ಟೂ ಎಂಟು ಹುದ್ದೆಗಳು ಖಾಲಿ ಇದ್ದು, ಕ್ರ ಸಂಮೀಸಲಾತಿ ಪ್ರವರ್ಗ ಹುದ್ದೆಗಳ ಸಂಖ್ಯೆ 1 ಸಾಮಾನ್ಯ ವರ್ಗ, 4+2 (ಮಹಿಳೆ) 2, ಪರಿಶಿಷ್ಟ ಪಂಗಡ 013 ಪ್ರವರ್ಗ 2 ಎಂ 1 ಒಟ್ಟೂ ಎಂಟು ಹುದ್ದೆಗಳು ಇರುತ್ತವೆ. ಇನ್ನೂ ವಿದ್ಯಾರ್ಹತೆ ನೋಡುವುದಾದರೆ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ BA , BSC, B.Com, BCA, BBM, BBA ಇದ್ಯಾವುದದರೂ ಪದವಿಯಲ್ಲಿ ಕನಿಷ್ಠ ಶೇಕಡಾ 50 ರಷ್ಟು ಅಥವಾ ಹೆಚ್ಚಿನ ಅಂಕಗಳನ್ನು ಪಡೆಯಬೇಕು. ಕನ್ನಡ ಭಾಷೆಯನ್ನು ಕಲಿತಿರಬೇಕು ಹಾಗೂ ಕಡ್ಡಾಯವಾಗಿ ಭಾಷಾ ಜ್ಞಾನವನ್ನು ಹೊಂದಿರಬೇಕು. ಕಂಪ್ಯೂಟರ್ ತರಬೇತಿ ಹಾಗೂ ಅಪ್ಲಿಕೇಶನ್ ತರಬೇತಿ ಮತ್ತು ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಎಷ್ಟಿರಬೇಕು ಎಂದು ನೋಡುವುದಾದರೆ, ಅರ್ಜಿಯನ್ನು ಸಲ್ಲಿಸಲು ನಿಗದಿ ಪಡಿಸಲು ಕೊನೆಯ ದಿನಾಂಕದಂದು ಕನಿಷ್ಠ ಹದಿನೆಂಟು ವರ್ಷ ವಯಸ್ಸು ಆಗಿರಬೇಕು. ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ ಒಂದರ ಅಭ್ಯರ್ಥಿಗಳಿಗೆ ಗರಿಷ್ಠ ನಲವತ್ತು ವರ್ಷ, ಹಿಂದುಳಿದ ವರ್ಗದ ಪ್ರವರ್ಗದ ಅಭ್ಯರ್ಥಿಗಳಿಗೆ ಮೂವತ್ತೆಂಟು ವರ್ಷ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೂವತ್ತೈದು ವರ್ಷ ವಯಸ್ಸು ದಾಟಿರಬಾರದು. ಇನ್ನೂ ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾಸಿಕ ವೇತನ ಎಷ್ಟು ಎಂದು ನೋಡುವುದಾದರೆ, 21,400 ರಿಂದ 42,000 ರೂಪಾಯಿ ವೇತನ ಹಾಗೂ ಅದರ ಜೊತೆಗೆ ಇತರ ಭತ್ಯೆಗಳನ್ನು ಸಹ ನೀಡಲಾಗುವುದು.
ಅರ್ಜಿ ಸಲ್ಲಿಸಲು ಆರಂಭ ದಿನಾಂಕ 14/09/2021 ಆಗಿದೆ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01/10/2021 ಆಗಿರುತ್ತದೆ. ಇನ್ನೂ ಆಯ್ಕೆಯ ವಿಧಾನ ಹೇಗೆ ಎಂದು ನೋಡುವುದಾದರೆ, ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ರೂಪದ ಪರೀಕ್ಷೆಯನ್ನು ನಡೆಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1: 5 ಅನುಪಾತದಲ್ಲಿ ಸಂದರ್ಶನ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುವುದು.
ಇನ್ನೂ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ಎಂದು ನೋಡುವುದಾದರೆ, ಸಂಘದ ಕೇಂದ್ರ ಕಚೇರಿಯ ಕೆಲಸದ ವೇಳೆಯಲ್ಲಿ ಅರ್ಜಿಗಳನ್ನು ವಿತರಣೆ ಮಾಡಲಾಗುವುದು. 1ಸಾವಿರ ರೂಪಾಯಿ ಡಿಡಿ ಯನ್ನು ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿ, ಅತ್ತಿಬೆಲೆ ಇದರ ಹೆಸರಿಗೆ ನೀಡಿ ಅರ್ಜಿಯನ್ನು ಸಲ್ಲಿಸಬೇಕು. ಸಂಘದಿಂದ ಪೂರೈಸಿದ ಅರ್ಜಿಯನ್ನು ಭರ್ತಿ ಮಾಡಿ ಅರ್ಜಿಯ ಜೊತೆಗೆ ಪೂರಕ ದಾಖಲೆಗಳ ನಕಲು ಪ್ರತಿಗಳನ್ನು ಸ್ವಯಂ ದೃಢೀಕರಿಸಿ ಸದಸ್ಯ ಕಾರ್ಯದರ್ಶಿ, ಸಿಬ್ಬಂದಿ ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿ, ಅತ್ತಿಬೆಲೆ, ಆನೇಕಲ್ ತಾಲ್ಲೂಕು , ಬೆಂಗಳೂರು ನಗರ ಜಿಲ್ಲೆ 562107 ಈ ವಿಳಾಸಕ್ಕೆ ದಿನಾಂಕ 01/10/2021 ರ ಸಂಜೆ ಐದು ಗಂಟೆಯ ಒಳಗೆ ಅಂಚೆ / ಕೊರಿಯರ್ ಅಥವಾ ಖುದ್ದಾಗಿ ತಲುಪುವ ಹಾಗೆ ಅರ್ಜಿಯನ್ನು ಸಲ್ಲಿಸಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಳಾಸ ಇದು ಆಫ್ ಲೈನ್ ಸಲ್ಲಿಸುವುದಾಗಿರುತ್ತದೆ. ಮೊಬೈಲ್ ನಂಬರ್ 9886621722
ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿ, ಅತ್ತಿಬೆಲೆ ಆನೇಕಲ್ ತಾಲ್ಲೂಕು , ಬೆಂಗಳೂರು ನಗರ ಜಿಲ್ಲೆ 562107 ಈ ವಿಳಾಸಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ ಹಾಗೂ ಮೇಲೆ ನೀಡಿದ ಮೊಬೈಲ್ ನಂಬರ್ ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430