ಸರಸ್ವತಿಯ ಈ ಮಂತ್ರ ಪಠಿಸಿದರೆ ನಿಮ್ಮ ಮಕ್ಕಳು ಓದಿನಲ್ಲಿ ನಂಬರ್ 1 ಆಗ್ತಾರೆ

0

ಆಧುನಿಕ ಜೀವನ ಶೈಲಿ ವಯಸ್ಕರನ್ನೇ ಒತ್ತಡಕ್ಕೆ ತಳ್ಳುತ್ತದೆ, ಅಂತಹುದರಲ್ಲಿ ಚಿಕ್ಕ ಮಕ್ಕಳನ್ನು ಒತ್ತಡಕ್ಕೆ ತಳ್ಳದೇ ಇರಲು ಸಾಧ್ಯವಿಲ್ಲವೆನ್ನಬಹುದು. ಅಧ್ಯಯನಗಳನ್ನು, ಪಠ್ಯೇತರ ಚಟುವಟಿಕೆಗಳನ್ನು ಹೊರತುಪಡಿಸಿ ಮಕ್ಕಳ ಜೀವನವು ಸ್ಪರ್ಧಾತ್ಮಕಾವಾಗಿದೆ. ತನ್ನ ಮಕ್ಕಳು ಹೆಚ್ಚು ಅಂಕವನ್ನು ಗಳಿಸಬೇಕು, ತರಗತಿಗಳಲ್ಲೇ ತಮ್ಮ ಮಕ್ಕಳೇ ಮೊದಲ ಸ್ಥಾನದಲ್ಲಿರಬೇಕೆನ್ನುವ ಪೋಷಕರ ಅತಿಯಾದ ಆಸೆ ಕೂಡ ಮಕ್ಕಳನ್ನು ಒತ್ತಡದ ಪರಿಸ್ಥಿತಿಗೆ ತಳ್ಳುತ್ತದೆ

ಆ ಪುಟ್ಟ ಬೆನ್ನ ಮೇಲೆ ಹೊರಲಾರದಷ್ಟು ಭಾರ, ಎಷ್ಟು ಓದಿದರೂ ಮತ್ತಷ್ಟು ಓದಬೇಕೆನ್ನುವ ಹೊರೆ ಈ ಎಲ್ಲಾ ಅಂಶಗಳು ಮಕ್ಕಳನ್ನು ಒತ್ತಡಕ್ಕೆ ತಳ್ಳುತ್ತಿದೆ. ಸಾಮಾಜಿಕ ಜೀವನ ಏನೆಂಬುದೆನ್ನುವುದೇ ಇತ್ತೀಚಿನ ಮಕ್ಕಳು ಮರೆತು ಬಿಟ್ಟಿದ್ದಾರೆ. ಅವರಿಗೇನಿದ್ದರೂ ಶಾಲೆ, ಪುಸ್ತಕ, ಟಿವಿಷನ್‌ಗಳು ಇಷ್ಟೇ. ಮಕ್ಕಳಿಗೆ ಒಂದು ಕ್ಷಣವೂ ಕೂಡ ವಿಶ್ರಾಂತಿ ತೆಗೆದುಕೊಳ್ಳದ ಹಾಗಾಗಿದೆ. ಒತ್ತಡ ಹೆಚ್ಚಾದಂತೆ ಮಕ್ಕಳ ಜ್ಞಾಪಕ ಶಕ್ತಿ ಕುಂದುತ್ತಾ ಹೋಗುತ್ತದೆ ಮಕ್ಕಳಿಗೆ ಒತ್ತಡ ಒಂದೆಡೆಯಾದರೆ, ಇನ್ನೊಂದೆಡೆ ಆಧುನಿಕ ತಂತ್ರಜ್ಞಾನಗಳಾದ ಟಿವಿ, ಮೊಬೈಲ್‌, ಗೇಮ್‌ಗಳ ಬಳಕೆ. ಇದರಿಂದಲೂ ಕೂಡ ಓದಿನತ್ತ ಮಕ್ಕಳ ಗಮನ ಕಡಿಮೆಯಾಗುತ್ತಿದೆ.

