ಸತಿ ಪತಿಗಳು ಸದಾ ಅನ್ಯೋನ್ಯವಾಗಿರಲು ಏನ್ ಮಾಡಬೇಕು ಚಾಣಿಕ್ಯ ನೀತಿ ಏನ್ ಹೇಳುತ್ತೆ ಗೊತ್ತೆ

0

ಆತ್ಮೀಯಯ ಓದುಗರೇ ಚಾಣಿಕ್ಯನ ನೀತಿಗಳು ಅದೆಷ್ಟೋ ಜನಕ್ಕೆ ಸ್ಪೂರ್ತಿದಾಯಕವಾಗಿದೆ, ಅಷ್ಟೇ ಅಲ್ಲದೆ ಚಾಣಿಕ್ಯನ ಒಂದೊಂದು ಮಾತುಗಳು ಕೆಲವರಿಗೆ ಮನಸ್ಸಿಗೆ ನಾಟುವಂತೆ ಮಾಡುತ್ತದೆ, ಈ ಲೇಖನದ ಮೂಲಕ ಗಂಡ ಹೆಂಡತಿ ಯಾವಾಗಲು ಅನ್ಯೋನ್ಯವಾಗಿರಲು ಏನ್ ಮಾಡಬೇಕು ಎಂಬುದನ್ನು ಚಾಣಿಕ್ಯ ನೀತಿ ಏನ್ ಹೇಳುತ್ತೆ ಅನ್ನೋದನ್ನ ತಿಳಿಯೊಬ ಬನ್ನಿ..

ಚಾಣಿಕ್ಯ ಅವರ ಪ್ರಕಾರ ಗಂಡ ಹೆಂಡತಿಯ ಸಂಬಂಧ ಬಹಳ ಪವಿತ್ರವಾಗಿದೆ ಹಾಗೂ ಅದು ಪ್ರೀತಿ ಮತ್ತು ನಂಬಿಕೆಯಿಂದ ಬಲಗೊಳ್ಳುತ್ತದೆ. ಹಾಗೆಯೇ ಸುಳ್ಳು, ವಂಚನೆಯಿಂದ ಗಂಡ ಹೆಂಡತಿಯ ಸಂಬಂಧ ಹಾಳಾಗುತ್ತದೆ. ಇಬ್ಬರು ಸೇರಿ ಸಮಸ್ಯೆಯನ್ನು ನಿರ್ವಹಿಸಿದರೆ ಅವರು ಖಂಡಿತವಾಗಿಯೂ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ಚಾಣಕ್ಯರು ಹೇಳಿದ್ದಾರೆ

ಅಷ್ಟೇ ಅಲ್ಲದೇ ಚಾಣಿಕ್ಯ ಹೇಳಿದಂತೆ ಅವರ ಮನೆಯಲ್ಲಿ ಸಂತೋಷ, ಶಾಂತಿ ವೃದ್ಧಿಸುತ್ತದೆ ಅದಕ್ಕಾಗಿಯೇ ಈ ಸಂಬಂಧದ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ಜೊತೆಗೆ ಈ ಸಂಬಂಧವನ್ನು ಹೆಚ್ಚು ಗಟ್ಟಿಯಾಗಿರಿಸಿಕೊಳ್ಳಬೇಕು ಎಂದು ಚಾಣಕ್ಯರು ಹೇಳಿದ್ದಾರೆ. ಕೆಲವು ವಿಷಯಗಳಲ್ಲಿ ಗಂಡ ಹೆಂಡತಿ ನಡುವೆ ಬಿರುಕು ಮೂಡುತ್ತದೆ ಅದನ್ನು ಹೇಗೆ ನಿಭಾಯಿಸಬೇಕು ಮತ್ತು ಯಾವ ಯಾವ ಕಾರಣದಿಂದಾಗಿ ಗಂಡ-ಹೆಂಡತಿ ನಡುವೆ ಬಿರುಕು ಬಿಡುತ್ತದೆ ಎಂಬುದರ ಕುರಿತಾಗಿ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

ಮೊದಲನೆಯದಾಗಿ ಗಂಡ ಹೆಂಡತಿಯರಲ್ಲಿ ತಾರತಮ್ಯ ಇರಬಾರದು ಮೇಲು ಕೀಳು ಭಾವನೆ ಇರಬಾರದು ಗಂಡ ಹೆಂಡತಿ ಸಂಬಂಧ ಅತ್ಯಂತ ಪವಿತ್ರವಾದದ್ದು. ಇಬ್ಬರೂ ಒಬ್ಬರಿಗೊಬ್ಬರು ಗೌರವವನ್ನು ಕೊಡಬೇಕು ಜೊತೆಗೆ ಗೌರವವನ್ನು ಸಂಪಾದಿಸಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಗೌರವದ ಕೊರತೆಯು ಇಬ್ಬರ ನಡುವೆ ಜಗಳ, ಉದ್ವಿಗ್ನತೆ ಮತ್ತು ಸಂಬಂಧವನ್ನು ಕೆಡಿಸುತ್ತದೆ. ಹಾಗಾಗಿ ಈ ಸಂಬಂಧವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಒಬ್ಬರಿಗೊಬ್ಬರು ಗೌರವವನ್ನು ನೀಡಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ. ಪರಸ್ಪರ ಇಬ್ಬರೂ ಸಮಾಧಾನದಿಂದ ಮಾತನಾಡುವ ಮೂಲಕ ಯಾವುದೇ ಒಂದು ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸಬಹುದು. ಪರಿಸ್ಥಿತಿ ಏನೇ ಇದ್ದರೂ ಮಾತನಾಡಿ ಪರಿಹರಿಸಿಕೊಳ್ಳಬೇಕು. ಮಾತು ಬಿಡುವ ಒಂದು ತಪ್ಪು ಸಂಬಂಧವನ್ನು ಹದಗೆಡಿಸುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತದೆ.

ಗಂಡ ಹೆಂಡತಿ ಸಂಬಂಧದಲ್ಲಿ ಪ್ರೀತಿಗೆ ವಿಶೇಷ ಸ್ಥಾನವಿದೆ. ಪರಸ್ಪರ ಇಬ್ಬರಲ್ಲಿ ಪ್ರೀತಿಯ ಕೊರತೆ ಇದ್ದಾಗ ಅಶಾಂತಿ ಉಂಟಾಗುತ್ತದೆ. ಇದು ಸಂಬಂಧವನ್ನು ದುರ್ಬಲಗೊಳಿಸುತ್ತದೆ ಹಾಗಾಗಿ ಒಬ್ಬರಿಗೊಬ್ಬರು ಗೌರವ, ವಿಶ್ವಾಸದ ಜೊತೆಗೆ ಪ್ರೀತಿಯನ್ನು ಹಂಚುವುದು ಉತ್ತಮ ಎಂಬುದು ಚಾಣಕ್ಯರ ನೀತಿ ಹೇಳುತ್ತದೆ. ಗಂಡ ಹೆಂಡತಿ ಇಬ್ಬರೂ ಸುಖದಲ್ಲಿ ಜೊತೆ ಇದ್ದಂತೆ ದುಃಖದಲ್ಲಿಯೂ ಜೊತೆ ಇರಬೇಕು ಆಗಲೇ ಸಂಸಾರ ನೌಕೆ ಸರಿಯಾಗಿ ಹೋಗುತ್ತದೆ.ನಿಮಗೆ ಈ ಲೇಖನ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಅವರಿಗೂ ಇದರಿಂದ ಉಪಯೋಗವಾಗಬಹುದು

Leave A Reply

Your email address will not be published.

error: Content is protected !!