ಸಂಶೋಧನೆಯ ಪ್ರಕಾರ 12 ರಿಂದ 17 ವರ್ಷ ವಯಸ್ಸಿನ ಹೆಣ್ಣುಮಕ್ಕಳು 30 % ಹಾಗೂ ಹುಡುಗರು 20% ದಷ್ಟು ಆತಂಕದ ತೊಂದರೆಗೆ ಒಳಗಾಗಿದ್ದಾರೆ. ಅಷ್ಟು ಮಾತ್ರವಲ್ಲದೇ ಲಕ್ಷಾಂತರ ಮಕ್ಕಳು ಒತ್ತಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮಕ್ಕಳು ಒತ್ತಡದಿಂದ ಹೊರಬರುವಂತೆ ಮಾಡಲು ಅವರಿಗೆ ಕೆಲವೊಂದು ಧ್ಯಾನ ಹಾಗೂ ಮಂತ್ರ ಪಠಣೆಯನ್ನು ಹೇಳಿಕೊಡಬೇಕು. ಇದು ಕೇವಲ ಒತ್ತಡದಿಂದ ಬಳಲುತ್ತಿರುವವರಿಗೆ ಮಾತ್ರವಲ್ಲ,

ಮುಂದೊಂದು ದಿನ ಭವಿಷ್ಯದಲ್ಲೂ ಕೂಡ ಈ ಸಮಸ್ಯೆ ಬಾರದಂತೆ ನಿಮ್ಮ ಮಕ್ಕಳನ್ನು ಸದೃಢಗೊಳಿಸಲು ಈ ಕೆಳಗಿನ ಮಂತ್ರಗಳನ್ನು ಹಾಗೂ ಧ್ಯಾನವನ್ನು ಪ್ರತಿನಿತ್ಯ ಅಭ್ಯಾಸ ಮಾಡಿಸಿ. ಸರಸ್ವತಿ ಮಂತ್ರವನ್ನು ಮಕ್ಕಳು ಪಠಿಸುವುದರಿಂದ ಅವರು ಶಿಕ್ಷಣದ, ಆಧ್ಯಾತ್ಮಿಕ ಜ್ಞಾನದ, ಸಂಗೀತ, ಕಾವ್ಯ ಮತ್ತು ಇನ್ನಿತರ ಕಲಾತ್ಮಕ ಕ್ಷೇತ್ರಗಳತ್ತ ಹೆಚ್ಚಿನ ಗಮನವನ್ನು ಹರಿಸುತ್ತಾರೆ.

“ಓಂ ಐಂ ಸರಸ್ವತೈ ನಮಃ” ಈ ಮೇಲಿನ ಮಂತ್ರವನ್ನ ಪಠಿಸಿದ ನಂತರ ತಕ್ಷಣವೇ ಮಕ್ಕಳಿಗೆ ಕಣ್ಣನ್ನು ತೆರೆಯಲು ಹೇಳಬೇಡಿ. ಸ್ವಲ್ಪ ಸಮಯದ ವರೆಗೆ ಕಣ್ಣುಮುಚ್ಚಿ, ಅವರ ಮನಸ್ಸಿನಲ್ಲಾಗುವ ಬದಲಾವಣೆಯನ್ನು ಗಮನಿಸಲು ಬಿಡಿ. ಸಾಮಾನ್ಯವಾಗಿ ಚಿಕ್ಕ ಮಕ್ಕಳು ಧ್ಯಾನಕ್ಕೆ ಕುಳಿತುಕೊಳ್ಳುವುದು ತುಂಬಾನೇ ಕಷ್ಟ ಹಾಗಾಗಿ ಅವರಿಗೆ ಸ್ವಲ್ಪ ಸ್ವಲ್ಪವೇ ಹೇಳಿಕೊಡುತ್ತಾ ಹೋಗಿ. ಅವರ ಇಷ್ಟದಂತೆ ಪಠಿಸಲು ಬಿಡಿ. ತಪ್ಪಾದರೂ ಕೂಡ ಪರವಾಗಿಲ್ಲ. ದಿನಕಳೆದಂತೆ ಅವರೇ ಆ ತಪ್ಪನ್ನು ಸರಿಪಡಿಸಿಕೊಳ್ಳುತ್ತಾರೆ.

Leave A Reply

Your email address will not be published.

error: Content is protected !!
Footer code: